ಚಂದ್ರಚೂಡನಿಗೆ ಗ್ರಹಚಾರ ಬಿಡಿಸಿದ ಕಿಚ್ಚ ಸುದೀಪ್‌‌.. ಕಾರಣವೇನು ಗೊತ್ತಾ?

0 views

ಬಿಗ್ ಬಾಸ್ ಸೀಸನ್ ಎಂಟರಲ್ಲಿ ವೈಲ್ಡ್ ಕಾರ್ಡ್ ಮೂಲಕ ಕಳೆದ ವಾರ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಚಕ್ರವರ್ತಿ ಚಂದ್ರಚೂಡ ಮನೆಯಲ್ಲಿ ಕಿರಿಕಿರಿ ಉಂಟು ಮಾಡಿದ್ದಂತೂ ಸತ್ಯ.. ಇನ್ನು ಮನೆಯವರ ನಡುವೆಯೇ ತಂದಿಟ್ಟು ತಮಾಷೆ ನೋಡುತ್ತಿದ್ದದ್ದು ಪ್ರೇಕ್ಷಕರಿಗೆ ಸ್ಪಷ್ಟವಾಗಿ ಕಾಣುತಿತ್ತು.. ಇನ್ನು ಮನೆಯವರಿಗೂ ಸಹ ಇದು ಅನುಭವಕ್ಕೆ ಬಂದು ಈ ಎಲ್ಲಾ ಕಾರಣಗಳನ್ನು ಮನಸ್ಸಿನಲ್ಲಿಟ್ಟುಕೊಂಡೇ ಚಕ್ರವರ್ತಿ ಚಂದ್ರಚೂಡರಿಗೆ ಕಳಪೆ ಬೋರ್ಡ್ ನೀಡಿದ್ದೂ ಉಂಟು..

ಇನ್ನು ಮನೆಯಲ್ಲಿ ವಾರದ ಮಧ್ಯೆ ನಡೆದ ಮಾವ ಎಂಬ ಪದ ಬಳಕೆಗೆ ಮಂಜು ಹಾಗೂ ಪ್ರಶಾಂತ್ ಸಂಬರ್ಗಿ ನಡುವೆ ನಡೆದ ಜಗಳದ ವಿಚಾರವಾಗಿ ಸುದೀಪ್ ಅವರ ವಾರದ ಕತೆಯಲ್ಲಿ ದೊಡ್ಡ ಚರ್ಚೆಯೇ ನಡೆಯಿತು.. ಅತ್ತ ಚಂದ್ರಚೂಡ ಬಿಗ್ ಬಾಸ್ ಮನೆಗೆ ಬರುವವರೆಗೂ ಒಂದು ರೀತಿಯಲ್ಲಿ ಮನೆಯವರ ಜೊತೆ ಸುಮಾರಾಗಿಯೇ ಇದ್ದ ಪ್ರಶಾಂತ್ ಸಂಬರ್ಗಿ ಚಂದ್ರಚೂಡ ಬಂದ ನಂತರ ಆತನ ಮಾತು ಕೇಳಿಕೊಂಡು ಮನೆಯವರ ಜೊತೆ ಜಗಳ ಮಾಡುತ್ತಿರುವುದೂ ಉಂಟು..

ಇನ್ನು ಮಂಜು ಹಾಗೂ ಪ್ರಶಾಂತ್ ನಡುವೆ ನಡೆದ ಜಗಳದ ವಿಚಾರ ತೆಗೆದ ಸುದೀಪ್ ಅವರು.. ಮಾವ ಎಂಬುದು ಕೆಟ್ಟ ಪದವಾ ಎಂದು ಪ್ರಶಾಂತ್ ರನ್ನು ಪ್ರಶ್ನಿಸಿದ್ದಾರೆ.. ಇತ್ತ ಪ್ರಶಾಂತ್ ಅವರು ಕೆಟ್ಟ ಪದ ಅಲ್ಲ.. ಆದರೆ ಮುಂದೆ ಮಾವ ಅಂತಾರೆ ಹಿಂದೆ ಅದನ್ನು ಗೇಲಿ ಮಾಡ್ತಾರೆ ಆ ವಿಚಾರ ನನಗೆ ತಿಳಿಯಿತು ಎಂದರು..

ಆ ವಿಚಾರ ನಿಮಗೆ ಹೇಳಿದವರು ಯಾರು ಎಂದು ಸುದೀಪ್ ಅವರು ಪ್ರಶ್ನಿಸಿದರೂ ಸಹ ಪ್ರಶಾಂತ್ ಮಾತ್ರ ನೇರವಾಗಿ ಚಕ್ರವರ್ತಿ ಎಂದು ಹೇಳಲೇ ಇಲ್ಲ.. ಬದಲಿಗೆ ಗೊತ್ತಾಯ್ತು ಗೊತ್ತಾಯ್ತು ಎಂದಷ್ಟೇ ಹೇಳಿದ್ರು.. ಕೊನೆಗೆ ಮನೆಯವರ ಎಲ್ಲರ ಬಳಿ ಚಂದ್ರಚೂಡ ಅವರ ಬಗ್ಗೆ ಅಭಿಪ್ರಾಯ ಕೇಳಲಾಗಿ..

ಅದರಲ್ಲೂ ಪ್ರಶಾಂತ್ ಸಂಬರ್ಗಿ ಅವರು ಬಹಳ ಇನ್ಫ್ಲೂಯೆನ್ಸ್ ಆಗಿದ್ದಾರೆ.. ಎಂಬ ಮಾತೇ ಎಲ್ಲರ ಬಾಯಲ್ಲಿ ಬಂತು.. ಜೊತೆಗೆ ಚಕ್ರವರ್ತಿ ಅವರನ್ನು ನೇರವಾಗಿ ಪ್ರಶಾಂತ್ ಅವರು ನಿಜವಾಗ್ಲು ನಿಮ್ಮ ಸ್ನೇಹಿತರಾ ಎಂದು ಪ್ರಶ್ನಿಸಿದ್ದಾರೆ.. ಉದಕ್ಕೆ ಹಳೆಯ ಪಳೆಯುಳಿಕೆ ಸದ್ಯಕ್ಕೆ ಮನೆಯಲ್ಲಿ ಗುಂಪು ಒಡೆಯಲು ಮೂಲಕ ಪ್ರಶಾಂತ್ ರನ್ನು ಚಕ್ರವರ್ತಿ ಬಳಸಿಕೊಳ್ಳುತ್ತಿರುವುದರ ಬಗ್ಗೆ ನೇರವಾಗಿ ಪ್ರಶಾಂತ್ ಅವರಿಗೆ ಅರ್ಥ ಮಾಡಿಸಿದ್ದಾರೆ..

ಅಷ್ಟೇ ಅಲ್ಲದೇ ಪ್ಲಾನ್ ಮಾಡಿ ಕಳಪೆ ಕೊಟ್ಟಿದ್ದಾರೆ ಎಂದು ಹೇಳಿದ್ದ ಚಂದ್ರಚೂಡ ಅವರಿಗೆ ಪ್ಲಾನ್ ಮಾಡಿ ಕಳಪೆ ಕೊಡೋಕೆ ಈ ಮನೆಯಲ್ಲಿ ಸಾಧ್ಯಾನಾ ಎಂದು ಮನೆಯವರ ಎಲ್ಲರ ಬಳಿ ಪ್ರತಿಕ್ರಿಯೆ ಕೇಳುವ ಮೂಲಕ ಚಂದ್ರಚೂಡರ ಬಾಯಿ ಮುಚ್ಚಿಸಿದ್ದಾರೆ..