ಧನ್ವೀರ್ ಕೈ ಮಾಡಿದ ಈ ಹುಡುಗ ನಿಜಕ್ಕೂ ಯಾರು ಗೊತ್ತಾ? ಅಷ್ಟಕ್ಕೂ ಅಲ್ಲಿ ನಡೆದದ್ದೇನು ಗೊತ್ತಾ.. ಸತ್ಯ ಬೇರೆಯೇ ಇದೆ..

0 views

ಸಿನಿಮಾ ಇಂಡಸ್ಟ್ರಿ, ರಾಜಕೀಯ ಅಥವಾ ಇನ್ಯಾವುದೇ ರಂಗವಾಗಲಿ ಒಮ್ಮೆ ಸೆಲಿಬ್ರೆಟಿ ಎನಿಸಿಕೊಂಡರೆ ಕೊಂಚ ಅಹಂಕಾರ ನೆತ್ತಿಗೆ ಏರೋದು ಸಹಜ.. ಈ ರೀತಿ ಅನೇಕ ಸೆಲಿಬ್ರೆಟಿಗಳು ಸ್ಯಾಂಡಲ್ವುಡ್ ಹಾಗೂ ಕಿರುತೆರೆಯ ಸ್ಟಾರ್ ಎನಿಸಿಕೊಂಡವರು ಹಾಗೂ ರಾಜಕೀಯ ನಾಯಕರ ಮಕ್ಕಳುಗಳು ಸಾಕಷ್ಟು ಮಂದಿ ಸಾಕಷ್ಟು ಬಾರಿ ರಸ್ತೆಗಳಲ್ಲಿ ಅಥವಾ ಹೊಟೆಲ್ ಗಳಲ್ಲಿ ಅಥವಾ ಇನ್ಯಾವುದೋ ಜಾಗಗಳಲ್ಲಿ ಕಿರಿಕ್ ಮಾಡಿಕೊಂಡಿದ್ದನ್ನು.. ಮಾಡಿಕೊಳ್ಳುತ್ತಿರುವುದನ್ನು ನಾವು ಆಗಾಗ ನೋಡುತ್ತಲೇ ಇದ್ದೇವೆ.. ಆದರೆ ಇದೀಗ ಆಗಿರೋ ಘಟನೆ ಮಾತ್ರ ನಿಜಕ್ಕೂ ಇವರೇನಾ ಅವರು ಎನ್ನುವಂತಾಗಿದೆ..

ಹೌದು ಇಂದೇ ಬಿಡುಗಡೆಯಾಗಿರುವ ಬೈಟು ಲವ್ ಸಿನಿಮಾದ ನಾಯಕ ನಟ ಧನ್ವೀರ್ ಹುಡುಗನೊಬ್ಬನ ಮೇಕೆ ಕೈ ಮಾಡಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.. ಅಷ್ಟಕ್ಕೂ ಆ ಹುಡುಗ ಯಾರು.. ಧನ್ವೀರ್ ಯಾಕೆ ಆ ಹುಡುಗನ ಮೇಲೆ ಕೈ ಮಾಡಿದರು ಅಸಲಿ ವಿಚಾರ ಬೇರೆಯೇ ಇದೆ.. ಹೌದು ಘಟನೆ ನಡೆದಾಗಿನಿಂದ ಧನ್ವೀರ್ ಮೇಲೆ ನೆಟ್ಟಿಗರು ಬಹಳಷ್ಟು ಅಸಮಾಧಾನ ವ್ಯಕ್ತಪಡಿಸಿದ್ದು ಮಾಡಿರೋ ಒಂದು ಸಿನಿಮಾಗೆ ಈ ಮಟ್ಟದ ಅಹಂಕಾರವಾ.. ಇನ್ನು ಸಿನಿಮಾ ಏನಾದರೂ ಹಿಟ್ ಆಗಿದ್ದರೆ ಭೂಮಿ ಮೇಲೆ ಕಾಲು ನಿಲ್ಲುತ್ತಿರಲಿಲ್ಲವೇನೋ.. ಹಿರಿಯ ಕಲಾವಿದರುಗಳನ್ನು ನೋಡಿ ಧನ್ವೀರ್ ಕಲಿಯೋದು ಸಾಕಷ್ಟಿದೆ ಎನ್ನುತ್ತಿದ್ದಾರೆ..

ಹೌದು ಈ ಹುಡುಗನ ಹೆಸರು ಚಂದ್ರಶೇಖರ್.. ನಿಜ ಹೇಳಬೇಕೆಂದರೆ ಈತ ಧನ್ವೀರ್ ಅವರ ಅಭಿಮಾನಿಯಾಗಿದ್ದನು.. ನಿನ್ನೆ ಬೆಂಗಳೂರಿನ ಎಸ್ ಸಿ ರಸ್ತೆಯ ಅನುಪಮಾ ಥಿಯೇಟರ್ ಬಳಿ ತಡರಾತ್ರಿಯಲ್ಲಿ ಧನ್ವೀರ್ ಆಗಮಿಸಿದ್ದಾರೆ.. ಚಂದ್ರಶೇಖರ್ ಕೂಡ ಊಟ ಮುಗಿಸಿ ಸ್ನೇಹಿತರ ಜೊತೆ ಅದೇ ರಸ್ತೆಯಲ್ಲಿ ತೆರಳುತ್ತಿದ್ದರು.. ಇತ್ತ ಧನ್ವೀರ್ ನನ್ನು ನೋಡಿದ ಚಂದ್ರಶೇಖರ್ ಗೆ ಬಹಳ ಸಂತೋಷವಾಗಿದೆ.. ಸಾಮಾನ್ಯವಾಗಿ ಸೆಲಿಬ್ರೆಟಿಗಳು ಕಂಡಾಗ ಅವರುಗಳ ಜೊತೆ ಫೋಟೋ ತೆಗೆಸಿಕೊಳ್ಳೋದು ಸಾಮಾನ್ಯದ ಸಂಗತಿ.. ಅದೇ ರೀತಿ ಚಂದ್ರಶೇಖರ್ ಕೂಡ ಧನ್ವೀರ್ ಜೊತೆ ಫೋಟೋ ತೆಗೆಸಿಕೊಳ್ಳಲು ಮುಂದಾದರು..

ಆದರೆ ಚಂದ್ರಶೇಖರ್ ಬೇಡಿಕೆಗೆ ನಟ ಧನ್ವೀರ್ ಸ್ಪಂದನೆ ನೀಡಲಿಲ್ಲ.. ಇದರಿಂದ ಬೇಸರಗೊಂಡ ಚಂದ್ರಶೇಖರ್ ಧನ್ವೀರ್ ಮೇಲೆ ಅಸಮಾಧಾನ ಹೊರ ಹಾಕಿದ್ದಾರೆ.. ತಕ್ಷಣ ಕೋಪಗೊಂಡ ಧನ್ವೀರ್ ಚಂದ್ರಶೇಖರ್ ಮೇಲೆ ಕೈ ಮಾಡಿದ್ದಾರೆಂದು ಹೇಳಲಾಗಿದೆ.. ಧನ್ವೀರ್ ಜೊತೆಗೆ ಬಾಡಿಗಾರ್ಡ್ ಗಳು ಕೂಡ ಚಂದ್ರಶೇಖರ್ ಮೇಲೆ ಕೈ ಮಾಡಿದ್ದಾರೆ ಎನ್ನಲಾಗಿದೆ.. ಇದರಿಂದ ಬೇಸರಗೊಂಡ ಚಂದ್ರಶೇಖರ್ ಸಾಮಾನ್ಯ ಜನರೆಂದರೆ ಇವರಿಗೆ ಏಕಿಷ್ಟು ಕೀಳರಿಮೆ ಎಂದು ಸೀದಾ ಪೊಲೀಸ್ ಠಾಣೆಗೆ ಹೋಗಿ ಧನ್ವೀರ್ ಮೇಲೆ ದೂರು ದಾಖಲಿಸಿದ್ದಾರೆ..

ಹೌದು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಧನ್ವೀರ್ ಮೇಲೆ ದೂರು ದಾಖಲು ಮಾಡಿದ್ದಾರೆ.. ಇತ್ತ ಚಂದ್ರಶೇಖರ್ ಮುಖ ಹಾಗೂ ಇನ್ನಿತರ ಕಡೆ ಗಾಯಗಳಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಧನ್ವೀರ್ ಮೇಲೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.. ಆದರೆ ಇತ್ತ ಧನ್ವೀರ್ ಮಾತ್ರ ಈ ವಿಚಾರದ ಬಗ್ಗೆ ಇನ್ನೂ ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ.. ಇತ್ತ ತಮ್ಮ ಎರಡನೇ ಸಿನಿಮಾ ಬೈ ಟು ಲವ್ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿದ್ದು ಆ ಸಂತೋಷದ ನಡುವೆ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರುವಂತಾಗಿದೆ..

ಆದರೆ ಇತ್ತ ಧನ್ವೀರ್ ಸಿನಿಮಾದ ಪ್ರಚಾರದ ಸಮಯದಲ್ಲಿ ಮೈಸೂರಿಗೆ ತೆರಳಿದ ಸಮಯದಲ್ಲಿ ಸಾಮಾನ್ಯ ಜನರ ಜೊತೆ ಒಳ್ಳೆಯ ರೀತಿಯಲ್ಲಿ ಅದರಲ್ಲೂ ಬಹಳ ಸರಳತೆಯಿಂದ ನಡೆದುಕೊಂಡರು ಎಂದು ಅಭಿಪ್ರಾಯ ವ್ಯಕ್ತವಾಗಿತ್ತು.. ಆದರೆ ಇದ್ದಕಿದ್ದ ಹಾಗೆ ಅಭಿಮಾನಿಯೊಬ್ಬರ ಮೇಲೆ ಕೈ ಮಾಡಿದ್ದು ನಿಜಕ್ಕೂ ಧನ್ವೀರ್ ಇಂತಹ ಕೆಲಸ ಮಾಡಿದ್ದರೆ ಅವರ ಮೇಕೆ ಕಾನೂನು ಕ್ರಮ ಕೈಗೊಳ್ಳಬೇಕು.. ಆಗ ಮಾತ್ರ ಸಾಮಾನ್ಯ ಜನರು ಸ್ಟಾರ್ ಗಳು ಎಲ್ಲರೂ ಒಂದೇ ಎಂದು ತಿಳಿಯಲಿದೆ ಎನ್ನಲಾಗುತ್ತಿದೆ.. ಒಟ್ಟಿನಲ್ಲಿ ಧನ್ವೀರ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಂತರವಷ್ಟೇ ಮತ್ತೊಂದು ಕಡೆಯ ಸತ್ಯ ಏನೆಂದು ತಿಳಿಯಲಿದೆ..