ಬಿಗ್ ಬಾಸ್ ಮೊದಲ ಸೀಸನ್ ನಲ್ಲಿ ಸ್ಪರ್ಧಿಸಿದ್ದ ಖ್ಯಾತ ನಟಿ ಚಂದ್ರಿಕಾ ಏನಾದರು..ಅಂದು ಬಿಗ್ ಬಾಸ್ ವೇದಿಕೆಗೆ ಬಂದಿದ್ದ ಅವರ ಪುಟ್ಟ ಮಗು ಏನಾಯಿತು ಗೊತ್ತಾ..

0 views

ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ಕಲಾವಿದರು ಬರುವರು ಹೋಗುವರು‌.. ಆದರೆ ಕೆಲವರು ಮಾತ್ರ ನೆನಪಿನಲ್ಲಿ ಉಳಿಯುವರು.. ಅದರಲ್ಲೂ ತೊಂಭತ್ತರ ದಶಕದ ಜನರೇಶನ್ನಿನವರಿಗೆ ಸಿನಿಮಾ ಮಂದಿ ಕೊಂಚ ಮನಸ್ಸಿಗೆ ಹತ್ತಿರವೆನ್ನಬಹುದು.. ಈಗಿನ ರೀತಿ ಯಾವ ಓಟಿಟಿಯೂ ಇಲ್ಲ.. ಟಿವಿಯಲ್ಲಿ ಹೊಸ ಸಿನಿಮಾ ಬರುವುದು ಕನಸಿನ ಮಾತು.. ಆಗೆಲ್ಲಾ ಟೆಂಟ್ ಗಳಿ ಥಿಯೇಟರ್ ಗಳಿಗೆ ಹೋಗಿ ಸಿನಿಮಾ ನೋಡಿದವರೇ ಹೆಚ್ಚು.. ಹಾಗೆಯೇ ಆಗಿನ ಹೀರೋ ಗಳು ನಟಿಯರು ಜನಪ್ರಿಯತೆ ಪಡೆದದ್ದೇ ಹೆಚ್ಚು.. ಈಗಿನಂತೆ ಒಂದೆರೆಡು ಸಿನಿಮಾ ಮಾಡಿ ಮರೆಯಾಗುತ್ತಿರಲಿಲ್ಲ.. ಸಂಭಾವನೆ ಕಡಿಮೆಯಾದರೂ ಸಹ ಪ್ರತಿಭೆ ಇದ್ದರೆ ಒಂದು ಹತ್ತರಿಂದ ಹದಿನೈದು ಸಿನಿಮಾವಂತೂ ಪಕ್ಕಾ ಅಭಿನಯಿಸುತ್ತಿದ್ದರು..

ಅದೇ ರೀತಿ ತೊಂಭತ್ತರ ದಶಕದಲ್ಲಿ ಆ ಸಮಯದಲ್ಲಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ನಟಿ ಚಂದ್ರಿಕಾ.. ಹೌದು ಆ ಸಮಯದಲ್ಲಿ ಬಹಳ ಬೇಡಿಕೆ ಹೊಂದಿದ್ದ ಚಂದ್ರಿಕಾ ಅವರು ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದರು.. ಮಸಣದ ಹೂ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ಚಂದ್ರಿಕಾ ಅವರು ನಂತರ ಹಿಂತಿರುಗಿ ನೋಡಿದ್ದೇ ಇಲ್ಲ.. ವಿಷ್ಣುವರ್ಧನ್ ಅವರು.. ಅನಂತ್ ನಾಗ್ ಅವರು.. ಶಂಕರ್ ನಾಗ್ ಅವರು.. ಕಾಶಿನಾಥ್ ಅವರು.. ಶಶಿಕುಮಾರ್ ಅವರು.. ಟೈಗರ್ ಪ್ರಭಾಕರ್ ಅವರು ಹೀಗೆ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದ ಚಂದ್ರಿಕಾ ನೀನು ನಕ್ಕರೆ ಹಾಲು ಸಕ್ಕರೆ.. ತಾಯಿಗೊಬ್ಬ ತರ್ಲೆ ಮಗ.. ನಮ್ಮ ಊರ ದೇವತೆ.. ದಾಕ್ಷಾಯಿಣಿ.. ವಿಕ್ರಮ್.. ಜನ ಮೆಚ್ವಿದ ಮಗ.. ಸಿಬಿಐ ಶಿವ.. ಕೆರಳಿದ ಕೇಸರಿ.. ತ್ರಿನೇತ್ರ.. ಹೊಸ ರಾಗ.. ನಾಗಶಕ್ತಿ.. ಗೋಲ್ಮಾಲ್ ರಾಧಾ ಕೃಷ್ಣ.. ಗೋಲ್ ಮಾಲ್ ಎರಡು.. ಹೀಗೆ ಬಹಳಷ್ಟು ಹಿಟ್ ಸಿನಿಮಗಳಲ್ಲಿ ಅಭಿನಯಿಸಿದ್ದರು..

ಆದರೆ ಅದೇನಾಯಿತೀ ಏನೋ ಚಿತ್ರರಂಗದಲ್ಲಿ ಬಹಳಷ್ಟು ಬ್ಯುಸಿ ಇರುವಾಗಲೇ ಚಿತ್ರರಂಗದಿಂದ ದೂರ ಉಳಿದರು.. ಹೌದು 1993 ರಲ್ಲಿ ವ್ಯಯಕ್ತಿಕ ಕಾರಣಗಳಿಂದ ಕನ್ನಡ ಚಿತ್ರರಂಗದಿಂದ ಕಣ್ಮರೆಯಾಗಿ ಹೋದರು.. ನಂತರ ಚಂದ್ರಿಕಾ ಅವರನ್ನು ಸಾಕಷ್ಟು ಸಿನಿಮಾ ಪ್ರಿಯರು ಪರದೆಯ ಮೇಲೆ ಮಿಸ್ ಮಾಡಿಕೊಂಡದ್ದೂ ಉಂಟು.. ಚಂದ್ರಿಕಾ ಅವರು ಇನ್ನು ಮತ್ತೆ ಬರುವುದಿಲ್ಲ ಎಂದು ಸಿನಿಮಾ ಮಂದಿಯೂ ಸಹ ಮರೆತರು.. ಆದರೆ ಸಾಕಷ್ಟು ವರ್ಷಗಳ ನಂತರ ಚಂದ್ರಿಕಾ ಬಹಳಷ್ಟು ಸರ್ಪ್ರೈಸ್ ಗಳ ಜೊತೆಗೆ ಮತ್ತೆ ತೆರೆ ಮೇಲೆ ಬಂದರು.. ಆದರೆ ಬೆಳ್ಳಿ ತೆರೆ ಮೇಲಲ್ಲ ಬದಲಿಗೆ ಕಿರುತೆರೆಯಲ್ಲಿ..

ಹೌದು ಕನ್ನಡದ ಬೇರೆ ಭಾಷೆಗಳಲ್ಲಿ ಖ್ಯಾತಿ ಗಳಿಸಿದ್ದ ಬಿಗ್ ಬಾಸ್ ರಿಯಾಲಿಟಿ ಶೋ 2013 ರಲ್ಲಿ ಕನ್ನಡದಲ್ಲಿ ಶುರುವಾಯಿತು.. ಮೊದಲ ಶೋ ಆಗಿದ್ದರಿಂದ ಶೋ ಬಗ್ಗೆ ಸ್ಪರ್ಧಿಗಳ ಬಗ್ಗೆ ಸಾಕಷ್ಟು ಕುತೂಹಲವೂ ಇತ್ತು.. ಅದೇ ರೀತಿ ಮೊದಲ ಸೀಸನ್ ನಲ್ಲಿ ನಿಜಕ್ಕೂ ಬಹಳ ಒಳ್ಳೊಳ್ಳೆ ಸ್ಪರ್ಧಿಗಳನ್ನು ಬಿಗ್ ಬಸ್ ಮನೆಯೊಳಗೆ ಕಳುಹಿಸಿದ್ದು ಶೋ ಕೂಡ ದೊಡ್ಡ ಹಿಟ್ ಆಯಿತು.. ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿತ್ತು.. ಇನ್ನು ಆ ಸ್ಪರ್ಧಿಗಳ ಪಟ್ಟಿಯಲ್ಲಿ ನಟಿ ಚಂದ್ರಿಕಾ ಅವರೂ ಸಹ ಇದ್ದರು.. ಹೌದು ವಿಜಯ್ ರಾಘವೇಂದ್ರ.. ಅಪರ್ಣ.. ಅನುಶ್ರೀ.. ಚಂದ್ರಿಕಾ.. ಶ್ವೇತಾ ಪಂಡಿತ್.. ತಿಲಕ್.. ವಿನಾಯಕ್ ಜೋಶಿ.. ಸಂಜನಾ.. ಅರುಣ್ ಸಾಗರ್.. ನಿಖಿತಾ.. ಹೀಗೆ ಸಾಕಷ್ಟು ಪ್ರಸಿದ್ಧ ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿದ್ದು ಅದರಲ್ಲಿ ಚಂದ್ರಿಕಾ ಕೂಡ ಗಮನ ಸೆಳೆದಿದ್ದರು..

ಚಂದ್ರಿಕಾ ಅವರು ಫ್ಯಾಶನ್ ಹಾಗೂ ಫಿಟ್ನೆಸ್ ಫ್ರೀಕ್ ಎಂಬ ವಿಚಾರ ಬಿಗ್ ಬಾಸ್ ನಲ್ಲಿ ತಿಳಿಯಿತು.. ಯುವ ನಟಿಯರು ನಾಚುವಂತೆ ಕೊಂಚ ಬೋಲ್ಡ್ ಆಗಿಯೇ ಬಟ್ಟೆ ತೊಡುತ್ತಿದ್ದ ಚಂದ್ರಿಕಾ ಅವರು ತಮ್ಮ ನೇರ ಮಾತುಗಳಿಂದ ಗಮನ ಸೆಳೆದಿದ್ದರು.. ಇನ್ನು ಚಂದ್ರಿಕಾ ಅವರ ವ್ಯಯಕ್ತಿಕ ವಿಚರಾಕ್ಕೆ ಬಂದರೆ ಅವರಿಗೆ ಒಬ್ಬ ಮಗನಿದ್ದು ಚಂದ್ರಿಕಾ ಅವರು ಸಿಂಗಲ್ ಪೇರೆಂಟ್ ಎಂಬ ವಿಚರಾವೂ ಸಹ ಬಿಗ್ ಬಸ್ ನಲ್ಲಿಯೇ ತಿಳಿಯಿತು.. ಆದರೆ ಅದಕ್ಕೂ ಮೀರಿ ಚಂದ್ರಿಕಾ ಅವರಿಗಿಂತ ಇಷ್ಟವಾಗಿದ್ದು ಅವರ ಮಗ.. ಹೌದು ಸೀದನ್ ಒಂದನ್ನು ನೋಡಿದ ಪ್ರೇಕ್ಷಕರು ಬಹುತೇಕರಿಗೆ ಚಂದ್ರಿಕಾ ಅವರ ಮಗನ ಬಗ್ಗೆ ನೆನಪಿರುತ್ತದೆ.. ಇದಕ್ಕೆ ಕಾರಣ ಆ ಒಂದು ದಿನ ವಾರದ ಕತೆಯಲ್ಲಿ ಕಿಚ್ಚ ಸುದೀಪ್ ಅವರ ಕಾರ್ಯಕ್ರಮದಲ್ಲಿ ಚಂದ್ರಿಕಾ ಅವರ ಆ ಪುಟ್ಟ ಮಗನೂ ಸಹ ಆಗಮಿಸಿದ್ದ.. ಆಗಿನ್ನು ಬಹಖ ಚಿಕ್ಕ ವಯಸ್ಸು ಬಹುಶಃ ಆರರಿಂದ ಏಳು ವರ್ಷವಷ್ಟೇ..

ಆ ಚಿಕ್ಕ ವಯಸ್ಸಿನಲ್ಲಿ ಆ ಹುಡುಗನಿಗೆ ಇದ್ದ ಪ್ರಬುದ್ಧತೆ ನೋಡಿ ಕಿಚ್ಚ ಸುದೀಪ್ ಅವರೂ ಸಹ ಆಶ್ಚರ್ಯ ಪಟ್ಟಿದ್ದರು.. ಹೌದು ಅಮ್ಮನ ಬಗ್ಗೆ ಮಾತನಾಡಲು ತಿಳಿಸಿದಾಗ.. ಅಮ್ಮನ್ನ ಮಿಸ್ ಮಾಡಿಕೊಳ್ತೀನಿ.. ಬಟ್ ಪರವಾಗಿಲ್ಲ.. ಅವರ ಕೆರಿಯರ್ ಮುಖ್ಯ.. ಎಂದಿದ್ದನು.. ಅಷ್ಟೇ ಅಲ್ಲದೇ ಬಿಗ್ ಬಾಸ್ ಮನೆಯೊಳಗೆ ಅಮ್ಮ ಮಾಡಿದ ತಪ್ಪಿನ ಬಗ್ಗೆ ನೇರವಾಗಿ ಮುಖಕ್ಕೆ ಹೇಳಿದ್ದನು.. ಬಹಳ ಅಂದರ ಬಹಳ ಮೆಚ್ಯೂರ್ ಆಗಿ ಮಾತನಾಡಿದ್ದ ಆ ಹುಡುಗನನ್ನು ಸುದೀಪ್ ಅವರು ಮಾತ್ರವಲ್ಲ ಪ್ರೇಕ್ಷಕರು ಎಲ್ಲರೂ ಸಹ ಮೆಚ್ಚಿಕೊಂಡಿದ್ದರು.. ಇನ್ನು ಇದೀಗ ಆ ಶೋ ನಡೆದು ಹತ್ತು ವರ್ಷಗಳು ಕಳೆದಿದ್ದು ಚಂದ್ರಿಕಾ ಅವರು ಇತ್ತೀಚೆಗೆ ತಮ್ಮ ಮಗನ ಜೊತೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದರು..

ಇಅಂದು ಆ ಪುಟ್ಟ ವಯಸ್ಸಿಗೆ ತನ್ನ ಜೀವನದಲ್ಲಿ ಕೆಲವೊಂದು ಕೊರತೆಗಳಿದ್ದರೂ ಅದೆಲ್ಲವನ್ನು ಬಿಟ್ಟು ಅಷ್ಟು ಪ್ರಬುದ್ಧತೆಯಿಂದ ನಡೆದುಕೊಂಡ ಹುಡುಗನನ್ನು ಕಂದು ನಿಜಕ್ಕೂ ಸಂತೋಷವಾಯಿತು.. ಈತನೇ ನೋಡಿ ಆ ಪುಟ್ಟ ಹುಡುಗ.. ಇನ್ನು ಬಿಗ್ ಬಾಸ್ ಸೀಸನ್ ಮುಗಿದ ಬಳಿಕ ಚಂದ್ರಿಕಾ ಅವರು ನಂತರದಲ್ಲಿ ಸೂರಿ ಅವರ ಕನ್ನಡದ ಕೆಂಡ ಸಂಪಿಗೆ ಸಿನಿಮದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಚಂದ್ರಿಕಾ ಬೇರೆ ಯಾವ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳಲಿಲ್ಲ.. ಇದೀಗ ಹಲವಾರು ವರ್ಷಗಳ ಬಳಿಕ‌ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ತಮ್ಮ ಜಿಮ್ ವರ್ಕೌಟ್ ವೀಡಿಯೋ ಹಂಚಿಕೊಂಡಿದ್ದು ಈಗಲೂ ಸಹ ಅಷ್ಟೇ ಫಿಟ್ನೆಸ್ ಕಾಪಾಡಿಕೊಂಡು ಬರುತ್ತಿದ್ದು ಮುಂಬರುವ ದಿನಗಳಲ್ಲಿ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವಂತಾಗಲಿ..