ಅದ್ಧೂರಿಯಾಗಿ ನೆರವೇರಿತು ಚಂದನ್ ಕವಿತಾ ನಿಶ್ಚಿತಾರ್ಥ.. ಫೋಟೋ ಗ್ಯಾಲರಿ ನೋಡಿ..

0 views

ಕಿರುತೆರೆಯ ಖ್ಯಾತ ಜೋಡಿ.. ಚಂದನ್ ಹಾಗೂ ಕವಿತಾ ಅಂತೂ ಒಂದಾಗಿದ್ದಾರೆ.. ಹೌದು ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಮೂಲಕ ಜನರ ಮನಗೆದ್ದಿದ್ದ ಚಂದನ್ ಹಾಗೂ ಕವಿತಾ ಜೋಡಿ ಸದ್ಯ ಕಳೆದ ಎಂಟು ವರ್ಷದ ತಮ್ಮ ಸ್ನೇಹಕ್ಕೆ ಇದೀಗ ದಾಂಪತ್ಯ ಜೀವನದ ಅರ್ಥ ನೀಡಿದ್ದಾರೆ.. ಹೌದು ಇಬ್ಬರೂ ಸಹ ಕಿರುತೆರೆಯ ಸೂಪರ್ ಸ್ಟಾರ್ ಗಳು.. ಲಕ್ಷ್ಮಿ ಬಾರಮ್ಮ ಧಾರಾವಾಹಿ ಸಮಯದಿಂದಲೂ ಈ ಜೋಡಿಯನ್ನು ನಿಜ ಜೀವನದಲ್ಲಿಯೂ ಒಂದಾಗಿ ಎಂದು ಅದೆಷ್ಟೋ ಅಭಿಮಾನಿಗಳು ಮನವಿ ಮಾಡಿದ್ದು ಉಂಟು..

ಆದರೆ ಇವರಿಬ್ಬರು ಮಾತ್ರ ನಮ್ಮಿಬ್ಬರ ನಡುವೆ ಇರೋದು ಕೇವಲ ಸ್ನೇಹ ಮಾತ್ರ ಎನ್ನುತ್ತಿದ್ದರು.. ಅದೇ ಸತ್ಯವೂ ಆಗಿತ್ತು.. ಧಾರಾವಾಹಿ ನಂತರ ಅಷ್ಟಾಗಿ ಭೇಟಿಯೂ ಆಗುತ್ತಿರಲಿಲ್ಲ‌‌.. ಆದರೆ ಕಳೆದ ವರ್ಷ ಕವಿತಾ ಗೌಡರ ಹುಟ್ಟುಹಬ್ಬದ ದಿನ ಮಧ್ಯ ರಾತ್ರಿ ಸ್ನೇಹಿತರು ಆಯೋಜಿಸಿದ್ದ ಸರ್ಪ್ರೈಸ್ ಪಾರ್ಟಿಯಲ್ಲಿ ಚಂದನ್ ಆಗಮಿಸಿ ಶುಭಾಶಯ ತಿಳಿಸಿದ್ದರು.ಮ್ ಆನಂತರ ನಿರಂತರ ಸಂಪರ್ಕದಲ್ಲಿದ್ದ ಚಂದನ್ ಹಾಗೂ ಕವಿತಾ ಒಟ್ಟಿಗೆ ಪ್ರವಾಸಗಳನ್ನು ಹೋಗಲು ಶುರು ಮಾಡಿದ್ದರು.ಮ್ ಅಷ್ಟೇ ಅಲ್ಲದೇ ಮೊದಲಿಗಿಂತ ಬಹಳ ಆತ್ಮೀಯರಾದ ಚಂದನ್ ರನ್ನು ಹೈದರಾಬಾದ್ ಗೆ ಚಿತ್ರೀಕರಣಕ್ಕೆ ತೆರಳಬೇಕಾದರೆ ಖುದ್ದು ಕವಿತಾ ಅವರೇ ವಿಮಾನ ನಿಲ್ದಾಣಕ್ಕೆ ಡ್ರಾಪ್ ನೀಡುತ್ತಿದ್ದರು.. ಇನ್ನು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಬಹಳ ಆತ್ಮೀಯವಾಗಿ ಫೋಟೊ ಹಂಚಿಕೊಳ್ಳುತ್ತಿದ್ದ ಜೋಡಿಯ ನಡುವೆ ಕಳೆದ ವರ್ಷ ಪ್ರೀತಿಯಾಗಿದೆ..

ಇಬ್ಬರೂ ಸಹ ಒಬ್ಬರನೊಬ್ಬರು ಅರ್ಥ ಮಾಡಿಕೊಂಡಿದ್ದು ಮದುವೆಯಾಗುವ ನಿರ್ಧಾರ ಮಾಡಿದ್ದಾರೆ.. ಎರಡೂ ಕುಟುಂಬಗಳೂ ಸಹ ಇವರಿಬ್ಬರ ಪ್ರೀತಿಗೆ ಒಪ್ಪಿಗೆ ಸೂಚಿಸಿದ್ದು ಮದುವೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.. ಸದ್ಯ ಇಷ್ಟು ದಿನ ತಮ್ಮ ಪ್ರೀತಿಯ ವಿಚಾರವನ್ನು ಹೊರಗೆಲ್ಲೂ ಹೇಳಿಕೊಳ್ಳದ ಜೋಡಿ ಮೊನ್ನೆಯಷ್ಟೇ ಏಪ್ರಿಲ್ ಒಂದರಂದು ನಾವಿಬ್ಬರು ಒಂದಾಗುತ್ತಿದ್ದೇವೆ ಎಂಬ ವಿಚಾರವನ್ನು ತಿಳಿಸಿದ್ದರು.. ಅದೇ ರೀತಿ‌ ಇಂದು ಬೆಂಗಳೂರಿನ ಖಾಸಗಿ ಹೊಟೆಲ್ ಒಂದರಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.. ಚಂದನ್ ಹಾಗೂ ಕವಿತಾರ ನಿಶ್ಚಿತಾರ್ಥಕ್ಕೆ ಸ್ನೇಹಿತರು ಕುಟುಂಬದವರು ಕಿರುತೆರೆ ಕಲಾವಿದರು ಆಗಮಿಸಿ ಶುಭ ಕೋರಿದ್ದಾರೆ.. ಇನ್ನು ಅಭಿಮಾನಿಗಳು ಈ ಜೋಡಿಯ ಮದುವೆ ವಿಚಾರ ಕೇಳಿ ದಿಲ್ ಖುಶ್ ಆಗಿದ್ದು ಚಂದು ಕವಿತಾ ಒಂದಾಗಿದ್ದಕ್ಕೆ ಸಂತೋಷ ವ್ಯಕ್ತ ಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ತಿಳಿಸಿದ್ದಾರೆ..

ಇನ್ನು ಮದುವೆ ಹಾಗೂ ವ್ಯಯಕ್ತಿಕ ಜೀವನದ ಕಾರಣಕ್ಕಾಗಿ ತೆಲುಗಿನ ಸಾವಿತ್ರಮ್ಮಾಗಾರ್ ಅಬ್ಬಾಯ್ ಧಾರಾವಾಹಿ ಬಿಟ್ಟಿರುವ ಚಂದನ್ ಸದ್ಯ ಸಹಕಾರ ನಗರದಲ್ಲಿನ ತಮ್ಮ ದೊನ್ನೆ ಬಿರಿಯಾನಿ ಪ್ಯಾಲೆಸ್ ಹೊಟೆಲ್ ಉದ್ಯಮದ ಕಡೆ ಗಮನ ಹರಿಸಿದ್ದಾರೆ.. ಅಷ್ಟೇ ಅಲ್ಲದೇ ಮೈಸೂರಿನಲ್ಲಿಯೂ ಹೊಟೆಲ್ ತೆರೆಯುವ ಯೋಜನೆಯಲ್ಲಿದ್ದು ನಟನೆಯ ಜೊತೆಗೆ ಫುಲ್ ಟೈಮ್ ಉದ್ಯಮಿಯಾಗುವ ಪ್ಲಾನ್ ನಲ್ಲಿದ್ದಾರೆ..