ನಿಜಕ್ಕೂ ಹೇಗಿದೆ ಗೊತ್ತಾ ಚಾರ್ಲಿ ಸಿನಿಮಾ.. -ರಮ್ಯ ಜಗತ್ ಮೈಸೂರು..

0 views

ಸ್ಯಾಂಡಲ್ವುಡ್ ನ ಬಹು ನಿರೀಕ್ಷೆಯ ಸಿನಿಮಾಗಳಲ್ಲಿ ಚಾರ್ಲಿ ಸಿನಿಮಾವೂ ಒಂದಾಗಿತ್ತು.. ಕೆಜಿಎಫ್ ಸಿನಿಮಾ ನಂತರ ಸಾಮಾನ್ಯವಾಗಿ ಕನ್ನಡ ಸಿನಿಮಾಗಳ ಮೇಲೆ ಇತರ ಭಾಷೆಯ ಸಿನಿಮಾ ಇಂಡಸ್ಟ್ರಿಗಳಲ್ಲಿಯೂ ನಿರೀಕ್ಷೆ ಮೂಡಿದ್ದು ಸತ್ಯ.. ಕೆಜಿಎಫ್ ನಂತರ ಚಾರ್ಲಿ ಸಿನಿಮಾ ಬೇರೆಯದ್ದೇ ಶೈಲಿಯ ಸಿನಿಮಾ ಆಗಿದ್ದರೂ ಸಹ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ನಿರೀಕ್ಷೆಯನ್ನು ಹುಟ್ಟುಹಾಕಿತ್ತು.. ಅಂದುಕೊಂಡಂತೆ ಇಂದು ದೇಶದಾದ್ಯಂತ ಬಿಡುಗಡೆಯಾಗಿದ್ದು ಸಿನಿಮಾ ನೋಡಿದವರಿಗೆ ಹೇಗನಿಸಿತು ಎಂಬ ಕುತೂಹಲ ಇದ್ದೇ ಇದೆ.. ಚಾರ್ಲಿ ಅದಾಗಲೇ ಕಳೆದ ಒಂದು ವಾರದಿಂದ ಗಡಿಯಿಂದಾಚೆಗೆ ತೆರೆ ಮೇಲೆ ಬಂದು ಜನರು ನೋಡಿಯಾಗಿತ್ತು.. ಆದರೆ ಅಧಿಕೃತವಾಗಿ‌ ಮೊದಲ ದಿನ ಮೊದಲ ಶೋ ನೋಡಿದ ಸಾಮಾನ್ಯ ಜನರಿಗೆ ಸಿನಿಮಾ ಹೇಗನಿಸಿತು ಎಂಬುದೇ ಸಿನಿಮಾದ ಮೊದಲ ವಿಮರ್ಷೆ ಎನ್ನಬಹುದು.. ಹಾಗಿದ್ದರೆ ಹೇಗಿದೆ ರಕ್ಷಿತ್ ಶೆಟ್ಟಿ ಅವರ ಚಾರ್ಲಿ..

ಚಾರ್ಲಿ.. ಮನಸೊಳಗಿನ ಭಾವನೆಗಳನ್ನು ಕೆದಕಿ ಸಾಕಷ್ಟು ದೃಶ್ಯಗಳಲ್ಲಿ ಕಣ್ಣಲ್ಲಿ ನೀರು ತರಿಸುವ ಸಿನಿಮಾವಂತೂ ಹೌದು.. ಸಿನಿಮಾದಲ್ಲಿ ಪಾಸಿಟಿವ್ ಮಾತ್ರವಲ್ಲ ಕೆಲವೊಂದು ಬೇಡವಾದ ಅಂಶವೂ ಇದ್ದದ್ದೂ ಎಲ್ಲಾ ಸಿನಿಮಾಗಳಂತೆ ಸಾಮಾನ್ಯವೆನ್ನಬಹುದು.. ಆದರೆ ಇದೊಂದು ನಿರ್ದೇಶಕರ ಸಿನಿಮಾ ಎಂದರೆ ತಪ್ಪಾಗಲಾರದು.. ನಿರ್ದೇಶಕ ಕಿರಣ್ ರಾಜ್ ತಮ್ಮ ಮೊದಲ ಸಿನಿಮಾದಲ್ಲಿಯೇ ಬಹುತೇಕ ಗೆದ್ದರೆಂದೇ ಲೆಕ್ಕವನ್ನಿಟ್ಟುಕೊಳ್ಳಬಹುದು.. ಮುಂಬರುವ ದಿನಗಳಲ್ಲಿ ಸ್ಯಾಂಡಲ್ವುಡ್ ನಲ್ಲಿ ಕತೆಯಾಧಾರಿತ ಸಿನಿಮಾಗಳನ್ನು ಮಾಡುವ.. ಸರಳ ಕತೆಯಾದರೂ ಅದನ್ನು ಚೆಂದವಾಗಿ ತೆರೆ ಮೇಲೆ ತರುವಂತಹ ಭರವಸೆಯ ನಿರ್ದೇಶಕನಾಗಿ ಈ ಸಿನಿಮಾ ಮೂಲಕ ಗುರುತಿಸಿಕೊಂಡಿದ್ದಾರೆ. ಇನ್ನು ಸಿನಿಮಾ ಕತೆಗೆ ಬರುವುದಾದರೆ..

ಸಿನಿಮಾದಲ್ಲಿ ಧರ್ಮ ಹಾಗೂ ಚಾರ್ಲಿಯದ್ದೇ ಮುಖ್ಯ ಭೂಮಿಕೆ.. ಧರ್ಮನಾಗಿ ನಟ ರಕ್ಷಿತ್ ಶೆಟ್ಟಿ ಸಂಪೂರ್ಣವಾಗಿ ಪರಕಾಯವಾಗಿದ್ದರೆ ಅತ್ತ ಚಾರ್ಲಿಯ ಅನೇಕ ಭಾವನಾತ್ಮಕ ದೃಶ್ಯಗಳನ್ನು ತೆರೆಯ ಮೇಲೆ ತಂದ ರೀತಿಗೆ ನಿರ್ದೇಶಕ ಹಾಗೂ ಚಾರ್ಲಿಯ ತರಬೇತುದಾರರಿಗೆ ಅಭಿನಂದನೆ ಸಲ್ಲಿಸಬೇಕು.. ಧರ್ಮನದ್ದು ಯಾಂತ್ರಿಕ ಬದುಕು.. ಅನಾಥನಾಗಿರುವ ಧರ್ಮ ಎಲ್ಲರ ಕಂಡರೂ ಕಿರಿಕಿರಿಯಾಡುವ ಮನುಷ್ಯ.. ಹಿಟ್ಲರ್ ಎಂದೇ ಅಕ್ಕಪಕ್ಕದವರು ಕರೆಯೋದುಂಟು.. ಇಂತಹ ಹಿಟ್ಲರ್ ಜೀವನಕ್ಕೆ ಚಾರ್ಲಿ ಬರುವಳು.. ಬಂದ ನಂತರ ಆತನ ಬದುಕೇ ಬದಲಾಗುವುದು.. ಅನಿರೀಕ್ಷೆಯ ತಿರುವು… ನಂತರ ಧರ್ಮ ಹಾಗೂ ಚಾರ್ಲಿ ಕಾಶ್ಮೀರದವರೆಗಿನ ಜರ್ನಿ.. ಆ ಜರ್ನಿಯ ಉದ್ದಕ್ಕೂ ಏನೇನೆಲ್ಲಾ ಘಟನೆಗಳು ನಡೆಯುವುದು ಎಂಬುದೇ ಚಾರ್ಲಿ ಸಿನಿಮಾ..‌ತೆರೆ ಮೇಲೆ ಬಹಳ ಚೆಂದವಾಗಿ ತೋರಿದ್ದು ನೂರೈವತ್ತು ಇನ್ನೂರು ರೂಪಾಯಿ ಕೊಟ್ಟು ಚಿತ್ರಮಂದಿರದ ಒಳ ಹೋದರೆ ನಿಜಕ್ಕೂ ಮನರಂಜನೆಯ ಜೊತೆಗೆ ಕೊಂಚ ಭಾವುಕರಾಗಿಯೂ ಥಿಯೇಟರ್ ನಿಂದ ಹೊರ ಬರಬಹುದಾಗಿದೆ..

ಇನ್ನು ಸಿನಿಮಾದಲ್ಲಿ ಇಷ್ಟವಾಗದ ಅಂಶವೆಂದರೆ.. ಮೊದಲ ಅರ್ಧ ಭಾಗ ಸರಾಗವಾಗಿ ಸಾಗುವ ಸಿನಿಮಾ ಎರಡನೇ ಭಾಗದಲ್ಲಿ ಕೊಂಚ ನಿರಾಸೆಯನ್ನು ಮೂಡಿಸೋದು ಉಂಟು.. ಸಾಕಷ್ಟು ಕಡೆ ಕೆಕ ದೃಶ್ಯಗಳನ್ನು ಕಡಿಮೆ ಮಾಡಬಹಿದಿತ್ತು ಎಂದೂ ಸಹ ಪ್ರೇಕ್ಷಕರಿಗೆ ಅನಿಸೋದುಂಟು.. ಎರಡನೇ ಭಾಗ ಕೊಂಚ ಬಿಗಿಯಾಗಿದ್ದರೆ ಇನ್ನಷ್ಟು ಗಟ್ಟಿಯಾಗಿರುತಿತ್ತು.. ಆದರೆ ನೋಡುವ ಸಿನಿಮಾ ನೋಡುವ ಸಾವಿರಾರು ಜನರು ಲಕ್ಷಾಂತರ ರೀತಿಯ ಅಭಿಪ್ರಾಯಗಳನ್ನು ಹೇಳಿದರೂ ತೆರೆ ಮೇಲೆ ಬರುವ ಚಾರ್ಲಿ ಧರ್ಮ ಎಲ್ಲಾ ಅಭಿಪ್ರಾಯಗಳನ್ನು ಮೀರಿ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗೋದುಂಟು.. ಕ್ಯಾಮರಾ ಕೆಲಸ.. ಸಂಗೀತ್ ಎಲ್ಲವೂ ಸಹ ಸಿನಿಮಾಗೆ ತಕ್ಕಂತಿದೆ..

ಇನ್ನು ಇದು ನಾಯಕಿಯ ಜೊತೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಳ್ಳುವ ಸಿನಿಮಾವಲ್ಲ.. ಒಂದಷ್ಟು ವಿಲನ್ ಗಳನ್ನು ತುಳಿದು ಹಾಕಿ ಹೀರೋಯಿಸಮ್ ತೋರಿಸುವ ಸಿನಿಮಾವೂ ಅಲ್ಲ.. ಇದು ಸಂಪೂರ್ಣ ವಾಗಿ ನಮ್ಮ ಸುತ್ತಲೇ ಇರುವ ಚಾರ್ಲಿ ಹಾಗೂ ಧರ್ಮ ಎಂಬ ವ್ಯಕ್ತಿಯ ಕತೆಯಷ್ಟೇ.. ಇಂತಹ ವಿಭಿನ್ನ ಪ್ರಯತ್ನದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ರಕ್ಷಿತ್ ಶೆಟ್ಟಿ ಅವರ ನಿರ್ಧಾರದಿಂದ ಗೆದ್ದರೆನ್ನಬಹುದು.. ಇತ್ತ ತಮ್ಮದೇ ಪ್ರೊಡಕ್ಷನ್ ಆಗಿರುವುದರಿಂದ ಈ ಸಿನಿಮಾ ಕಳೆದ ಅವನೇ ಶ್ರೀಮನ್ನಾರಾಯಣ ಸಿನಿಮಾದಿಂದ ಆಗಿರುವ ಎಲ್ಲಾ ನಷ್ಟವನ್ನೂ ಇದು ಭರಿಸಿ ಮನಸ್ಸಿಗೆ ಸಂತೋಷ.. ವೃತ್ತಿಯಲ್ಲಿ ಯಶಸ್ಸು.. ಸಿನಿಮಾರಂಗದಲ್ಲಿ ಹೆಸರು ಹಾಗೂ ಬ್ಯಾಂಕ್ ಖಾತೆಯಲ್ಲಿ ಹಣ ಎಲ್ಲವನ್ನೂ ತುಂಬಿಸುವುದು ಖಚಿತ ಎನ್ನಬಹುದು..

ಇನ್ನೂ ಚಾರ್ಲಿ ಸಿನಿಮಾಗೆ ಆರ್ ಜೆ ಎಂಟರ್ಟೈನ್ಮೆಂಟ್ಸ್ ರೇಟಿಂಗ್ 4/5.. ಕೆಜಿಎಫ್ ಸಿನಿಮಾ ನಂತರ ಕನ್ನಡ ಸಿನಿಮಾಗಳ ಮೇಲಿನ ನಿರೀಕ್ಷೆ ನಿಜಕ್ಕೂ ಹೆಚ್ಚಾಗಿದ್ದು ಈ ಸಿನಿಮಾ ಅಂದರೆ ಚಾರ್ಲಿ ಆ ನಿರೀಕ್ಷೆಗಳನ್ನು ಬೇರೆಯದ್ದೇ ಶೈಲಿಯ ಸಿನಿಮಾವಾಗಿ ನಿರೀಕ್ಷೆಯನ್ನು ನಿಜ ಮಾಡುವುದರಲ್ಲಿ ಬಹುತೇಕ ಗೆದ್ದಿದ್ದಾನೆನ್ನಬಹುದು.. ಶುಭವಾಗಲಿ.. ಒಳ್ಳೊಳ್ಳೆ ಕನ್ನಡ ಸಿನಿಮಾಗಳು ದೊಡ್ಡ ಮಟ್ಟದ ಯಶಸ್ಸು ಪಡೆದು ಬೆಳೆಯಲಿ‌..