ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ಕಿರುತೆರೆಯ ಖ್ಯಾತ ನಟಿ.‌. ಫೋಟೋ ಗ್ಯಾಲರಿ ನೋಡಿ..

0 views

ಕಳೆದ ಒಂದು ವರ್ಷದಿಂದ ಕನ್ನಡ ಕಿರುತೆರೆ ಕಲಾವಿದರು ಸಾಲು ಸಾಲಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಇದೀಗ ಮತ್ತೊಬ್ಬ ಕನ್ನಡ ಕಿರುತೆರೆಯ ಖ್ಯಾತ ನಟಿ ವೈವಾಹಿಕ ಜೀವನಕ್ಕೆ‌ ಕಾಲಿಟ್ಟಿದ್ದು ಸಂತೋಷ ಹಂಚಿಕೊಂಡಿದ್ದಾರೆ.. ಹೌದು ಜೀ ಕನ್ನಡ ವಾಹಿನಿಯ ತ್ರಿನಯನಿ ಧಾರಾವಾಹಿಯ ನಾಯಕ ನಟಿ ಆಶಿಕಾ ಪಡುಕೋಣೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಸ್ನೇಹಿತರು, ಧಾರಾವಾಹಿಯ ಅಭಿಮಾನಿಗಳು ಹಾಗೂ ಸಂಬಂಧಿಕರು ಶುಭ ಹಾರೈಸಿದ್ದಾರೆ.. ಹೌದು ಲಕ್ಷ್ಮೀ ಬಾರಮ್ಮ ಧಾರಾವಾಹಿಯ ನಟ ಚಂದು ಗೌಡ ಜೊತೆಗೆ ತೆಲುಗಿನ ತ್ರಿನಯನಿ ಧಾರಾವಾಹಿಯಲ್ಲಿ ತೆರೆ ಹಂಚಿಕೊಂಡಿರುವ ಆಶಿಕಾ ಪಡುಕೋಣೆ ಇದೀಗ ಕನ್ನಡದಲ್ಲಿಯೂ ತ್ರಿನಯನಿ ಡಬ್ ಆಗಿದ್ದು ಯಶಸ್ವಿಯಾಗಿದೆ..

ಇನ್ನು ಕಳೆದ ಲಾಕ್ ಡೌನ್ ಸಮಯದಲ್ಲಿ ತನ್ನ ತಾಯಿ ತೋರಿಸಿದ ಹುಡುಗನ ಜೊತೆ ಮಾತನಾಡಿದ ಆಶಿಕಾ ಅವರನ್ನೇ ಮದುವೆಯಾಗುವ ನಿರ್ಧಾರ ಮಾಡಿದ್ದು ಇದೀಗ ನವರಾತ್ರಿಯಲ್ಲಿ ಅದ್ಧೂರಿಯಾಗಿ ತಮ್ಮ ತವರೂರಲ್ಲಿ ಮದುವೆ ಸಮಾರಂಭ ನೆರವೇರಿದೆ.. ಹೌದು ಆಶಿಕಾ ಪಡುಕೋಣೆ ಮದುವೆಯಾದ ಹುಡುಗನ ಹೆಸರು ಚೇತನ್ ಶೆಟ್ಟಿ.. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಚೇತನ್ ಶೆಟ್ಟಿ ಹಾಗೂ ಆಶಿಕಾ ಅವರ ಮದುವೆ ಸಂಪೂರ್ಣವಾಗಿ ಮನೆಯವರೇ ನಿಶ್ಚಯ ಮಾಡಿದ್ದಾಗಿದೆ..

ಹೌದು ಕಳೆದ ವರ್ಷ ಲಾಕ್ ಡೌನ್ ನಲ್ಲಿ ಆಶಿಕಾ ಅವರ ತಾಯಿಯ ಮೂಲಕ ಇಬ್ಬರ ಪರಿಚಯವಾಗಿದೆ.. ಮದುವೆಯ ಆಲೋಚನೆ ಮಾಡದ ಆಶಿಕಾ ಚೇತನ್ ಶೆಟ್ಟಿ ಜೊತೆ ಮಾತನಾಡುತ್ತಾ ದಿನ ಕಳೆದಂತೆ ಬಳಿಕ ಮದುವೆಗೆ ಒಪ್ಪಿದ್ದು ಚೇತನ್ ಬಹಳ ಸೌಮ್ಯ ಸ್ವಭಾವದವರು ನನ್ನ ತಂದೆಯಂತೆಯೇ.. ನನ್ನ ವೃತ್ತಿ ಜೀವನಕ್ಕೂ ಬಹಳ ಬೆಂಬಲ ನೀಡುತ್ತಾರೆ.. ಅವಶ್ಯಕತೆ ಬಿದ್ದರೆ ಹೈದರಾ ಬಾದ್ ನಲ್ಲಿಯೇ ನೆಲೆಸಲು ಸಹ ತಯಾರಿದ್ದು ನನಗೆ ಬಹಳ ಬೆಂಬಲವಾಗಿದ್ದಾರೆ ಎಂದಿದ್ದಾರೆ.. ಇನ್ನು ಆಶಿಕಾ ಅವರ ಹುಟ್ಟೂರಾದ ಉಡುಪಿಯಲ್ಲಿ ಅಕ್ಟೋಬರ್ ಹದಿನೆಂಟರಂದು ಅದ್ಧೂರಿಯಾಗಿ ನೆರವೇರಿದೆ.. ಇನ್ನು ಮದುವೆಯಾದ ಎರಡೇ ದಿನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಫೋಟೋ ಹಂಚಿಕೊಂಡಿರುವ ನಟಿ ಆಶಿಕಾ ತಮ್ಮ ಮನದರಸ ಚೇತನ್ ಶೆಟ್ಟಿ ಬಗ್ಗೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ..

ಹೌದು ಚೇತನ್ ಬಹಳ ಮೃದು ಸ್ವಭಾವದ ವ್ಯಕ್ತಿ.. ಅವರು ಸಿಕ್ಕಿರುವುದು ನನ್ಮ ಪುಣ್ಯ.. ನನ್ನ ತಂದೆಯಂತೆಯೇ ಸದಾ ನನ್ನ ಬೆಂಬಲವಾಗಿ ನಿಲ್ಲುತ್ತಾರೆ.. ಬಹಳಷ್ಟು ಪ್ರೋತ್ಸಾಹ ನೀಡುತ್ತಾರೆ.. ಮದುವೆಯ ನಂತರವೂ ನಾನು ನನ್ನ ವೃತ್ತಿ ಜೀವನವನ್ನು ಮುಂದುವರೆಸುತ್ತೇನೆ..‌ ಅಭಿನಯವನ್ನು ನಾನು ಬಿಡೋದಿಲ್ಲ.. ಮುಂದೆಯೂ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತೇನೆ.. “ಜೀವನ ಪರ್ಯಂತ ನಾವಿಬ್ಬರು ಒಟ್ಟಿಗೆ ಇರುತ್ತೇವೆ..” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

ಸಧ್ಯ ಕನ್ನಡದಲ್ಲಿ ತ್ರಿನಯನಿ ಧಾರಾವಾಹಿಯ ಮೂಲಕ‌ ಮನೆ ಮಾತಾಗಿರುವ ನಟಿ ಆಶಿಕಾ ಪಡುಕೋಣೆ ಕತೆಯೇ ರಾಜಕುಮಾರಿ ತ್ರಿವೇಣಿ ಸಂಗಮ ನಿಹಾರಿಕಾ ತಮಿಳ್ ಸೆಲ್ವಿ ಹೀಗೆ ಸಾಕಷ್ಟು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದು ಇದೀಗ ನೂತನ ಜೀವನಕ್ಕೆ ಕಾಲಿಟ್ಟು ಹೊಸ ಜೀವನ ಶುರು ಮಾಡಿದ್ದಾರೆ.. ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಹಂಚಿಕೊಂಡ ಆಶಿಕಾ ಹಾಗೂ ಚೇತನ್ ಶೆಟ್ಟಿ ಗೆ ಸ್ನೇಹಿತರು ಹಾಗೂ ಅಭಿಮಾನಿಗಳು ಶುಭಾಶಯ ತಿಳಿಸಿ ನೂತನ ಜೀವನಕ್ಕೆ ಶುಭ ಹಾರೈಸಿದ್ದಾರೆ..