ಬಿಗ್ ಶಾಕಿಂಗ್.. ನಟ ಚೇತನ್ ಅಮೇರಿಕಾಗೆ ಗಡಿಪಾರು..?

0 views

ಸ್ಯಾಂಡಲ್ವುಡ್ ನ ಖ್ಯಾತ ನಟ ಚೇತನ್ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿಯಾಗುವ ನಟ.. ಸಿನಿಮಾ ದಿಂದಾಚೆಗೆ ಬೇರೆ ವಿಚಾರಗಳಿಗೆ ಬಹಳಷ್ಟು ಸದ್ದು ಮಾಡುವ ಚೇತನ್ ಇತ್ತೀಚೆಗೆ ನ್ಯಾಯಾಧೀಶರ ಬಗ್ಗೆ ಟ್ವೀಟ್ ಮಾಡಿದ್ದಕ್ಕಾಗಿ ಕೆಲ ದಿನಗಳ ಕಾಲ ಪೋಲೀಸರ ವಶದಲ್ಲಿ ಇರುವಂತಾಗಿತ್ತು.. ಮೊನ್ನೆಯಷ್ಟೇ ಚೇತನ್ ಪತ್ನಿ ಮೇಘಾ ಅವರ ಸತತ ಪ್ರಯತ್ನದ ಬಳಿಕ ಮೊನ್ನೆ ಚೇತನ್ ಅವರಿಗೆ ಜಾಮೀನು ದೊರೆತು ಹೊರ ಬರುವಂತಾಯಿತು.. ಹೊರ ಬಂದ ಬಳಿಕ ನಾನು ಮಾಡಿದ್ದ ಒಂದೇ ಒಂದು ಟ್ವೀಟ್ ಗೆ ನನ್ನನ್ನು ಒಳಗೆ ಹಾಕಲಾಗಿತ್ತು.. ಆದರೆ ನಾನು ಎಂದೂ ಸಹ ನನ್ನ ಈ ಹೋರಾಟವನ್ನು ನಿಲ್ಲಿಸೋದಿಲ್ಲ.. ಟ್ವೀಟ್ ಮಾಡುತ್ತಲೇ ಇರುತ್ತೇನೆ ಎಂದಿದ್ದರು.. ಆದರೀಗ ನಟ ಚೇತನ್ ಅವರ ಕುರಿತಾಗಿ ಶಾಕಿಂಗ್ ವಿಚಾರವೊಂದು ಹೊರ ಬಂದಿದೆ.. ಹೌದು ನಟ ಚೇತನ್ ಅವರನ್ನು ಗಡಿ ಪಾರು ಮಾಡಲಾಗುತ್ತಿದೆ..

ಹೌದು ಚೇತನ್ ಅವರನ್ನು ಅಮೇರಿಕಾಗೆ ಗಡಿಪಾರು ಮಾಡುವಂತೆ ಬಸವನಗುಡಿ ಪೊಲೀಸ್ ಠಾಣೆಯಿಂದ ಎಡಿಜಿಪಿ ಪ್ರತಾಪ್ ರೆಡ್ಡಿ ಮೂಲಕ ಗೃಹ ಸಚಿವರ ಕಚೇರಿಯ ಮುಖ್ಯ ಕಾರ್ಯದರ್ಶಿಗಳಿಗೆ ಶಿಫಾರಸ್ಸು ಮಾಡಲಾಗಿದೆ.. ಸಮುದಾಯ ಒಂದರ ಅವಹೇಳನ ಮಾಡಿದ್ದಾರೆಂದು ಚೇತನ್ ಅವರ ಮೇಲೆ ಬಸವನ ಗುಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬಸವನಗುಡಿ ಪೋಲೀಸರು ಈ ಬಗ್ಗೆ ತನಿಖೆ ನಡೆಸಿ ಚೇತನ್ ಅವರು ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ.. ಅದೇ ಕಾರಣಕ್ಕಾಗಿ ಅವರನ್ನು ಅಮೇರಿಕಾಗೆ ಗಡಿಪಾರು ಮಾಡಬೇಕಾಗಿ ಶಿಫಾರಸ್ಸು ಮಾಡಿದ್ದಾರೆ..

ಚೇತನ್ ಅವರು ಸಿನಿಮಾ ಮೂಲಕ ಕನ್ನಡದ ಜನತೆಗೆ ಪರಿಚಯವಾದರೂ ಕೂಡ ತಮ್ಮ ಸಾಮಾಜಿಕ ಹೋರಾಟಗಳ ಮೂಲಕವೇ ಹೆಚ್ಚು ಖ್ಯಾತಿ ಗಳಿಸಿದವರು.. ಅಂಬೇಡ್ಕರ್ ವಾದವನ್ನು ಹೆಚ್ಚು ಪಾಲಿಸುವ ನಟ ಚೇತನ್ ಸಂವಿಧಾನದ ಸಾಕ್ಷಿಯಾಗಿ ಮದುವೆಯಾಗಿದ್ದು ವಿಶೇಷ.. ಆದರೆ ಇದೀಗ ಅಮೇರಿಕಾಗೆ ಗಡಿಪಾರು ಆಗುವ ಆತಂಕದಲ್ಲಿದ್ದಾರೆ ಚೇತನ್.. ಹೌದು ಮೂಲತಃ ಮೈಸೂರಿನವರಾದರೂ ಚೇತನ್ ಅವರ ತಂದೆ ತಾಯಿ ಇರುವುದು ಅಮೇರಿಕಾದಲ್ಲಿಯೇ.. ಚೇತನ್ ಅವರು ಹುಟ್ಟಿ ಬೆಳೆದಿದ್ದು ಸಹ ಅಮೇರಿಕಾದಲ್ಲಿಯೇ.. ಚೇತನ್ ಅವರು ಅಮೇರಿಕಾದ ಪೌರತ್ವವನ್ನು ಪಡೆದಿದ್ದು ಅಲ್ಲಿನ ಪ್ರಜೆಯಾಗಿದ್ದಾರೆ.. ಅದೇ ಕಾರಣಕ್ಕೆ ಚೇತನ್ ಅವರನ್ನು ಅಮೇರಿಕಾಗೆ ಗಡಿಪಾರು ಮಾಡಬೇಕೆಂದು ಶಿಫಾರಸ್ಸು ಮಾಡಲಾಗಿದೆ..

ಆದರೆ ಇತ್ತ ನಟ ಚೇತನ್ ಅವರು ಒಟ್ಟು ಮೂರು ಸಿನಿಮಾಗಳನ್ನು ಒಪ್ಪಿಕೊಂಡಿದ್ದು ಎರಡು ತೆಲುಗು ಸಿನಿಮಾ ಹಾಗೂ ಒಂದು ಕನ್ನಡ ಸಿನಿಮಾದಲ್ಲಿ ಅಭಿನಯಿಸಲು ಡೇಟ್ಸ್ ನೀಡಿದ್ದು ನಿರ್ಮಾಪಕರು ಅದಾಗಲೇ ಸಿನಿಮಾಗಾಗಿ ಬಂಡವಾಳ ಹೂಡಿದ್ದಾರೆ ಎಂದು ತಿಳಿದು ಬಂದಿದ್ದು ಇದೀಗ ಗಡಿಪಾರಿನ ವಿಚಾರ ತಿಳಿದು ಆತಂಕದಲ್ಲಿದ್ದಾರೆ.. ಇತ್ತ ಪತ್ನಿ ಮೇಘಾ ಅವರು ಮೊದಲಿನಿಂದಲೂ ಚೇತನ್ ಅವರಿಗೆ ಬೆಂಬಲವಾಗಿ ನಿಂತಿದ್ದು ಇವರೂ ಸಹ ಸಾಮಾಜಿಕ ಕಳಕಳಿ ಉಳ್ಳವರಾಗಿದ್ದು ಅದೇ ಕಾರಣಕ್ಕೆ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು.. ಇತ್ತ ಚೇತನ್ ಪೊಲೀಸರ ವಶದಲ್ಲಿ ಇದ್ದಾಗಲೂ ಕೂಡ ಶುರುವಿನಲ್ಲಿ ನನ್ನ ಗಂಡ ಕಾಣುತ್ತಿಲ್ಲ ಎಂದು ದೂರು ನೀಡಿ ಚೇತನ್ ಎಲ್ಲಿದ್ದಾರೆ ಎಂಬ ವಿಚಾರವನ್ನು ತಿಳಿದುಕೊಂಡಿದ್ದರು..

ನಂತರ ಸತತ ಪ್ರಯತ್ನಗಳನ್ನು ಮಾಡಿ ಜಾಮೀನು ಪಡೆದಿದ್ದರು.. ಜೊತೆಗೆ ಚೇತನ್ ಅವರ ಹುಟ್ಟುಹಬ್ಬದ ದಿನವೇ ಅವರಿಲ್ಲವಾದರೂ ಚೇತನ್ ಅವರ ಎರಡು ಹೊಸ ಸಿನಿಮಾಗಳನ್ನು ಅನೌನ್ಸ್ ಮಾಡಿದ್ದರು.. ಆದರೀಗ ಗಡಿಪಾರಿನ ವಿಚಾರ ಹರಿದಾಡುತ್ತಿದೆ.. ಅಕಸ್ಮಾತ್ ಚೇತನ್ ಅಮೇರಿಕಾಗೆ ಗಡಿಪಾರಾದರೆ ಪತ್ನಿಯೂ ಸಹ ಅವರ ಜೊತೆ ಅಮೇರಿಕಾಗೆ ತೆರಳಬಹುದಾಗಿದ್ದು ಚೇತನ್ ಅವರ ಮುಂದಿನ ನಡೆ ಏನಾಗಿರಲಿದೆ ಎಂದು ಕಾದು ನೋಡಬೇಕಿದೆ..

ಆದರೆ ಇತ್ತ ಚೇತನ್ ಮಾತ್ರ ಈ ಬಗ್ಗೆ ಪ್ರತಿಕ್ರಿಯೆ ನೀಡಿ‌ ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ.. ನಮ್ಮ ವಕೀಲರ ಗಮನಕ್ಕೂ ಬಂದಿಲ್ಲ.. ನನ್ನ ಗಮನಕ್ಕೂ ಬಂದಿಲ್ಲ.. ನಾನು ಇದ್ಯಾವುದುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ.. ನನ್ನ ಹೋರಾಟ ಹೀಗೆ ಮುಂದುವರೆಯಲಿದೆ ಎಂದಿದ್ದಾರೆ.. ಒಟ್ಟಿನಲ್ಲಿ ಚೇತನ್ ಅವರ ಗಡಿಪಾರು ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು ಪೋಲೀಸ್ ಇಲಾಖೆಯಿಂದ ಅಧಿಕೃತವಾಗಿ ಮಾಹಿತಿ ಹೊರಬರಬೇಕಿದೆ..