ಕಲರ್ಸ್ ಕನ್ನಡ ವಾಹಿನಿಯ ಖ್ಯಾತ ನಟಿ ಸಾವು.. ಕಾರಣವೇನು ಗೊತ್ತಾ.. ಸತ್ಯ ಬೇರೆಯೇ ಇದೆ.. ಬೆಚ್ಚಿಬಿದ್ದ ಕುಟುಂಬ..

0 views

ಕನ್ನಡ ಚಿತ್ರರಂಗದಲ್ಲಿ ಕಲಾವಿದರುಗಳು ಹಾಗೂ ತಂತ್ರಜ್ಞರ ಅಗಲಿಕೆಯ ಸುದ್ದಿ ಇದೀಗ ಸಾಮಾನ್ಯ ಸುದ್ದಿಯಾಗಿ ಹೋದಂತೆ ಕಾಣುತ್ತಿದೆ.. ಕಳೆದ ಎರಡು ವರ್ಷಗಳಿಂದ ಚಿತ್ರರಣ್ಗದ ಲೆಕ್ಕವಿಲ್ಲದಷ್ಟು ಮಂದಿ ಇಲ್ಲವಾಗಿದ್ದು ನಿಜಕ್ಕೂ ಬೇಸರವನ್ನುಂಟು ಮಾಡುತ್ತದೆ.. ಆದರೆ ಇದೀಗ ಕನ್ನಡ ಕಿರುತೆರೆಯ ಖ್ಯಾತ ನಟಿಯೂ ಸಹ ಕೊನೆಯುಸಿರೆಳೆದಿದ್ದು ನಿಜಕ್ಕೂ ಸಣ್ಣದೊಂದು ಯಡವಟ್ಟಿನಿಂದ ಏನಾಗಿ ಹೋಯ್ತು ಎನ್ನುವಂತಾಗಿದೆ.. ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸರಾವಾಗುತ್ತಿರುವ ಗೀತಾ ಧಾರಾವಾಹಿ ಹಾಗೂ ದೊರೆಸಾನಿ ಧಾರಾವಾಹಿಯ ನಟಿ ಸಣ್ಣದೊಂದು ಯಡವಟ್ಟಿನ ನಿರ್ಧಾರದಿಂದ ಇಂದು ಜೀವ ಕಳೆದುಕೊಂಡಿದ್ದು ಆಕೆಯ ಹೆತ್ತವರು ಬೆಚ್ಚಿಬಿದ್ದಿದ್ದಾರೆ..

ಹೌದು ಚೇತನಾ ರಾಜ್ ಕಲಾರಂಗದಲ್ಲಿಯೇ ಬದುಕು ಕಟ್ಟಿಕೊಳ್ಳಬೇಕೆಂಬ ಕನಸು ಕಂಡಿದ್ದ ನಟಿ.. ತನ್ನ ಕನಸನ್ನು ನನಸು ಮಾಡಿಕೊಳ್ಳುವ ಸಲುವಾಗಿ ಸಾಕಷ್ಟು ಪರಿಶ್ರಮ ಪಟ್ಟಿದ್ದರು.. ಗೀತಾ ಹಾಗೂ ದೊರೆಸಾನಿ ಧಾರಾವಾಹಿಯಲ್ಲಿ ಅಭಿನಯಿಸಿದ್ದ ಚೇತನಾ ರಾಜ್ ಗೆ ದೊಡ್ಡದೊಂದು ಅವಕಾಶವೂ ಬಂತು.. ಹೌದು ಕಲರ್ಸ್ ವಾಹಿನಿಯ ಹೊಸ ಧಾರಾವಾಹಿ ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸುವ ಅವಕಾಶವೂ ದೊರೆಯಿತು.. ಎಲ್ಲವೂ ಸರಿ ಇದ್ದಿದ್ದರೆ ಇನ್ನು ಕೆಲ ತಿಂಗಳುಗಳಲ್ಲಿ ಧಾರಾವಾಹಿ ಮೂಲಕ ನಾಯಕಿಯಾಗಿ ಮಿಂಚಬೇಕಿದ್ದ ಚೇತನಾ ರಾಜ್ ಇಂದು ಜೀವ ಕಳೆದುಕೊಂಡು ಮಲಗುವಂತಾಗಿದೆ..

ಹೌದು ಚೇತನಾ ರಾಜ್ ಸಣ್ಣ ಆಗಲು ಸರ್ಜರಿ ಮಾಡಿಸಿಕೊಳ್ಳುವ ನಿರ್ಧಾರ ತೆಗೆದುಕೊಂಡು ನಿನ್ನೆ ಸರ್ಜರಿ ನಡೆಯುವ ಸಮಯದಲ್ಲಿಯೇ ಶ್ವಾಸಕೋಶಕ್ಕೆ ನೀರು ತುಂಬಿಕೊಂಡು ಜೀವ ಕಳೆದುಕೊಂಡಿದ್ದಾರೆ. ನಟಿಯಾಗಬೇಕೆಂದು ಕನಸು ಕಂಡು ಆ ಕನಸನ್ನು ಸಾಕಾರ ಮಾಡಿಕೊಂಡು ಸಿನಿಮಾದಲ್ಲಿಯೂ ಅಭಿನಯಿಸಿ ಇದೀಗ ಯಶಸ್ಸನ್ನು ಅನುಭಾವಿಸುವ ಸಮಯದಲ್ಲಿ ಕೇವಲ‌ಇಪ್ಪತ್ತೊಂದು ವರ್ಷಕ್ಕೇ ತನ್ನ ಜೀವನದ ಪಯಣವನ್ನು ಮುಗಿಸಿಬಿಟ್ಟಿದ್ದು ನಿಜಕ್ಕೂ ತಿಳುವಳಿಕೆ ಇಲ್ಲದೇ ಸರಿಯಾದ ನಿರ್ಧಾರಗಳನ್ನಿ ತೆಗೆದುಕೊಳ್ಳದೇ ಹೋದರೆ ಎಂತಹ ದೊಡ್ಡ ಯಡವಟ್ಟುಗಳು ಆಗಿ ಹೋಗುತ್ತವೆ ಎಂಬುದಕ್ಕೆ ಈ ಘಟನೆಯೇ ನೈಜ್ಯ ಉದಾಹರಣೆ..

ಹೌದು ಬೆಂಗಳೂರಿನ ಅಬ್ಬಿಗೆರೆ ನಿವಾಸಿಯಾಗಿರುವ ಚೇತನಾ ರಾಜ್ ಸಣ್ಣ ಆಗಲು ಸರ್ಜರಿ ಮಾಡಿಸಿಕೊಳ್ಳುವ ನಿರ್ಧಾರಕ್ಕೆ ಬಂದರು.. ಒಂದು ಕಡೆ ಅಪ್ಪ ಅಮ್ಮನಿಗೆ ವಿಚಾರ ತಿಳಿಸಿದರೆ ಅವರು ಒಪ್ಪುವುದಿಲ್ಲವೆಂದು ಅಪ್ಪ ಅಮ್ಮನಿಗೆ ಹೇಳದೇ ನಿನ್ನೆ ಆಸ್ಪತ್ರೆಗೆ ತೆರಳಿದರು.. ಬೆಂಗಳೂರಿನ ನವರಂಗ್ ಸರ್ಕಲ್ ನಲ್ಲಿರುವ ಡಾ.ಶೆಟ್ಟಿ ಕಾಸ್ಮೆಟಿಕ್ಸ್ ಆಸ್ಪತ್ರೆಗೆ ದಾಖಲಾಗಿ ಫ್ಯಾಟ್ ಸರ್ಜರಿ ಮಾಡಿಸಿಕೊಂಡಿದ್ದಾರೆ.. ಬೆಳಗ್ಗೆ ಒಂಭತ್ತು ಮೂವತ್ತಕ್ಕೆ ಸರ್ಜರಿ ಮಾಡಿಸಿಕೊಂಡಿದ್ದು ಅತ್ತ ಚೇತನಾ ರಾಜ್ ಅವರ ಅಪ್ಪ ಅಮ್ಮನಿಗೆ ವಿಚಾರ ತಿಳಿದು ಆಸ್ಪತ್ರೆಗೆ ಆಗಮಿಸಿದ್ದಾರೆ.. ಆದರೆ ಅಷ್ಟರಲ್ಲಿ ಅದಾಗಲೇ ಚೇತನಾ ರಾಜ್ ಅವರ ಶ್ವಾಸಕೋಶಕ್ಕೆ ನೀರು ತುಂಬಿಕೊಂಡು ಅವರ ಸ್ಥಿತು ಗಂಭೀರವಾಗಿ ಹೋಗಿದೆ.. ನಂತರ ನಾಲ್ಕು ಗಂಟೆಗಳ ಚಿಕಿತ್ಸೆ ನೀಡಿ ಬೇರೆ ಆಸ್ಪತ್ರೆಗೆ ರವಾನಿಸಿದ್ದಾರೆ.. ಆದರೆ ಅಷ್ಟರಲ್ಲಾಗಲೇ ಚೇತನಾ ರಾಜ್ ಕೊನೆಯುಸಿರೆಳೆದು ಬಿಟ್ಟಿದ್ದರು..

ಹೌದು ಅತಿಯಾದ ಸೌಂದರ್ಯದ ಕಾಳಜಿಯಿಂದಾಗಿ ತೆಗೆದುಕೊಂಡ ಒಂದು ಯಡವಟ್ಟಿನ ನಿರ್ಧಾರ ಒಬ್ಬ ಕಲಾವಿದೆಯ ಜೀವನವನ್ನೇ ಮುಕ್ತಾಯ ಮಾಡಿ ಬಿಟ್ಟಿತು.. ಅತ್ತ ಬೆಳಿಗ್ಗೆ ಇದ್ದ ಮಗಳು ಮಧ್ಯಾಹ್ನ ಅಷ್ಟರಲ್ಲಿ ಹೀಗಾದಳೆಂದು ಚೇತನಾ ರಾಜ್ ಅಪ್ಪ ಅಮ್ಮ ಬೆಚ್ಚಿಬಿದ್ದಿದ್ದಾರೆ.. ಹೌದು ಅಪ್ಪ ಅಮ್ಮನ ಅನುಮತಿ ಪಡೆಯದೇ ಸರಿಯಾದ ಸಲಕರಣೆಗಳು ಇಲ್ಲದೇ ಸರ್ಜರಿ ಮಾಡಿದ ಕಾರಣ ನಮ್ಮ ಮಗಳು ಇಂದು ಜೀವ ಕಳೆದುಕೊಂಡಿದ್ದಾಳೆ ಎಂದು ಚೇತನಾ ರಾಜ್ ಕುಟುಂಬಸ್ಥರು ಆರೋಪಿಸಿದ್ದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ..

ಹೌದು ಸಣ್ಣ ಆಗಲು ಯೋಗ ವ್ಯಾಯಾಮದಂತಹ ಹತ್ತಾರು ಆರೋಗ್ಯಕರ ದಾರಿಗಳಿದ್ದರೂ ಸಹ ಒಂದೇ ದಿನ ಸಣ್ಣ ಆಗಬೇಕೆಂದು ಈ ರೀತಿಯ ಕೃತಕವಾಗಿ ಸರ್ಜರಿಗಳನ್ನು ಮಾಡಿಸಿಕೊಂಡು ತಮ್ಮ ಜೀವಕ್ಕೇ ಆಪತ್ತು ತಂದುಕೊಳ್ಳುತ್ತಿದ್ದಾರೆ.‌. ತೆರೆ ಮೇಲೆ ನಾಯಕಿಯಾಗಿ ಮಿಂಚಬೇಕಿದ್ದ ಚೇತನಾ ರಾಜ್ ಕೇವಲ ಇಪ್ಪತ್ತೊಂದು ವರ್ಷ ವಯಸ್ಸಿಗೆ ತನ್ನ ಬದುಕಿನ ಪಯಣ ಮುಗಿಸಿ ಹೊರಟಿದ್ದು ನಿಜಕ್ಕೂ ಬೇಸರವನ್ನುಂಟು ಮಾಡುತ್ತದೆ.. ದಯವಿಟ್ಟು ಯಾರೇ ಆಗಲಿ ಇಂತಹ ಕೆಲಸಗಳನ್ನು ಮಾಡಬೇಡಿ.. ಸೌಂದರ್ಯ ಮುಖ್ಯ ನಿಜ.. ಆದರೆ ಅದೆಲ್ಲದಕ್ಕಿಂತಲೂ ಜೀವನ ಮುಖ್ಯ.. ಏನೋ ಮಾಡಲು ಹೋಗಿ ಯಡವಟ್ಟಿನ ನಿರ್ಧಾರಗಳನ್ನು ಕೈಗೊಂಡು ಈ ರೀತಿ ಕುಟುಂಬದವರಿಗೆ ನೋವು ನೀಡುವಂತಾಗವಂಬಾರದು.. ಚೇತನಾ ರಾಜ್ ಅಗಲಿಕೆಯ ವಿಚಾರ ತಿಳಿದು ಇದೀಗ ಸಹಕಲಾವಿದರು ಸ್ನೇಹಿತರುಗಳು ಕಂಬನಿ ಮಿಡಿದಿದ್ದು ಸಂತಾಪ ಸೂಚಿಸಿದ್ದಾರೆ..