ಸಾಯುವ ಕೊನೆ ಘಳಿಗೆಯಲ್ಲಿ ರವಿ ಬೆಳೆಗೆರೆ ಅವರು ಮಾಡಿರುವ ಕೆಲಸ ನೋಡಿ..

0 views

ಯುವ ಮನಸ್ಸುಗಳಿಗೆ ಓದುವ ಗೀಳು ಹಚ್ಚಿದ ಅದ್ಭುತ ಬರಹಗಾರ ಪತ್ರಕರ್ತ ರವಿ ಬೆಳೆಗೆರೆ ಅವರು ಇನ್ನು ನೆನಪು‌‌ ಮಾತ್ರ.. ಏನೂ ಇಲ್ಲದೇ.. ಲೇಖನಿ ಮಾತ್ರದಿಂದಲೇ ಏನೇನೆಲ್ಲಾ ಮಾಡಬಹುದೆಂಬುದಕ್ಕೆ ರವಿ ಬೆಳೆಗೆರೆ ಅವರೇ ನೈಜ್ಯ ಉದಾಹರಣೆ.. ಬಳ್ಳಾರಿಯಿಂದ ಬರಿಗೈಯಲ್ಲಿ ಬೆಂಗಳೂರಿಗೆ ಬಂದು ಲೇಖನಿ ಹಿಡಿದು ಕೋಟಿ ಹಣ ಸಂಪಾದಿಸಿದ ರವಿ ಬೆಳೆಗೆರೆ ಅವರು ಅದೆಷ್ಟೋ ಯುವ ಜನರಿಗೆ ಸ್ಪೂರ್ತಿಯಾಗಿದ್ದರು.. ಅದೆಷ್ಟೋ ಪತ್ರಕರ್ತರ ರೋಲ್ ಮಾಡಲ್ ಆಗಿದ್ದರು.. ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಅನೇಕ ಕಲಾವಿದರ ರಾಜಕಾರಣಿಗಳ ವ್ಯಯಕ್ತಿಕ ಜೀವನದ ಕುರಿತು ಬರೆದು ಕೆಲವರ ವಿರೋಧ ಕಟ್ಟಿಕೊಂಡದ್ದೂ ಉಂಟು.. ಆದರೂ ರವಿ ಬೆಳೆಗೆರೆ ಎಂದರೆ ಬಹಳಷ್ಟು ಜನರಿಗೆ ಪ್ರೀತಿ ಇತ್ತು.. ಅವರ ಬರಹಗಳ ಬಗ್ಗೆ ಗೌರವವಿತ್ತು..

ಇಂದು ಆ ಚೇತನ ಹಸ್ತಂಗತವಾಗಿದೆ.. ಹೌದು ನಿನ್ನೆ ರಾತ್ರಿ ಹೃದಯಾಘಾತದಿಂದ ರವಿ ಬೆಳೆಗೆರೆ ಅವರು ಕೊನೆಯುಸಿರೆಳೆದಿದ್ದಾರೆ.. ಆದರೆ ಕೊನೆ ಘಳಿಗೆಯಲ್ಲಿ ರವಿ ಬೆಳೆಗೆರೆ ಅವರ ಜೊತೆ ಯಾರಿದ್ದರು.. ಅಷ್ಟಕ್ಕೂ ರವಿ ಬೆಳೆಗೆರೆ ಅವರು ಎಲ್ಲಿದ್ದರು ಎಂಬ ಕುತೂಹಲ ಇದ್ದೇ ಇದೆ.. ಮತ್ತೆಲ್ಲೂ ಅಲ್ಲ ರವಿ ಬೆಳೆಗೆರೆ ಅವರು ಜೀವನದ ಬಹಳಷ್ಟು ಸಮಯ ಕಳೆದ ಆಫೀಸಿನಲ್ಲಿಯೇ ಕೊನೆ ಘಳಿಗೆಯಲ್ಲಿಯೂ ಪುಸ್ತಕ ಬರೆಯುತ್ತಲೇ ಕೊನೆಯುಸಿರೆಳೆದಿದ್ದಾರೆ..

ಹೌದು ರವಿ ಬೆಳೆಗೆರೆ ಅವರು ರಾತ್ರಿ ಹಗಲು ಎನ್ನದೇ ಪುಸ್ತಕ ಓದುವುದು.. ಪುಸ್ತಕ ಬರೆಯುವುದು ಅವರ ದಿನ ನಿತ್ಯದ ಕೆಲಸವಾಗಿತ್ತು.. ಮನೆಗೆ ಹೋಗುವುದು ಕಡಿಮೆ.. ಸದಾ ಆಫೀಸಿನಲ್ಲಿಯೇ ಉಳಿದುಕೊಳ್ಳುತ್ತಿದ್ದರು.. ಅದೇ ರೀತಿ ನಿನ್ನೆಯೂ ಕೂಡ ಪುಸ್ತಕ ಬರೆದು ತಡವಾಗಿಯೇ ನಿದ್ರೆಗೆ ಹೋಗಿದ್ದಾರೆ.. ಮತ್ತೆ ಕೆಲ ಸಮಯ ಬಿಟ್ಟು 12.10ಕ್ಕೆ ಎದ್ದಿದ್ದು ಮಗನಂತೆ ನೋಡಿಕೊಳ್ಳುತ್ತಿದ್ದ ರವಿ ಬೆಳೆಗೆರೆ ಅವರ ಸಹಾಯಕ ವಾದಿರಾಜ್ ನನ್ನು ಕರೆದಿದ್ದಾರೆ.. ಕರೆದು ಸಮಯ ಎಷ್ಟಾಗಿದೆ ಎಂದಿದ್ದಾರೆ.. 12.10 ಆಗಿದೆ.. ಬಾತ್ ರೂಮ್ ಗೇನಾದರೂ ಹೋಗ್ತೀರಾ ಎಂದು ವಾದಿರಾಜ್ ಕೇಳಿದ್ದಾರೆ..

ಇಲ್ಲ ಎಂದು ಕತ್ತು ಅಳ್ಳಾಡಿಸಿ ಹೇಳಿದ ರವಿ ಬೆಳೆಗೆರೆ ಅವರು ಅದೇ ಕ್ಷಣ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.. ತಕ್ಷಣ ರವಿ ಬೆಳೆಗೆರೆ ಅವರ ಮಗ ಕರ್ಣನಿಗೆ ವಾದಿರಾಜ್ ಅವರು ಫೋನ್ ಮಾಡಿ ವಿಚಾರ ತಿಳಿಸಿದ್ದಾರೆ.. ಅಲ್ಲೇ ಹತ್ತಿರದಲ್ಲಿದ್ದ ಮಗ ಕರ್ಣ ತಕ್ಷಣ ಆಫೀಸಿನ ಬಳಿ ತೆರಳಿದ್ದಾರೆ.. ಮಗಳು ಚೇತನಾ ಕೂಡ ತೆರಳಿದ್ದಾರೆ ಆದರೆ ಅಷ್ಟರಲ್ಲಾಗಲೇ ರವಿ ಬೆಳೆಗೆರೆ ಅವರು ಇಲ್ಲವಾಗಿದ್ದರು.. ಆದರೂ ಡಾಕ್ಟರ್ ಬಳಿ ತೆರಳಿದ್ದು ಡಾಕ್ಟರ್ ಕೂಡ ರವಿ ಬೆಳೆಗೆರೆ ಅವರ ವಿಚಾರವನ್ನ ಖಚಿತಪಡಿಸಿದ್ದಾರೆ..‌

ಅಪ್ಪನ ಕೊನೆ ಸಮಯದಲ್ಲಿ ನಡೆದ ಘಟನೆ ಬಗ್ಗೆ ಮಗಳು ಚೇತನ ಮತನಾಡಿ ಕಣ್ಣೀರಿಟ್ಟಿದ್ದಾರೆ.. ಅಪ್ಪನಿಲ್ಲ ಎಂಬ ವಿಚಾರವನ್ನು ಊಹಿಸಿಕೊಳ್ಳಲೂ ಕೂಡ ಆಗುತ್ತಿಲ್ಲ.. ಮೊನ್ನೆ ಮೊನ್ನೆಯಷ್ಟೇ ಮನೆಯಲ್ಲಿ ಎಲ್ಲರೂ ಒಟ್ಟಿಗೆ ಸೇರಿದ್ದೆವು.. ಮುಂದಿನ ವಾರ ಮ್ಯೂಸಿಕಲ್ ನೈಟ್ ಮಾಡೋಣ ಛಾಯಾ ಆಂಟಿ ಗೆ ತಿಳಿಸೋಣ ಎಂದೆಲ್ಲಾ ಮಾತನಾಡಿಕೊಂಡಿದ್ವಿ.. ಆದರೆ ಈ ರೀತಿ ಸಡನ್ ಆಗಿ ಹೀಗೆ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ..

ಇವತ್ತು ಅಪ್ಪನ ಪ್ರೀತಿಯ ಪ್ರಾರ್ಥನಾ ಶಾಲೆಯಲ್ಲಿಯೇ ಅವರ ಅಂತಿಮ ದರ್ಶನಕ್ಕೆ ಇರಿಸಿ ನಂತರ ಬನಶಂಕರಿಯಲ್ಲಿ ಅಂತಿಮ ಕಾರ್ಯ ಮಾಡುವುದಾಗಿ ಮಗ ಕರ್ಣ ತಿಳಿಸಿದ್ದಾರೆ.. ರಾಜಕರಾಣಿಗಳು ಪತ್ರಕರ್ತರು ಸ್ನೇಹಿತರು ಅಭಿಮಾನಿಗಳು ಎಲ್ಲರೂ ಆಗಮಿಸಿ ಅಗಲಿದ ಮಹಾನ್ ಪತ್ರಕರ್ತನಿಗೆ ಅಂತಿಮ ನಮನ ಸಲ್ಲಿಸಿ ಕಂಬನಿ‌ ಮಿಡಿದಿದ್ದಾರೆ..