ರೆಸ್ಟೋರೆಂಟ್ ಶೈಲಿಯ ಚಿಕನ್ ಲಾಲಿಪಪ್ ಮಾಡುವ ಸುಲಭ ವಿಧಾನ..

0 views

ನಾನ್ ವೆಜ್ ಪ್ರಿಯರು ಚಿಕನ್ ರೆಸಿಪಿಗಳನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಚಿಕನ್ ಬಳಸಿ ಅನೇಕ ಅನೇಕ ರೀತಿಯ ರೆಸಿಪಿಗಳನ್ನು ಮಾಡಬಹುದು. ನಮ್ಮ ಕರ್ನಾಟಕದಲ್ಲೇ ಚಿಕನ್ ಬಳಸಿ ಸಾಕಷ್ಟು ಬಗೆಯ ಅಡುಗೆಗಳನ್ನು ಮಾಡುತ್ತಾರೆ. ಹೆಚ್ಚಾಗಿ ಎಲ್ಲರೂ ಹೊರಗೆ ರೆಸ್ಟೋರೆಂಟ್ ಗಳಲ್ಲಿ ಚಿಕನ್ ರೆಸಿಪಿಗಳನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಎಲ್ಲರಿಗು ಮೆಚ್ಚುಗೆಯಾಗುವ ಚಿಕನ್ ರೆಸಿಪಿಗಳಲ್ಲಿ ಒಂದು ಚಿಕನ್ ಲಾಲಿಪಾಪ್. ರೆಸ್ಟೋರೆಂಟ್ ಗಳಲ್ಲಿ ಇದು ಬಹಳ ಕ್ರಿಸ್ಪಿಯಾಗಿ ಮತ್ತು ರುಚಿಕರವಾಗಿರುತ್ತದೆ. ಅದೇ ರೀತಿಯ ಲಾಲಿಪಾಪ್ ಅನ್ನು ಸೇವಿಸಲು ಜನರು ತುಂಬಾ ಇಷ್ಟಪಡುತ್ತಾರೆ. ರೆಸ್ಟೋರೆಂಟ್ ಸ್ಟೈಲ್ ನಲ್ಲಿ, ರುಚಿಕರವಾದ ಚಿಕನ್ ಲಾಲಿ ಪಾಪ್ ಮಾಡುವುದನ್ನು ಇಂದು ನಿಮಗೆ ತೋರಿಸಿಕೊಡುತ್ತೇವೆ. ಚಿಕನ್ ಪ್ರಿಯರಿಗೆ ಈ ರೀತಿ ಮಾಡಿಕೊಟ್ಟರೆ, ಬಹಳ ಸಂತೋಷವಾಗಿ ತಿನ್ನುತ್ತಾರೆ. ಹಾಗಿದ್ದರೆ ಯಾಕೆ ತಡ, ರೆಸ್ಟೋರೆಂಟ್ ಶೈಲಯ ಚಿಕನ್ ಲಾಲಿಪಾಪ್ ರೆಸಿಪಿ ಮಾಡುವುದು ಹೇಗೆ ಎಂದು ತಿಳಿಯೋಣ ಬನ್ನಿ..

ಲಾಲಿಪಾಪ್ ಮಾಡಲು, ಚಿಕನ್ ವಿಂಗ್ಸ್ ಅನ್ನು ಅಂಗಡಿಯಲ್ಲಿ ಕೇಳಿ ತೆಗೆದುಕೊಳ್ಳಿ. ಇಂದು ನಿಮಗೆ ಅರ್ಧ ಕೆಜಿ ಚಿಕನ್ ಪ್ರಮಾಣಕ್ಕೆ ಎಷ್ಟು ಪದಾರ್ಥಗಳನ್ನು ಹಾಕಬೇಕು ಎಂದು ತೋರಿಸುತ್ತೇವೆ. ಚಿಕನ್ ಅನ್ನು ಎರಡು ಬಾರಿ ಕ್ಲೀನ್ ಆಗಿ ವಾಶ್ ಮಾಡಿದ ನಂತರ, ಅರ್ಧ ಟೀ ಸ್ಪೂನ್ ಉಪ್ಪು, ಅರ್ಧ ಟೀ ಸ್ಪೂನ್ ನಿಂಬೆರಸ, ಅರ್ಧ ಟೀ ಸ್ಪೂನ್ ಪೆಪ್ಪರ್ ಪೌಡರ್, ಅರ್ಧ ಟೀ ಸ್ಪೂನ್ ಕಶ್ಮೀರಿ ಚಿಲ್ಲಿ ಪೌಡರ್ ಸೇರಿಸಿ, ಕಶ್ಮೀರಿ ಚಿಲ್ಲಿ ಪೌಡರ್ ಬಳಸಿದರೆ ಒಳ್ಳೆಯ ಬಣ್ಣ ಬರುತ್ತದೆ. ನಂತರ ಅರ್ಧ ಟೀ ಸ್ಪೂನ್ ಗರಂ ಮಸಾಲ ಹಾಗೂ ಅರ್ಧ ಟೀ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಾಗೂ ಒಂದು ಟೀ ಸ್ಪೂನ್ ಸೋಯಾ ಸಾಸ್ ಹಾಕಿ. ಸೋಯಾ ಸಾಸ್ ಹಾಕುವುದರಿಂದ ಚಿಕನ್ ತಿನ್ನಲು ತುಂಬಾ ಸಾಫ್ಟ್ ಆಗಿ ಬರುತ್ತದೆ.

ಸೋಯಾ ಸಾಸ್ ಇಲ್ಲದೆ ಹೋದರೆ, ಇನ್ನು ಸ್ವಲ್ಪ ನಿಂಬೆರಸ ಹಾಕಿಕೊಳ್ಳಬಹುದು. ಈ ಎಲ್ಲಾ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಚೆನ್ನಾಗಿ ಮಿಕ್ಸ್ ಮಾಡುವುದರಿಂದ ಫ್ರೈ ಮಾಡಿದಾಗ ಒಳ್ಳೆಯ ಟೇಸ್ಟ್ ಸಿಗುತ್ತದೆ. ಇದನ್ನು ಅರ್ಧ ಗಂಟೆ ಹಾಗೆಯೇ ಇಡಬೇಕು. ನಂತರ ಇದಕ್ಕೆ ಒಂದು ಹಿಟ್ಟನ್ನು ರೆಡಿ ಮಾಡಿಕೊಳ್ಳಬೇಕು, ಒಂದು ಬೌಲ್ ನಲ್ಲಿ ಅರ್ಧ ಕಪ್ ಮೈದಾ ಹಿಟ್ಟು, ಅರ್ಧ ಕಪ್ ಕಾರ್ನ್ ಫ್ಲೋರ್ ಹಾಕಿಕೊಳ್ಳಬೇಕು, ಕಾರ್ನ್ ಫ್ಲೋರ್ ಇಲ್ಲದೆ ಹೋದರೆ ಅಕ್ಕಿಹಿಟ್ಟನ್ನು ಬಳಸಬಹುದು. ನಂತರ 1 ಟೀ ಸ್ಪೂನ್ ಚಿಲ್ಲಿ ಪೌಡರ್, ಎರಡು ಚಿಟಿಕೆ ಫುಡ್ ಕಲರ್, ಒಂದು ಟೀ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ನಂತರ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಕ್ರೀಮಿಯಾಗಿ, ಬೋಂಡಾ ಬಜ್ಜಿ ಹಿಟ್ಟಿನ ಹದಕ್ಕೆ ಇದನ್ನು ಕಲಸಿಕೊಳ್ಳಬೇಕು. ಗಟ್ಟಿಯಾಗು ಇರಬಾರದು, ತೆಳ್ಳಗೂ ಇರಬಾರದು. ಚಿಕನ್ ಗೆ ಉಪ್ಪು ಕಡಿಮೆಯಾಗಿದೆ ಎಂದು ನಿಮಗೆ ಅನ್ನಿಸಿದರೆ, ಹಿಟ್ಟಿಗೆ ಸ್ವಲ್ಪ ಉಪ್ಪು ಹಾಕಿಕೊಳ್ಳಬಹುದು. ಹಿಟ್ಟಿಗೆ ಉಪ್ಪು ಖಾರವನ್ನು ನೋಡಿ ಹಾಕಬೇಕು. ಈಗಾಗಲೇ ಚಿಕನ್ ನಲ್ಲಿ ಉಪ್ಪು ಇರುವ ಕಾರಣ, ಇದಕ್ಕೂ ಉಪ್ಪು ಖಾರ ಜಾಸ್ತಿ ಹಾಕಿದರೆ ತಿನ್ನಲು ಕಷ್ಟವಾಗುತ್ತದೆ. ಈ ಲಾಲಿಪಾಪ್ ಗೆ ಬೇಕಾಗುವ ಚಿಕನ್ ಅನ್ನು ಅಂಗಡಿಯಲ್ಲೇ ಮಾಡಿಕೊಡುತ್ತಾರೆ. ಅಥವಾ ಆನ್ ಲೈನ್ ಮೂಲಕ ಕೂಡ ಆರ್ಡರ್ ಮಾಡಿಕೊಳ್ಳಬಹುದು. ವಿಂಗ್ಸ್ ಅಥವಾ ಲೆಗ್ ಪೀಸ್ ಇಂದ ಮಾಡಿಕೊಳ್ಳಬಹುದು. ಹಿಟ್ಟಿಗೆ ಮ್ಯಾರಿನೇಟ್ ಮಾಡಿರುವ ಚಿಕನ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಇದನ್ನು ಫ್ರಿಡ್ಜ್ ನಲ್ಲಿಟ್ಟು, ನಿಮಗೆ ಬೇಕಾದಾಹ ಫ್ರೈ ಮಾಡಿ ತಿನ್ನಬಹುದು. ಒಂದು ಕಡಾಯಿ ಅಥವಾ ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ, ನಂತರ ಚಿಕನ್ ಅನ್ನು ತೆಗೆದು ಎಣ್ಣೆಯಲ್ಲಿ ಬಿಡಿ, ಒಂದೊಂದಾಗಿ ಲಾಲಿಪಾಪ್ ಗಳನ್ನು ಎಣ್ಣೆಯ ಒಳಗೆ ಬಿಡಿ. ಸ್ವಲ್ಪ ಎಣ್ಣೆಯಲ್ಲಿ, ಮೀಡಿಯಂ ಫ್ಲೇಮ್ ನಲ್ಲಿ 7 ರಿಂದ 8 ನಿಮಿಷಗಳ ಕಾಲ ಫ್ರೈ ಮಾಡಿ. ಹೈ ಫ್ಲೇಮ್ ನಲ್ಲಿ ಮಾಡಿದರೆ, ಮೇಲೆ ಸೀದು ಹೋಗಿ ಕಲರ್ ಚೇಂಜ್ ಆಗುತ್ತದೆ. ಈಗ ಲಾಲಿಪಾಪ್ ಫ್ರೈ ಆಗಿ ರೆಡಿಯಾಗಿದೆ. ರೆಸ್ಟೋರೆಂಟ್ ನಲ್ಲಿ ಕೊಡುವ ಹಾಗೆ, ಸಿಲ್ವರ್ ಫಾಯ್ಲ್ ಇಂದ ಕವರ್ ಮಾಡಿ ಪ್ಲೇಟಿಂಗ್ ಮಾಡಬಹುದು. ತುಂಬಾ ರುಚಿಯಾಗಿರುವ ಈ ಚಿಕನ್ ಲಾಲಿಪಾಪ್ ಅನ್ನು ತಪ್ಪದೆ ನಿಮ್ಮ ಮನೆಯಲ್ಲಿ ಟ್ರೈ ಮಾಡಿ.