ಬೇಡ ಬೇಡ ಎನ್ನುತ್ತಲೇ ಅಂತೂ ಸಂತೋಷದ ಸುದ್ದಿ ಹಂಚಿಕೊಂಡ ಚಿಕ್ಕಣ್ಣ..

0 views

ನಟ ಚಿಕ್ಕಣ್ಣ.. ಕನ್ನಡ ಸಿನಿಮಾ ಇಂಡಸ್ಟ್ರಿಯ ಪ್ರಚಲಿತದಲ್ಲಿರುವ ಟಾಪ್ ಹಾಸ್ಯ ನಟರಲ್ಲಿ ಒಬ್ಬರಾಗಿರುವ ಚಿಕ್ಕಣ್ಣ ಅವರೀಗ ಸಂತೋಷದ ಸುದ್ದಿಯೊಂದನ್ನು‌ ಹಂಚಿಕೊಂಡಿದ್ದಾರೆ.. ಹೌದು ಮೈಸೂರಿನ ಹಳ್ಳಿಯೊಂದರಲ್ಲಿ ಜೀವನಕ್ಕಾಗಿ ಗಾರೆ ಕೆಲಸ ಮಾಡಿಕೊಂಡಿದ್ದ ಹುಡುಗನೊಬ್ಬನಿಗೆ ಕಲಾ ಸರಸ್ವತಿ ಕೈ ಹಿಡಿದು ಬದುಕೇ ಬದಲಾಯಿತು..

ಕಷ್ಟಗಳ ಹಾದಿಯಲ್ಲಿ ನಡೆದು ಸಿಕ್ಕ ಸಣ್ಣ ಪುಟ್ಟ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು.. ಕೈ ತುಂಬಾ ಅವಕಾಶಗಳಿದ್ದಾಗಲೂ ಚೂರು ಅಹಂಕಾರ ಪಡದ ನಟ ಎಂದರೆ ಅದು ಚಿಕ್ಕಣ್ಣ.. ಸ್ಯಾಂಡಲ್ವುಡ್ ನಲ್ಲಿ ಹೀರೋಗಳಿಗಿಂತಲೂ ಚಿಕ್ಕಣ್ಣ ಸಿಕ್ಕಾಪಟ್ಟೆ ಬ್ಯುಸಿ ಎನ್ನುವ ಮಾತಿದೆ..

ಇನ್ನು ಚಿಕ್ಕಣ್ಣ ಅವರ ಮದುವೆ ವಿಚಾರ ಆಗಾಗ ಸಾಮಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ.. ಚಿಕ್ಕಣ್ಣ ಸಹ ಆ ವಿಚಾರವಾಗಿ ಸ್ಪಷ್ಟನೆ ಕೊಟ್ಟು ಸದ್ಯಕ್ಕೆ ಮದುವೆಯ ಮಾತಿಲ್ಲ.. ಮದುವೆ ಫಿಕ್ಸ್ ಆದಾಗ ಖಂಡಿತ ತಿಳಿಸುವೆ ಎಂಬ ಮಾತನಾಡಿದ್ದರು.. ಇದೀಗ ಶುಭ ಸಮಾಚಾರವೊಂದನ್ನು ಹಂಚಿಕೊಂಡಿದ್ದು ಎಲ್ಲರೂ ಆಶೀರ್ವದಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ..

ಹೌದು ಶುಭ ಸುದ್ದಿಯೇನೋ ಹೌದು.. ಆದರೆ ಮದುವೆ ವಿಚಾರವಾಗಿಯಲ್ಲ.. ಹೌದು ಚಿಕ್ಕಣ್ಣ ಧಾರಾವಾಹಿ ಹಾಗೂ ಕಿರುತೆರೆ ಶೋಗಳನ್ನು ಮಾಡಿಕೊಂಡು ಮೇಲೆ ಬಂದ ನಟ.. ನಂತರ ಕಿರಾತಕ ಸಿನಿಮಾದಲ್ಲಿ ಯಶ್ ಅವರ ಒತ್ತಾಯದ ಕಾರಣ ಅಭಿನಯಿಸಲು ಒಪ್ಪಿಕೊಂಡರು.. ಅಂದು ಕ್ಯಾಮರಾ ಮುಂದೆ ನಿಲ್ಲಲು ತೀರಾ ಭಯಪಟ್ಟಿದ್ದ ನಟನೀಗ ಯಶಸ್ಸಿನ ಉತ್ತುಂಗದಲ್ಲಿರುವುದು ಪ್ರತಿಭೆ ಇದ್ದು ಅದಕ್ಕೆ ತಕ್ಕ ಪರಿಶ್ರಮ ಪಟ್ಟರೆ ದೇವರು ಒಂದಲ್ಲಾ ಒಂದು ದಿನ ಕೈ ಹಿಡಿಯುವನು ಎನ್ನುವುದಕ್ಕೆ ಸಾಕ್ಷಿ..

ಇನ್ನು ಚಿಕ್ಕಣ್ಣ ಅವತಿಗೆ ಅಧ್ಯಕ್ಷ ಸಿನಿಮಾ ದೊಡ್ಡ ಬ್ರೇಕ್ ನೀಡಿತ್ತು.. ಉಪಾಧ್ಯಕ್ಷನ ಪಾತ್ರದಲ್ಲಿ ಮಿಂಚಿದ್ದ ನಟನಿಗೆ ಹೀರೋ ಆಗಲು ಅನೇಕ ಅವಕಾಶಗಳು ದೊರಕಿದ್ದವು‌.. ಆದರೆ ಅದಾಗಲೇ ಹಾಸ್ಯ ನಟನಾಗಿ ಅನೇಕ ಸಿನಿಮಾಗಳಿಗೆ ಒಪ್ಪಿಕೊಂಡಿದ್ದ ಚಿಕ್ಕಣ್ಣ ಹೀರೋ ಆಗಿ ಅಭಿನಯಿಸಲು ಕೊಂಚ ಹಿಂಜರಿದದ್ದೂ ಉಂಟು.. ಒಮ್ಮೆ ಹೀರೋ ಆಗಿಬಿಟ್ಟರೆ.. ಮುಂದೆ ಹಾಸ್ಯನಟನಾಗಿ ಅವಕಾಶ ಸಿಗದಿದ್ದರೆ ಬಹಳ ಕಷ್ಟವಾಗುತ್ತದೆ ಎಂದು ಆಲೋಚಿಸಿ ಸುಮ್ಮನಾದರು..

ಆನಂತರ ಮಂಜು ಮಾಂಡವ್ಯ ಅವರ ಭರತ ಬಾಹುಬಲಿ ಸಿನಿಮಾದಲ್ಲಿಯೂ ಸೆಕೆಂಡ್ ಹೀರೋ ಆಗಿ ಕಾಣಿಸಿಕೊಂಡರು.. ಆದರೆ ಇದೀಗ ತೆರೆಯ ಮೇಲೆ ಚಿಕ್ಕಣ್ಣ ಹೀರೋ ಆಗಿ ಮಿಂಚಲು ಕಾಲವಕಾಶ ಕೂಡಿ ಬಂದಿದೆ ಎನ್ನಬಹುದು.. ಹೌದು ಚಿಕ್ಕಣ್ಣ ಹೀರೋ ಆಗಿ ಅಭಿನಯಿಸುತ್ತಿದ್ದು.. ಚಿಕ್ಕಣ್ಣರಿಗೆ ಹೆಸರು ತಂದು ಕೊಟ್ಟ ಉಪಾಧ್ಯಕ್ಷ ಪಾತ್ರದ ಹೆಸರನ್ನೇ ಸಿನಿಮಾಗೆ ಉಪಾಧ್ಯಕ್ಷ ಎಂದು ಹೆಸರಿಡಲಾಗಿದೆ.. ಸಿನಿಮಾಗೆ ಅರ್ಜುನ್ ಜನ್ಯ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದು, ಚಂದ್ರ ಮೋಹನ್ ಅವರ ನಿರ್ದೇಶನ ಇರಲಿದ್ದು, ಸ್ಮಿತಾ ಉಮಾಪತಿ ಅವರು ನಿರ್ಮಾಣ ಮಾಡುತ್ತಿದ್ದಾರೆ..

ಚಿಕ್ಕಣ್ಣರ ಈ ಹೊಸ ಜರ್ನಿಗೆ ದರ್ಶನ್ ಅವರು, ಕುರಿ ಪ್ರತಾಪ್ ಅವರು ಸೇರಿದಂತೆ ಎಲ್ಲಾ ಸ್ನೇಹಿತರು ಶುಭ ಕೋರಿದ್ದಾರೆ.. ಅತ್ತ ಹೀರೋ ಆಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವ ಶುಭ ಸಮಾಚಾರ ಹಂಚಿಕೊಂಡು ಎಲ್ಲರೂ ಆಶೀರ್ವದಿಸಿ ಎಂದು ಮನವಿ ಮಾಡಿಕೊಂಡ ಚಿಕ್ಕಣ್ಣರಿಗೆ ಈ ಸುದ್ದಿಯ ನಂತರ ಮದುವೆಯ ಶುಭ ಸಮಾಚಾರವನ್ನು ಆದಷ್ಟು ಬೇಗ ತಿಳಿಸಿ ಎಂದು ಶುಭಾಶಯ ಕೋರಿದ್ದಾರೆ ಸ್ನೇಹಿತರು..