ದಿವ್ಯಾ ಅರವಿಂದ್ ಗೆ ಉಂಗುರ ತೊಡಿಸಿದ ಕೆಲವೇ ಕ್ಷಣದಲ್ಲಿ ಬಿಗ್ ಬಾಸ್ ಮನೆಯಲ್ಲಿ ಯಾರೂ ಊಹಿಸಿರದ ಘಟನೆ.. ಅರವಿಂದ್‌ ಸ್ಥಿತಿ ನೋಡಲಾಗದು..

0 views

ಬಿಗ್ ಬಾಸ್ ಸೀಸನ್ ಎಂಟರ ಏಳನೇ ವಾರ ಶುರುವಾಗುತ್ತಿದ್ದಂತೆ ಮನೆಯೇ ಒಂದು ರೀತಿ ಸಂಭ್ರಮದಲ್ಲಿದ್ದು ಇದೇ ಸಂದರ್ಭದಲ್ಲಿ ದಿವ್ಯಾ ಉರುಡುಗ ಅರವಿಂದ್ ಅವರಿಗೆ ತಮ್ಮ ತಂದೆ ನೀಡಿದ್ದ ಪ್ರೀತಿಯ ಉಂಗುರವನ್ನು ಅರವಿಂದ್ ಅವರ ಬೆರಳಿಗೆ ತೊಡಿಸುವ ಮೂಲಕ ಜೀವನ ಪೂರ್ತಿ ಜೊತೆಯಾಗಿರು ಎಂದು ಹೇಳಿದ್ದು ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದರು.. ಅಷ್ಟೇ ಪ್ರೀತಿಯಿಂದ ಉಂಗುರವನ್ನು ಸ್ವೀಕರಿಸಿದ್ದ ಅರವಿಂದ್ ಅವರು ನನ್ನ ಜೀವನದಲ್ಲಿ ದಿವ್ಯಾ ಬಹಳ ಸ್ಪೆಷಲ್.. ನಾನು‌ ಮಾತನಾಡೋದು ಬಹಳ ಕಡಿಮೆ.. ಆದರೆ ನಾನು ಮಾತನಾಡದಿದ್ದರೂ ಸಹ ನನ್ನ ಮನದ ಮಾತುಗಳನ್ನು ದಿವ್ಯಾ ಅರ್ಥ ಮಾಡಿಕೊಳ್ಳುತ್ತಾಳೆ.. ಅವಳು ಬಹಳ ಸ್ಪೆಷಲ್ ಎಂದು ಭಾವುಕರಾಗಿ ಕಣ್ಣೀರಿಟ್ಟಿದ್ದರು.. ಆದರೆ ಅದಾದ ಕೆಲವೇ ಕ್ಷಣಗಳಲ್ಲಿ ಮನೆಯಲ್ಲಿ ನಡೆದ ಘಟನೆಯೇ ಬೇರೆ..

ಹೌದು ಎಲ್ಲರೂ ಸಹ ಸಂಭ್ರಮದಲ್ಲಿದ್ದರು.. ಅತ್ತ ದಿವ್ಯಾ ಕೂಡ ತಾನು ಕೊಟ್ಟ ಉಂಗುರವನ್ನು ಅರವಿಂದ್ ಪಡೆದ ಎಂಬ ಸಂತೋಷದಲ್ಲಿದ್ದರು.. ಮನೆಯ ಇತರ ಸದಸ್ಯರ ಜೊತೆ ಈ ಸಂತೋಷ ಹಂಚಿಕೊಳ್ಳುತ್ತಾ ಕುಳಿತಿದ್ದರು.. ಸಣ್ಣ ಸಣ್ಣ ವಸ್ತುಗಳು ನನಗೆ ಬಹಳ ಸಂತೋಷ ನೀಡುತ್ತದೆ.. ಅದೊಂದು ರೀತಿ ನಾನು ಸದಾ ನಿನ್ನ ಜೊತೆ ಇರ್ತೀನಿ ಎಂಬ ಫೀಲಿಂಗ್ ಅರವಿಂದ್ ಜೊತೆ ಸಿಗುತ್ತದೆ ಎಂದು ಹೇಳುತ್ತಾ ಕುಳಿತಿದ್ದರು..

ಆದರೆ ಇತ್ತ ಅರವಿಂದ್ ಮಾತ್ರ ತಬ್ಬಿಬ್ಬಾಗಿ ಹೋಗಿದ್ದರು.. ಹೌದು ಅದಕ್ಕೆ ಕಾರಣ ದಿವ್ಯಾ ಕೊಟ್ಟ ಉಂಗುರ ಕಳೆದು ಹೋಗಿತ್ತು.. ದಿವ್ಯಾ ಅವರು ಪ್ರೀತಿಯಿಂದ ಕೊಟ್ಟ ಉಂಗುರವನ್ನು ಎಲ್ಲಿಯೋ ಬೀಳಿಸಿಕೊಂಡಿದ್ದ ಅರವಿಂದ್ ಅವರು ಉಂಗುರಕ್ಕಾಗಿ ಮನೆಯನ್ನೆಲ್ಲಾ ಜಾಲಾಡುತ್ತಿದ್ದರು.. ಇತ್ತ ದಿವ್ಯಾಗೆ ಈ ವಿಚಾರ ತಿಳಿಸಿದರೆ ನೋವು ಪಡುತ್ತಾಳೆ ಎಂಬ ಕಾರಣಕ್ಕಾಗಿ ದಿವ್ಯಾಗೆ ವಿಚಾರ ತಿಳಿಸದೆ ಹುಡುಕುತ್ತಿದ್ದರು.. ಬಿಗ್ ಬಾಸ್ ಬಳಿಯೂ ವಿಚಾರ ತಿಳಿಸಿ ದಯವಿಟ್ಟು ಉಂಗುರ ಸಿಕ್ಕರೆ ತಿಳಿಸಿ ಎಂದು ಮನವಿ ಮಾಡಿಕೊಂಡರು..

ಅರವಿಂದ್ ಉಂಗುರಕ್ಕಾಗಿ ಬಹಳ ಚಡಪಡಿಸುತ್ತಿದ್ದುದ್ದು ನಿಜಕ್ಕೂ ಬೇಸರ ತರುವಂತಿತ್ತು.. ಇನ್ನು ಈ ವಿಚಾರ ಮನೆಯವರಿಗೆಲ್ಲಾ ತಿಳಿದು ಎಲ್ಲರೂ ಸಹ ಉಂಗುರ ಹುಡುಕಲು ಸಹಾಯ ಮಾಡಿದರು.. ದಿವ್ಯಾ ಮಾತ್ರ ಎಲ್ಲರೂ ಹುಡುಕುತ್ತಿದ್ದುದ್ದನ್ನು ನೋಡಿ ಎಲ್ಲರೂ ಯಾಕ್ ಹೀಗೆ ಮನೆ ಕ್ಲೀನ್ ಮಾಡ್ತಿದ್ದೀರಾ? ಏನಾದರು ಹುಡುಕ್ತಿದ್ದೀರಾ ಎಂದು ಕೇಳಿದರೂ ಸಹ ಯಾರೂ ಸಹ ದಿವ್ಯಾಗೆ ವಿಚಾರ ತಿಳಿಸದೆ ಹುಡುಕುತ್ತಲೇ ಇದ್ದರು..

ಇನ್ನು ಕಳೆದು ಕೊಂಡಿರುವ ಉಂಗುರದ ಕಾರಣದಿಂದಾಗಿ ಅವರಿಬ್ಬರ ಜೀವನದಲ್ಲಿ ಸಿಕ್ಕಿರುವ ಬೇರೆ ಇನ್ನೊಂದರ ಅರಿವು ಅವರಿಗಾಗುವುದಾ..‌ ಅಥವಾ ದಿವ್ಯಾಗೆ ಉಂಗುರ ಕಳೆದು ಹೋದ ವಿಚಾರ ತಿಳಿದು ಬೇಸರವಾಗುವುದಾ.. ಅಥವಾ ಮತ್ತೆ ಉಂಗುರ ಅರವಿಂದ್ ನ ಬೆರಳು ಸೇರುವುದಾ ಇಂದಿನ ಸಂಚಿಕೆವರೆಗೂ ಕಾದು ನೋಡಬೇಕಿದೆ.. ಆದರೆ ಅರವಿಂದ್‌ ಉಂಗುರ ಬೀಳಿಸಿಕೊಂಡಿದ್ದು ಕ್ಯಾಮರಾಆ ಕಣ್ಣಿಗಂತೂ ಬಿದ್ದೇ ಬಿದ್ದಿರುತ್ತದೆ. ಆತನ ಚಡಪಡಿಕೆ ನೋಡಲಾಗದೆ ಬಿಗ್‌ ಬಾಸ್‌ ಮಂದಿಯಾದರೂ ಸಹಾಯ ಮಾಡಿದ್ದರೆ ಒಳ್ಳೆಯದಿತ್ತು. ಬಹುಶಃ ಅದೇ ರೀತಿ ನಡೆದು ಅರವಿಂದ್‌ ಉಂಗುರ ಕಳೆದುಕೊಂಡೆನೆಂಬ ಆತಂಕ ದೂರವಾಗಿ ದಿವ್ಯಾ ಹಾಗೂ ಅರವಿಂದ್‌ ಮುಖದಲ್ಲಿ ನಗೆ ಮೂಡಲಿ..