ಕುಸುಮಾ ಅವರಿಗೆ ಡಿ ಕೆ ರವಿ ಅವರು ಮಾಡಿಟ್ಟಿರುವ ಆಸ್ತಿ ಎಷ್ಟು ಗೊತ್ತಾ?

0 views

ನಿನ್ನೆಯಷ್ಟೇ ರಾಜರಾಜೇಶ್ವರಿ ನಗರದ ಉಪ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷದಿಂದ ಡಿ ಕೆ ರವಿ ಅವರ ಪತ್ನಿ ಕುಸುಮಾ ಅವರು ನಾಮಪತ್ರ ಸಲ್ಲಿಸಿದ್ದರು.. ನಿನ್ನೆ ಮುಹೂರ್ತ ಚೆನ್ನಾಗಿದ್ದ ಕಾರಣಕ್ಕಾಗಿ ನಿನ್ನೆ ಹಾಗೂ ಇಂದೂ ಸಹ ಮತ್ತೊಮ್ಮೆ ನಾಮಪತ್ರವನ್ನು ಸಲ್ಲಿಸಿದ್ದಾರೆ.. ನಾಮಪತ್ರದಲ್ಲಿ ತಮ್ಮ ಬಳಿ ಇರುವ ಸಂಪೂರ್ಣ ಆಸ್ತಿಯ ಮಾಹಿತಿಯನ್ನು ನೀಡಿದ್ದಾರೆ.. ಇನ್ನು ಡಿ ಕೆ ರವಿ ಅವರಿಂದ ಕುಸುಮಾ ಅವರಿಗೆ ಎಷ್ಟು ಆಸ್ತಿ ಬಂದಿದೆ ಎಂಬ ಕುತೂಹಲ ಇದ್ದೇ ಇತ್ತು.. ಆ ಬಗ್ಗೆಯೂ ಎಲ್ಲಾ ಮಾಹಿತಿ ನಾಮಪತ್ರದ ಜೊತೆಗೆ ತಿಳಿಸಲಾಗಿದೆ..

ಹೌದು ಕುಸುಮಾ ಅವರು ತಮ್ಮ ಬಳಿ‌ ಇರುವ ನಗದು, ಸ್ಥಿರಾಸ್ತಿ, ಚರಾಸ್ಥಿ ಹಾಗೂ ಸಾಲದ ಬಗ್ಗೆಯೂ ಮಾಹಿತಿ‌ ನೀಡಿದ್ದಾರೆ.. ಕುಸುಮಾ ಅವರ ಬಳಿ ನಗದು ರೂಪದಲ್ಲಿ‌ ಒಟ್ಟು ಒಂದು ಲಕ್ಷದ ನಲವತ್ತೊಂದು ಸಾವಿರದ ಐವತ್ತು ರೂಪಾಯಿಗಳು ಇದೆ ಎಂದು ತಿಳಿಸಲಾಗಿದೆ.. ಇನ್ನು ಬ್ಯಾಂಕ್ ಗಳಲ್ಲಿ ಕೆನರಾ ಬ್ಯಾಂಕಿನಲ್ಲಿ ಒಂದು ಲಕ್ಷದ ಎಪ್ಪತ್ತಾರು ಸಾವಿರ.. ಆಕ್ಸಿಸ್ ಬ್ಯಾಂಕಿನಲ್ಲಿ ಐವತ್ತೇಳು ಸಾವಿರ.. ಬ್ಯಾಂಕ್‌ ಆಫ್ ಬರೋಡದಲ್ಲಿ ಮೂರು‌ ಲಕ್ಷದ ಇಪ್ಪತ್ತೇಳು ಸಾವಿರ ರೂಪಾಯಿ ಇದೆ.. ಎಸ್ ಬಿ ಐ ಬ್ಯಾಂಕಿನಲ್ಲಿ ನಲವತ್ತೊಂದು ಸಾವಿರ.. ಹಾಗೂ ಉಳಿತಾಯ ಮತ್ತು ಎಫ್ ಡಿ ಮತ್ತು ಕೆಲ ಹೂಡಿಕೆ ಸೇರಿದಂತೆ ಒಟ್ಟು ಎರಡು ಲಕ್ಷದ ನಲವತ್ತೈದು ಸಾವಿರ ರೂಪಾಯಿ ಇದೆ..

ಇನ್ನು ವಾಹನಗಳ ವಿಚಾರಕ್ಕೆ ಬಂದರೆ ಕುಸುಮಾ ಯಾವುದೇ ಸ್ವಂತ ವಾಹನವನ್ನು ತಮ್ಮ ಹೆಸರಿನಲ್ಲಿ ಹೊಂದಿಲ್ಲ.. ಆದರೆ ಚಿನ್ನಾಭರಣದ ವಿಚಾರಕ್ಕೆ ಬಂದರೆ ಒಂದು ಕೆಜಿ ನೂರು ಗ್ರಾಂ ಬಂಗಾರವನ್ನು ಹೊಂದಿದ್ದು ಅದರ ಮೌಲ್ಯ ನಲವತ್ತೈದು ಲಕ್ಷ ರೂಪಾಯಿ ಆಗಿದೆ..

ಒಟ್ಟು ಚರಾಸ್ಥಿ ಒಂದು ಕೋಟಿ ಹದಿಮೂರು ಲಕ್ಷ ರೂಪಾಯಿಗಳು.. ಇನ್ನು ಸ್ಥಿರಾಸ್ತಿ ವಿಚಾರಕ್ಕೆ ಬಂದರೆ ಕುಸುಮಾ ಅವರ ಹೆಸರಿನಲ್ಲಿ ಯಾವುದೇ ಕೃಷಿ ಭೂಮಿ ಇರುವುದಿಲ್ಲ.. ಆದರೆ ಎರಡು ನಿವೇಶನಗಳನ್ನು ಹೊಂದಿದ್ದಾರೆ.. ಆ ಎರಡು ನಿವೇಶನದ ಬೆಲೆ ಒಂದು ಕೋಟಿ ಮೂವತ್ತೇಳು ಲಕ್ಷ ಮೌಲ್ಯದ್ದಾಗಿದೆ.. ಅಷ್ಟೇ ಅಲ್ಲದೇ ಕುಸುಮಾ ಅವರಿಗೆ ಆಸ್ತಿಯ ಜೊತೆಗೆ ಸಾಲವೂ ಇದೆ.. ಹೌದು ಎರಡು ಲಕ್ಷದ ಐದು ಸಾವಿರ ರೂಪಾಯಿ ವ್ಯಯಕ್ತಿಕ ಸಾಲದ ಜೊತೆಗೆ ಎಬಿಎಚ್ ಇನ್ಫ್ರಾಸ್ಟ್ರಕ್ಚರ್ ಹೆಸರಿನಲ್ಲಿ ಐವತ್ತೆಂಟು ಲಕ್ಷದ ಅರವತ್ತ ಮೂರು ಸಾವಿರ ರೂಪಾಯಿ ಸಾಲವಿದೆ..

ಆದರೆ ನಾಮಪತ್ರದ ಜೊತೆ ಸಲ್ಲಿಸಿರುವ ಆಸ್ತಿಯ ಅಫಿಡವಿಟ್ ನಲ್ಲಿ ಡಿ ಕೆ ರವಿ ಅವರ ಹೆಸರಿನಿಂದ ಬಂದ ಆಸ್ತಿಯಾಗಲಿ ಹಣವಾಗಲಿ.. ಅಥವಾ ಡಿ ಕೆ ರವಿ ಅವರ ಕುಟುಂಬದಿಂದಾಗಲಿ ಯಾವುದೇ ಆಸ್ತಿ ಬಂದಿರುವ ಮಾಹಿತಿ ಇಲ್ಲ.. ಆದರೆ ಕಾಲೇಜಿನಲ್ಲಿ ಸಹಾಯಕ ಪ್ರಾದ್ಯಾಪಕಿಯಾಗಿ‌ ಕೆಲಸ ಮಾಡುತ್ತಿದ್ದ ಕುಸುಮಾ ಅವರ ಆರ್ಥಿಕ ಮೂಲ ಅವರ ಸಂಭಾವನೆಯೇ ಆಗಿದೆ.. ಇದರ ಜೊತೆಗೆ 2017 ರಿಂದ ಪ್ರತಿ ವರ್ಷವೂ ಐ ಟಿ ರಿಟರ್ನ್ಸ್ ಫೈಲ್ ಮಾಡಿದ್ದಾರೆ..

ಈ ಮೂಲಕ ಡಿ‌ಕೆ ರವಿ ಅವರ ಹೆಸರಿನಿಂದ ಯಾವುದೇ ಆಸ್ತಿ ಬಂದಿಲ್ಲವೆಂಬುದು ತಿಳಿಯುತ್ತದೆ.. ಡಿ ಕೆ ರವಿ ಅವರ ಹೆಸರೇ ಕುಸುಮಾ ಅವರಿಗೆ ದೊಡ್ಡ ಆಸ್ತಿಯಾಗಿತ್ತು.. ಡಿ ಕೆ ರವಿ ಅವರು ಸಂಪಾದಿಸಿದ ಜನರ ಪ್ರೀತಿಯೇ ಕುಸುಮಾ ಅವರಿಗೆ ಆಭರಣವಾಗಿತ್ತು.. ಆದರೆ ಅವರ ಹೆಸರನ್ನು ಬಳಸಲು ಕೂಡ ಬಹಳಷ್ಟು ಜನರು ವಿರೀಧ ವ್ಯಕ್ತ ಪಡಿಸಿದ ಕಾರಣ ಕುಸುಮಾ ಅವರು ನಾಮಪತ್ರದಲ್ಲಿ ರವಿ ಅವರ ಹೆಸರನ್ನು ಉಲ್ಲೇಖಿಸಿಲ್ಲ.. ಬದಲಿಗೆ ಹನುಮಂತರಾಯಪ್ಪ ಅವರ ಮಗಳು ಎಂದಷ್ಟೇ ನಮೂದಿಸಿದ್ದಾರೆ.