ಇದ್ದಕಿದ್ದ ಹಾಗೆ ಮುಕ್ತಾಯವಾದ ಕನ್ನಡದ ಖ್ಯಾತ ಧಾರಾವಾಹಿ..

0 views

ಕನ್ನಡ ಕಿರುತೆರೆಯಲ್ಲಿ ಸಧ್ಯ ಹೊಸತನದ ಆರಂಭವಾಗಿದ್ದು ಕಳೆದ ಎರಡು ಮೂರು ವರ್ಷಗಳಿಂದ ವಿಭಿನ್ನ ಪ್ರಯತ್ನ, ಅದ್ಧೂರಿ ನಿರ್ಮಾಣ ಹಾಗೂ ಅದೇ ಹಳೆ ಅತ್ತೆ ಸೊಸೆ ಕಾನ್ಸೆಪ್ಟ್ ನಿಂದ ಹೊರ ಬಂದು ಹೊಸ ರೀತಿಯ ಕತೆಗಳ ಮೂಲಕ ಹೊಸ ಹೊಸ ಧಾರಾವಾಹಿಗಳು ಶುರುವಾದವು.. ಅಂದುಕೊಂಡಂತೆ ಒಂದಷ್ಟು ಧಾರಾವಾಹಿಗಳು ಒಳ್ಳೆಯ ರೇಟಿಂಗ್ ಪಡೆದು ಗಮನ ಸೆಳೆದರೆ ಮತ್ತಷ್ಟು ಮಂಕಾದವು.‌. ಜೀ ಕನ್ನಡದ ಪುಟ್ಟಕ್ಕನ ಮಕ್ಕಳು ಹಿಟ್ಲರ್ ಕಲ್ಯಾಣ ಜೊತೆಜೊತೆಯಲಿ ಗಟ್ಟಿಮೇಳ ಇನ್ನೂ ಕೆಲ ಧಾರಾವಾಹಿಗಳು ಸಕ್ಸಸ್ ಕಂಡರೆ ಅತ್ತ ಕಲರ್ಸ್ ಕನ್ನಡ ವಾಹಿನಿಯ ಕನ್ನಡತಿ ಗಿಣಿರಾಮ ನಮ್ಮನೆ ಯುವರಾಣಿ ಲಕ್ಷಣ ಗೀತಾ ಮತ್ತಷ್ಟು ಧಾರಾವಾಹಿಗಳು ಗಮನ ಸೆಳೆದಿವೆ..

ಇನ್ನು ಇದೀಗ ಒಳ್ಳೆಯ ರೇಟಿಂಗ್ ಪಡೆಯುತ್ತಿದ್ದ ಧಾರಾವಾಹಿಯೊಂದು ಇದ್ದಕಿದ್ದ ಹಾಗೆ ತನ್ನ ಪ್ರಸಾರವನ್ನು ನಿಲ್ಲಿಸಿದೆ.. ಹೌದು ಕಳೆದ ಎರಡು ವರ್ಷದ ಹಿಂದೆ ಕೊರೊನ ಸಮಯದಲ್ಲಿ ಅರ್ಥಿಕ ಸಂಕಷ್ಟದಿಂದ ಸಾಕಷ್ಟು ಒಳ್ಳೊಳ್ಳೆ ಧಾರಾವಾಹಿಗಳು ನಿಂತಿದ್ದನ್ನು ನಾವು ನೋಡಿದ್ದೇವೆ.. ಅದಕ್ಕೂ ಮಿಗಿಲಾಗಿ ಒಂದು ವಾಹಿನಿಯೇ ಸ್ಥಗಿತಗೊಂಡಿತ್ತು.. ಕಲರ್ಸ್ ಸೂಪರ್ ವಾಹಿನಿ ಸ್ಥಗಿತಗೊಂಡು ಮಗಳು ಜಾನಕಿ ಸೇರಿದಂತೆ ಸಾಕಷ್ಟು ಧಾರಾವಾಹಿಗಳು ಮುಕ್ತಾಯವಿಲ್ಲದೇ ಅರ್ಧಕ್ಕೆ ನಿಂತವು..

ಇನ್ನು ಸಧ್ಯ ಅದೆಲ್ಲದರಿಂದ ಚೆತರಿಸಿಕೊಂಡು ಮತ್ತೆ ಮರುಜೀವ ಪಡೆದ ಕಿರುತೆರೆ ಸಾಕಷ್ಟು ಹೊಸ ಹೊಸ ಧಾರಾವಾಹಿಗಳನ್ನು ಶುರು ಮಾಡಿತು.. ಇತ್ತ ಜೀ ಕನ್ನಡ ವಾಹಿನಿಯಲ್ಲಿ‌ ಹಿಟ್ಲರ್ ಕಲ್ಯಾಣ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಹೊಸದಾಗಿ ಶುರುವಾಗಿ ಒಳ್ಳೆಯ ರೇಟಿಂಗ್ ಪಡೆದು ಅಗ್ರ ಸ್ಥಾನಗಳನ್ನು ಕಾಯ್ದುಕೊಂಡರೆ ಅತ್ತ ಕಲರ್ಸ್ ಕನ್ನಡ ವಾಹಿನಿಯಲ್ಲಿ ಸಧ್ಯ ರಾಮಾಚಾರಿ ಧಾರಾವಾಹಿ ಶುರುವಾಗಿದೆ.. ತನ್ನ ಪ್ರಸಾರವನ್ನು ಅರಾಂಭಿಸಿದ ಎರಡೇ ವಾರದಲ್ಲಿ ಇತರ ಟಾಪ್ ಧಾರಾವಾಹಿಗಳಿಗೆ ಪೈಪೋಟಿ ಕೊಟ್ಟು ಐದನೇ ಸ್ಥಾನಕ್ಕೆ ಬಂದಿದ್ದು ಕಲರ್ಸ್ ಕನ್ನಡ ವಾಹಿನಿಗೆ ಹೊಸ ಹುರುಪು ಬಂದಿದೆ ಎನ್ನಬಹುದು

ಸಧ್ಯ ಕಿರುತೆರೆಯ ಟಾಪ್ ವಾಹಿನಿಗಳಲ್ಲಿ ಎರಡನೇ ಸ್ಥಾನ ಪಡೆದಿರುವ ಕಲರ್ಸ್ ಕನ್ನಡ ಮತ್ತೆ ನಂಬರ್ ಒನ್ ಆಗಲು ಹೊಸ ಧಾರಾವಾಹಿಗಳ ಮೊರೆ ಹೋಗುತ್ತಿದೆ.. ಅದೇ ರೀತಿ ಇದೀಗ ಹೊಸ ಧಾರಾವಾಹಿ ಶುರು ಮಾಡುತ್ತಿದ್ದು ಈ ಕಾರಣಕ್ಕೆ ಅದಾಗಲೇ ಒಳ್ಳೆಯ ರೇಟಿಂಗ್ ಪಡೆಯುತ್ತಿದ್ದ ಹಳೆ ಧಾರಾವಾಹಿಯನ್ನು ಮುಕ್ತಾಯ ಮಾಡಲಾಗುತ್ತಿದೆ.. ಕಳೆದ ಮೂರು ವಾರದ ಹಿಂದೆ ಆರಂಭಾವಾದ ರಾಮಾಚಾರಿ ಧಾರಾವಾಹಿ ಜನರಿಗೆ ಬಹಳ ಇಷ್ಟವಾಗಿದ್ದು ಮೂರು ವಾರಗಳಿಂದಲೂ ಆರರ ಮೇಲೆ ಟಿ ಆರ್ ಪಿ ಪಡೆದ ಕನ್ನಡ ಕಿರುತೆರೆಯ ಟಾಪ್ ಐದನೇ ಧಾರಾವಾಹಿಯಾಗಿ ಮೂಡಿ ಬರುತ್ತಿದ್ದು ಮುಂಬರುವ ದಿನಗಳಲ್ಲಿ ಒಂದು ಅಥವಾ ಎರಡನೇ ಸ್ಥಾನಕ್ಕೆ ಬಂದರೂ ಆಶ್ಚರ್ಯವಿಲ್ಲ ಆ ಕಾರಣಕ್ಕೆ ಕಲರ್ಸ್ ಕನ್ನಡ ವಾಹಿನಿ ಇದೀಗ ಹೊಸ ಧಾರಾವಾಹಿಗಳನ್ನು ಶುರು ಮಾಡುತ್ತಿದೆ..

ಹೌದು ಈಗಾಗಲೇ ಕನ್ನಡ ಕಿರುತೆರೆತಲ್ಲಿ ಸಂಜೆಯ ಸಮಯದಲ್ಲಿ ಭಕ್ತಿ ಪ್ರಧಾನ ಧಾರಾವಾಹಿಗಳು ಹಿಟ್ ಆಗಿದ್ದು ಮಹದೇಶ್ವರ, ಬಾಲಕೃಷ್ಣ ಸೇರಿದಂತೆ ಕೆಲ ಧಾರಾವಾಹಿಗಳು ಒಳ್ಳೆಯ ಟಿ ಆರ್ ಪಿ ಪಡೆದುಕೊಂಡಿದ್ದವು.. ಇದೀಗ ಅದೇ ದಾರಿಯಲ್ಲಿ ಸಾಗುತ್ತಿರುವ ಕಲರ್ಸ್ ಕನ್ನಡ ವಾಹಿನಿ ಪುರಂದರ ದಾಸರ ಜೀವನ ಆಧಾರಿತ ಕತೆಯನ್ನು ಧಾರಾವಾಹಿಯನ್ನಾಗಿ ಮಾಡಿದ್ದು ಇಂದಿನಿಂದ ಪ್ರಸಾರ ಶುರು ಮಾಡಿದೆ.. ಹೌದು ಅದಾಗಲೇ ಲಕ್ಷಣ ಕನ್ಯಾಕುಮಾರಿ ರಾಮಾಚಾರಿ ಧಾರಾವಾಹಿಗಳು ಹೊಸದಾಗಿ ಶುರುವಾಗಿ ಒಳ್ಳೆಯ ರೇಟಿಂಗ್ ಪಡೆದುಕೊಳ್ಳುತ್ತಿರುವ ಕಾರಣ ಕಲರ್ಸ್ ಕನ್ನಡ ವಾಹಿನಿ ಮತ್ತಷ್ಟು ಹೊಸ ಧಾರಾವಾಹಿಗಳನ್ನು ಪ್ರಯತ್ನಿಸುತ್ತಿದೆ.. ಅದೇ ಕಾರಣಕ್ಕೆ ಹಳೆಯ ಧಾರಾವಾಹಿಗಳಿಗೆ ಅಂತ್ಯ ಹಾಡುತ್ತಿದೆ‌..

ಹೌದು ಸಂಜೆ ಆರು ಗಂಟೆಗೆ ಇಂದಿನಿಂದ ದಾಸ ಪುರಂದರ ಹೊಸ ಧಾರಾವಾಹಿ ಶುರುವಾಗಲಿದ್ದು ಇಷ್ಟು ದಿನ ಆರು ಗಂಟೆಗೆ ಪ್ರಸಾರವಾಗುತ್ತಿದ್ದ ಮಿಥುನ ರಾಶಿ ಮೂರು ವರ್ಷದ ತನ್ನ ಕಿರುತೆರೆ ಪ್ರಯಾಣವನ್ನು ಮುಗಿಸಿದೆ.. ಹೌದು ಟಾಒ ಹದಿನೈದು ಧಾರಾವಾಹಿಗಳಲ್ಲಿ ಒಂದಾಗಿದ್ದ ಮಿಥುನ ರಾಶಿಯನ್ನು ಮುಕ್ತಾಯ ಗೊಳಿಸಿದ್ದು ಹೊಸ ಧಾರಾವಾಹಿ ದಾಸ ಪುರಂದರ ಇಂದಿನಿಂದ ತೆರೆ ಕಾಣಲಿದ್ದು ಪ್ರೇಕ್ಷಕರಿಗೆ ಸಂಜೆಯ ಸಮಯದಲ್ಲಿ ಭಕ್ತಿಯ ರಸದೌತಣವೆನ್ನಬಹುದು‌.. ಇನ್ನು ಕಲರ್ಸ್ ಕನ್ನಡದ ಈ ಹೊಸ ಕತೆ ಜನರಿಗೆ ಎಷ್ಟರ ಮಟ್ಟಕ್ಕೆ ಇಷ್ಟವಾಯಿತೆಂದು ಮುಂದಿನ ವಾರ ರೇಟಿಂಗ್ ಬಿಡುಗಡೆಯಾದ ಬಳಿಕ ತಿಳಿಯಲಿದೆ..