ಅಮೂಲ್ಯರನ್ನು ಎತ್ತಿ ಕೆಳಗೆ ಬಿಸಾಕ್ತೀನಿ ಎಂದ ಡಿ ಬಾಸ್ ಗೆ ಎದುರುತ್ತರ ಕೊಟ್ಟ ಅಮೂಲ್ಯ ಹೇಳಿದ ಮಾತು ನೋಡಿ..

0 views

ರಾಜರಾಜೇಶ್ವರಿ ನಗರದ ವಿಧಾನಸಭಾ ಉಪಚುನಾವಣೆಯ ಪ್ರಚಾರದ ಕಣ ಇಂದು ಸಿನಿಮಾ ತಾರೆಯರಿಂದ ರಂಗೇರಿತ್ತು.. ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಂದು ರಾಜ ರಾಜೇಶ್ವರಿ ನಗರದ ಚುನಾವಣಾ ಅಖಾಡಕ್ಕೆ ಇಳಿದಿದ್ದು ಮುನಿರತ್ನ ಅವರ ಪರವಾಗಿ ಭರ್ಜರಿ ಪ್ರಚಾರ ನಡೆಸಿದರು.. ಇವರಿಗೆ ಹಲವಾರು ರಾಜಕಾರಣಿಗಳು ಹಾಗೂ ತಾರೆಯರು ಸಾಥ್ ನೀಡಿದರು.. ಈ ಸಮಯದಲ್ಲಿ ದರ್ಶನ್ ಹಾಗೂ ಅಮೂಲ್ಯ ನಡುವೆ ಸಖತ್ ಸಂಭಾಷಣೆಯೊಂದು ನಡೆದಿದೆ..

ಹೌದು ಇಂದು ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ಅವರ ಪರವಾಗಿ ದರ್ಶನ್ ಅವರು ರ್ಯಾಲಿ ನಡೆಸಿದ್ದಾರೆ.. ದರ್ಶನ್ ಅವರು ಚುನಾವಣಾ ಪ್ರಚಾರ ಮಾಡಬಾರದಿತ್ತು ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದರು.. ಆದರೆ ದರ್ಶನ್ ಅವರು ಮುನಿರತ್ನ ಅವರ ಪರವಾಗಿ ಪ್ರಚಾರ ಮಾಡುತ್ತಿರುವುದು ಇದು ಮೊದಲಲ್ಲ.. ಬದಲಿಗೆ ಸತತ ಮೂರನೇ ಬಾರಿ ಮುನಿರತ್ನ ಅವರ ಪರವಾಗಿ ನಾನು ಪ್ರಚಾರ ಮಾಡ್ತಾ ಇದ್ದೇನೆ.. ನಾನು ಎಂದೂ ಪಕ್ಷ ನೋಡಿದವನಲ್ಲ.. ನನ್ನ ಸ್ನೇಹಿತರು ಯಾವ ಪಕ್ಷದಲ್ಲಿ ನಿಂತರೂ ನಾನು ವ್ಯಕ್ತಿ‌ ನೋಡಿ ಪ್ರಚಾರದಲ್ಲಿ ಭಾಗಿಯಾಗುತ್ತೇನೆ ಎಂದರು..

ಇನ್ನು ನಟಿ ಅಮೂಲ್ಯ ಕೂಡ ದರ್ಶನ್ ಅವರ ಜೊತೆಯೇ ಇದ್ದು ರ್ಯಾಲಿಯಲ್ಲಿ ಪಾಲ್ಗೊಂಡರು.. ಎಲ್ಲರಿಗೂ ತಿಳಿದಿರುವಂತೆ ಅಮೂಲ್ಯ ಹಾಗೂ ದರ್ಶನ್ ಅವರು 15 ವರ್ಷಗಳಿಂದ ಪರಿಚಿತರು.. ದರ್ಶನ್ ಅವರಿಗೆ ಅಮೂಲ್ಯ ಬಹಳ ಆಪ್ತರೂ ಹೌದು.. ದರ್ಶನ್ ಅವರ ಲಾಲಿ ಹಾಡು ಸಿನಿಮಾ ಸಮಯದಿಂದಲೂ ಅಮೂಲ್ಯ ಅವರು ದರ್ಶನ್ ಅವರ ಕುಟುಂಬದಲ್ಲಿ ಒಬ್ಬರಂತೆ ಇರುವರು‌‌.. ಬಹುಶಃ ದರ್ಶನ್ ಅವರಿಗೆ ಎದುರು ಮಾತನಾಡುವ ಧೈರ್ಯ ಇರುವ ಕೆಲವರಲ್ಲಿ ಅಮೂಲ್ಯ ಕೂಡ ಒಬ್ಬರು.. ಇನ್ನು ಇಂದೂ ಸಹ ಅಂತಹುದೇ ಒಂದು ಸಂಭಾಷಣೆ ದರ್ಶನ್ ಹಾಗೂ ಅಮೂಲ್ಯ ಇದ್ದ ವಾಹನದಲ್ಲಿ ನಡೆಯಿತು..

ಹೌದು ಮಾದ್ಯಮದವರೊಬ್ಬರು ಅಮೂಲ್ಯರನ್ನು ಮಾತನಾಡುಸಿ ದರ್ಶನ್ ಅವರ ಜೊತೆ ರ್ಯಾಲಿಯಲ್ಲಿ ಪಾಲ್ಗೊಂಡಿರುವುದು ಏನನ್ನಿಸಿತು ಎಂದು ಕೇಳಿದ್ದಾರೆ.. ಆ ಸಮಯದಲ್ಲಿ ಉತ್ತರ ನೀಡಿದ ಅಮೂಲ್ಯ.. “ಏನ್ ಹೇಳಿ ನಮ್ಮ್ ಬಾಸ್ ಬಗ್ಗೆ..” ಎಂದಿದ್ದಾರೆ.. ತಕ್ಷಣ ಪ್ರತಿಕ್ರಿಯೆ ನೀಡಿದ ಡಿ ಬಾಸ್.. “ಈಗ ಬಾಸ್ ಅಂತಿದ್ದೀಯಾ? ಮಿಕ್ಕ ಸಮಯದಲ್ಲಿ ಅಂಕಲ್ ಅಂತೀಯಾ.. ಈಗ ಬಾಸ್ ಆ? ಈಗಲೂ ಮೀಡಿಯಾ ಮುಂದೆ ಅಂಕಲ್ ಅಂತಾನೇ ಹೇಳು ಎಂದಿದ್ದಾರೆ.. ಆದರೆ ಡಿ ಬಾಸ್ ಗೆ ತಿರುಗಿಸಿ ನಾನ್ ಹೇಳಲ್ಲ ಅಂದ್ರೆ ಹೇಳಲ್ಲ.. ಬಾಸ್ ಅಂತಾನೇ ಹೇಳ್ತೀನಿ.. ಏನೀವಾಗ ಎಂದಿದ್ದಾರೆ..

ಮತ್ತೆ ದರ್ಶನ್ ಅವರು ಮಾತನಾಡಿ.. ಹೇಳಿಲ್ಲ ಅಂದ್ರೆ ಗಾಡಿ ಇಂದ ತೆಗೆದು ಕೆಳಗೆ ಬಿಸಾಕ್ತೀನಿ” ಎಂದಿದ್ದಾರೆ.. ಬೀಸಾಕುದ್ರು ಹೇಳಲ್ಲ ನಾನು ಬಾಸ್ ಅಂತಾನೇ ಹೇಳೋದು ಎಂದಿದ್ದು ಕೊನೆಗೆ ದರ್ಶನ್ ಅವರೇ ಅಮೂಲ್ಯ ಅವರ ಮಾತಿಗೆ ಸೋತು ಸುಮ್ಮನಾಗಿದ್ದಾರೆ..” ಒಟ್ಟಿನಲ್ಲಿ ಈ ಸಂಭಾಷಣೆ ಹತ್ತಿರ ಇದ್ದ ಕೆಲವರ ಮುಖದಲ್ಲಿ ನಗು ಮೂಡಿಸಿದ್ದಂತೂ ಸತ್ಯ.. ಹೊರಗೆ ಸೂಪರ್ ಸ್ಟಾರ್ ಆದರೂ ತಮ್ಮ ಆಪ್ತರ ಬಳಿ ಎಷ್ಟು ಸರಳವಾಗಿರವಹುದೋ ಅಷ್ಟೂ ಸರಳವಾಗಿರುವ ಗುಣ ಡಿ ಬಾಸ್ ಅವರದ್ದು ಎನ್ನಬಹುದು..