ಚಿಕ್ಕಣ್ಣನಿಗೆ ಒಳ್ಳೆಯದಾಗಲಿ ಎಂದು ದರ್ಶನ್ ಅವರು ಮಾಡಿರುವ ಕೆಲಸ ನೋಡಿ..

0 views

ಚಾಲೆಂಜಿಂಗ್ ಸ್ಟಾರ್ ದರ್ಶನ್.. ಅಭಿಮಾನಿಗಳ ಬಾಸ್ ಆದರೂ ಕೂಡ ತಾವು ಸದಾ ಅಭಿಮಾನಿಗಳ ದಾಸನಾಗಿಯೇ ಇರುವೆ ಎನ್ನುವ ದೊಡ್ಡ ಗುಣದವರು.. ಇನ್ನು ಸ್ನೇಹಿತರ ವಿಚಾರಕ್ಕೆ ಬಂದರೆ ದರ್ಶನ್ ಅವರಂತ ಸ್ನೇಹಿತನನ್ನು‌ ಪಡೆಯಲು‌ ಪುಣ್ಯ ಮಾಡಿರಬೇಕು ಎನ್ನುವ ಮಾತಿದೆ ದರ್ಶನ್ ಅವರ ಸ್ನೇಹಿತರ ವಲಯದಲ್ಲಿ.. ಇನ್ನು ಕೆಲ ತಿಂಗಳುಗಳಿಂದ ನಟ ಚಿಕ್ಕಣ್ಣ ಅವರೂ ಸಹ ದರ್ಶನ್ ಅವರ ಜೊತೆಯೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು ಚಿಕ್ಕಣ್ಣ ಅವರೂ ಸಹ ಮೈಸೂರಿನವರೇ ಆದ್ದರಿಂದ ದರ್ಶನ್ ಅವರೂ ಸಹ ಮೈಸೂರಿನಲ್ಲಿಯೇ ಹೆಚ್ಚು ಸಮಯ ಕಳೆಯುವುದರಿಂದ ಇಬ್ಬರೂ ಒಟ್ಟಿಗೆ ಇರುತ್ತಾರೆ..

ಇನ್ನು ಸದ್ಯ ಚಿಕ್ಕಣ್ಣ ಅವರ ಹೊಸ ಉದ್ಯಮಕ್ಕೆ ಒಳ್ಳೆಯದಾಗಲಿ ಎಂದು ದರ್ಶನ್ ಅವರು ಕೊಟ್ಟ ಉಡುಗೊರೆ ನೋಡಿ.. ಹೌದು ಚಿಕ್ಕಣ್ಣ ಮೂಲತಃ ಮೈಸೂರಿನ ಒಂದು ಹಳ್ಳಿಯವರು.. ಕಷ್ಟ ಪಟ್ಟು ಈ ಮಟ್ಟಕ್ಕೆ ಬೆಳೆದ ಚಿಕ್ಕಣ್ಣ ಎಂದೂ ಸಹ ತಾವು ನಡೆದು ಬಂದ ಹಾದಿಯನ್ನು ಮರೆಯಲಿಲ್ಲ.. ಎಂದೂ ಸಹ ಯಾರೊಂದಿಗೂ ಅಹಂಕಾರ ತೋರಿದವರಲ್ಲ.. ಹಾಗೆಯೇ ಈ ಬಣ್ಣದ ಬದುಕಲ್ಲಿ ಚಾಲ್ತಿಯಲ್ಲಿ ಇದ್ದಷ್ಟು ದಿನ ಮಾತ್ರ ಬೇಡಿಕೆ ಎನ್ನುವುದನ್ನು ಚೆನ್ನಾಗಿಯೇ ಅರಿತಿದ್ದಾರೆ.. ಅದೇ ಕಾರಣಕ್ಕೆ ಹಳ್ಳಿಯಲ್ಲಿ‌ ಹೊಸ ಉದ್ಯಮವನ್ನೂ ಸಹ ಪ್ರಾರಂಭ ಮಾಡಿದ್ದಾರೆ..

ಸದ್ಯ ಸ್ಯಾಂಡಲ್ವುಡ್ ನಲ್ಲಿ ಟಾಪ್ ಹಾಸ್ಯ ನಟರಲ್ಲಿ ಒಬ್ಬರಾಗಿರುವ ಚಿಕ್ಕಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.. ಅಷ್ಟೇ ಅಲ್ಲದೇ ಹೀರೋ ಆಗಿಯೂ ಸಹ ಎಂಟ್ರಿ‌ ನೀಡುತ್ತಿದ್ದು ಸಿನಿಮಾಗೆ ಉಪಾಧ್ಯಕ್ಷ ಎಂಬ ಹೆಸರನ್ನಿಡಲಾಗಿದೆ..‌ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರು ಸಿನಿಮಾ ನಿರ್ಮಾಣ ಮಾಡುತ್ತಿದ್ದು ಕೆಲ ದಿನಗಳ ಹಿಂದೆ ಸಿನಿಮಾದ ಮುಹೂರ್ಯವೂ ನೆರವೇರಿತ್ತು..

ಇನ್ನು ತಮ್ಮ ಹಳ್ಳಿಯಲ್ಲಿ ಇದೀಗ ಚಿಕ್ಕಣ್ಣ ಆಡು ಹಾಗೂ ನಾಟಿ‌ ಕೋಳಿ ಸಾಕಾಣಿಕೆಯ ಉದ್ಯಮವನ್ನು ಆರಂಭಿಸಿದ್ದಾರೆ.. ಹೌದು ಮೈಸೂರಿನ ಬಳಿ ತೋಟ ಮಾಡಿರುವ ಚಿಕ್ಕಣ್ಣ ಅವರು ಕೆಲ ದಿನಗಳ ಹಿಂದೆ ಆಡು ಹಾಗೂ ನಾಟಿಕೋಳಿ ಸಾಕಾಣಿಕೆಯ ಫಾರಂ ಶುರು ಮಾಡಿದ್ದಾರೆ.‌. ಫಾರಂ ಗೆ ತಾಯಿ ಚಾಮುಂಡೇಶ್ವರಿ ದೇವಿಯ ಹೆಸರನ್ನಿಟ್ಟಿದ್ದು ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದ್ದೇ ಆ ತಾಯಿ ಎನ್ನುತ್ತಾರೆ ಚಿಕ್ಕಣ್ಣ..

ಇನ್ನು ಸ್ನೇಹಿತನ ಫಾರಂ ಗೆ ದರ್ಶನ್ ಅವರು ಭೇಟಿ‌ ನೀಡಿದ್ದು ಚಿಕ್ಕಣ್ಣನ ಹೊಸ ಉದ್ಯಮಕ್ಕೆ ಒಳ್ಖೆಯದಾಗಲಿ ಎಂದು ವಿಶೇಷ ಉಡುಗೊರೆ ನೀಡಿದ್ದಾರೆ.. ಹೌದು ಆಡು ಸಾಕಾಣಿಕೆ ಮಾಡುವುದರಿಂದ ಹೆಚ್ಚಲಿ ಎಂಬ ಕಾರಣಕ್ಕೆ ದರ್ಶನ್ ಅವರು ಆಡಿನ ಮರಿಯನ್ನು ಕೊಂಡು ತಂದು ಚಿಕ್ಕಣ್ಣನಿಗೆ ಉಡುಗೊರೆಯಾಗಿ ನೀಡಿದ್ದಾರೆ.. ಇನ್ನು ತಮ್ಮ ಫಾರಂ ನಲ್ಲಿ ಸಾಕಲು ತಂದಿರುವ ಆಡನ್ನು ದರ್ಶನ್ ಅವರಿಗೆ ನೀಡಲು ಹೋದಾಗ ಅದನ್ನು ನಿರಾಕರಿಸಿರುವ ದರ್ಶನ್ ಅವರು ಮರಿಗಳು ಹೆಚ್ಚಲಿ ಎಂದು ಮನತುಂಬಿ ಹಾರೈಸಿ ತಾವೇ ಹೊರಗಿನಿಂದ ಆಡಿನ ಮರಿಯೊಂದನ್ನು ಕೊಂಡುತಂದು ಚಿಕ್ಕಣ್ಣನಿಗೆ ಉಡುಗೊರೆಯಾಗಿ ನೀಡಿದ್ದಾರೆ..

ಒಳ್ಳೆಯ ಮನಸ್ಸು ಅನ್ನೋದು ಇದಕ್ಕೆ ಇರಬೇಕು.. ತಾನು ಬೆಳೆದು ತನ್ನವರನ್ನು ಬೆಳೆಸೋ ದರ್ಶನ್ ಅವರು ಅದಾಗಲೇ ತಮ್ಮ ಅದೆಷ್ಟೋ ಸ್ನೇಹಿತರಿಗೆ ಅಭಿಮಾನಿಗಳಿಗೆ ಜೀವನ ಕಟ್ಟಿಕೊಳ್ಳಲು ನೆರವಾಗಿದ್ದಾರೆ.. ಇದೀಗ ತಮ್ಮ ರೀತಿಯಲ್ಲಿಯೇ ಯಾರ ಸಹಾಯವಿಲ್ಲದೇ ಕಷ್ಟದಿಂದಲೇ ಬೆಳೆದು ಬಂದ ಚಿಕ್ಕಣ್ಣ ಆರಂಭಿಸಿರುವ ಚಾಮುಂಡೇಶ್ವರಿ ಆಡು ಹಾಗೂ ನಾಟಿ ಕೋಳಿ ಫಾರಂ ನ ಹೊಸ ಉದ್ಯಮಕ್ಕೆ ಮನತುಂಬಿ ಹಾರೈಸಿ ಅವರ ಫಾರಂ ನಲ್ಲಿಯೇ ಕೆಲ ಸಮಯ ಕಳೆದು ಮರಳಿದ್ದಾರೆ.. ಇನ್ನು ದರ್ಶನ್ ಅವರ ಜೊತೆ ಸ್ನೇಹಿತರು ಸಾಥ್ ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗಿವೆ..