ದರ್ಶನ್ ಅವರ ಪರವಾಗಿ ಸುದೀಪ್ ಯಾಕೆ ನಿಲ್ಲಲಿಲ್ಲ.. ನಿಜವಾದ ಕಾರಣ ತಿಳಿಸಿದ ಕಿಚ್ಚ ಸುದೀಪ್..

0 views

ಸ್ಯಾಂಡಲ್ವುಡ್ ನಲ್ಲಿ ಕೆಲ ವರ್ಷಗಳ ಹಿಂದೆ ಈ ಜೆನರೇಷನ್ನಿನ್ನ ಕುಚ್ಚಿಕ್ಕು ಗಳು ಎಂದೇ ಖ್ಯಾತರಾಗಿದ್ದ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಡುವೆ ಇದ್ದ ಸ್ನೇಹ ಎಲ್ಲರಿಗೂ ತಿಳಿದೇ ಇದೆ.. ಹಾಗೆಯೇ ಇಬ್ಬರು ದೂರಾದ ವಿಚಾರವೂ ಹೊಸ ವಿಷಯವೇನು ಅಲ್ಲ.. ಇಬ್ಬರು ಒಂದಾಗಲಿ ಎಂದು ಈಗಲೂ ಕೆಲ ಅಭಿಮಾನಿಗಳು ಕೇಳುವುದು ಉಂಟು.. ಇನ್ನೂ ಕೆಲವರು ಅವರದ್ದೇ ಆದ ವ್ಯಯಕ್ತಿಕ ಕಾರಣಗಳಿರುತ್ತವೆ.. ಅದನ್ನು ನಾವು ಗೌರವಿಸಬೇಕು.. ಅವರ ಒಆಡಿಗೆ ಅವರನ್ನು ಬಿಡುವುದು ಒಳಿತು ಎಂದಿದ್ದರು..

ನಂತರದ ದಿನಗಳಲ್ಲಿ ಇಬ್ಬರೂ ತಮ್ಮ ತಮ್ಮ ವೃತ್ತಿ ಜೀವನ ಹಾಗೂ ವ್ಯಯಕ್ತಿಕ ಬದುಕಿನಲ್ಲಿ ಬ್ಯುಸಿ ಆದರು.. ಆದರೆ ಇದೀಗ ಕಿಚ್ಚ ಸುದೀಪ್ ಅವರು ದರ್ಶನ್ ಅವರ ಬಗ್ಗೆ ಮಾತನಾಡುತ್ತಾ ತಾಕತ್ತಿನ ವಿಚಾರ ತೆಗೆದಿದ್ದಾರೆ.. ಹೌದು ಎಲ್ಲರಿಗೂ ತಿಳಿದೇ ಇರುವಂತೆ ಸ್ಯಾಂಡಲ್ವುಡ್ ಬಹು ನಿರೀಕ್ಷೆಯ ಸಿನಿಮಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ರಾಬರ್ಟ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.. ಕನ್ನಡದ ಜೊತೆಗೆ ತೆಲುಗಿನಲ್ಲಿಯೂ ಬಿಡುಗಡೆ ಮಾಡಬೇಕೆಂದು ಚಿತ್ರತಂಡ ಪ್ರಯತ್ನ ಮಾಡಿತ್ತು.. ಆದರೆ ತೆಲುಗು ಇಂಡಸ್ಟ್ರಿ ಮೊದಮೊದಲು ಒಪ್ಪಿ ಆನಂತರ ಆಗೋದಿಲ್ಲ ಎಂದಿದ್ದರು..

ಈ ಕಾರಣಕ್ಕೆ ಸ್ವತಃ ದರ್ಶನ್ ಅವರೂ ಸಹ ಅಸಮಾಧಾನ ವ್ಯಕ್ತಪಡಿಸಿ ಫಿಲಂ ಛೇಂಬರ್ ಗೆ ದೂರನ್ನೂ ಸಹ ಸಲ್ಲಿಸಿದ್ದರು.. ಬೇರೆ ಯಾವ ನಟನ ಸಿನಿಮಾಗೂ ಇಲ್ಲದ ತೊಂದರೆ ದರ್ಶನ್ ಅವರ ಸಿನಿಮಾವನ್ನು ಬಿಡುಗಡೆ ಮಾಡುವ ವಿಚಾರದಲ್ಲೇಕೆ ಎಂದು ಅಭಿಮಾನಿಗಳು ಕೋಪಗೊಂಡಿದ್ದೂ ಉಂಟು..

ಕನ್ನಡ ಸಿನಿಮಾಗಳಿಗೆ ಅನ್ಯಾಯವಾಗುತ್ತಿರುವ ಇಂತಹ ಸಮಯದಲ್ಲಿ ಕನ್ನಡದ ನಟರೇಕೆ ಒಂದಾಗುತ್ತಿಲ್ಲ.. ಯಾರೂ ಸಹ ಏಕೆ ದರ್ಶನ್ ಅವರ ಬೆಂಬಲಕ್ಕೆ ನಿಲ್ಲುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಇತರ ಸ್ಟಾರ್ ನಟರ ಬಗ್ಗೆ ಟೀಕಿಸಲಾಗಿತ್ತು.. ಇದೇನಾ ನಮ್ಮ ಒಗ್ಗಟ್ಟು.. ಕನ್ನಡ ಸಿನಿಮಾಗೆ ಅನ್ಯಾಯ ಆಗ್ತಾ ಇದೆ ಎಲ್ರಪ್ಪಾ ಇದೀರಾ ಸೂಪರ್ ಸ್ಟಾರ್ಸ್.. ಎಂದು ಟ್ರೋಲ್ ಮಾಡಲಾಗಿತ್ತು.. ಇದರ ಬೆನ್ನಲ್ಲೇ ಇದೀಗ ನಟ ಕಿಚ್ಚ ಸುದೀಪ್ ಅವರು ದರ್ಶನ್ ಅವರ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ..

ಹೌದು ವಿಕ್ರಾಂತ್ ರೋಣ ಸಿನಿಮಾದ ಟೈಟಲ್ ಲಾಂಚ್ ಗಾಗಿ ದುಬೈ ಗೆ ತೆರಳಿರುವ ಕಿಚ್ಚ ಸುದೀಪ್ ಅವರು ಸಿ‌ನಿಮಾ ಇಂಡಸ್ಟ್ರಿಗೆ ಬಂದು 25 ವರ್ಷ ಕಳೆದ ಕಾರಣ ಮಾದ್ಯಮದವರಿಗೆ ಸಂದರ್ಶನ ನೀಡಿದ್ದರು.. ಮಾತಿನ ಮಧ್ಯೆ ದರ್ಶನ್ ಅವರ ರಾಬರ್ಟ್ ಸಿನಿಮಾಗೆ ಆಗುತ್ತಿರುವ ತೊಂದರೆ ಬಗ್ಗೆಯೂ ಪ್ರಶ್ನೆ ಕೇಳಲಾಯಿತು.. ಆ ಸಮಯದಲ್ಲಿ‌ ಮಾತನಾಡಿದ ಕಿಚ್ಚ ಸುದೀಪ್ ಅವರು..

“ನೋಡಿ ನಾನು ನನ್ನ ಸಿನಿಮಾವನ್ನು ಬೇರೆ ಭಾಷೆಗಳ ನಾಡಿನಲ್ಲಿ ಕಾಪಾಡಿಕೊಳ್ತೀನಿ.. ಆ ತಾಕತ್ತು ನನಗಿದೆ.. ಅವರ ಸಿನಿಮಾವನ್ನು ಕಾಪಾಡಿಕೊಳ್ಳುವ ತಾಕತ್ತು ಅವರಿಗೂ ಇದೆ.. ದೇವರು ಎಲ್ಲರಿಗೂ ಅವರದ್ದೇ ಆದ ತಾಕತ್ತ್ ನೀಡಿದ್ದಾನೆ.. ಇನ್ನೊಬ್ಬ ನಟರ ಸಿನಿಮಾವನ್ನು ಕಾಪಾಡುವಷ್ಟು ದೊಡ್ಡ ಕಲಾವಿದನೂ ನಾನಲ್ಲ.. ನಾನು ಅಷ್ಟು ಎತ್ತರಕ್ಕೆ ಬೆಳೆದೇ ಇಲ್ಲ.. ನಾನು ಅವರ ಸಿನಿಮಾದ ಬಗ್ಗೆ.. ಈಗ ಇಲ್ಲಿ ಮಾತನಾಡೋದು ದೊಡ್ಡ ತಪ್ಪಾಗತ್ತೆ.. ಅವರು ನೋಡಿಕೊಳ್ತಾರೆ ಬಿಡಿ..” ಎಂದಿದ್ದಾರೆ..

ಸುದೀಪ್ ಅವರ ಕೋಟಿಗೊಬ್ಬ 3 ಹಾಗೂ ಯಶ್ ಅವರ ಕೆಜಿಎಫ್ 2.. ಪುನೀತ್ ಅವರ ಯುವರತ್ನ ಸಿನಿಮಾಗಳು ಕೂಡ ತೆಲುಗಿನಲ್ಲಿ ಬಿಡುಗಡೆಯಾಗಲು ಸಜ್ಜಾಗಿವೆ.. ಆದರೆ ದರ್ಶನ್ ಅವರ ರಾಬರ್ಟ್ ಸಿನಿಮಾಗೆ ಮಾತ್ರ ಬಿಡುಗಡೆ ಮಾಡಲು ಕಿರಿಕ್ ಮಾಡಿದ್ದೇಕೆ ಎಂಬುದು ಮಾತ್ರ ತಿಳಿಯುತ್ತಿಲ್ಲ.. ಬಹುಶಃ ದರ್ಶನ್ ಅವರ ಸಿನಿಮಾಗೆ ಹೆದರಿರಬಹುದಷ್ಟೇ.. ಅವರೇನೇ ಮಾಡಿದರು ನಾವು ಬಿಡುಗಡೆ ಮಾಡೇ ಮಾಡ್ತೀವಿ ಎಂದು ಅದಾಗಲೇ ಚಿತ್ರತಂಡ ಪಣ ತೊಟ್ಟಿದೆ.. ಚಿತ್ರತಂಡಕ್ಕೆ ಅದಾಗಲೇ ಕನ್ನಡಿಗರು ಬೆಂಬಲ ವ್ಯಕ್ತಪಡಿಸಿದ್ದು ಅವರ ಸಿನಿಮಾ ನಮ್ಮ ನಾಡಲ್ಲಿ ಬಿಡುಗಡೆ ಆಗುತ್ತಿದೆ.. ನಮ್ಮ ಸಿನಿಮಾಗಳನ್ನು ಅವರ ನೆಲದಲ್ಲಿ ಬಿಡುಗಡೆ ಮಾಡಿ ಎಂದಿದ್ದಾರೆ..