ದರ್ಶನ್ ಅವರು ಎಂದೂ ಸಹ ಹೊಸ ವರ್ಷದ ರಾತ್ರಿ ಪಾರ್ಟಿ ಮಾಡೋದಿಲ್ಲ.. ಇದರ ಹಿಂದಿನ ಕಾರಣ ಏನು ಗೊತ್ತಾ?

0 views

ಎರಡು ಸಾವಿರದ ಇಪ್ಪತ್ತು ಕಳೆದು ಇದೀಗ ಎರಡು ಸಾವಿರದ ಇಪ್ಪತ್ತೊಂದು ಆಗಮಿಸುತ್ತಿದೆ.. ಈ ವರ್ಷವಾದರೂ ಎಲ್ಲಾ ಸರಿಯಾಗಿರಲಿ.. ಜೀವನ ಮೊದಲಿನಂತಾಗಲಿ.. ಯಾವುದೇ ಕಷ್ಟಗಳು ಬಾರದಿರಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿರುವುದಂತೂ ಸತ್ಯ.. ಇನ್ನು ಈ ನಡುವೆ ಹೊಸ ವರ್ಷದ ಪಾರ್ಟಿ ಮೂಡ್ ನಲ್ಲಿರುವ ಜನರಿಗೆ ಸರ್ಕಾರ ಶಾಕ್ ನೀಡಿದ್ದು ಬೆಂಗಳೂರಿನ ರಸ್ತೆಗಳಲ್ಲಿ ನಡೆಯುವ ಹೊಸ ವರ್ಷಾಚರಣೆಗೆ ಬ್ರೇಕ್ ಬಿದ್ದಿದೆ.. ಇನ್ನು ಅದೆಲ್ಲವನ್ನು ಹೊರತು ಪಡಿಸಿ ತಾರೆಯರ ಹೊಸ ವರ್ಷದ ಪಾರ್ಟಿ ಹೇಗಿರುತ್ತದೆ ಎಂದು ಅಭಿಮಾನಿಗಳಿಗೆ ಸಣ್ಣ ಕುತೂಹಲ ಇದ್ದೇ ಇರುತ್ತದೆ..

ಸಾಮಾನ್ಯವಾಗಿ ಎಲ್ಲರೂ ಸ್ನೇಹಿತರೊಟ್ಟಿಗೆ ಡಿಸೆಂಬರ್ ಮೂವತ್ತೊಂದರ ರಾತ್ರಿ‌ ಪಾರ್ಟಿ ಮಾಡಿ ಮಧ್ಯರಾತ್ರಿ 12 ಗಂಟೆಗೆ ಹೊಸ ವರ್ಷದ ಮೊದಲ ದಿನವನ್ನು ಬರಮಾಡಿಕೊಳ್ಳುವುದು ಸಾಮಾನ್ಯ.. ಇನ್ನೂ ಕೆಲವರು ಕುಟುಂಬದೊಂದಿಗೆ ರಾತ್ರಿ ಪಾರ್ಟಿ ಮಾಡಿ ಹೊಸ ವರ್ಷ ಆಚರಿಸಿ ಫೋಟೋ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅಭಿಮಾನಿಗಳಿಗೂ ಸಹ ಶುಭಾಶಯ ತಿಳಿಸುತ್ತಾರೆ.. ಆದರೆ ದರ್ಶನ್ ಅವರು ಮಾತ್ರ ಯಾವ ವರ್ಷವೂ ಸಹ ಹೊಸ ವರ್ಷದ ರಾತ್ರಿ ಪಾರ್ಟಿ ಮಾಡುವುದಿಲ್ಲ.. ಇದಕ್ಕೆ ಕಾರಣವೂ ಇದೆ..

ಹೌದು ಡಿ ಬಾಸ್ ಗೆ ಎಂತಹ ದೊಡ್ಡ ಅಭಿಮಾನಿ ಬಳಗ ಇದೆ ಎಂಬ ವಿಚಾರ ಎಲ್ಲರಿಗೂ ತಿಳಿದೇ ಇದೆ.. ಅದೇ ರೀತಿ ದರ್ಶನ್ ಅವರಿಗೆ ಸ್ನೇಹಿತರ ಬಳಗವೂ ಬಹಳ ದೊಡ್ಡದಾಗಿಯೇ ಇದೆ.. ತಮ್ಮ ರಜೆಯ ಸಮಯವನ್ನು ಬಹಳಷ್ಟು ಸಮಯ ಸ್ನೇಹಿತರೊಂದಿಗೆಯೇ ಕಳೆಯುವ ದರ್ಶನ್ ಅವರು ಆಗಾಗ ಸ್ನೇಹಿತರೊಟ್ಟಿಗೆ ಪ್ರವಾಸಕ್ಕೆ ಹೋಗುವುದೂ ಸಹ ಕಾಮನ್.. ಆದರೆ ಇಷ್ಟೊಂದು ದೊಡ್ಡ ಸ್ನೇಹಿತರ ಬಳಗವಿದ್ದರೂ ಸಹ ದರ್ಶನ್ ಅವರು ಹೊಸ ವರ್ಷದ ಪಾರ್ಟಿ ಮಾಡುವುದಿಲ್ಲ..

ಸಾಮಾನ್ಯವಾಗಿ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಬಾಸ್ ಡಿ ಬಾಸ್ ದರ್ಶನ್ ಅವರು ಹೊಸ ವರ್ಷದ ಆಚರಣೆ ಹೇಗೆ ಮಾಡುವರೆಂಬ ಕುತೂಹಲ ಇರುತ್ತದೆ.. ಆದರೆ ದರ್ಶನ್ ಅವರು ಹೊಸ ವರ್ಷವನ್ನು ಬರಮಾಡಿಕೊಳ್ಳುವ ರೀತಿಯೇ ಬೇರೆ..‌

ಹೌದು ದರ್ಶನ್ ಅವರು ಯಾವ ವರ್ಷವೂ ಡಿಸೆಂಬರ್ 31 ರ ರಾತ್ರಿ ಪಾರ್ಟಿ ಮಾಡುವುದಿಲ್ಲ.. ಬದಲಿಗೆ 31 ರ ರಾತ್ರಿ 9 ಗಂಟೆಗೆ ನಿದ್ರೆ ಮಾಡುತ್ತಾರೆ.. ಇದಕ್ಕೆ ಕಾರಣ ಅವರ ಕೆಲಸದ ಮೇಲಿನ ಶ್ರದ್ಧೆ.. ಹೌದು ದರ್ಶನ್ ಅವರು ಡಿಸೆಂಬರ್‌ 31 ರ ರಾತ್ರಿ 9 ಗಂಟೆಗೆ ಮಲಗುವ ದರ್ಶನ್ ಅವರು ಬೆಳಿಗ್ಗೆ ಜನವರಿ 1 ರಂದು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಎದ್ದು ದೇವಸ್ಥಾನಕ್ಕೆ ತೆರಳುತ್ತಾರೆ.. ಹೌದು ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿ ನಂತರ ದಿನವಿಡೀ ತಮ್ಮ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ.. ಹೌದು ವರ್ಷದ ಮೊದಲ‌ ದಿನ ನಮ್ಮನ್ನು ನಾವು ಸಂಪೂರ್ಣವಾಗಿ ನಮಗೆ ಅನ್ನ ನೀಡುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ದರ್ಶನ್ ಅವರು ಆ ದಿನ ಪೂರ್ತಿ ತಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ..

ಈ ಬಗ್ಗೆ ಈ ಹಿಂದೆ ಮಾದ್ಯಮದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ದರ್ಶನ್ ಅವರು ನಾನು ಯಾವತ್ತೂ ಡಿಸೆಂಬರ್ 31 ರಾತ್ರಿ ಪಾರ್ಟಿ ಮಾಡೊದಿಲ್ಲಮ್ಮ.. ರಾತ್ರಿ 9ಕ್ಕೆ ಮಲಗೆ ಬೆಳಗ್ಗೆ ಎಷ್ಟು ಬೇಗ ಆಗತ್ತೋ ಅಷ್ಟು ಬೇಗ ಎದ್ದು ದೇವಸ್ಥಾನಕ್ಕೆ ಹೋಗಿ ದಿನವಿಡೀ ಕೆಲಸ ಮಾಡ್ತೀನಮ್ಮ..‌ ವರ್ಷದ ಮೊದಲ ದಿನ ಕೆಲಸ ಮಾಡಿದ್ರೆ ವರ್ಷ ವಿಡೀ ಕೆಲಸ ಮಾಡಬಹುದು.. ಅಷ್ಟೂ ಬೇಕಿದ್ರೆ ಜನವರಿ 1 ರಂದು ರಾತ್ರಿ ಪಾರ್ಟಿ ಮಾಡಬಹುದು.. ಎಂದಿದ್ದರು.. ದರ್ಶನ್ ಅವರು ಹೊಸ ವರ್ಷ ಮಾತ್ರವಲ್ಲ ತಮ್ಮ ಹುಟ್ಟುಹಬ್ಬದ ದಿನವೂ ಅಷ್ಟೇ ತಾವು ಒಂದು ಗಂಟೆಯಾದರೂ ತಮ್ಮ ಸಿನಿಮಾದ ಕೆಲಸವನ್ನು ಮಾಡಿಯೇ ಮಾಡುತ್ತಾರೆ.. ಆಗ ಮಾತ್ರವೇ ವರ್ಷ ಪೂರ್ತಿ ಕೆಲಸದಲ್ಲಿ ತೊಡಗಿಸಿಕೊಳ್ಳಲು ಸಾಧ್ಯ ಎನ್ನುವ ಶ್ರದ್ಧೆ ದರ್ಶನ್ ಅವರದ್ದು..