ದರ್ಶನ್‌ ವಿಚಾರದಲ್ಲಿ ಗಂಡನಿಗೆ ಸಪೋರ್ಟ್ ಮಾಡಿದ್ದಕ್ಕೆ ರಕ್ಷಿತಾ ಅವರಿಗೆ ಏನಾಗಿದೆ ನೋಡಿ..

0 views

ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿರುವ ದರ್ಶನ್‌ ಅವರ ವಿಚಾರದಲ್ಲಿ ದಿನಕ್ಕೊಂದು ತಿರುವು ಪಡೆಯುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಅದರಲ್ಲಿಯೂ ನಿನ್ನೆ ಸಾಕಷ್ಟು ಬೆಳವಣಿಗೆಗೆಳು ನಡೆದಿದ್ದು ದೊಡ್ಡಮನೆ ಆಸ್ತಿ ವಿಚಾರವೂ ಹೊರ ಬಂದಿತ್ತು. ಆ ಬಳಿಕ ಸುದ್ದಿ ಗೋಷ್ಠಿ ಕರೆದ ದರ್ಶನ್‌ ಅವರು ಈ ಬಗ್ಗೆ ಮಾತನಾಡಿದ್ದರು.. ಅಷ್ಟೇ ಅಲ್ಲದೇ ಮಾತಿನ ಬರದಲ್ಲಿ ದರ್ಶನ್‌ ಅವರು ನಿರ್ದೇಶಕ ಜೋಗಿ ಪ್ರೇಮ್‌ ಅವರ ಬಗ್ಗೆಯೂ ಮಾತನಾಡಿದ್ದು ದೊಡ್ಡದೊಂದು ಬೇಸರಕ್ಕೆ ಕಾರಣವಾಗಿತ್ತು. ಈ ಬಗ್ಗೆ ಬೇಸರ ವ್ಯಕ್ತ ಪಡಿಸಿ ಗಂಡನ ಪರ ನಿಂತಿದ್ದ ರಕ್ಷಿತಾ ಅವರಿಗೆ ಈಗ ಯಾವ ರೀತಿ ಆಗಿದೆ ನೋಡಿ.. ಹೌದು ದರ್ಶನ್‌ ಅವರ ವಿಚಾರ ಸುದ್ದಿಯಾಗಿದ್ದೇ ಅರುಣಾ ಕುಮಾರಿ ಹಾಗೂ ಉಮಾಪತಿ ಅವರ ವಿಚಾರವಾಗಿ.. ಆದರೆ ಇದು ಬೇರೆಯದ್ದೇ ರೀತಿ ತಿರುವು ಪಡೆದುಕೊಂಡು ಹಳೆಯ ವಿಚಾರಗಳನ್ನು ತೆಗೆದರು. ಹೌದು ದರ್ಶನ್‌ ಅವರು ಅರುಣಾ ಕುಮಾರಿ ಅವರ ವಿಚಾರದ ಬಗ್ಗೆ ದೂರು ನೀಡಿದ ಸಮಯದಲ್ಲಿ ಇದ್ದಕ್ಕಿದ್ದ ಹಾಗೆ ಇಂದ್ರಜೀತ್‌ ಅವರು ಎಂಟ್ರಿ ಕೊಟ್ಟು ಸಂದೇಶ್‌ ನಾಗರಾಜ್‌ ಅವರ ಸಂದೇಶ್‌ ಪ್ರಿನ್ಸ್‌ ಹೊಟೆಲ್‌ ನಲ್ಲಿ ನಡೆದ ಘಟನೆಯನ್ನು ತೆಗೆದರು.

ಈ ಬಗ್ಗೆ ಸಾಕಷ್ಡು ಚರ್ಚೆ ವಾದ ವಿವಾದಗಳು ನಡೆಯುತ್ತಿದ್ದ ಸಮಯದಲ್ಲಿಯೇ ನಿರ್ಮಾಪಕ ಉಮಾಪತಿ ಅವರು ದರ್ಶನ್‌ ಅವರ ಕುರಿತು ಮತ್ತೊಂದು ವಿಚಾರ ಹೊರ ತೆಗೆದರು. ಹೌದು ಅದುವೇ ದೊಡ್ಡಮನೆ ವಿಚಾರ. ದೊಡ್ಡಮನೆಯ ಆಸ್ತಿ ವಿಚಾರ. ಹೌದು ಪುನೀತ್‌ ರಾಜ್‌ ಕುಮಾರ್‌ ಹಾಗೂ ರಾಘವೇಂದ್ರ ರಾಜ್‌ ಕುಮಾರ್‌ ಅವರಿಗೆ ಸೇರಿದ ಆಸ್ತಿಯೊಂದನ್ನು ನಿರ್ಮಾಪಕ ಉಮಾಪತಿ ಅವರು ಖರೀದಿ ಮಾಡಿದ್ದರು. ಆ ಆಸ್ತಿಯನ್ನು ದರ್ಶನ್‌ ಅವರು ಕೇಳಿದ್ದರು. ನಾನು ಕೊಡಲ್ಲ ಎಂದಿದ್ದೆ. ಆದರೆ ಆ ವಿಚಾರಕ್ಕೆ ದರ್ಶನ್‌ ಅವರು ಬೇಸರ ಮಾಡಿಕೊಂಡಿರಲ್ಲ ದರ್ಶನ್‌ ಅವರು ಅಂತಹ ವ್ಯಕ್ತಿಯಲ್ಲ ಎಂದು ಬೇರೆ ರೀತಿಯಲ್ಲಿಯೇ ವಿಚಾರ ಹೊರ ಹಾಕಿದ್ದರು. ಯಾವಾಗ ದೊಡ್ಡಮನೆ ವಿಚಾರ ಹೊರ ಬಂತೋ ಆ ಕ್ಷಣವೇ ದರ್ಶನ್‌ ಅವರು ಸುದ್ದಿಗೋಷ್ಟಿ ಕರೆದು ಇರುವ ವಿಚಾರವನ್ನು ತಿಳಿಸಿದರು. ಹೌದು ಉಮಾಪತಿ ಅವರೇ ದರ್ಶನ್‌ ಅವರಿಗೆ ರಾಬರ್ಟ್‌ ಸಿನಿಮಾದ ಸಂಭಾವನೆ ಬದಲಾಗಿ ಆ ಆಸ್ತಿ ನೀಡುವುದಾಗಿ ತಿಳಿಸಿದ್ದು ಕಳೆದ ಮೂರು ವರ್ಷಗಳಿಂದಲೂ ಆ ಆಸ್ತಿಯಿಂದ ಬರುತ್ತಿದ್ದ ಬಾಡಿಗೆಯನ್ನು ದರ್ಶನ್‌ ಅವರಿಗೆ ತಲುಪಿಸುತ್ತಿದ್ದರಂತೆ.

ಈ ವಿಚಾರವನ್ನು ಖುದ್ದು ದರ್ಶನ್‌ ಅವರೇ ತಿಳಿಸಿದ್ದು ನನಗೆ ಆ ಆಸ್ತಿಯನ್ನು ಕೊಡಲ್ಲ ಅಂದಮೇಲೆ ಅದರಿಂದ ಬಂದ ಬಾಡಿಗೆಯನ್ನು ನನಗೇಕೆ ಕೊಡುತ್ತಿದ್ದರು ಕೇಳಿ ಎಂದಿದ್ದಾರೆ. ಜೊತೆಗೆ ದೊಡ್ಡ ಮನೆ ಯಾವತ್ತಿದ್ದರೂ ದೊಡ್ಡ ಮನೆ. ಆ ಮನೆಯಲ್ಲಿ ನಮ್ಮ ಅಪ್ಪ ಅನ್ನ ತಿಂದಿದ್ದಾರೆ. ನಾನು ಸಹ ನನ್ನ ಕೆಲಸ ಶುರು ಮಾಡಿದ್ದೇ ಆ ಮನೆಯಿಂದ. ಎಂದು ದೊಡ್ಡಮನೆ ಬಗ್ಗೆ ಅಭಿಮಾನದ ಗೌರವದ ಮಾತುಗಳನ್ನು ಆಡಿದ್ದಾರೆ.. ಆದರೆ ಅದೇ ಸಮಯದಲ್ಲಿ ನಿರ್ದೇಶಕ ಪ್ರೇಮ್‌ ಅವರ ಬಗ್ಗೆ ಮಾತನಾಡಿದ್ದು ಮಾತನಾಡುವ ಬರದಲ್ಲಿ ದರ್ಶನ್‌ ಅವರು ನಿರ್ದೇಶಕ ಪ್ರೇಮ್‌ ಅವರನ್ನು ಪುಡಾಂಗ್‌ ಎಂಬ ಪದ ಬಳಸಿದ್ದು ರಕ್ಷಿತಾ ಹಾಗೂ ಪ್ರೇಮ್ ಅವರ ಬೇಸರಕ್ಕೆ ಕಾರಣವಾಗಿದೆ. ಹೌದು ದರ್ಶನ್‌ ಹಾಗೂ ರಕ್ಷಿತಾ ಅವರು ಬಹಳ ಆತ್ಮೀಯ ಸ್ನೇಹಿತರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ.. ದರ್ಶನ್‌ ಅವರು ರಕ್ಷಿತಾ ಅವರ ತಂದೆಯನ್ನು ಕೊನೆ ಸಮಯದಲ್ಲಿ ಬಹಳ ಚೆನ್ನಾಗಿ ನೋಡಿಕೊಂಡಿದ್ದು ಅವರೇ.. ರಕ್ಷಿತಾ ಅವರ ತಂದೆಯ ಜವಾಬ್ದಾರಿಯನ್ನು ತೆಗೆದುಕೊಂಡಿದ್ದರು ಎನ್ನಲಾಗಿದೆ.

ಆದರೆ ನಿನ್ನೆ ಸುದ್ದಿಗೋಷ್ಟಿಯಲ್ಲಿ ಮಾತನಾಡುವ ಸಮಯದಲ್ಲಿ ಉಮಾಪತಿ ಅವರ ಪರಿಚಯ ಆಗಿದ್ದರ ಬಗ್ಗೆ ಮಾತನಾಡಿದ ದರ್ಶನ್‌ ಅವರು ನಿರ್ದೇಶಕ ಪ್ರೇಮ್‌ ಉಮಾಪತಿ ನಾನು ಸಿನಿಮಾ ಮಾಡುವ ವಿಚಾರವಾಗಿ ಒಂದಾಗಿದ್ದು. ನಾನು ಎಲ್ಲಾ ನಿರ್ದೇಶಕರಿಗೂ ಎಪ್ಪತ್ತು ದಿನಗಳ ಡೇಟ್‌ ಮಾತ್ರ ಕೊಡೋದು. ಆದರೆ ಪ್ರೇಮ್‌ ಅವರಿಗೆ ನೂರು ದಿನಗಳ ಡೇಟ್‌ ಕೊಟ್ಟೆ ಎಂದು ಸುದ್ದಿಯಾಗಿತ್ತು. ಪ್ರೇಮ್‌ ಏನು ದೊಡ್ಡ ಪುಡಾಂಗ್‌ ಆ. ಅವರಿಗೆ ನೂರು ದಿನಗಳ ಡೇಟ್‌ ಕೊಡೋಕೆ. ಅವರಿಗೇನು ಎರಡು ಕೊಂಬಿದೆಯಾ. ಅವರೇನು ಅಂತ ನಾನು ಕರಿಯಾ ಸಿನಿಮಾದಲ್ಲಿ ನೋಡಿದ್ದೇನೆ ಎಂದುಬಿಟ್ಟರು. ಈ ವಿಚಾರದಿಂದ ಬೇಸರ ಪಟ್ಟುಕೊಂಡ ನಿರ್ದೇಶಕ ಪ್ರೇಮ್‌ ಅವರು ನಿನ್ನೆ ರಾತ್ರಿಯೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಬೇಸರದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೇ ಇಂದು ಸುದ್ದಿಗೋಷ್ಟಿ ಕರೆದು ಮಾತನಾಡಿರುವ ಪ್ರೇಮ್‌ ಅವರು ದರ್ಶನ್‌ ಯಾವತ್ತಿದ್ದರೂ ನನ್ನ ಕರಿಯಾನೇ. ಅವರು ಫೋನ್‌ ನಲ್ಲಿ ಮಾತನಾಡಿದ್ದರೇ ನಾನು ಸಹ ಫೋನ್‌ ನಲ್ಲಿಯೇ ಉತ್ತರ ಕೊಡುತ್ತಿದ್ದೆ. ಆದರೆ ಬಹಿರಂಗವಾಗಿ ಮಾತನಾಡಿದ್ದಕ್ಕೆ ನಾನು ಸಹ ಬಹಿರಂಗವಾಗಿಯೇ ಉತ್ತರ ಕೊಡಬೇಕಾಯಿತು. ದರ್ಶನ್‌ ಅವರಿಗೆ ಸಾವಿರ ಅಭಿಮಾನಿಗಳು ಇದ್ದಾರೆ. ನನಗೂ ಸಹ ಹತ್ತು ಅಭಿಮಾಆನಿಗಳು ಇದ್ದಾರೆ.

ನನಗೂ ಸ್ವಾಭಿಮಾನವಿದೆ ಅದಕ್ಕೆ ಮಾತನಾಡಿದೆ ಎಂದಿದ್ದರು. ಇನ್ನು ಈ ಬಗ್ಗೆ ರಕ್ಷಿತಾ ಅವರೂ ಸಹ ಪ್ರತಿಕ್ರಿಯೆ ನೀಡಿ ಯಾರೇ ಆದರೂ ಯಾರ ಬಗ್ಗೆಯಾದರೂ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಎಲ್ಲರಿಗೂ ಗೌರವವಿರುತ್ತದೆ. ನಾನು ಸದಾ ಪ್ರೇಮ್‌ ಪರವಾಗಿ ನಿಲ್ಲುತ್ತೇನೆ ಎಂದು ಗಂಡನ ಪರವಾಗಿ ನಿಂತಿದ್ದರು. ಆದರೆ ಅದಾದ ಬಳಿಕ ನಡೆದದ್ದೇ ಬೇರೆ. ಹೌದು ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ದರ್ಶನ್‌ ಅವರಿಂದಲೇ ಅವರ ಸಿನಿಮಾಗಳಿಂದಲೇ ನೀವು ಹೆಸರು ಮಾಡಿದ್ದು. ಈಗ ದರ್ಶನ್‌ ಅವರ ಬಗ್ಗೆ ಮಾತನಾಡ್ತೀರಾ ಎಂದು ಸಾಕಷ್ಟು ಪೋಸ್ಟ್‌ ಗಳಿಗೆ ಟ್ಯಾಗ್‌ ಮಾಡಿದ್ದರು. ಈ ಬಗ್ಗೆ ಇನ್ನಷ್ಟು ಬೇಸರಗೊಂಡ ರಕ್ಷಿತಾ ಅವರು ಗಂಡನ ಗೌರವದ ಬಗ್ಗೆ ಪ್ರಶ್ನೆ ಬಂದಾಗ ಅವರ ಪರವಾಗಿ ನಿಲ್ಲೋದು ತಪ್ಪಾ.. ದರ್ಶನ್‌ ಈಗಲೂ ನನ್ನ ಒಳ್ಳೆಯ ಸ್ನೇಹಿತ. ಆತನ ಮಾತಿನಿಂದ ಬೇಸರ ಆಗಿದೆ. ಆದರೆ ಅವನ ಮೇಲೆ ನನಗೆ ಯಾವುದೇ ಕೋಪವಿಲ್ಲ ಆದರೆ ಅವನ ಮಾತಿನಿಂದ ಬೇಸರವಂತೂ ಇದ್ದೇ ಇದೆ. ದಯವಿಟ್ಟು ಯಾರೂ ಸಹ ಪೋಸ್ಟ್‌ ಗಳಿಗೆ ನನ್ನನ್ನು ಟ್ಯಾಗ್‌ ಮಾಡಿ ಇನ್ನಷ್ಟು ಬೇಸರ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ..