ಮಗನ ಆಸೆಗಾಗಿ ದರ್ಶನ್ ಹಾಗೂ ವಿಜಯಲಕ್ಷ್ಮಿ ದರ್ಶನ್ ಅವರು ಮಾಡಿರುವ ಕೆಲಸ ನೋಡಿ..

0 views

ಸ್ಯಾಂಡಲ್ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹಾಗೂ ವಿಜಯಲಕ್ಷ್ಮಿ ದರ್ಶನ್ ಅವರು ಸಧ್ಯ ಮಗ ವಿನೀಶ್ ನ ಆಸೆ ಇಡೇರಿಸುವ ಸಲುವಾಗಿ ಮಾಡಿರುವ ಕೆಲಸ ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.. ಹೌದು ಡಿ ಬಾಸ್ ಸಧ್ಯ ಕಳೆದ ಎರಡು ತಿಂಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ವಿಚಾರ ಎಲ್ಲರಿಗೂ ತಿಳಿದೇ ಇದೆ.. ಅರುಣಾ ಕುಮಾರಿ ಅವರ ವಿಚಾರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ದರ್ಶನ್ ಅವರು ನಂತರ ಆ ಪ್ರಕರಣ ಬೇರೆಯದ್ದೇ ತಿರುವು ಪಡೆದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರ ಕಡೆಗೆ ತಿರುಗಿತ್ತು.. ನಂತರ ಎರಡುಯ್ ಕಡೆಯಿಂದಲೂ ಸಾಕಷ್ಟು ಮಾತುಕತೆ ನಡೆದು ಕೊನೆಗೆ ಪೊಲೀಸರ ಮೂಲಕ ವಿಚಾರ ಬಗೆಹರಿಯಲಿ ಎಂದು ಸುಮ್ಮನಾದರು.. ಆದರೆ ಈ ನಡುವೆ ದರ್ಶನ್ ಅವರ ಹಳೆಯ ವಿಚಾರಗಳನ್ನೆಲ್ಲಾ ತೆಗೆದು ಬೇರೆ ರೀತಿಯಲ್ಲಿಯೇ ಬಿಂಬಿಸಲು ಪ್ರಯತ್ನಗಳು ನಡೆದು ಕೊನೆಗೆ ಎಲ್ಲವೂ ಶಾಂತವಾಯಿತು..

ಸಧ್ಯ ಇದೆಲ್ಲದರಿಂದ ಹೊರಬಂದು ರಿಲ್ಯಾಕ್ಸ್ ಮೂಡ್ ನಲ್ಲಿರುವ ದರ್ಶನ್ ಅವರು ಕಳೆದ ಎರಡ್ಯ್ ವಾರದ ಹಿಂದಷ್ಟೇ ತಮಿಳುನಾಡಿನ ತಿರುನಲ್ಲಾರ್ ನಲ್ಲಿನ ಶನೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ದರ್ಶನ ಪಡೆದು ಬಂದಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗಿದ್ದವು‌. ಇನ್ನು ಸಧ್ಯ ತಮ್ಮ ಸಿನಿಮಾ ಕೆಲಸಗಳಲ್ಲಿಯೂ ಬ್ಯುಸಿ ಆಗಿರುವ ದರ್ಶನ್ ಅವರು ಇದೆಲ್ಲದರ ನಡುವೆ ಕೊಂಚ ಬ್ರೇಕ್ ಪಡೆದಿದ್ದಾರೆ.. ಹೌದು ಸಾಮಾನ್ಯವಾಗಿ ದರ್ಶನ್ ಅವರು ಬಿಡುವಿನ ವೇಳೆಯಲ್ಲಿ ಮೈಸೂರಿನಲ್ಲಿಯೇ ಸಮಯ ಕಳೆಯೋದು ಎಲ್ಲರಿಗೂ ತಿಳಿದಿದೆ.. ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ಟ್ರಾಕ್ಟರ್ ಖರೀದಿಸಿದ ದರ್ಶನ್ ಅವರು ತಮ್ಮ ಮೈಸೂರಿನ ತೋಟದಲ್ಲಿ ಕೃಷಿ ಚಟುವಟಿಕೆಗಳಲ್ಲಿಯೂ ತೊಡಗಿ ಕೊಂಡಿದ್ದಾರೆ..

ಇನ್ನೂ ಈ ನಡುವೆ ದರ್ಶನ್ ಅವರು ಹಾಗೂ ವಿಜಯಲಕ್ಷ್ಮಿ ದರ್ಶನ್ ಅವರು ಮಗ ವಿನೀಶ್ ನ ಆಸೆ ನೆರವೇರಿಸಲು ಮಾಡುತ್ತಿರುವ ಕೆಲಸ ನಿಜಕ್ಕೂ ಮೆಚ್ಚುವಂತದ್ದು.. ಹೌದು ಎಷ್ಟೇ ದೊಡ್ಡ ಸ್ಟಾರ್ ನಟರುಗಳಾದರು ಕುಟುಂಬಕ್ಕೆ ಸಮಯ ಕೊಟ್ಟಾಗ ಆಗುವ ಸಂತೋಷವೇ ಬೇರೆ.. ಅದರಲ್ಲಿಯೂ ಮಕ್ಕಳ ಆಸೆಗಳನ್ನು ನೆರವೇರಿಸುವುದರಲ್ಲಿ ಒಂದು ರೀತಿ ಆನಂದವೆನ್ನಬಹುದು.. ದರ್ಶನ್‌ ಅವರು ಸಿನಿಮಾ ಅಂತ ಬ್ಯಸಿ ಇರುವ ಕಾರಣ ಸಾಮಾನ್ಯವಾಗಿ ವಿಜಯಲಕ್ಷ್ಮಿ ದರ್ಶನ್‌ ಅವರೇ ಮಗನ ವಿಧ್ಯಾಭ್ಯಾಸ ಹಾಗೂ ಇನ್ನಿತರ ಕೆಲಸಗಳನ್ನು ನೋಡುತ್ತಿದ್ದರು.. ಈ ಹಿಂದೆಯೂ ಸಾಕಷ್ಟು ಬಾರಿ ವಿನೀಶ್‌ ನನ್ನು ವಿದೇಶಗಳಿಗೆ ಕರೆದುಕೊಂಡು ಹೋಗಿದ್ದ ವಿಜಯಲಕ್ಷ್ಮಿ ಅವರು ಸಾಮಾಜಿಕ ಜಾಲತಾಣದಲ್ಲಿ ಫೊಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೀಗ ದರ್ಶನ್‌ ಅವರು ಹಾಗೂ ವಿಜಯಲಕ್ಷ್ಮಿ ದರ್ಶನ್‌ ಅವರು ಸೇರಿ ಮಗನ ಆಸೆ ನೆರವೇರಿಸುತ್ತಿದ್ದಾರೆ..

ಹೌದು ಮಗ ವಿನೀಶ್ ಗೆ ಅಪ್ಪನಂತೆ ಕುದುರೆ ಸವಾರಿ ಎಂದರೆ ಬಲು ಇಷ್ಟ.‌. ಇದೇ ಕಾರಣಕ್ಕೆ ವಾರಾಂತ್ಯ ಬಂದರೆ ಸಾಕು ವಿಜಯಲಕ್ಷ್ಮಿ ದರ್ಶನ್ ಅವರು ಮಗನಿಗಾಗಿ ಮೈಸೂರಿಗೆ ಕರೆತಂದು ಕುದುರೆ ಸವಾರಿ ಮಾಡಿಸಿ ಎರಡು ದಿನ ಸಮಯ ಕಳೆದು ಮತ್ತೆ ಸೋಮವಾರ ಬೆಂಗಳೂರಿಗೆ ಮರಳುತ್ತಿದ್ದರು.. ಈ ರೀತಿ ಪ್ರತಿ ವಾರವೂ ವಿಜಯಲಕ್ಷ್ಮಿ ಅವರು ಮಗನೊಂದಿಗೆ ಮೈಸೂರಿನ ತೋಟದಲ್ಲಿ ಸಮಯ ಕಳೆಯುತ್ತಿದ್ದರು.. ಆದರೀಗ ಪತ್ನಿಯ ಜೊತೆಗೆ ದರ್ಶನ್ ಅವರೂ ಸಹ ಇದೀಗ ಮಗನಿಗಾಗಿ ಸಮಯ ಮಾಡಿಕೊಂಡು ಖುದ್ದು ಅವರೇ ಜೊತೆಯಲ್ಲಿ ನಿಂತು ಮಗನ ಆಸೆ ನೆರವೇರಿಸುತ್ತಿದ್ದಾರೆ..

ಹೌದು ದರ್ಶನ್ ಅವರು ತಾವೇ ವಿನೀಶ್ ಅವರನ್ನು ತಮ್ಮ ತೋಟದಲ್ಲಿ ಕುದುರೆ ಸವಾರಿ ಟ್ರೈನಿಂಗ್ ನೀಡುತ್ತಿದ್ದು ನಿನ್ನೆಯಿಂದಲೂ ಪ್ರತಿದಿನ ಬೆಳಿಗ್ಗೆ ಒಂದಷ್ಟು ಸಮಯ ಮಗನಿಗಾಗಿ ಮೀಸಲು ನೀಡಿ ತಾವೇ ವಿನೀಶ್ ಏರುವ ಕುದುರೆಯ ಲಗಾಮು ಹಿಡಿದು ಸವಾರಿ ಮಾಡಿಸುತ್ತಿರುವ ವೀಡಿಯೋ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ಇತ್ತ ಅಭಿಮಾನಿಗಳು ಅಪ್ಪ ಮಗನ ಕುದುರೆ ಸವಾರಿಯ ರೀತಿಗೆ ಫಿದಾ ಆಗಿದ್ದು ಮೆಚ್ಚುಗೆ ವ್ಯಕ್ತ ಪಡಿಸಿದ್ದು ಸಾಮಾಜಿಕ ಜಾಲತಾಣದ ತುಂಬೆಲ್ಲಾ ವೀಡಿಯೋ ಸದ್ದು ಮಾಡುತ್ತಿದೆ.. ವಿನೀಶ್ ಸಹ ಅಪ್ಪನ ಅಭಿಮಾನಿಗಳ ಜೊತೆ ದರ್ಶನ್ ಅವರ ರೀತಿಯೇ ಯಾವುದೇ ಅಹಂಕಾರವಿಲ್ಲದೇ ಸರಳತೆಯಿಂದ ನಡೆದುಕೊಂಡು ಮಾತನಾಡಿಸುವ ರೀತಿಗೂ ಸಹ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು ವಿನೀಶ್ ನ ಈ ಗುಣ ಹೀಗೆ ಇರಲಿ ಎಂದಿದ್ದಾರೆ..