ದರ್ಶನ್ ಪ್ರಕ್ರಣಕ್ಕೆ ಎಂಟ್ರಿ ಕೊಟ್ಟ ಮತ್ತಿಬ್ಬರು ಸ್ಟಾರ್ ನಟರು.. ಆದರೆ ನಡೆದಿದ್ದೇ ಬೇರೆ..

0 views

ಚಾಲೆಂಜಿಂಗ್ ಸ್ಟಾರ್ ದರ್ಶನ್.. ಅಭಿಮಾನಿಗಳ ಪಾಲಿನ ಬಾಸ್ ಡಿ ಬಾಸ್ ಸಧ್ಯ ಹಲವಾರು ಮಂದಿ ಹಲವಾರು ಪ್ರಕರಣಗಳನ್ನು ತಂದು ಒಟ್ಟಿಗೆ ಮೇಲೆ ಬಿದ್ದರೂ ಸಹ ಅಭಿಮಾನಿಗಳು ನಾವಿದ್ದೇವೆ ಎಂದು ಒಂದು ಕಡೆ ಬೆಂಬಲ‌ ನೀಡಿದ್ದರೆ ಇತ್ತ ಖುದ್ದು ದರ್ಶನ್ ಅವರು ಯಾವುದಕ್ಕೂ ಜಗ್ಗೋ ಮಗ ನಾನಲ್ಲ ಎಂದು ಗಟ್ಟಿಯಾಗಿ ನಿಂತಿದ್ದು ಅದೇನೆ ಬಂದರೂ ಎದುರಿಸುವೆ.. ಸ್ಟಾರ್ ಗಿರಿ ಸುಮ್ಮನೆ ಬರೋದಿಲ್ಲ ಈ ರೀತಿ ಇಂದಲೇ ಬರೋದು ಎಂದಿದ್ದರು. ಆದರೀಗ ದರ್ಶನ್ ಅವರ ಪರವಾಗಿ ಕನ್ನಡದ ಮತ್ತಿಬ್ಬರು ಸ್ಟಾರ್ ನಟರು ನಿಂತಿದ್ದು ದರ್ಶನ್ ಅವರನ್ನು ಇಂತಹ ನೂರು ಪ್ರಕರಣ ಬಂದರೂ ಏನೂ ಮಾಡೋಕೆ ಸಾಧ್ಯವಿಲ್ಲ ಎಂದಿದ್ದಾರೆ. ಹೌದು ದರ್ಶನ್ ಹಾಗೂ ಅರುಣಾ ಕುಮಾರಿ ಅವರ ವಿಚಾರದಲ್ಲಿ ದರ್ಶನ್ ಅವರೇ ಮುಂದೆ ಬಂದು ಮೊದಲಿಗೆ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಆ ಪ್ರಕರಣ ತನಿಖೆಯಲ್ಲಿ ಇರುವಾಗಲೇ ದರ್ಶನ್ ಅವರ ವಿರುದ್ಧವಾಗಿ ಅನೇಕ ಪ್ರಕರಣಗಳು ಹುಟ್ಟಿಕೊಂಡವು.. ಹೌದು ಇದ್ದಕಿದ್ದ ಹಾಗೆ ಇಂದ್ರಜಿತ್ ಲಂಕೇಶ್ ಅವರು‌ ಪ್ರತ್ಯಕ್ಷರಾಗಿ ಸಂದೇಶ್ ದಿ ಪ್ರಿನ್ಸ್ ಹೊಟೆಲ್ ನಲ್ಲಿ ದರ್ಶನ್ ವೇಟರ್ ಮೇಲೆ ಕೈ ಮಾಡಿದ್ದಾರೆ ಎಂದು ಗೃಹ ಸಚಿವರ ಬಳಿ ಹೋಗಿ ದೂರು ನೀಡಿದರು. ಆ ವಿಚಾರ ಚಾಲ್ತಿಯಲ್ಲಿರುವಾಗಲೇ ಇತ್ತ ನಿರ್ಮಾಪಕ ಉಮಾಪತಿ ಅವರು ದೊಡ್ಮನೆ ಆಸ್ತಿ ವಿಚಾರ ತೆಗೆದು ದರ್ಶನ್ ಅವರು ಪುನೀತ್ ಅವರ ಆಸ್ತಿ ಕೇಳಿದ್ದರು.. ಎಂದು ಮತ್ತಷ್ಟು ಬೆಂಕಿಗೆತುಪ್ಪ ಸುರಿಯುವ ಕೆಲಸ ಮಾಡಿದ್ದರು.. ಆದರೆ ಅಲ್ಲೊ ಅಸಲಿ ಕತೆ ಬೇರೆಯೇ ಇತ್ತು..

ದರ್ಶನ್ ಅವರಿಗೆ ನಿರ್ಮಾಪಕ ಉಮಾಪತಿ ಅವರು ರಾಬರ್ಟ್ ಸಿನಿಮಾದ ಸಂಭಾವನೆ ಬದಲಾಗಿ ಆಸ್ತಿ ನೀಡುವುದಾಗಿ ತಿಳಿಸಿ ಆ ಆಸ್ತಿಯಿಂದ ಬರುತ್ತಿದ್ದ ಬಾಡಿಗೆಯನ್ನು ಕಳೆದ ಮೂರು ವರ್ಷದಿಂದಲೂ ದರ್ಶನ್ ಅವರಿಗೆ ತಂದು ತಲುಪಿಸುತ್ತಿದ್ದರು. ಆದರೆ ಮೂರು ವರ್ಷವಾದರೂ ರಿಜಿಸ್ಟ್ರೇಶನ್ ಮಾಡಿಸದ ಕಾರಣ ದರ್ಶನ್ ಅವರು ಕೇಳಿದ್ದಕ್ಕೆ ಈ ರೀತಿ ಎಲ್ಲಾ ಊಹಾಪೋಹಗಳು ಹುಟ್ಟಿಕೊಂಡವು.. ಇನ್ನೂ ದರ್ಶನ್ ಅವರಿಗೆ ಅಭಿಮಾನಿ ಬಳಗ ಯಾವ ರೀತಿ‌ ಇದೆ ಎಂಬುದು ಎಲ್ಲರಿಗೂ ತಿಳಿದೇ ಇದೆ.. ಮೊದಲ ದಿನದಿಂದಲೂ ದರ್ಶನ್ ಅವರ ಪರವಾಗಿ ನಿಂತ ಅಭಿಮಾನಿಗಳು ಸ್ಯಾಂಡಲ್ವುಡ್ ನ ಇತರ ಕಲಾವಿದರ ಬಗ್ಗೆ ಮಾತನಾಡಿ ತಿಂಗಳಿಗೆ ನಾಲ್ಕು ಟ್ರೈಲರ್ ಬಿಡುಗಡೆ ನಾಲ್ಕು ಹೊಸ ಸಿನಿಮಾ ಮುಹೂರ್ತ ಹೊಸ ಪ್ರತಿಭೆಗಳನ್ನು ಪರಿಚಯ ಮಾಡೋದು ಹೀಗೆ ಎಲ್ಲದಕ್ಕೂ ದರ್ಶನ್ ಬೇಕು. ಆದರೆ ಇಂತಹ ಸಮಯದಲ್ಲಿ ದರ್ಶನ್ ಅವರ ಪರವಾಗಿ ಮಾತನಾಡೋಕೆ ಯಾರಿಗೂ ಧೈರ್ಯವಿಲ್ಲ ಎಂದು ಟೀಕಿಸಿದ್ದರು.‌. ಆದರೀಗ ದರ್ಶನ್ ಅವರ ಪರವಾಗಿ ಇಬ್ಬರು ಸ್ಟಾರ್ ನಟರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಹೌದು ಪ್ರಕರಣ ಶುರು ಆದ ದಿನವೇ ದರ್ಶನ್ ಅವರ ಪರವಾಗಿ ಸ್ಯಾಂಡಲ್ವುಡ್ ನ ಒಬ್ಬ ನಟ ಧ್ವನಿ ಎತ್ತಿ ದರ್ಶನ್ ಅವರ ಪರವಾಗಿ ನಿಂತರೆ.. ಇದೀಗ ಮತ್ತಿಬ್ಬರು ನಟರು ನಿನ್ನೆ ದರ್ಶನ್ ಅವರ ಪರವಾಗಿ ಪೋಸ್ಟ್ ಮಾಡಿದ್ದಾರೆ..ಹೌದು ದರ್ಶನ್ ಅವರ ಮೇಲೆ ಇಂದ್ರಜಿತ್ ಲಂಕೇಶ್ ಅವರು ಗೃಹ ಮಂತ್ರಿಗಳಿಗೆ ದೂರು ನೀಡಿದ ದಿನವೇ ವಿನೋದ್ ಪ್ರಭಾಕರ್ ಅವರು ದರ್ಶನ್ ಅವರ ಕುರಿತು ಮಾತನಾಡಿ “ನಮ್ಮ ಪ್ರೀತಿಯ ಡಿ ಬಾಸ್ ಬಗ್ಗೆ ಯಾರೇನು ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಡಬೇಕಿಲ್ಲ.. ‌ದರ್ಶನ್ ತೂಗುದೀಪರಾಗಿ ಇಂಡಸ್ಟ್ರಿಗೆ ಬಂದವರನ್ನು ಇವತ್ತು ಚಾಲೆಂಜಿಂಗ್ ಸ್ಟಾರ್ ಬಾಕ್ಸ್ ಆಫೀಸ್ ಸುಲ್ತಾನನಾಗಿ ಡಿ ಬಾಸ್ ಆಗಿ ಮಾಡಿರೋದು ಅವರ ಅಭಿಮಾನಿಗಳು ಬರಿ ಅವರ ನಟನೆ ನೋಡಿ ಅಲ್ಲ.. ಅವರ ವ್ಯಕ್ತಿತ್ವ, ಸಹಾಯ ಗುಣ, ಇನ್ನೊಬ್ಬರನ್ನು ಪ್ರೋತ್ಸಾಹಿಸಿ ಬೆಳೆಸುವ ಮನಸ್ಸು ನೋಡಿ.. ಅವರ ಅಭಿಮಾನಿಗಳು ಅವತ್ತು ಇದ್ರೂ.. ಇವತ್ತು ಇದ್ದಾರೆ.. ಮುಂದೇನೂ ಇರ್ತಾರೆ.. ಅವರನ್ನ ಇನ್ನು ಹತ್ತು ಪಟ್ಟು ಬೆಳೆಸುತ್ತಾರೆ.. ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದಿದ್ದರು..

ಇನ್ನೂ ಇದೀಗ ಡಿ ಬಾಸ್ ಬಗ್ಗೆ ಮತ್ತೊಬ್ಬ ನಟ ಮಾತನಾಡಿದ್ದಾರೆ. ಹೌದು ಅವರೇ ಧನ್ವೀರ್.. ಧನ್ವೀರ್ ಸಿನಿಮಾಗೆ ಎಂಟ್ರಿ ನೀಡುವಾಗ ಅವರಿಗೆ ಬೆಂಬಲ ನೀಡಿದ್ದೂ ಸಹ ದರ್ಶನ್ ಅವರೇ.. ಇದೀಗ ದರ್ಶನ್ ಅವರ ಪರವಾಗಿ ಮಾತನಾಡಿರುವ ಧನ್ವೀರ್ ಅವರು ನನ್ನ ಪ್ರೀತಿ ನಂಬಿಕೆ ಸ್ಪೂರ್ತಿಗೆ ಇನ್ನೊಂದು ಹೆಸರು ಡಿ ಬಾಸ್.. ನಾನು ಚಿತ್ರೋದ್ಯಮಕ್ಕೆ ಬರುವ ಮೊದಲಿನಿಂದಲೂ ಡಿ ಬಾಸ್ ಅಭಿಮಾನಿ.. ಅಭಿಮಾನ ಅನ್ನೋದು ಚಿತ್ರ ನೋಡಿದಾಗ ಮಾತ್ರ ಬರುವುದಿಲ್ಲ.. ಚಿತ್ರರಂಗಕ್ಕೆ ಬರುವ ಮುನ್ನ ಅವರು ಪಟ್ಟಿರುವ ಕಷ್ಟ.. ಚಿತ್ರರಂಗದಲ್ಲಿ ನಡೆದು ಬಂದ ಹಾದಿಯಿಂದ ಬರುವಂತದ್ದು.. ಜೊತೆಗೆ ಯಾರಿಗೂ ಗೊತ್ತಾಗದಂತೆ ಮಾಡುವ ನಿಸ್ವಾರ್ಥ ಸಹಾಯ.. ಇಂತಹ ನೂರಾರು ಗುಣಗಳಿಂದ ನನ್ನಂತ ಅಭಿಮಾನಿಗಳಿಗೆ ಸ್ಪೂರ್ತಿಯಾಗಿ ನಿಂತಿರುವ ಬೃಹತ್ ಶಿಖರ ಡಿ ಬಾಸ್.. ಈ ಶಿಖರದ ಗುಣ ಎಷ್ಟೇ ಕಲ್ಲು ಎಸೆದರೂ ಅದನ್ನೆಲ್ಲಾ ಲೆಕ್ಕಿಸದೇ ಎಸೆದವರ ಮುಂದೆ ಎತ್ತರವಾಗಿ ಬೆಳೆದು ನಿಲ್ಲೋ ಗುಣ. ಡಿ ಬಾಸ್ ಎಂದರೆ ಸಾಕು ಪ್ರೀತಿಯಿಂದ ಹರಿದು ಬರುವುದು ಅಭಿಮಾನದ ಹೊಳೆ.. ಏನೇ ಮಾಡಿದರೂ ಇವರನ್ನು ಕುಗ್ಗಿಸೋದು ಅಸಾಧ್ಯ.. ಜಗತ್ತೇ ತಿರುಗಿಬಿದ್ದರೂ ನಾನು ಮತ್ತು ನನ್ನಂತಹ ಕೋಟ್ಯಾಂತರ ಅಭಿಮಾನಿಗಳು ಸದಾ ಡಿ ಬಾಸ್ ಜೊತೆ.. ಜೈ ಡಿ ಬಾಸ್.‌. ಎಂದು ಬರೆದುಕೊಂಡಿದ್ದಾರೆ..

ಆದರೆ ಇತ್ತ ಧನ್ವೀರ್ ಅವರ ನಡೆಗೆ ದರ್ಶನ್ ಅವರ ಅಭಿಮಾನಿಗಳೇ ಟೀಕಿಸಿದ್ದಾರೆ.. ಹೌದು ಕಳೆದ ಹತ್ತು ದಿನದಿಂದ ಇಲ್ಲದ ಪ್ರೀತಿ ನಮ್ಮ ಬಾಸ್ ಮೇಲೆ ಕೆಲವರಿಗೆ ಇವಾಗ ಹುಕ್ಕಿ ಹರಿಯುತಿದೆ.. ನಾನು ಕಂಡ ಹಾಗೆ ವಿನೋದ್ ಪ್ರಭಾಕರ್ ಅಣ್ಣ ಒಬ್ಬರೇ ನಮ್ಮ ಬಾಸ್ ಮೇಲೆ ಮೊದಲು ಧ್ವನಿ ಎತ್ತಿದ್ದು ಲವ್ ಯು ವಿನೋದ್ ಅಣ್ಣ ನಿಮ್ಮ ಮೇಲೆ ಇರುವ ಪ್ರೀತಿ ಯಾವಾಗಳು ಕಡಿಮೆ ಆಗಲ್ಲ ಅಣ್ವಾ. ವಾರಕ್ಕೆ ಮೂರು ಯುವ ನಟರ ಆಡಿಯೋ ಲಾಂಚ್ ತಿಂಗಳಿಗೆ 5 ರಿಂದ 10 ಹೊಸ ಪ್ರತಿಭೆಗಳ ಟ್ರೈಲರ್ ಲಾಂಚ್
ಪೋಸ್ಟರ್ ಬಿಡುಗಡೆ , ಶಾರ್ಟ್ ಮೂವಿ ಬಿಡುಗಡೆ ಇವೆಲ್ಲ ಮಾಡಿ ಕೊಟ್ರು ಆದರೆ ಇವಗ ವಿನೋದ್ ಪ್ರಭಾಕರ್ ಅಣ್ಣ ಒಬ್ರು ಬಿಟ್ಟರೆ ಬೇರೆ ಯಾವ ಕಲಾವಿದ ಧ್ವನಿ ಎತ್ತಲಿಲ್ಲ. ಕೋಟ್ಯಂತರ ಅಭಿಮಾನಿಗಳಿದ್ದೇವೆ ಅಷ್ಟೇ ಸಾಕು. ಜಗತ್ತೇ ತಿರುಗಿಬಿದ್ದರೂ ನಾವು ಸದಾ ಡಿ ಬಾಸ್ ಜೊತೆ ಎಂದಿದ್ದಾರೆ.. ಇನ್ನೂ ಅಭಿಷೇಕ್ ಅಂಬರೀಶ್ ಅವರು ಈ ಬಗ್ಗೆ ಮಾತಿನಲ್ಲಿ ಪ್ರತಿಕ್ರಿಯೆ ನೀಡದಿದ್ದರೂ ಸಹ ತಮ್ಮ ಇನ್ಸ್ಟಾಗ್ರಾಂ ನಲ್ಲಿ ದರ್ಶನ್ ಅವರ ಜೊತೆಗಿನ ಫೋಟೋ ಹಂಚಿಕೊಂಡಿದ್ದು ಯಾರೇನು ಮಾಡಲು ಸಾಧ್ಯವಿಲ್ಲ ಎಂಬುವ ಎಮೋಜಿಗಳನ್ನು ಹಾಕಿಕೊಂಡಿದ್ದಾರೆ.. ಒಟ್ಟಿನಲ್ಲಿ ದರ್ಶನ್ ಅವರ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದ್ದರೂ ಸಹ ಇತ್ತ ಅಭಿಮಾನಿಗಳು ಮಾತ್ರ ಅದೇನೆ ಬರಲಿ ನಾವಿದ್ದೇವೆ ಎನ್ನುತ್ತಿದ್ದಾರೆ..