ನಾಗಿಣಿ ಧಾರಾವಾಹಿಯ ನಟ ದೀಕ್ಷಿತ್ ಏನಾದರು ಗೊತ್ತಾ..

0 views

ಕನ್ನಡ ಕಿರುತೆರೆ ಅನ್ನೋದು ಸಕಾಷ್ಟು ಜನರ ಬಾಳಿಗೆ ಬೆಳಕಾಗಿದೆ ಅನ್ನೋದು ಸುಳ್ಳಲ್ಲ.. ಎಷ್ಟೋ ಜನರ ಬದುಕನ್ನೇ ಬದಲಿಸಿದೆ ಎಂದರೂ ತಪ್ಪಾಗಲಾರದು.. ಕಲೆಯಲ್ಲಿ ಆಸಕ್ತಿ ಹೊಂದಿ ಪ್ರತಿಭೆ ಇದ್ದರೂ ಸಹ ಹಣಕಾಸಿನ ತೊಂದರೆ ಇಂದಾಗಿ ಬೆಳಕಿಗೆ ಬಾರದೇ ಮನೆಯ ಜವಾಬ್ದಾರಿ ನಿಭಾಯಿಸಲು ತಮ್ಮ ಕನಸುಗಳನ್ನು ಬದಿಗಿಟ್ಟು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಂಡವರೂ ಇದ್ದಾರೆ.. ಇನ್ನೂ ಅಂತಹ ಸಾಕಷ್ಟು ಕಲಾವಿದರುಗಳಿಗೆ ಕಿರುತೆರೆ ಅನ್ನೋದು ಅಕ್ಷರಶಃ ಅದೃಷ್ಟದ ತೆರೆ ಎಂದರೂ ತಪ್ಪಾಗಲಾರದು‌‌.. ಧಾರಾವಾಹಿ ಮೂಲಕ ಅದೆಷ್ಟೋ ಬಡ ಕಲಾವಿದರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ..

ಆದರೆ ಕೆಲ ಕಲಾವಿದರುಗಳು ಮಾತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ದೊರಕಿದರೂ ಸಹ ನಂತರದ ದಿನಗಳಲ್ಲಿ ತೆರೆಯಿಂಡ ಮಾಯವೇ ಆಗಿಬಿಡುತ್ತಾರೆ.. ಅಂತಹ ಕಲಾವಿದರಲ್ಲಿ ಒಬ್ಬರು ನಟ ದೀಕ್ಷಿತ್.. ಹೌದು ನಾಗಿಣಿ ಧಾರಾವಾಹಿ ಮೂಲಕ ಮನೆಮಾತಾಗಿದ್ದ ರಾಹುಲ್ ಪಾತ್ರಧಾರಿ ನಟ ದೀಕ್ಷಿತ್ ಏನಾದರು ಗೊತ್ತಾ.. ಹೌದು ದೀಕ್ಷಿತ್ ಬಹಳ ಬಡ ಹಾಗೂ ಹಳ್ಳಿಯ ಹಿನ್ನೆಲೆಯ ಕುಟುಂಬದಿಂದ ಬಂದ ನಟನಾಗಿದ್ದರು.. ನಾಗಿಣಿ ಧಾರಾವಾಹಿ ಅವರ ಕೈ ಹಿಡಿದಿತ್ತು.. ಧಾರಾವಾಹಿ ದೊಡ್ಡ ಮಟ್ಟದಲ್ಲಿ ಯಶಸ್ಸನ್ನೂ ಸಹ ಕಂಡಿತ್ತು..

ಇತ್ತ ಅಮೃತ ನಾಗಿಣಿಯಾಗಿ ದೀಪಿಕಾ ದಾಸ್ ಕಾಣಿಸಿಕೊಂಡರೆ ಇತ್ತ ಅರ್ಜುನ್ ಪಾತ್ರದಲ್ಲಿ ದೀಕ್ಷಿತ್ ಶೆಟ್ಟಿ ಕಾಣಿಸಿಕೊಂಡರು.. ನೋಡಲು ಹ್ಯಾಂಡ್ಸಮ್ ಆಗಿದ್ದ ದೀಕ್ಷಿತ್ ಭರವಸೆಯ ನಾಯಕನಾಗಿ ಗುರುತಿಸಿಕೊಂಡಿದ್ದರು.. ಆರು ವರ್ಷಗಳ ಕಾಲ ಒಂದೇ ಧಾರಾವಾಹಿಯಲ್ಲಿ ಅಭಿನಯಿಸಿದ್ದು ತಮ್ಮ ನಟನೆಗಾಗಿ ಜೀ ಕನ್ನಡ ವಾಹಿನಿಯಿಂದ ಅನೇಕ ಪ್ರಶಸ್ತಿಗಳನ್ನು ಸಹ ಪಡೆದುಕೊಂಡಿದ್ದಾರೆ..

ಇನ್ನು ಧಾರಾವಾಹಿಯ ಜೊತೆಗೆ ಸಾಕಷ್ಟು ಸಿನಿಮಾಗಳ ಅವಕಾಶಕ್ಕಾಗಿಯೂ ಪ್ರಯತ್ನ ಪಟ್ಟಿದ್ದ ದೀಕ್ಷಿತ್ ಗೆ ಹೇಳಿಕೊಳ್ಳುವ ಯಾವ ಅವಕಾಶವೂ ದೊರೆಯಲಿಲ್ಲ.. ನಾಗಿಣಿ ಧಾರಾವಾಹಿಯ ನಂತರ ಎಲ್ಲಿಯೂ ಕಾಣಿಸಿಕೊಳ್ಳದ ದೀಕ್ಷಿತ್ ಏನಾದರು ಎಲ್ಲಿ ಹೋದರೆಂಬ ಕುತೂಹಲ ಕಿರುತೆರೆ ಪ್ರೇಕ್ಷಕರಲ್ಲಿ‌ ಇದ್ದೇ ಇದೆ.. ಹೌದು ಸಿನಿಮಾಗಾಗಿ ಪ್ರಯತ್ನ ಪಡುವಗಾ ದೀಕ್ಷಿತ್ ಅವರಿಗೆ ಸಿಕ್ಕ ಅವಕಾಶವೇ ದಿಯಾ ಸಿನಿಮಾ.. ಸಾಕಷ್ಟು ವರ್ಷಗಳ ಕಾಲ ಚಿತ್ರೀಕರಣವಾಗಿ ಸಾಕಷ್ಟು ಎಡರು ತೊಡರುಗಳನ್ನು ದಾಟಿ ಬಂದು ಸಿನಿಮಾ ಬಿಡುಗಡೆಯಾಯಿತು.. ಸಿನಿಮಾದಲ್ಲಿ ಮೊದಲ ಹೀರೋ ಆದರೂ ಸಹ ದಿಯಾ ಸಿನಿಮಾ ಮೂಲಕ ದೀಕ್ಷಿತ್ ಗುರುತಿಸಿಕೊಂಡರೂ ಸಹ ಮುಂದೆ ಹೇಳಿಕೊಳ್ಳುವಂತಹ ಅವಕಾಶ ಕನ್ನಡದಲ್ಲಿ ಸಿಗಲಿಲ್ಲ.. ಇತ್ತ ಅದೇ ಸಿನಿಮಾದಲ್ಲಿ ಅಭಿನಯಿಸಿದ್ದ ಪೃಥ್ವಿ ಅಂಬಾರ್ ಪಾತ್ರಕ್ಕೆ ಜನಮನ್ನಣೆ ದೊರೆಯಿತು.. ಅವರಿಗೆ ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶ ದೊರೆಯಿತು.. ಆದರೆ ದೀಕ್ಷಿತ್ ಮುಂದೆ ಅವಕಾಶಕ್ಕಾಗಿ ಮತ್ತೆ ಅಲೆಯುವಂತಾಯಿತು..

ಆಗ ದೀಕ್ಷಿತ್ ಕಾಲಿಟ್ಟಿದ್ದೇ ತೆಲುಗು ಚಿತ್ರರಂಗಕ್ಕೆ.. ಹೌದು ದಿಯಾ ಸಿನಿಮಾ ನಂತರ ದೀಕ್ಷಿತ್ ಅವರಿಗೆ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಅವಕಾಶಗಳು ದೊರೆಯಿತು.. ಹೌದು ತೆಲುಗಿನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆದರು.. ಮೀಟ್ ಕ್ಯೂಟ್.. ಬ್ಲಿಂಕ್.. ಕೆಟಿಎಂ ಎಂಬ ಮೂರು ಸಿನಿಮಾಗಳಲ್ಲಿ ಅಭಿನಯಿಸಿ ಖ್ಯಾತಿ ಗಳಿಸಿದರು..

ಅದರಲ್ಲಿ ಮೀಟ್ ಕ್ಯೂಟ್ ಎಂಬ ಸಿನಿಮಾ ನ್ಯಾಚುರಲ್ ಸ್ಟಾರ್ ನಾನಿ ಅವರ ನಿರ್ಮಾಣ ಸಂಸ್ಥೆಯ ಚಿತ್ರವಾಗಿತ್ತು.. ಆ ಸಿನಿಮಾದಲ್ಲಿ ದೀಕ್ಷಿತ್ ಶೆಟ್ಟಿ ಅವರ ನಟನೆಯನ್ನು ಗಮನಿಸಿದ ನಾನಿ ಅವರು ಇದೀಗ ತಮ್ಮ ಸಿನಿಮಾದಲ್ಲಿಯೇ ದೀಕ್ಷಿತ್ ಅವರಿಗೆ ಪ್ರಮುಖ ಪಾತ್ರವೊಂದನ್ನು ನೀಡಿದ್ದಾರೆ..

ಹೌದು ನಾನಿ ಅಭಿನಯದ ಮುಂದಿನ ಸಿನಿಮಾ ದಸರಾ ಸಿನಿಮಾದಲ್ಲಿ ದೀಕ್ಷಿತ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ನಾನಿ.. ದೀಕ್ಷಿತ್ ಹಾಗೂ ನಟಿ ಕೀರ್ತಿ ಸುರೇಶ್ ನಡುವೆ ನಡೆಯುವ ಕತೆ ಇದಾಗಿದೆ.. ಇನ್ನು ಈ ಬಗ್ಗೆ ಸಂತೋಷ ಹಂಚಿಕೊಂಡಿರುವ ದೀಕ್ಷಿತ್ ದೊಡ್ಡ ಸಿನಿಮಾಗಳಲ್ಲಿ ಕಮರ್ಷಿಯಲ್ ಸಿನಿಮಾಗಳಲ್ಲಿ ಅಭಿನಯಿಸುವಿದು ಬೇರೆ ರೀತಿಯ ಅನುಭವವನ್ನೇ ನೀಡುತ್ತದೆ.. ಈಗಾಗಲೇ ಚಿತ್ರೀಕರಣ ಶುರು ಆಗಿದ್ದು ನಾನಿ ಅವರ ಜೊತೆ ಅಭಿನಯಿಸಲು ಬಹಳ ಸಂತೋಷವಾಗುತ್ತಿದೆ ಎಂದಿದ್ದಾರೆ..

ಇನ್ನು ಅದಾಗಲೇ ಕನ್ನಡ ಕಿರುತೆರೆಯ ಸಾಕಷ್ಟು ಕಲಾವಿದರು ತೆಲುಗು ಕಿರುತೆರೆ ಕಡೆ ಮುಖ ಮಾಡಿದ್ದು ಸ್ಯಾಂಡಲ್ವುಡ್ ನ ಧನಂಜಯ್, ದುನಿಯಾ ವಿಜಯ್.. ರಿಷಭ್ ಶೆಟ್ಟಿ ಹೀಗೆ ಸಾಕಷ್ಟು ಸಿನಿಮಾ ನಟರೂ ಸಹ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದು ಹೆಸರು ಹಾಗೂ ಹಣ ಗಳಿಸುತ್ತಿದ್ದಾರೆ.. ಈ ನಡುವೆ ಬಡ ಕುಟುಂಬದಿಂದ ಬಂದು ಬದುಕು ಕಟ್ಟಿಕೊಂಡ ದೀಕ್ಷಿತ್ ಶೆಟ್ಟಿ ಇದೀಗ ತೆಲುಗಿನಲ್ಲಿ ಮಿಂಚುತ್ತಿದ್ದು ದಸರಾ ಸಿನಿಮಾ ದೀಕ್ಶಿತ್ ಗೆ ದೊಡ್ಡ ಮಟ್ಟದ ಬ್ರೇಕ್ ಕೊಡಲಿದೆ ಎನ್ನಲಾಗಿದ್ದು ದೀಕ್ಷಿತ್ ಅವರ ಮುಂದಿನ ಸಿನಿ ಪಯಣ ಚೆನ್ನಾಗಿರಲಿ..