ಬ್ರೈನ್ ಟ್ಯೂಮರ್ ಸರ್ಜರಿ ನಡೆಯುತ್ತಿದ್ದರೂ ಸತತ ಮೂರು ಗಂಟೆ ಹನುಮಾನ್ ಚಾಲೀಸ್ ಹೇಳಿದ ಮಹಿಳೆ.. ಕೊನೆಗೆ ನಡೆದ ಪವಾಡ ನೋಡಿ ಬೆಚ್ಚಿಬಿದ್ದ ವೈದ್ಯರು..

0 views

ಮನುಷ್ಯ ಹಾಗೂ ಸಕಲ ಚರಾಚರಗಳಿಗೂ ಮಿಗಿಲಾದ ಒಂದು ಶಕ್ತಿ ಇದೆ ಎಂಬುದನ್ನು ಸಾವಿರಾರು ವರ್ಷಗಳಿಂದಲೂ ನಮ್ಮ ಪೂರ್ವಜರ ಕಾಲದಿಂದಲೂ ನಂಬುತ್ತಾ ಬಂದಿದ್ದೇವೆ.. ಅದರಲ್ಲೂ ಏನೇ ಕಷ್ಟ ಬರಲಿ ಯಾವುದೇ ಅನಾರೋಗ್ಯವಾಗಲಿ ಮೊದಲು ಬೇಡುವುದೇ ದೇವರನ್ನು.. ವೈದ್ಯರನ್ನು ಪ್ರತ್ಯಕ್ಷ ದೇವರೆಂದು ಕರೆದರೂ ಸಹ ಆ ವೈದ್ಯರೂಗಳು ಸಹ ದೇವರನ್ನು ನಂಬುವ ಅನೇಕ ಉದಾಹರಣೆಗಳಿವೆ.. ಅದೇ ಕಾರಣಕ್ಕೆ ಈಗಲೂ ಶೇಕಡ ತೊಂಬತ್ತರಷ್ಟು ಆಸ್ಪತ್ರೆಗಳಲ್ಲಿ ದೇವರ ಮೂರ್ತಿಗಳಿದ್ದು ಆಸ್ಪತ್ರೆಯಲ್ಲಿ ಸಕಾರಾತ್ಮಕ ಶಕ್ತಿ ಸಂಚರಿಸಲಿ ಎಂದು ಪ್ರಾರ್ಥನೆ ಮಾಡುತ್ತಾರೆ. ಅದಕ್ಕೂ ಮಿಗಿಲಾಗಿ ನಮ್ಮ ಪ್ರಯತ್ನ ನಾವು ಮಾಡಿ ಮಿಕ್ಕ ಫಲವನ್ನು ದೇವರಿಗೆ ಬಿಡುತ್ತೇವೆ ಎಂದು ಹೇಳುವ ವೈದ್ಯರೂ ಸಹ ಇದ್ದಾರೆ.. ಒಟ್ಟಿನಲ್ಲಿ ಕಾಣದ ಆ ಒಂದು ಶಕ್ತಿ ದೇವರಾಗಿ ಎಲ್ಲರನ್ನು ಕಾಯುತ್ತಿದೆ ಎಂಬ ನಂಬಿಕೆಯಂತೂ ಇದ್ದೇ ಇದೆ..

ಆದರೆ ಇಲ್ಲೊಬ್ಬ ಮಹಿಳೆ ತನಗೆ ಬ್ರೈನ್ ಟ್ಯೂಮರ್ ಸರ್ಜರಿ ನಡೆಯುತ್ತಿದ್ದ ವೇಳೆ ಸತತ ಮೂರು ಗಂಟೆಗಳ ಕಾಲ ಹನುಮಾನ್ ಚಾಲೀಸ್ ಹೇಳಿದ್ದು ಕೊನೆಗೆ ನಡೆದ ಪವಾಡ ನೋಡಿ ವೈದ್ಯರೇ ಆಶ್ಚರ್ಯ ಪಟ್ಟಿದ್ದಾರೆ.. ಹೌದು ದೆಹಲಿಯ ಏಂಸ್ ಆಸ್ಪತ್ರೆಯಲ್ಲಿ ಇಂತಹದೊಂದು ಘಟನೆ ನಡೆದಿದ್ದು ಶಿಕ್ಷಕಿಯೊಬ್ಬರು ಈ ರೀತಿ ತಮಗೆ ಸರ್ಜರಿ ನಡೆಯುವ ವೇಳೆ ಎಚ್ಚರವಿದ್ದು ಹನುಮಾನ್ ಚಾಲೀಸ್ ಹೇಳಿದವರಾಗಿದ್ದಾರೆ.. ಹೌದು ದೆಹಲಿಯ ಮಹಿಳೆಯೊಬ್ಬರು ಶಿಕ್ಷಕಿಯಾಗಿದ್ದು ಅವರು ಆಂಜನೇಯನ ಮೇಲೆ ಅಪಾರ ಭಕ್ತಿಯನ್ನು ಹೊಂದಿದ್ದರು.. ಹೀಗೆ ದಿನ ಕಳೆದಂತೆ ಅವರಿಗೆ ಬ್ರೈನ್ ಟ್ಯೂಮರ್ ಆಗಿರುವ ವಿಚಾರ ಬೆಳಕಿಗೆ ಬಂತು.. ನಂತರ ಹಲವು ಆಸ್ಪತ್ರೆಗಳನ್ನು ತಿರುಗಿ ಕೊನೆಗೆ ಆಂಜನೇಯನಲ್ಲಿ ಹರಕೆ ಕಟ್ಟಿಕೊಂಡು ಕೊನೆಗೆ ದೆಹಲಿಯ ಏಂಸ್ ಆಸ್ಪತ್ರೆಗೆ ದಾಖಲಾದರು. ಅಲ್ಲಿ ಅವರಿಗೆ ಸರ್ಜರಿ ಮಾಡುವ ನಿರ್ಧಾರ ಮಾಡಿ ಸಕಲ ತಯಾರಿ ಮಾಡಲಾಯಿತು..

ಆ ಮಹಿಳೆಯೂ ಸಹ ಯಾವುದೇ ಅಂಜಿಕೆಯಿಲ್ಲದೇ ಸರ್ಜರಿಗೆ ತಯಾರಾದರು. ಅವರಿಗೆ ಲೋಕಲ್ ಅ ನಸ್ತೇ ಷಿಯಾ ಹಾಗೂ ಪೇನ್ ಕಿಲ್ಲರ್ ಕೂಡ ನೀಡಲಾಗಿತ್ತು. ಆದರೆ ಆಕೆ ತನಗಾದ ಮೂರು ಗಂಟೆಗಳ ಸರ್ಜರಿಸಮಯದಲ್ಲಿ ಸಂಪೂರ್ಣವಾಗಿ ಎಚ್ಚರವಾಗಿಯೇ ಇದ್ದರು.. ಅಷ್ಟೇ ಅಲ್ಲದೇ ಸತತ ಮೂರು ಗಂಟೆಗಳ ಕಾಲ ಹನುಮಾನ್ ಚಾಲೀಸವನ್ನು ಹೇಳುತ್ತಲೇ ಇದ್ದರು.. ಇದನ್ನು ಕಂಡ ವೈದ್ಯರು ಒಂದು ಕ್ಷಣ ದಂಗಾದರು.. ಆದರೂ ಸಹ ತಮ್ಮ ಕರ್ತವ್ಯ ಮುಂದುವರೆಸಿ ಸರ್ಜರಿ ಮುಗಿಸಿದರು.. ವೈದ್ಯರ ಪ್ರಯತ್ನ ಹಾಗೂ ದೇವರ ದಯೆಯಿಂದ ಬಹಳ ಕಠಿಣ ಸರ್ಜರಿ ಕೂಡ ಸುಸೂತ್ರವಾಗಿ ನೆರವೇರಿತು.

ಅದರಲ್ಲೂ ವೈದ್ಯರು ಆ ಮಹಿಳೆಯ ನಡೆ ಕಂಡು ಆಶ್ಚರ್ಯದ ಜೊತೆ ಸಂತೋಷವನ್ನೂ ಪಟ್ಟಿದ್ದು ಈ ಬಗ್ಗೆ ಮಾದ್ಯಮದ ಜೊತೆ ಮಾತನಾಡಿದ್ದಾರೆ. ಹೌದು ಆ ಮಹಿಳೆಗೆ ಸರ್ಜರಿ ಮಾಡಿದ ವೈದ್ಯರಲ್ಲಿ ಒಬ್ಬರಾದ ಡಾ ದೀಪಕ್ ಗುಪ್ತಾ ಅವರು ಮಾತನಾಡಿ ಆ ಮಹಿಳೆಗೆ ಬ್ರೇನ್ ಟ್ಯೂಮರ್ ಸಮಸ್ಯೆ ಇತ್ತು.. ಅವರಿಗೆ ಲೋಕಲ್ ಅನ ಸ್ತೇಷಿಯಾ ಹಾಗೂ ಪೇನ್ ಕಿಲ್ಲರ್ ನೀಡಿ ಸರ್ಜರಿ ಮಾಡಲು ಪ್ರಾರಂಭ ಮಾಡಿದೆವು..ಆದರೆ ಆ ಮಹಿಳೆ ಸಂಪೂರ್ಣ ಮೂರು ಗಂಟೆಗಳ ಕಾಲ ಎಚ್ಚರವಾಗಿಯೇ ಇದ್ದು ಹನುಮಾನ್ ಚಾಲೀದವನ್ನು ಹೇಳುತ್ತಿದ್ದರು.‌ ಸಧ್ಯ ಇದೀಗ ಅವರ ಚಿಕಿತ್ಸೆ ಯಶಸ್ವಿಯಾಗಿದ್ದು ಅವರನ್ನು ನಿನ್ನೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ..

ಸಧ್ಯ ಈ ಘಟನೆ ತಿಳಿದು ಜನರು ದೇವರ ಮೇಲಿನ ಭಕ್ತಿ ಇನ್ನೂ ಹೆಚ್ಚಾಯಿತು ಎಂದರೆ ಮತ್ತೆ ಕೆಲವರು ದೇವರು ಕಷ್ಟ ಕಾಲದಲ್ಲಿ ನಂಬಿದವರ ಲೈ ಹಿಡಿವನು ಎಂಬುದಕ್ಕೆ ಇದೇ ಉದಾಹರಣೆ ಎಂದಿದ್ದಾರೆ.. ಒಟ್ಟಿನಲ್ಲಿ ವೈದ್ಯರ ಪ್ರಯತ್ನದ ಜೊತೆಗೆ ಆಂಜನೇಯನ ಕೃಪಾಕಟಾಕ್ಷದಿಂದ ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ತೆರಳಿರುವ ಆ ಮಹಿಳೆಯಂತೂ ನೆಮ್ಮದಿಯಿಂದ ನಿಟ್ಟುಸಿರು ಬಿಟ್ಟಿದ್ದಾರೆ..