ಈ ಹೆಣ್ಣು ಮಗಳ ಒಂದು ತಿಂಗಳ ಸಂಬಳ ಎಷ್ಟು ಗೊತ್ತಾ? ಶಾಕ್ ಆಗ್ತೀರಾ.. ಈಕೆ ಮಾಡುತ್ತಿರುವ ಕೆಲಸ ಯಾವುದು ಗೊತ್ತಾ?

0 views

ಪ್ರತಿಭೆ ಅನ್ನೋದು ಯಾರ ಅಪ್ಪನ ಮನೆಯ ಸ್ವತ್ತೂ ಅಲ್ಲ ಅನ್ನೋದು ಅಕ್ಷರಶಃ ಸತ್ಯದ ಮಾತು.. ಕಡು ಬಡತನದಲ್ಲಿ ಹುಟ್ಟಿ ಪ್ರಪಂಚವೇ ತಿರುಗಿ ನೋಡುವಂತೆ ಸಾಧನೆ ಮಾಡಿದವರಿದ್ದಾರೆ‌‌.. ಇನ್ನು ಹತ್ತು ಸಾವಿರ ರೂಪಾಯಿಯಲ್ಲಿ ಕಂಪನಿ ಶುರು ಮಾಡಿ ಇಂದು ಸಾವಿರ ಕೋಟಿಗಳನ್ನಿ ದಾನ ಧರ್ಮ ಅಂತ ಮಾಡುತ್ತಿರುವ ಸುಧಾಮೂರ್ತಿ ಅವರಿದ್ದಾರೆ.. ಹೀಗೆ ಸಾಕಷ್ಟು ಮಂದಿ ಈಗಿನ ಯುವಕರಿಗೆ ಸ್ಪೂರ್ತಿಯಾಗುತ್ತಾರೆ.. ಜೀವನದಲ್ಲಿ ಏನಾದರು ಸಾಧನೆ ಮಾಡಬೇಕು ಎಂದುಕೊಂಡಿರುವ ಅದೆಷ್ಟೋ ಮಂದಿಗೆ ಇಂತಹ ವ್ಯಕ್ತಿಗಳ ಕತೆ ನಿಜಕ್ಕೂ ಸ್ಪೂರ್ತಿಯೇ ಸರಿ..

ಅದರಲ್ಲಿಯೂ ಚಿಕ್ಕ ಚಿಕ್ಕ ವಯಸ್ಸಿಗೆ ಸಾಧನೆ ಮಾಡಿದವರ ಕತೆ ನಿಜಕ್ಕೂ ಬಹಳ ರೋಚಕವೆನ್ನಬಹುದು‌‌.. ಅದರಲ್ಲೂ ಭಾರತೀಯರು ಇಂತಹ ಸಾಧನೆಗಳಲ್ಲಿ ಒಂದು ಹೆಜ್ಜೆ ಮುಂದೆಯೇ ಎನ್ನಬಹುದು.. ಗೂಗಲ್ ಮೈಕ್ರೋಸಾಫ್ಟ್ ಸೇರಿದಂತೆ ಪ್ರಪಂಚದ ಅತಿ ದೊಡ್ಡ ದೊಡ್ಡ ಕಂಪನಿಗಳ ಪ್ರಮುಖ ಹುದ್ದೆಗಳಲ್ಲಿ ಭಾರತೀಯರದ್ದೇ ಕಾರುಬಾರು ಎಂಬುವುದು ಹೆಮ್ಮೆಯ ವಿಚಾರವೇ ಸರಿ.. ಇನ್ನು ಇದೀಗ ಇಲ್ಲೊಬ್ಬ ಹೆಣ್ಣು ಮಗಳು ಸಾಮಾನ್ಯ ಕುಟುಂಬದಿಂದ ಬಂದ ಈ ಹೆಣ್ಣು ಮಗಳು ಇದೀಗ ತನ್ನ ಸ್ವಂತ ಪರಿಶ್ರಮದಿಂದ ಪಡೆದುಕೊಂಡಿರುವ ಕೆಲಸದಿಂದ ಸಿಗುತ್ತಿರುವ ಸಂಬಳ ನೋಡಿದರೆ ನಿಜಕ್ಕೂ ಆಶ್ಚರ್ಯವಾಗುವುದು..

ಹೌದು ಈಕೆಯ ಹೆಸರು ದೀಪ್ತಿ.. ಮೂಲತಃ ಹೈದರಾಬಾದ್ ನವರು.. ಈಕೆಯ ತಂದೆ ವೆಂಕಣ್ಣ.. ಹೈದರಾಬಾದಿನ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕೆಲಸ ಮಾಡುತ್ತಾರೆ.. ದೀಪ್ತಿ ಚಿಕ್ಕ ವಯಸ್ಸಿನಿಂದಲೂ ಬಹಳ ಪ್ರತಿಭಾವಂತೆ.. ಓದಿದ್ದು ಇಂಜಿನಿಯರಿಂಗ್.. ಹೈದರಾಬಾದಿನಲ್ಲಿಯೇ ತಮ್ಮ ಬಿ ಟೆಕ್ ಪದವಿಯನ್ನು ಮುಗಿಸಿದ ದೀಪ್ತಿ ನಂತರ ಜೆಪಿ ಮೊರ್ಗಾನ್ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿಕೊಂಡರು.. ನಂತರ ಇನ್ನೂ ಹೆಚ್ಚಿನ ಓದು ಆಕೆಯ ಆಸಕ್ತಿಯಾಗಿತ್ತು.. ಹೇಗೋ ಮಾಡಿ ಅಮೇರಿಕಾಗೆ ಎಂ ಎಸ್ ಮಾಡಲು ತೆರಳಿದರು..

ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ಎಂ ಎಸ್ ಮಾಡಲು ಸೀಟ್ ಪಡೆದರು.. ಅಂದುಕೊಂಡಂತೆ ಕಂಪ್ಯೂಟರ್ಸ್ ವಿಷಯದಲ್ಲಿ ದೀಪ್ತಿ ಎಂ ಎಸ್ ಮುಗಿಸಿದರು.. ಅಂತಿಮ ವರ್ಷದಲ್ಲಿ ಎಂದಿನಂತೆ ಕ್ಯಾಂಪಸ್ ಇಂಟರ್ವ್ಯೂ ನಲ್ಲಿ ಭಾಗವಹಿಸಿದರು.. ಪ್ರಪಂಚದ ದೊಡ್ಡ ದೊಡ್ಡ ಕಂಪನಿಗಳು ನೇಮಕಾತಿ ಮಾಡಿಕೊಳ್ಳಲು ಆಗಮಿಸಿದ್ದವು.. ಅದರಲ್ಲೀಗ ದೀಪ್ತಿ ಪ್ರತಿಷ್ಟಿತ ಕಂಪನಿಗೆ ಆಯ್ಕೆಯಾಗಿದ್ದು ದೀಪ್ತಿ ಅವರಿಗೆ ವಾರ್ಷಿಕವಾಗಿ ಬರೋಬ್ಬರಿ ಎರಡು ಕೋಟಿ ಸಂಬಳ ನಿಗದಿಯಾಗಿದೆ.. ಹೌದು ದೀಪ್ತಿ ಆಯ್ಕೆಯಾದ ಕಂಪನಿ ಬೇರೆ ಯಾವುದೂ ಅಲ್ಲ ಅಮೇರಿಕಾದ ಸೀಟಲ್ ನಲ್ಲಿರುವ ಮೈಕ್ರೋಸಾಫ್ಟ್ ಮುಖ್ಯ ಕಚೇರಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಆಯ್ಕೆಯಾಗಿದ್ದಾರೆ.. ಹೌದು ದೀಪ್ತಿ ಅವರ ಪರಿಶ್ರಮಕ್ಕೆ ತಕ್ಕ ಫಲ ದೊರೆತಿದ್ದು ಇದೀಗ ಮೈಕ್ರೋಸಾಫ್ಟ್ ಕಂಪನಿಯಿಂದ ತಿಂಗಳಿಗೆ ಹದಿನೇಳು ಲಕ್ಷ ಸಂಬಳ ಪಡೆಯುತ್ತಿದ್ದಾರೆ..

ಹೌದು ದೀಪ್ತಿ ಅವರು ನಾಳೆಯಿಂದ ಕೆಲಸಕ್ಕೆ ಹಾಜರಾಗಬೇಕಿದ್ದು ಅವರ ಈ ಸಾಧನೆಗೆ ಸ್ನೇಹಿತರು ಹಾಗೂ ಕುಟುಂಬಸ್ಥರು ಶುಭಾಶಯ ತಿಳಿಸಿದ್ದು ಮುಂದಿನ ಕೆರಿಯರ್ ಗೆ ಶುಭ ಕೋರಿದ್ದಾರೆ.. ಇನ್ನು ಈ ಬಗ್ಗೆ ಸಂತೋಷ ಹಂಚಿಕೊಂಡಿರುವ ದೀಪ್ತಿ ತನ್ನ ತಂದೆ ತಾಯಿಗೆ ಹಾಗೂ ಎಲ್ಲಾ ಗುರುಗಳಿಗೆ ಕುಟುಂಬದವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.. ಒಟ್ಟಿನಲ್ಲಿ ಈ ಹೆಣ್ಣು ಮಗಳ ಓದಿನ ಮೇಲಿನ ಪ್ರೀತಿ ಆಸಕ್ತಿ ಇಂದು ಈ ಮಟ್ಟಕ್ಕೆ ತಂದು ನಿಲ್ಲಿಸಿದ್ದು ಈಕೆಯ ಕತೆ ಮತ್ತಷ್ಟು ಜನರಿಗೆ ಸ್ಪೂರ್ತಿಯಾಗಲಿ..