ಧನಂಜಯ್ ಜೊತೆ ಮದುವೆ.. ಖುದ್ದು ನಾನೇ ಅಧಿಕೃತವಾಗಿ ತಿಳಿಸ್ತೀನಿ ಎಂದ ನಟಿ ಅಮೃತಾ ಅಯ್ಯಂಗಾರ್..

0 views

ಧನಂಜಯ್ ಹಾಗೂ ನಟಿ ಅಮೃತಾ ಅಯ್ಯಂಗಾರ್.. ಸಧ್ಯ ಬಡವ ರಾಸ್ಕಲ್ ಸಿನಿಮಾ ಮೂಲಕ ದೊಡ್ಡ ಮಟ್ಟದ ಯಶಸ್ಸು ಪಡೆದು ಸಿನಿಮಾ ಇಂಡಸ್ಟ್ರಿಯಲ್ಲಿ ಭದ್ರವಾಗಿ ನೆಲೆಯೂರುತ್ತಿರುವ ಜೋಡಿ.. ಇತ್ತ ನಿರ್ಮಾಪಕನಾಗಿ ನಟ ಧನಂಜಯ್ ಸೈ ಎನಿಸಿಕೊಂಡು ಸಾಕಷ್ಟು ಲಾಭ ಮಾಡಿಕೊಂಡರೆ.. ಅತ್ತ ನಟಿ ಅಮೃತಾ ಅಯ್ಯಂಗಾರ್ ಲವ್ ಮಾಕ್ಟೈಲ್ ನಂತರ ಬಡವ ರಾಸ್ಕಲ್ ಸಿನಿಮಾದಲ್ಲಿ ಮಿಂಚಿ ಯಶಸ್ಸು ಪಡೆದಿದ್ದ ಮತ್ತಷ್ಟು ಸಿನಿಮಾಗಳಲ್ಲಿ ಅವಕಾಶ ಒದಗಿ ಬರುತ್ತಿದೆ. ಇನ್ನು ಈ ನಡುವೆ ಧನಂಜಯ್ ಹಾಗೂ ಅಮೃತಾ ಅವರ ಮದುವೆ ವಿಚಾರ ಸಾಕಷ್ಟು ಸುದ್ದಿ ಮಾಡಿತ್ತು.. ಈ ಬಗ್ಗೆ ಇದೀಗ ಖುದ್ದು ನಟಿ ಅಮೃತಾ ಅಯ್ಯಂಗಾರ್ ಅವರೇ ಮಾದ್ಯಮದ ಮುಂದೆ ವಿಚಾರ ತಿಳಿಸಿದ್ದಾರೆ..

ಹೌದು ಅಮೃತಾ ಅಯ್ಯಂಗಾರ್ ಲವ್ ಮಾಕ್ಟೈಲ್ ಸಿನಿಮಾ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡವರು.. ಆನಂತರದಲ್ಲಿ ಧನಂಜಯ್ ಅವರ ಜೊತೆಯೇ ಮತ್ತೊಂದು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.. ಆ ಬಳಿಕ ಮತ್ತೆ ಧನಂಜಯ್ ಅವರಿಗೆ ಜೋಡಿಯಾಗಿ ಬಡವ ರಾಸ್ಕಲ್ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿ ಸಧ್ಯ ಹಿಟ್ ಜೋಡಿ ಯಾಗಿದ್ದಾರೆ.. ಈ ಹಿಂದೆ ಬಡವ ರಸ್ಕಲ್ ಸಿನಿಮಾ ಚಿತ್ರೀಕರಣದ ಸಮಯದಿಂದಲೂ ಧನಂಜಯ್ ಹಾಗೂ ಅಮೃತಾ ಅವರು ಮದುವೆಯಾಗುತ್ತಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಆಗಾಗ ಕೇಳಿ ಬರುತಿತ್ತು.. ಆದರೆ ಧನಂಜಯ್ ಅವರಿಂದಾಗಲಿ ಅಥವಾ ಅಮೃತಾ ಅವರಾಗಲಿ ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ.. ಧನಂಜಯ್ ಅವರೇ ಸಿನಿಮಾಗೆ ಬಂಡವಾಳ ಹೂಡಿದ್ದರು.. ಇತ್ತ ಕೊರೊನಾದಿಂದ ಸಿನಿಮಾ ಚಿತ್ರೀಕರಣ ನಿಂತಿತ್ತು.. ಸಧ್ಯ ಸಿನಿಮಾ ಮುಗಿದು ಬಿಡುಗಡೆಯಾದರೆ ಸಾಕೆನ್ನುವಂತಾಗಿತ್ತು..

ಅಂದುಕೊಂಡಂತೆ ಕಳೆದ ತಿಂಗಳು ಸಿನಿಮಾ ಬಿಡುಗಡೆ ಮಾಡಿ ಸಧ್ಯ ಐವತ್ತು ದಿನಗಳ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಬಾಕ್ಸ್ ಆಫೀಸಿನಲ್ಲಿಯೂ ಸದ್ದು ಮಾಡಿದೆ.. ಇತ್ತ ಧನಂಜಯ್ ಅವರು ಸಿಕ್ಕಾಪಟ್ಟೆ ಹ್ಯಾಪಿಯಾಗಿದ್ದಾರೆನ್ನಬಹುದು.. ಇದರ ಜೊತೆಗೆ ಮೊನ್ನೆ ಮೊನೆಯಷ್ಟೇ ಗೋಲ್ಡನ್ ಗ್ಯಾಂಗ್ ಶೋ ನಲ್ಲಿ ಧನಂಜಯ್ ಅವರು ಅಮೃತಾ ಅವರಿಗೆ ಸ್ವಂತವಾಗಿ ಕವಿತೆ ಬರೆದು ಬಹಳ ಅರ್ಥಪೂರ್ಣವಾಗಿ ಪ್ರಪೋಸ್ ಮಾಡಿದ್ದರು.. ಆ ವೀಡಿಯೋ ಬಿಡುಗಡೆಯಾಗುತ್ತಿದ್ದಂತೆ ಅಮೃತಾ ಹಾಗೂ ಧನಂಜಯ್ ಅವರಿಗೆ ಸಾಕಷ್ಟು ಮಂದಿ ಶುಭಾಶಯ ತಿಳಿಸಿ ಹೊಸ ಜೀವನಕ್ಕೆ ಶುಭ ಹಾರೈಸಿದ್ದರು..

ಇಬ್ಬರು ಮದುವೆಯಾಗಲಿದ್ದಾರೆ.. ಇಬ್ಬರ ನಡುವೆ ಪ್ರೀತಿ ಇರುವುದು ಖಚಿತ ಎಂದೆಲ್ಲಾ ಸುದ್ದಿಯಾಗಿತ್ತು.. ಆದರೆ ಆಗಲೂ ಸಹ ಧನಂಜಯ್ ಆಗಲಿ ಅಥವಾ ಅಮೃತಾ ಆಗಲಿ ಎಲ್ಲಿಯೂ ಈ ಬಗ್ಗೆ ಪ್ರತಿಕ್ರಿಯೆ ನೀಡಲಿಲ್ಲ.. ಆದರೀಗ ಮಾದ್ಯಮದ ಸುದ್ಧಿಗೋಷ್ಟಿಯೊಂದರಲ್ಲಿ ಅಮೃತಾ ಧನಂಜಯ್ ಅವರ ಬಗ್ಗೆ ಮಾತನಾಡಿದ್ದಾರೆ‌‌.. ಹೌದು ಲವ್ ಮಾಕ್ಟೈಲ್ 2 ಸಿನಿಮಾದ ಟ್ರೈಲರ್ ನಿನ್ನೆ ಬಿಡುಗಡೆಯಾಗಿದ್ದು ನಂಬರ್ ಒನ್ ಟ್ರೆಂಡಿಂಗ್ ನಲ್ಲಿದೆ.. ಲವ್ ಮಾಕ್ಟೈಲ್ ಸಕ್ಸಸ್ ನಂತರ ತಯಾರಾದ ಎರಡನೇ ಭಾಗ ಬಿಡುಗಡೆಗೆ ಸಜ್ಜಾಗಿದ್ದು ಸಧ್ಯ ಟ್ರೈಲರ್ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದ್ದು ಸಧ್ಯದಲ್ಲಿಯೇ ಸಿನಿಮಾ ಬಿಡುಗಡೆಯಾಗಲಿದೆ.. ಇನ್ನು ಇದೇ ಸಂತೋಷಕ್ಕೆ ಸುದ್ಧಿಗೋಷ್ಟಿ ಕರೆದು ಚಿತ್ರತಂಡ ಮಾತನಾಡಿತ್ತು.. ಅದೇ ಸಮಯದಲ್ಲಿ ಲವ್ ಮಾಕ್ಟೈಲ್ 2 ನಲ್ಲಿ ಅಭಿನಯಿಸಿರುವ ನಟಿ ಅಮೃತಾ ಮಾದ್ಯಮದ ಮುಂದೆ ತಮ್ಮ ಮದುವೆ ವಿಚಾರವನ್ನೂ ಸಹ ಮಾತನಾಡಿದ್ದಾರೆ..

ಹೌದು ಗೋಲ್ಡನ್ ಗ್ಯಾಂಗ್ ಶೋನಲ್ಲಿ ಧನಂಜಯ್ ಅವರು ನಿಮಗೆ ಪ್ರಪೋಸ್ ಮಾಡಿದ್ದಾರೆ.. ಈ ಬಗ್ಗೆ ಏನು ಪ್ರತಿಕ್ರಿಯೆ ನೀಡುವಿರಿ ಎಂದು ಕೇಳಿದಾಗ ಉತ್ತರಿಸಿದ ನಟಿ “ಜೀ ಕನ್ನಡದವರು ಮೊದಲು ಪ್ರೋಮೋ ಕಟ್ ಮಾಡಿದಾಗ ನನಗೆ ಬಹಳಷ್ಟು ಜನರು ಫೋನ್ ಮಾಡಿ ಶುಭಾಶಯ ತಿಳಿಸಿದ್ರು.. ಆದರೆ ಆ ಶೋನಲ್ಲಿ ನಡೆದದ್ದೇ ಬೇರೆ.. ಅವತ್ತು ಶೋನಲ್ಲಿ ಗಣೇಶ್ ಅವರು ಧನಂಜಯ್ ಯಾವುದಾದರು ಒಂದರಲ್ಲಿ ಲ್ಯಾಗ್ ಇರ್ತಾರೆ ಅದು ಏನು ಅಂತ ಕೇಳಿದ್ರು.. ಆಗ ನಾನು ಸಿನಿಮಾದಲ್ಲಿ ರೊಮ್ಯಾಂಟಿಕ್ ಸೀನ್ ಗಳಲ್ಲಿ ಅಭಿನಯಿಸುವಾಗ ಅವರು ಬಹಳ ನಾಚಿಕೊಳ್ತಿದ್ರು ಅಂತ ಹೇಳಿದೆ.. ಆ ಕಾರಣಕ್ಕೆ ಅವತ್ತು ಈಗ ಸೀರಿಯಸ್ ಆಗಿ ಪ್ರಪೋಸ್ ಮಾಡೋ ಒಂದು ಟಾಸ್ಕ್ ಕೊಡೋಣ ಅಂತ ಕೊಟ್ರು.. ಆಗ ಧನಂಜಯ್ ಅವರು ಪ್ರಪೋಸ್ ಮಾಡಿದ್ರು ಅಷ್ಟೇ..

ಅದೊಂದು ಟಾಸ್ಕ್ ಆಗಿತ್ತು ಅಷ್ಟೇ.. ಆದರೆ ಪ್ರೋಮೋ ಯಾವ ರೀತಿ ಕಟ್ ಆಗಿತ್ತು ಅಂದ್ರೆ ನಿಜವಾಗಿಯೂ ಪ್ರಪೋಸ್ ಮಾಡಿದ ರೀತಿ ಇತ್ತು.. ಬಹಳಷ್ಟು ಸಂಬಂಧಿಕರೆಲ್ಲಾ ಫೋನ್ ಮಾಡಿದ್ರು.. ನಾನು ಈಗ ತಾನೆ ಕೆರಿಯರ್ ಶುರು ಮಾಡ್ತಾ ಇದ್ದೀನಿ.. ಆತರ ಏನು ಇಲ್ಲ.. ಇವಾಗ ಇನ್ನೂ ಕಣ್ಣು ಬಿಡ್ತಾ ಇದ್ದೀನಿ.. ಆತರ ಏನೇ ಇದ್ರೂ ನನ್ನ ಕಡೆಯಿಂದಾನೆ ಅಧಿಕೃತವಾಗಿ ತಿಳಿಸ್ತೀನಿ.. ಅದು ವೇದಿಕೆ ಮೇಲೆ ನಡೆದ ಒಂದು ಟಾಸ್ಕ್ ಅಷ್ಟೇ.. ನನಿಗೆ ಅವತ್ತು ಶಾಕ್ ಆಯ್ತು.. ಸಿನಿಮಾದಲ್ಲಿಯೇ ಅಷ್ಟು ಚೆನ್ನಾಗಿ ಮಾಡಿರ್ಲಿಲ್ಲ.. ಆದರೆ ಟಾಸ್ಕ್ ನ ಸೀರಿಯಸ್ ಆಗಿ ತಗೊಂಡು ಇಷ್ಟು ಚೆನ್ನಾಗಿ ಮಾಡಿದ್ರಲ್ಲಾ ಅಂತ ಅನಿಸ್ತು.. ಆಮೇಲೆ ಶೋ ನೋಡಿದ್ರೆ ಗೊತ್ತಾಗತ್ತೆ.. ಅಲ್ಲಿ ಫನ್ ತರಬೇಕಿತ್ತು ಅಷ್ಟೇ.. ನಾನು ಚಿತ್ರಾನ್ನ ಮಾಡಿಕೊಡ್ತೀನಿ ಅಂತೆಲ್ಲಾ ಡಂಬ್ ಆಗಿ ಹೇಳಿದ್ದೀನಿ.. ಅದೆಲ್ಲಾ ಟಾಸ್ಕ್ ಅಷ್ಟೇ ಎಂದಿದ್ದಾರೆ..