ಬಡವ ರಾಸ್ಕಲ್ ಸಿ‌ನಿಮಾವನ್ನು ಬೇರೆ ಭಾಷೆಯಲ್ಲಿ ಬಿಡುಗಡೆ ಮಾಡದ ಧನಂಜಯ್.. ಕಾರಣವೇನು ಗೊತ್ತಾ.. ಎಲ್ಲಾದಕ್ಕೂ ಕಾರಣ ಹಣ ಸ್ವಾಮಿ..

0 views

ಸ್ಯಾಂಡಲ್ವುಡ್ ನ ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಸಿನಿಮಾ ಕಳೆದ ವಾರ ರಾಜ್ಯಾದ್ಯಂತ ಬಿಡುಗಡೆಯಾಗಿ ಅದ್ಭುತ ಯಶಸ್ಸನ್ನು‌ ಕಂಡಿದ್ದು ರಾಜ್ಯಾದ ಬಹುತೇಕ ಎಲ್ಲಾ ಥಿಯೇಟರ್ ಗಳೂ ಸಹ ಭರ್ತಿ ಯಾಗಿದ್ದು ಹೌಸ್ ಫುಲ್ ಬೋರ್ಡ್ ಬಿದ್ದಿದೆ.. ಮಧ್ಯಮ ವರ್ಗದ ಕುಟುಂಬದ ಹುಡುಗನ ಲವ್ ಬ್ರೇಕಪ್ ಸ್ನೇಹಿತರ ಒಡನಾಟ ಹೀಗೆ ಬಡವ ರಾಸ್ಕಲ್ ಸಿನಿಮಾ ನಮ್ಮೊಳಗೊಬ್ಬ ಅಥವಾ ನಮ್ಮದೇ ಕತೆ ಎಂಬ ಭಾವನೆ ಮೂಡುವುದು ಸಿನಿಮಾದ ಪ್ಲಸ್ ಪಾಯಿಂಟ್ ಆಗಿದ್ದು ಸಿ‌ನಿಮಾದ ಹಾಡುಗಳು ಚಿತ್ರದ ಸಕ್ಸಸ್ ಗೆ ಮತ್ತೊಂದು ಕಾರಣವಾಗಿದೆ.. ಇನ್ನು ಇತ್ತ ರತ್ನನ್ ಪ್ರಪಂಚ ಸಿನಿಮಾದ ನಂತರ ಮತ್ತೊಂದು ಒಳ್ಳೆಯ ಕತೆ ಆಧಾರಿತ ಸಿನಿಮಾದಲ್ಲಿ ಧನಂಜಯ್ ಅವರು ಕಾಣಿಸಿಕೊಂಡಿದ್ದು ತಮ್ಮ ಡಾಲಿ ಅವತಾರವನ್ನು ಮರೆಸಿ ಒಂದೊಳ್ಳೆ ಕಥಾ ನಾಯಕನ ಇಮೇಜ್ ಅನ್ನು ಈ ಸಿ‌ನಿಮಾ ತಂದುಕೊಡುತ್ತಿದೆ..

ಇನ್ನು ವಿಶೇಷ ಎಂದರೆ ಎಲ್ಲರಿಗೂ ತಿಳಿದಿರುವಂತೆ ಈ ಸಿನಿಮಾದ ನಿರ್ಮಾಪಕ ಧನಂಜಯ್ ಅವರೇ.. ಹೌದು ಸಾಕಷ್ಟು ವರ್ಷಗಳ ಕಾಲ ಕಷ್ಟಪಟ್ಟು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಿದ ಧನಂಜಯ್ ಇದೀಗ ಒಂದು ಸಿನಿಮಾ ನಿರ್ಮಾಣ ಮಾಡುವ ಹಂತಕ್ಕೆ ಬಂದು ನಿಂತರೆಂದರೆ ನಿಜಕ್ಕೂ ಇದು ಮೆಚ್ಚುವ ವಿಚಾರ.. ಒಂದು ಕಡೆ ವಿಲನ್ ಪಾತ್ರಗಳಲ್ಲಿ ಮಿಂಚುತ್ತಾ ಪರಭಾಷೆಗಳಲ್ಲಿಯೂ ಅದರಲ್ಲೂ ಅಲ್ಲಿನ ಸೂಲರ್ ಸ್ಟಾರ್ ಗಳ ಸಿನಿಮಾದಲ್ಲಿ ಅವಕಾಶ ಪಡೆಯುತ್ತಿರುವ ಧನಂಜಯ್ ಇದೀಗ ಸ್ಯಾಂಡಲ್ವುಡ್ ನಲ್ಲಿ ತಮ್ಮದೇ ಆದ ಡಾಲಿ ಫಿಲಂಸ್ ಎಂಬ ನಿರ್ಮಾಣ ಸಂಸ್ಥೆ ತೆರೆದು ಮೊದಲ ಸಿನಿಮಾ ಬಡವ ರಾಸ್ಕಲ್ ಅದೂ ಸಹ ಕತೆಯಾಧಾರಿತ ಸಿನಿಮಾವನ್ನು‌ ನಿರ್ಮಾಣ ಮಾಡಿ ತಾವೇ ಹೀರೋ ಆಗಿಯೂ ಅಭಿನಯಿಸಿ ಸಕ್ಸಸ್ ಕಂಡಿದ್ದಾರೆ..

ಅತ್ತ ಅಲ್ಲು ಅರ್ಜುನ್ ಅವರ ಪುಷ್ಪ ಸಿನಿಮಾದಲ್ಲಿಯೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಧನಂಜಯ್ ಅವರು ಬೇರೆ ಭಾಷೆಗಳಲ್ಲಿಯೂ ಹೆಸರು ಮಾಡಿದ್ದಾರೆ.. ಆದರೆ ಇಂತಹ ಸಮಯದಲ್ಲಿ ತಾವೇ ನಿರ್ಮಾಣ ಮಾಡಿರುವ ಕನ್ನಡದ ಸಿನಿಮಾ ಬಡವ ರಾಸ್ಕಲ್ ಅನ್ನು ಬೇರೆ ಭಾಷೆಯಲ್ಲಿ ಏಕೆ ಬಿಡುಗಡೆ ಮಾಡಲಿಲ್ಲ ಎಂದು ಆಶ್ವರ್ಯವಾಗೋದು ಸಹಜ.. ಆದರೆ ಇದಕ್ಕೆಲ್ಲಾ ನಿಜವಾದ ಕಾರಣ ಬೇರೆಯೇ ಇದೆ..ಹೌದು ಧನಂಜಯ್ ಅವರು ಈ ಸಿನಿಮಾವನ್ನು ಕೊರೊನಾ ಲಾಕ್ ಡೌನ್ ಗೂ ಮುಂಚೆಯೇ ಎರಡು ವರ್ಷದ ಹಿಂದೆಯೇ ನಿರ್ಮಾಣ ಮಾಡಲು ಶುರು ಮಾಡಿದರು.. ಆದರೆ ನಂತರದಲ್ಲಿ‌ ಕೊರೊನಾ ಅದು ಇದು ಅಂತ ಸಾಕಷ್ಟು ಅಡೆತಡೆಗಳು ಬಂದವು.. ಅದೆಲ್ಲವನ್ನು ದಾಟಿ ಸಧ್ಯ ಸಿನಿಮಾವನ್ನು ಕರ್ನಾಟಕದಲ್ಲಿ ಮಾತ್ರ ಬಿಡುಗಡೆ ಮಾಡಿ ಯಶಸ್ಸು ಕಂಡರು..

ಆದರೆ ಎಲ್ಲರಿಗೂ ತಿಳಿದಂತೆ ಕೆಲವೇ ವರ್ಷಗಳ ಹಿಂದೆ ಸಿನಿಮಾ ಇಂಡಸ್ಟ್ರಿಯಲ್ಲಿ ಹೀರೋ ಆಗಲು ಬಂದ ಧನಂಜಯ್ ಅವರು ಒಂದೊಂದು ರೂಪಾಯಿಗೂ ಕಷ್ಟ ಪಟ್ಟಿದ್ದರು.. ಕೆಲ ಸಿನಿಮಾಗಳಲ್ಲಿ ಹೀರೋ ಆಗಿ ಅಭಿನಯಿಸಿದರೂ ಸಹ ದೊಡ್ಡ ಮಟ್ಟದ ಯಶಸ್ಸನ್ನು ತಂದು ಕೊಡಲಿಲ್ಲ.. ಕೊ‌ನೆಗೆ ಟಗರು ಸಿ‌ನಿಮಾದ ಡಾಲಿ ಪಾತ್ರದಲ್ಲಿ ಮಿಂಚಿ ದೊಡ್ಡ ಮಟ್ಟದ ಯಶಸ್ಸು ಪಡೆದರು.. ಸಿನಿಮಾದಲ್ಲಿ ಒಂದೊಂದೆ ಹೆಜ್ಜೆ ಇಟ್ಟಿದ್ದು ಮಾತ್ರವಲ್ಲ ಒಂದೊಂದೇ ರೂಪಾಯಿಯನ್ನೂ ಸಹ ಕೂಡಿಟ್ಟು ಬಂದರು.. ಕೊನೆಗೆ ತಾನು ಕಷ್ಟದಲ್ಲಿದ್ದಾಗ ತನ್ನ ಜೊತೆ ಕಷ್ಟ ಪಟ್ಟ ತನ್ನ ಸ್ನೇಹಿತರು ಸಾಕಷ್ಟು ಪ್ರತಿಭೆಗಳನ್ನೇ ಹಾಕಿಕೊಂಡು ಸಿನಿಮಾವೊಂದನ್ನು ನಿರ್ಮಾಣ ಮಾಡುವ ನಿರ್ಧಾರ ಮಾಡಿದರು..

ಆ ಸಿನಿಮಾನೇ ಬಡವ ರಾಸ್ಕಲ್.. ತಾನು ಕೂಡಿಟ್ಟ ಹಣದ ಜೊತೆಗೆ ಒಂದಷ್ಟು ಹಣವನ್ನು ಸಾಲವಾಗಿ ತಂದು ಸಿನಿಮಾ ನಿರ್ಮಾಣ ಮಾಡಿದರು.. ಆದರೆ ಬೇರೆ ಭಾಷೆಗಳಲ್ಲಿ ಯಾಕೆ ಬಿಡುಗಡೆ ಮಾಡಲಿಲ್ಲ ಎಂಬ ಪ್ರಶ್ನೆಗೆ ನೇರವಾಗಿ ಉತ್ತರಿಸಿದ್ದಾರೆ ಧನಂಜಯ್.. ಹೌದು ಇದೆಲ್ಲದಕ್ಕೂ ಕಾರಣ ಹಣ.. ಬೇರೆ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಮಾಡಬೇಕೆಂದರೆ ಅದು ನಾವು ಇಲ್ಲಿ ಮಾತನಾಡುವಷ್ಟು ಸುಲಭವಲ್ಲ.. ಅಲ್ಲಿನ ಡಿಸ್ಟ್ರಿಬ್ಯೂಟರ್ ಗಳಿಗೆ ಅಲ್ಲಿನ ಥಿಯೇಟರ್ ಗಳಿಗೆ ಕೇಳಿದಷ್ಟು ಹಣ ನೀಡಬೇಕು. ಅದೂ ಸಹ ಕೋಟಿಗಳ ಲೆಕ್ಕದಲ್ಲಿ ಇರುತ್ತದೆ.. ಇತ್ತ ಪೈಸೆ ಪೈಸೆ ಕೂಡಿಸಿ ಸಿನಿಮಾ ಮಾಡಿದ್ದ ಧನಂಜಯ್ ಅವರಿಗೆ ಆ ಶಕ್ತಿಯೂ ಇರಲಿಲ್ಲ.. ಹಾಗೆಯೇ ಆ ಸಾಹಸಕ್ಕೂ ಕೈ ಹಾಕಲಿಲ್ಲ.. ಇರೋದರಲ್ಲಿ ತೃಪ್ತಿ ಪಡೋಣವೆಂದರು..

ಹೌದು.. ಬೇರೆ ಭಾಷೆಗಳ ಹಂಚಿಕೆದಾರರಿಗೆ ಕೋಟಿಗಟ್ಟಲೆ ಹಣ ಕೊಟ್ಟು ಅಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುವಷ್ಟು ಶಕ್ತಿ ನನ್ನಲಿಲ್ಲ.. ಅದಕ್ಕಿಂತ ಹೆಚ್ಚಾಗಿ ಮೊದಲು ನಮ್ಮ ಜಾಗದಲ್ಲಿ ನಮ್ಮ ನೆಲದಲ್ಲಿ ನಮ್ಮ ಬೇರನ್ನು ಗಟ್ಟಿಯಾಗಿ ಇಡಬೇಕು.. ಅದಕ್ಕೆ ನಮಗೆ ಸಧ್ಯಕ್ಕೆ ಕನ್ನಡವೇ ಸಾಕು.. ಕನ್ನಡದಲ್ಲಿ‌ ಮೊದಲು ಗಟ್ಟಿಯಾಗಿ ನಿಲ್ಲೋಣ.. ಆಮೇಲೆ ಮಿಕ್ಕಿದ್ದು.. ಬೇರೆ ಭಾಷೆಯಲ್ಲಿ ಅವಕಾಶ ಸಿಕ್ಕಾಗ ಅಭಿನಯಿಸಿ ಬರೋಣ.. ಸಾಕು.. ಎಂದು ಸ್ವಲ್ಪವೂ ಹಿಂಜರಿಕೆ ಇಲ್ಲದೇ ಇರೋದನ್ನು ಇದ್ದಂಗೆ ಹೇಳಿಕೊಂಡರು.. ಇನ್ನು ನಮ್ಮ ಕನ್ನಡದ ಹುಡುಗನ ನಿರ್ಮಾಣದ ಸಿನಿಮಾ ಬಡವ ರಾಸ್ಕಲ್ ಗೆ ಶುಭವಾಗಲಿ.. ಮತ್ತಷ್ಟು ಸಿನಿಮಾಗಳು ಡಾಲಿ ಫಿಲಂಸ್ ನಿಂದ ನಿರ್ಮಾಣವಾಗುವಂತಾಗಲಿ.. ಮತಷ್ಟು ಪ್ರತಿಭೆಗಳಿಗೆ ಅವಕಾಶ ಸಿಗಲಿ..