ದೊಡ್ಮನೆಯ ಮಗಳು ಧನ್ಯಾ ರಾಮ್ ಕುಮಾರ್ ವಿಚಾರವಾಗಿ ಹೊರ ಬಂತು ಸಿಹಿ ಸುದ್ದಿ..

0 views

ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್ ಕುಮಾರ್.. ಸ್ಯಾಂಡಲ್ವುಡ್ ನಲ್ಲಿ ದೊಡ್ಮನೆ ಎಂದೇ ಕರೆಯುವ ಅಣ್ಣಾವ್ರ ಕುಟುಂಬದ ಕುಡಿ ರಾಜ್ ಕುಮಾರ್ ಅವರ ಮೊಮ್ಮಗಳು, ನಟ ರಾಮ್ ಕುಮಾರ್ ಅವರ ಮಗಳು ಧನ್ಯಾ ರಾಮ್ ಕುಮಾರ್ ಅವರ ವಿಚಾರವಾಗಿ ಇದೀಗ ಸಿಹಿ ಸುದ್ದಿಯೊಂದು ಹೊರ ಬಂದಿದೆ.. ಹೌದು ಕನ್ನಡ ಚಿತ್ರರಂಗದ ಖ್ಯಾತಿಯನ್ನು ಆಕಾಶದ ಎತ್ತರಕ್ಕೆ ಹಾರಿಸಿದ ಖ್ಯಾತಿ ಡಾ. ರಾಜ್ ಕುಮಾರ್ ಅವರದ್ದು. ಇನ್ನು ರಾಜ್ ಕುಮಾರ್ ಅವರ ನಂತರ ದೊಡ್ಮನೆ ಶಿವಣ್ಣ ರಾಘಣ್ಣ ಅಪ್ಪು ವಿನಯ್ ರಾಜ್ ಕುಮಾರ್ ಇದೀಗ ಯುವ ರಾಜ್ ಕುಮಾರ್ ಹೀಗೆ ಸಾಕಷ್ಟು ಮಂದಿ ಚಿತ್ರರಂಗಕ್ಕೆ ಕಾಲಿಟ್ಟು ತಮ್ಮ ನಟನೆಯ ಮೂಲಕವೇ ಸ್ಟಾರ್ ಪಟ್ಟ ಪಡೆದುಕೊಂಡವರು.. ಇನ್ನು ದೊಡ್ಮನೆಯಿಂದ ಹೆಣ್ಣು ಮಕ್ಕಳು ಯಾರೂ ಸಹ ಚಿತ್ರರಂಗಕ್ಕೆ ಕಾಲಿಟ್ಟಿರಲಿಲ್ಲ.. ಅಂಡಮಾನ್ ಸಿನಿಮಾದಲ್ಲಿ ಶಿವಣ್ಣನ ಪುತ್ರಿ ಬಾಲ ಕಲಾವಿದೆಯಾಗಿ ಶಿವಣ್ಣನ ಮಗಳ ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡಿದ್ದರಷ್ಟೇ.. ಆದರೆ ಆ ಬಳಿಕ ಮತ್ಯಾರೂ ಚಿತ್ರರಂಗದ ಕಡೆ ಮುಖ ಮಾಡಿರಲಿಲ್ಲ.. ಆದರೆ ಆನಂತರ ಕೆಲ ವರ್ಷಗಳ ಹಿಂದೆ ರಾಮ್ ಕುಮಾರ್ ಅವರ ಮಗಳು ಧನ್ಯಾ ರಾಮ್ ಕುಮಾರ್ ಚಿತ್ರರಂಗಕ್ಕೆ ಕಾಲಿಡುವ ನಿರ್ಧಾರ ಮಾಡಿ ಸಕಲ ತಯಾರಿ ನಡೆಸಿ ನಿನ್ನ ಸನಿಹಕೆ ಸಿನಿಮಾ ಮೂಲಕ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ನೀಡಿದರು..

ಧನ್ಯಾ ರಾಮ್ ಕುಮಾರ್ ಅವರಿಗೆ ದೊಡ್ಮನೆಯ ಶಿವಣ್ಣ ರಾಘಣ್ಣ ಅಪ್ಪು ಎಲ್ಲರೂ ಸಹ ಸಾಥ್ ನೀಡಿದ್ದರು.. ಸಿನಿಮಾ ಯಶಸ್ವಿಯೂ ಆಯಿತು.. ಹೌದು ವರನಟ ಡಾ. ರಾಜ್ ಕುಮಾರ್ ಅವರ ಮೊಮ್ಮಕ್ಕಳು ಸಹ ಒಬ್ಬೊಬ್ಬರಾಗಿ ಸಿನಿಮಾರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಇದೀಗ ರಾಜ್ ಕುಮಾರ್ ಅವರ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ಈಗಾಗಲೇ ಸಿನಿಮಾರಂಗಕ್ಕೆ ಎಂಟ್ರಿ ನೀಡಿದ್ದು, ತಮ್ಮ ಮೊದಲ ಸಿನಿಮಾದ ಮೂಲಕವೇ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಹೌದು ಡಾ. ರಾಜ್ ಕುಮಾರ್ ಅವರ ಮೊಮ್ಮಗಳು, ಹಾಗೂ ಒಂದು ಕಾಲದಲ್ಲಿ ಕನ್ನಡದ ಟಾಪ್ ನಟರಲ್ಲಿ ಒಬ್ಬರಾಗಿದ್ದ ರಾಮ್ ಕುಮಾರ್ ಹಾಗೂ ಪೂರ್ಣಿಮಾ ದಂಪತಿಯ ಮಗಳು ಧನ್ಯ ರಾಮ್ ಕುಮಾರ್. ಇನ್ನು ಧನ್ಯ ರಾಮ್ ಕುಮಾರ್ ಅವರಿಗೆ ಒಬ್ಬ ಸಹೋದರನಿದ್ದು, ಅವರು ಕೂಡ ಸಿನಿಮಾರಂಗಕ್ಕೆ ಸೇರಿದವರು. ಧನ್ಯ ರಾಮ್ ಕುಮಾರ್ ಅವರ ಸಹೋದರನ ಹೆಸರು ಧಿರೀನ್ ರಾಮ್ ಕುಮಾರ್.

ನಟಿ ಧನ್ಯ ರಾಮ್ ಕುಮಾರ್ ಅವರು ಕನ್ನಡದ ನಿನ್ನ ಸನಿಹಕೆ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಈ ಸಿನಿಮಾದ ಮೂಲಕ ತಮ್ಮ ನಟನೆಯ ನಟಿ ಧನ್ಯ ರಾಮ್ ಕುಮಾರ್ ತಾನೊಬ್ಬಳು ಉತ್ತಮ ಕಲಾವಿದೆ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಇನ್ನು ವಿಶೇಷ ಏನು ಎಂದರೆ ಡಾ ರಾಜ್ ಕುಮಾರ್ ಅವರ ಮನೆಯಿಂದ ಹೊರಬಂದ ಮೊದಲ ನಟಿ ಧನ್ಯ ರಾಮ್ ಕುಮಾರ್. ನಿನ್ನ ಸನಿಹಕೆ ಸಿನಿಮಾದಲ್ಲಿನ ಅವರ ನಟನೆಗೆ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಿನಿಮಾದ ಯಶಸ್ಸಿನ ನಂತರ ಧನ್ಯ ಅವರಿಗೆ ಕೆಲವು ಸಿನಿಮಾಗಳ ಅವಕಾಶಗಳು ಸಹ ಹುಡುಕಿಕೊಂಡು ಬಂದಿದೆ ಎನ್ನಲಾಗಿದೆ.. ಇನ್ನು ವಿಶೇಷ ಎಂದರೆ ಇದೀಗ ಧನ್ಯ ರಾಮ್ ಕುಮಾರ್ ಪರಭಾಷಾ ಸಿನಿಮಾಗಳಲ್ಲಿಯೂ ಕಾಲಿಡುತ್ತಿದ್ದಾರೆ.. ಹೌದು ಕನ್ನಡದ ಜೊತೆಗೆ ಬೇರೆ ಬಾಷೆಗಳ ಸಿನಿಮಾಗಳ ಅವಕಾಶಗಳು ಸಹ ನಟಿ ಧನ್ಯ ಅವರಿಗೆ ಬರುತ್ತಿದೆ.

ನಟಿ ಧನ್ಯ ರಾಮ್ ಕುಮಾರ್ ಸಧ್ಯ ಎಲ್ಲಾ ಸಿನಿಮಾಗಳ ಕಥೆ ಕೇಳಿ ತಮಗೆ ಸೂಕ್ತವಾದ ಸಿನಿಮಾಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದು.. ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಲು ಸಾಕಷ್ಟು ತಯಾರಿ ನಡೆಸಿದಂತೆ ಕಾಣುತ್ತಿದೆ… ಹೌದು ಕನ್ಮಡದಿಂದ ಇತರ ಭಾಷೆಗಳಿಗೆ ಕಾಲಿಟ್ಟು ದೊಡ್ಡ ದೊಡ್ಡ ನಟಿಯರಾಗಿರೋದು ಹೊಸ ವಿಚಾರವೇನೂ ಅಲ್ಲ.. ಇದೀಗ ನಟಿ ಧನ್ಯ ಅವರೂ ಸಹ ತೆಲುಗಿಗೆ ಕಾಲಿಡುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.. ಹೌದು ಧನ್ಯಾ ಅವರಿಗೆ ತೆಲುಗು ಹಾಗೂ ತಮಿಳು ಬಾಷೆಗಳಿಂದ ಸಿನಿಮಾ ಅವಕಾಶಗಳು ಬಂದಿದ್ದು ಈ ಸಿನಿಮಾಗಳಲ್ಲಿ ತನಗೆ ಸೂಕ್ತವಾದ ಎರಡು ಸಿನಿಮಾಗಳನ್ನು ನಟಿ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.. ನಟಿ ಒಂದಿಷ್ಟು ಸಿನಿಮಾಗಳ ಕಥೆ ಕೇಳಿ, ಅವರ ಮನಸ್ಸಿಗೆ ಆ ಕಥೆ ಇಷ್ಟವಾಗಿ ಆ ಸಿನಿಮಾಗಳನ್ನು ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ಶೀಘ್ರದಲ್ಲೇ ನಟಿ ತೆಲುಗು ಹಾಗೂ ತಮಿಳು ಸಿನಿಮಾರಂಗಕ್ಕೆ ಎಂಟ್ರಿ ನೀಡುತ್ತಿದ್ದು, ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

ನಟಿ ಧನ್ಯ ರಾಮ್ ಕುಮಾರ್ ಈಗಾಗಲೇ ಕೆಲ ಸಿನಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಶೀಘ್ರದಲ್ಲೇ ಸಿನಿಮಾಗಳ ಕುರಿತು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಲಿದೆ ಎನ್ನಲಾಗುತ್ತಿದೆ.. ಇನ್ನು ನಟಿ ಕನ್ನಡದಲ್ಲಿ ಸಹ ನಿನ್ನ ಸನಿಹಕೆ ನಂತರ ಕಾಲಾಪತ್ಥರ್ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು ಈ‌ಸಿನಿಮಾದ ಬಳಿಕ ತೆಲುಗು ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ.. ಇನ್ನು ಕೆಲವೇ ದಿನಗಳಲ್ಲಿ ಆ ಸಿನಿಮಾಗಳ ಬಗ್ಗೆಯೂ ಸಹ ಮಾಹಿಟಿ ಹಂಚಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಈ ತಮ್ಮ ಸಿನಿಮಾ ಜರ್ನಿಯ ಬಗ್ಗೆ ಮಾತನಾಡಿರುವ ಧನ್ಯಾ ಈ ಎಲ್ಲಾ ವಿಚರಾಗಳನ್ನು ಹಂಚಿಕೊಂಡಿದ್ದು ಡಾ ರಾಜ್ ಕುಮಾರ್ ಅವರ ಹೆಸರು ತುಂಬಾ ದೊಡ್ಡದ್ದು, ನಾನು ಆ ಹೆಸರನ್ನು ಉಳಿಸಬೇಕು ಎಂದಿದ್ದಾರೆ ನಟಿ ಧನ್ಯ ರಾಮ್ ಕುಮಾರ್.