ಅಣ್ಣನ ಮಗು ಮನೆಗೆ ಬರುವವರೆಗೂ ಈ ಕೆಲಸ ಬೇಡ ಎಂದಿದ್ದ ಧೃವ ಸರ್ಜಾರಿಂದ ಇದೀಗ ಹೊಸ ಸಿಹಿ ಸುದ್ದಿ..

0 views

ಧೃವ ಸರ್ಜಾ ಸದ್ಯ ಅಣ್ಣನ ಮಗು ಆಗಮನದ ಸಂತೋಷದಲ್ಲಿರುವ ಧೃವ ಹೊಸದೊಂದು ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.. ಹೌದು ಕಳೆದ 5 ತಿಂಗಳಿನಿಂದ ಸರ್ಜಾ ಮನೆಯಲ್ಲಾಗಲಿ ಸುಂದರ್ ರಾಜ್ ಅವರ ಮನೆಯಲ್ಲಾಗಲಿ ಯಾವುದೇ ಸಂತೋಷ ಇರಲಿಲ್ಲ.. ಯಾವುದೇ ಶುಭ ಸಮಾರಂಭಗಳು ನಡೆಯಲಿಲ್ಲ.. ಅತ್ತ ಲಾಕ್ ಡೌನ್ ತೆರುವಾದ ಬಳಿಕ ಬಾಕಿ ಉಳಿದಿದ್ದ ಸಿನಿಮಾ ಕೆಲಸದಲ್ಲಿ ತೊಡಗಿಕೊಂಡರು.. ಜೊತೆಗೆ ಅಣ್ಣನ ಸಿನಿಮಾಗಳನ್ನು ಸಂಪೂರ್ಣ ಗೊಳಿಸಿಕೊಡುವೆ ಎಂದು ಜವಾಬ್ದಾರಿ ಹೊತ್ತುಕೊಂಡರು ಧೃವ ಸರ್ಜಾ..

ಈ ಎಲ್ಲದರ ನಡುವೆ ಧೃವ ಹಾಗೂ ಪ್ರೇರಣಾರಿಗೆ ಕೊರೊನ ಕೂಡ ಪಾಸಿಟಿವ್ ಆಗಿ ಕೊನೆಗೆ ಎಲ್ಲದರಿಂದ ಹೊರ ಬಂದರು.. ಮಗು ನಮ್ಮ ಬಾಳಲ್ಲಿ.. ನಮ್ಮ ಕುಟುಂಬದಲ್ಲಿ ಹೊಸ ಭರವಸೆ ತರಲಿದೆ ಎಂಬ ನಂಬಿಕೆ ಇಟ್ಟಿದ್ದರು..

ಇದೀಗ ಎಲ್ಲರೂ ಅಂದುಕೊಂಡಂತೆ ಅಕ್ಟೋಬರ್ 22 ರಂದು ಪುಟ್ಟ ಕಂದನ ಆಗಮನವಾಗಿದೆ‌‌.. ಎರಡೂ ಕುಟುಂಬಗಳಲ್ಲಿ ಹೊಸ ಚೇತನ ಮೂಡಿದೆ.. ಹೋದ ಚಿರು ಮರಳಿ ತನ್ನದೇ ಮಗುವಾಗಿ ಬಂದಷ್ಟು ಸಮಾಧಾಮದಲ್ಲಿದ್ದಾರೆ.. ನೋವು ಸಂಪೂರ್ಣವಾಗಿ ದೂರಾಗಲು ಸಾಧ್ಯವಿಲ್ಲವಾದರೂ ವಾಸ್ತವವನ್ನು ಅರಿತು ಮಗುವಿನ ಮುಖದಲ್ಲಿ ಚಿರುವನ್ನು ಕಾಣುತ್ತಿದ್ದಾರೆ..

ಇನ್ನು ವಿಜಯದಶಮಿಯ ದಿನ ಗೋಧೂಳಿ ಲಗ್ನದಲ್ಲಿ ಶಾಸ್ತ್ರವನ್ನು ಕೇಳಿ ಮೇಘನಾ ಹಾಗೂ ಮಗುವನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗಲಾಗಿದೆ.. ಇನ್ನು ಅತ್ತ ಮೇಘನಾ ಅವರು ಪುಟ್ಟ ಕಂದನ ಹಾರೈಕೆಯಲ್ಲಿ ಬ್ಯುಸಿ ಆಗಿದ್ದರೆ.. ಇತ್ತ ಸರ್ಜಾ ಕುಟುಂಬದಲ್ಲಿಯೂ ಎಲ್ಲರೂ ಸಹಜ ಸ್ಥಿತಿಗೆ ಮರಳಿದ್ದಾರೆ..

ಈ ನಡುವೆ ಇಂದು ಧೃವ ಸರ್ಜಾ ಹೊಸ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.. ಹೌದು ಮಗು ಮನೆಗೆ ಬರುವವರೆಗೂ ಯಾವುದೇ ಹೊಸ ಸಿನಿಮಾದ ಸಮಾರಂಭ ಬೇಡ ಎಂದಿದ್ದ ಧೃವ ಸರ್ಜಾ ಇದೀಗ ಮಗು ಮನೆಗೆ ಬರುತ್ತಿದ್ದಂತೆ ತಮ್ಮ ಎಲ್ಲಾ ಹೊಸ ಪ್ರಾಜೆಕ್ಟ್ ಗಳ ಬಗ್ಗೆ ಗಮನ ನೀಡಿದ್ದು ಇಂದು ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ದೇವಸ್ಥಾನದಲ್ಲಿ ಧೃವ ಅವರ ಹೊಸ ಸಿನಿಮಾ “ದುಬಾರಿ” ಚಿತ್ರದ ಮುಹೂರ್ತ ನೆರವೇರಿದೆ..

ಹೌದು ಪೊಗರು ಸಿನಿಮಾದ ನಿರ್ದೇಶಕರಾದ ನಂದ ಕಿಶೋರ್ ಅವರ ನಿರ್ದೇಶನದಲ್ಲಿಯೇ ಹೊಸ ಸಿನಿಮಾ ದುಬಾರಿ ತಯಾರಾಗುತ್ತಿದ್ದು, ಉದಯ್ ಕೆ ಮೆಹ್ತಾ ಅವರ ನಿರ್ಮಾಣವಿದೆ.. ಸದ್ಯದಲ್ಲಿಯೇ ಘರ್ಜಿಸಲು ಬರುವೆ ಎಂದು ಹೊಸ ಸಿನಿಮಾದ ಪೋಸ್ಟ್ ಹಂಚಿಕೊಂಡಿದ್ದು ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದ್ದು ಯಶಸ್ಸು ದೊರೆಯಲೆಂದು ಹರೈಸಿದ್ದಾರೆ.. ಇನ್ನು ಈ ದಿನ ದೃವ ಸರ್ಜಾರ ದುಬಾರಿ ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ನಟ ಒಳ್ಳೆ ಹುಡ್ಗ ಪ್ರಥಮ್ ಕೂಡ ಭಾಗಿಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು ಧೃವ ಸರ್ಜಾರಿಗೆ ಶುಭ ಕೋರಿದ್ದಾರೆ..