ಗಟ್ಟಿಮೇಳ ಧಾರಾವಾಹಿಯಿಂದ ಹೊರ ಬಂದಿದ್ದ ನಟ ಧೃವನ ಸ್ಥಿತಿ ಏನಾಗಿದೆ ನೋಡಿ..

0 views

ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ ಒಂದಾಗಿರುವ ಗಟ್ಟಿಮೇಳ ಧಾರಾವಾಹಿ ಕಳೆದ ಮೂರು ವರೆ ವರ್ಷದಿಂದಲೂ ಒಳ್ಳೆಯ ರೇಟಿಂಗ್ ಪಡೆದು ಟಾಪ್ ಮೂರು ಧಾರಾವಾಹಿಗಳಲ್ಲಿ ಒಂದಾಗಿದ್ದು ಸಧ್ಯ ಕನ್ನಡ ಕಿರುತೆರೆಯ ಟಾಪ್ ಎರಡನೇ ಧಾರಾವಾಹಿಯಾಗಿ ಒಳ್ಳೆಯ ರೇಟಿಂಗ್ ಪಡೆದು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ.. ಇನ್ನು ಧಾರಾವಾಹಿಯಲ್ಲಿ ಕೆಲ ದಿನಗಳ ಹಿಂದಷ್ಟೇ ವೇದಾಂತ್ ತಮ್ಮನಾಗಿ ಅಭಿನಯಿಸಿದ್ದ ಧೃವ ಪಾತ್ರವನ್ನು ಮುಗಿಸಲಾಗಿತ್ತು.. ಅಷ್ಟಕ್ಕೂ ಧೃವನಿಗೆ ನಿಜಕ್ಕೂ ಏನಾಯಿತು.. ಧಾರಾವಾಹಿಯಿಂದ ಹೊರ ನಡೆದರಾ.. ಧೃವನ ಪರಿಸ್ಥಿತಿ ಏನಾಗಿದೆ ಗೊತ್ತಾ..

ಹೌದು ಗಟ್ಟಿಮೇಳ ಧಾರಾವಾಹಿ ಶುರುವಾಗಿ ಮೂರು ವರ್ಷಗಳು ಕಳೆದವು.. ಆದರೆ ಕಳೆದ ವರ್ಷ ಗಟ್ಟಿಮೇಳ ಧಾರಾವಾಹಿಯ ಸಾರಥ್ಯವನ್ನು ಅಂದರೆ ನಿರ್ಮಾಣದ ಜವಾಬ್ದಾರಿಯನ್ನು ಸ್ವತಃ ವೇದಾಂತ್ ಅಲಿಯಾಸ್ ನಟ ರಕ್ಷ್ ಅವರೇ ವಹಿಸಿಕೊಂಡಿದ್ದು ನಟನೆಯ ಜೊತೆಗೆ ನಿರ್ಮಾಪಕನಾಗಿಯೂ ಗುರುತುಸಿಕೊಂಡರು.. ನಿರ್ಮಾಪಕ ಮಾತ್ರವಲ್ಲ ಯಶಸ್ವಿ ನಿರ್ಮಾಪಕ ಎನಿಸಿಕೊಂಡಿದ್ದು ಈ ಹಾದಿಗೆ ರಕ್ಷ್ ಜೊತೆಗೆ ಅವರ ಪತ್ನಿ ಅನುಷಾ ಕೂಡ ಸಾಥ್ ನೀಡಿದರು..

ಇನ್ನು ಮಧ್ಯ ಒಂದಷ್ಟು ದಿನ ಕತೆಯನ್ನು ಎಳೆದು ಎಳೆದು ಪ್ರೇಕ್ಷಕರಿಗೆ ಕಿರಿಕಿರಿ‌ ಮೂಡಿಸಿದ್ದ ಗಟ್ಟಿಮೇಳ ಕೆಲ ದಿನಗಳ ನಂತರ ಕತೆಯಲ್ಲಿ ಬದಲಾವಣೆ ತಂದುಕೊಂಡು ರೋಚಕತೆಯಿಂದ ಸಾಗುವ ಮೂಲಕ‌ ಮತ್ತೆ ತನ್ನ ಸ್ಥಾನವನ್ನು ಉಳಿಸಿಕೊಂಡಿತ್ತು.. ಇನ್ನು ಧಾರಾವಾಹಿಯಲ್ಲಿ ವೇದಾಂತ್ ವಿಕ್ಕಿ‌ ಆರತಿ ಪಾತ್ರ ಮಾತ್ರ ಇದ್ದು ಧಾರಾವಾಹಿಯ ಮಧ್ಯದಲ್ಲಿ ಧೃವನ‌ ಪಾತ್ರ ಎಂಟ್ರಿ ಪಡೆದುಕೊಂಡಿತು.. ವೇದಾಂತ್ ನ ತಮ್ಮನಾಗಿ ಧಾರಾವಾಹಿಗೆ ಎಂಟ್ರಿ ಕೊಟ್ಟ ಧೃವ ಜನರ ಮನಗೆಲ್ಲುವಲ್ಲಿ ಯಶಸ್ವಿಯೂ ಆದ..

ವೇದಾಂತ್ ವಿಕ್ಕಿ ಹಾಗೂ ಧೃವನ ಸೋದರತೆಯ ಬಾಂಧವ್ಯ ಜನರಿಗೂ ಇಷ್ಟವಾಗಿತ್ತು.. ಮೊದಮೊದಲು ತಮ್ಮನ ಕಂಡರೆ ಆಗದ ವೇದಾಂತ್ ನಂತರದಲ್ಲಿ ಧೃವನನ್ನು ಒಪ್ಪಿಕೊಂಡಾಗ ಜನರೂ ಸಹ ಸಂತೋಷ ಪಟ್ಟಿದ್ದುಂಟು.. ಇನ್ನು ಸಧ್ಯ ಧಾರಾವಾಹಿಯಲ್ಲಿ ಆರತಿ ವಿಕ್ಕಿಯ ಕಲ್ಯಾಣ.. ವೇದಾಂತ್ ಅಮ್ಮೂಲ್ಯಳ ಕಲ್ಯಾಣ ಮುಗಿದಿದ್ದು ಕೆಲ ದಿನಗಳ ಹಿಂದೆ ಧೃವ ಹಾಗೂ ಅದಿತಿ ನಡುವಿನ ಪ್ರೀತಿಯ ಪಯಣ ಆರಂಭವಾಗಿತ್ತು.. ಇತ್ತ ಧೃವ ಅದಿತಿಗೆ ತನ್ನ ಮನಸ್ಸಿನ ಭಾವನೆಗಳನ್ನು ಹೇಳಿಕೊಂಡಿದ್ದು ಅತ್ತ ಅದಿತಿ ಕೂಡ ಧೃವನ ಪ್ರೀತಿಗೆ ಒಪ್ಪಿಗೆ ನೀಡಿದ್ದಳು‌. ಇಬ್ಬರ ಲವ್ ಸ್ಟೋರಿ ಆರಂಭವಾಗಿತ್ತು.. ಆದರೆ ಅಷ್ಟರಲ್ಲಿ ಧೃವನ ಪಾತ್ರವನ್ನೇ ಮುಗಿಸಲಾಗಿತ್ತು.. ಹೌದು ಮತ್ತೊಂದು ಕಡೆ ವೇದಾಂತ್ ವಿಕ್ಕಿ ಹಾಗೂ ಧೃವ ತಮ್ಮ ತಾಯಿಯನ್ನು ಹುಡುಕುವ ಪ್ರಯತ್ನದಲ್ಲಿಯೇ ಇದ್ದರು..

ತನ್ನ ತಾಯಿ ಯಾರು ಎಂಬ ಸತ್ಯ ತಿಳಿದು ಅಮ್ಮನ ನೋಡಲು ಆಗಮಿಸುತ್ತಿದ್ದ ಧೃವನ ಕತೆಯನ್ನು ಧಾರಾವಾಹಿಯಲ್ಲಿ ಮುಗಿಸಲಾಗಿತ್ತು.. ಧೃವ ಇನ್ನಿಲ್ಲವೆಂದೇ ಧಾರಾವಾಹಿಯಲ್ಲಿ‌ ತೋರಿಸಲಾಗಿತ್ತು.. ಇನ್ನು ಇತ್ತ ಗಟ್ಟಿಮೇಳ ಪ್ರೇಕ್ಷಕರು ಈ ಬಗ್ಗೆ ಸಾಕಷ್ಟು ಅಸಮಾಧಾನವನ್ನು ವ್ಯಕ್ತ ಪಡಿಸಿದ್ದರು.. ಧೃವನ ಪಾತ್ರ ಮುಗಿಸಿದ್ದಕ್ಕೆ ಬೇಸರ ವ್ಯಕ್ತ ಪಡಿಸಿದ್ದರು.. ಆದರೆ ಇದೀಗ ಧೃವನ ರೀಎಂಟ್ರಿಯಾಗಿದೆ.. ಹೌದು ಅತ್ತ ಧೃವನ ಘಟನೆಗೆ ವಿಕ್ಕಿಯೇ ಕಾರಣನೆಂದು ಆತನು ಪೋಲೀಸರ ವಶದಲ್ಲಿದ್ದು ಆತನನ್ನು ಹೊರ ಕರೆತರಲು ಸ್ವತಃ ವೇದಾಂತೇ ಅಖಾಡಕ್ಕಿಳಿದು ವಿಕ್ಕಿ ಪರವಾಗಿ ವಾದ ಮಾಡುತ್ತಿದ್ದಾನೆ..

ಇನ್ನು ಈ ಸಮಯದಲ್ಲಿ ಕೋರ್ಟ್ ಮುಂದೆ ಧೃವನ ಹಾಜರಿಯಾಗಿದ್ದು ಧೃವನ‌ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು ಮಾತನಾಡಲಾಗದ ಪರಿಸ್ಥಿತಿಯಲ್ಲಿ ಇದ್ದಾನೆ.. ಸಧ್ಯ ಇತ್ತ ಧೃವನ ಕಂಡ ತಾಯಿ ಸಂಕಟ ಪಟ್ಟು‌ ಮಗನ ಬಳಿ ಬಂದು ಕಾಳಜಿ ತೋರಿದ್ದಾರೆ.. ಅತ್ತ ವಿಕ್ಕಿ ಕೂಡ ಬಿಡುಗಡೆಯಾಗಲಿದ್ದು.. ಅಣ್ಣ ತಮ್ಮಂದಿರು ಮತ್ತೆ ಒಂದಾಗಲಿದ್ದಾರೆ.. ಆದರೆ ಧೃವ ಮಾತನಾಡಲಾಗದ ಸ್ಥಿತಿಯಲ್ಲಿ ಧೃವನ ಪಾತ್ರವನ್ನು ಮತ್ತೆ ಧಾರಾವಾಹಿಗೆ ಕರೆತಂದಿದ್ದು ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದು ಆದಷ್ಟು ಬೇಗ ಕತೆ ಮುಂದುವರೆಸಿ ಎಂದಿದ್ದಾರೆ..