ಭೂಮಿ ಪೂಜೆ ನೆರವೇರಿಸಿದ ಧೃವ ಪ್ರೇರಣಾ.. ಆದರೆ ಏತಕ್ಕಾಗಿ ಗೊತ್ತಾ?

0 views

ಚಿರು ಸರ್ಜಾ ಇಲ್ಲವಾಗಿ 5 ತಿಂಗಳು‌ ಕಳೆದಿದೆ.. ವಾಸ್ತವವನ್ನು ಒಪ್ಪಿಕೊಳ್ಳಲೇಬೇಕಾದ್ದರಿಂದ ಸುಂದರ್ ರಾಜ್ ಹಾಗೂ ಸರ್ಜಾ ಕುಟುಂಬ ಚಿರು ಸರ್ಜಾ ಇಲ್ಲವಾದ ನೋವಿನ ನಡುವೆ ಆಗಬೇಕಿರುವ ಕೆಲಸ ಕಾರ್ಯಗಳ ಕಡೆ ಗಮನ ನೀಡಿದೆ.. ಹೌದು ಕಳೆದ ತಿಂಗಳು ಅಕ್ಟೋಬರ್ 22 ರಂದು ಮೇಘನಾ ರಾಜ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು.. ಕೆಲ ದಿನಗಳ ಬಳಿಕ ಸುಂದರ್ ರಾಜ್ ಅವರ ಮನೆಯಲ್ಲಿ ಮಗುವಿಗೆ ತವರು ಮನೆಯ ತೊಟ್ಟಿಲ ಶಾಸ್ತ್ರ ನೆರವೇರಿಸಿದ್ದರು.. ಚಿರು ಸರ್ಜಾರೆ ಮತ್ತೆ ಹುಟ್ಟಿ ಬಂದರೆಂದು ಸಮಾಧಾನ ಮಾಡಿಕೊಂಡರು.. ನೋವಿನ ನಡುವೆ ಮಗುವಿನ ಆಗಮನ ಎರಡೂ ಕುಟುಂಬಗಳಲ್ಲಿ ಸಂತೋಷ ತಂದಿತೆನ್ನಬಹುದು‌‌..

ಇದೀಗ ಮನೆಗೆ ಮಗುವಿನ ಆಗಮನದ ನಂತರ ಧೃವ ಸರ್ಜಾ ಅಣ್ಣನಿಗೆ ಮಾಡಬೇಕಾದ ಕಾರ್ಯದ ಬಗ್ಗೆ ಯೋಚಿಸಿದ್ದಾರೆ.. ಹೌದು ಚಿರು ಸರ್ಜಾ ಇಲ್ಲವಾದ ಬಳಿಕ ಯಾವುದೇ ಕೆಲಸಗಳಲ್ಲೊ ತೊಡಗದ ಧೃವ ಸರ್ಜಾ ಎರಡು ತಿಂಗಳಿನಿಂದ ಬಾಕಿ ಉಳಿದಿದ್ದ ತಮ್ಮ ಸಿನಿಮಾ ಕೆಲಸಗಳನ್ನು ಮುಗಿಸಿಕೊಟ್ಟಿದ್ದರು.. ಇದೀಗ ಅದೆಲ್ಲದರಿಂದ ಬಿಡುವು ಮಾಡಿಕೊಂಡು ಅಣ್ಣನ ಸಮಾಧಿ ನಿರ್ಮಾಣಕ್ಕೆ ಇಂದು ಪೂಜೆ ಸಲ್ಲಿಸಿ ಶಂಕುಸ್ಥಾಪನೆ ಮಾಡಿದ್ದಾರೆ..

ಹೌದು ಚಿರು ಸರ್ಜಾ ಇಲ್ಲವಾದ ಸಮಯದಲ್ಲಿ ಅಂತಿಮ ಕಾರ್ಯವನ್ನು ತುಮಕೂರಿನ ಬಳಿಯ ಅರ್ಜುನ್ ಸರ್ಜಾ ಅವರ ತೋಟದಲ್ಲಿ ತಾತ ಶಕ್ತಿ ಪ್ರಸಾದ್ ಅವರ ಅಂತಿಮ ಕಾರ್ಯ ನಡೆದ ಜಾಗದಲ್ಲಿ ಚಿರು ಸರ್ಜಾ ಅವರ ಅಂತಿಮ ಕಾರ್ಯವನ್ನು ನೆರವೇರಿಸ ಬೇಕೆಂದು ನಿರ್ಧಾರವಾಗಿತ್ತು.. ಆದರೆ ಧೃವ ಸರ್ಜಾ ಅವರು ತಮ್ಮ ಫಾರ್ಮ್ ಹೌಸ್ ನಲ್ಲಿಯೇ ಅಣ್ಣನ ಅಂತಿಮ ಕಾರ್ಯ ನೆರವೇರಬೇಕು ಎಂದಿದ್ದು ಅಣ್ಣ ಸದಾ ನನ್ನ ಜೊತೆಯೇ ಇರಬೇಕೆಂದು ತಮ್ಮ ಫಾರ್ಮ್ ಹೌಸ್ ನಲ್ಲಿಯೇ ಎಲ್ಲಾ ಕಾರ್ಯಗಳನ್ನು ನೆರವೇರಿಸಿದ್ದರು.. ಇದೀಗ ಐದು ತಿಂಗಳ ನಂತರ ಇಂದು ಧೃವ ಸರ್ಜಾ ಹಾಗೂ ಪತ್ನಿ ಪ್ರೇರಣಾ ಅವರು ಕನಕಪುರ ರಸ್ತೆಯಲ್ಲಿನ ನೆಲಗೋಳಿ ಬಳಿಯ ಧೃವ ಸರ್ಜಾ ಅವರ ಬೃಂದಾವನ ಫಾರ್ಮ್ ಹೌಸ್ ನಲ್ಲಿ ಇಂದು ಪೂಜೆ ಸಲ್ಲಿಸಿ ಚಿರು ಸರ್ಜಾ ಅವರ ಸಮಾಧಿ ಮಂಟಪ ನಿರ್ಮಾಣ ಮಾಡಲು ಶಂಕುಸ್ಥಾಪನೆ ಮಾಡಿದ್ದಾರೆ..

ಹೌದು ಮದುವೆ ವಾರ್ಷಿಕೋತ್ಸವದ ಕಾರಣ ಗೋವಾಗೆ ತೆರಳಿದ್ದ ಧೃವ ಹಾಗೂ ಪ್ರೇರಣಾ ಬೆಂಗಳೂರಿಗೆ ಮರಳಿದ್ದು ಇಂದು ಪೂಜೆ ಸಲ್ಲಿಸಿದ್ದಾರೆ.. ಪೂಜೆಯಲ್ಲಿ ಧೃವ ಸರ್ಜಾ ಅವರ ಅಪ್ಪ ಅಮ್ಮ.. ಧೃವ ಸರ್ಜಾ ಹಾಗೂ ಪ್ರೇರಣಾ ಅವರು ಭಾಗಿಯಾಗಿದ್ದು ಇನ್ನು ಎರಡು ತಿಂಗಳಿನಲ್ಲಿ ಸಮಾಧಿ ಮಂಟಪದ ಕಾರ್ಯ ಪೂರ್ಣಗೊಳ್ಳಲಿದೆ ಎನ್ನಲಾಗಿದೆ.. ಇನ್ನು 15 ದಿನ ಕಳೆದರೆ ಒಳ್ಳೆಯ ದಿನಗಳು ಇರುವುದಿಲ್ಲವೆಂಬ ಕಾರಣಕ್ಕೆ ಈ ವರ್ಷವೇ ಪೂಜೆ ನೆರವೇರಿಸಲು ಶಾಸ್ತ್ರ ಕೇಳಿದ ನಂತರ ಶಂಕುಸ್ಥಾಪನೆ ಮಾಡಲಾಗಿದೆ..

ಇನ್ನು ಈ ಎಲ್ಲಾ ಕಾರ್ಯ ಮುಗಿದ ನಂತರ ಮೇಘನಾ ಹಾಗೂ ಮಗುವನ್ನು ಧೃವ ಸರ್ಜಾ ಅವರ ಮನೆಗೆ ಕರೆತಂದು ಅಪ್ಪನ ಮನೆಯಲ್ಲಿ ಮಾಡಬೇಕಾದ ತೊಟ್ಟಿಲ ಶಾಸ್ತ್ರ ನೆರವೇರಿಸಿ ನಂತರ ಮಗುವನ್ನು ಚಿರು ಸರ್ಜಾ ಅವರ ಸಮಾಧಿಯ ಬಳಿ ಕರೆತಂದು ಆಶೀರ್ವಾದ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ..

ಮೇಘನಾ ಅವರು ಮಗುವಿಗೆ ಜನ್ಮ ಕೊಟ್ಟ ಸಮಯದಲ್ಲಿಯೂ ಹೆರಿಗೆಯ ವಾರ್ಡ್ ನಲ್ಲಿಯೇ ಚಿರು ಅವರ ಫೋಟೋ ಇಟ್ಟುಕೊಂಡಿದ್ದು ಮಗುವನ್ನು ಮೊದಲು ಚಿರು ಅವರ ಫೋಟೋಗೆ ತೋರಿಸಿದ್ದರು.. ಇದೀಗ ಬಾಣಂತಿಯಾದ್ದರಿಂದ ಚಿರು ಸಮಾಧಿಯ ಬಳಿ ಬರಲಾಗಿಲ್ಲ.. ಅದೇ ಕಾರಣಕ್ಕೆ ಸರ್ಜಾ ಮನೆಯಲ್ಲಿ ನಡೆಯಬೇಕಾದ ತೊಟ್ಟಿಲ ಶಾಸ್ತ್ರಕ್ಕೂ ಮುನ್ನ ಚಿರು ಅವರ ಈ ಕಾರ್ಯ ಸಂಪೂರ್ಣಗೊಳಿಸಿ ನಂತರ ಮೇಘನಾ ಹಾಗೂ ಮಗುವನ್ನು ಕರೆತರಬಹುದಾಗಿದೆ..