ವಿಷ್ಣು ಸರ್ ವಿಚಾರವಾಗಿ ಎಲ್ಲರೂ ಮಾತನಾಡಿದ್ರು.. ಆದರೆ ಧೃವ ಸರ್ಜಾ ಮಾತ್ರ ಸೀದಾ ಹೋಗಿ ಮಾಡಿದ ಕೆಲಸವೇ ಬೇರೆ..

0 views

ಕೆಲ ದಿನಗಳ ಹಿಂದೆ ನಮ್ಮ ನಾಡಿನ ಹೆಮ್ಮೆಯ ನಟ ಡಾ. ವಿಷ್ಣುವರ್ಧನ್ ಅವರ ಬಗ್ಗೆ ತೆಲುಗು ನಟ ವಿಜಯ್ ರಂಗರಾಜು ಕೀಳು ಮಟ್ಟದಲ್ಲಿ ಮಾತನಾಡಿದ್ದು ಇದೀಗ ಅಭಿಮಾನಿಗಳು ಮಾತ್ರವಲ್ಲದೇ ಕಲಾವಿದರು ಸ್ಟಾರ್ ಗಳು ಎಲ್ಲರೂ ತಿರುಗಿಬಿದ್ದಿದ್ದಾರೆ.. ಎಲ್ಲರೂ ಸಹ ವಿಜಯ್ ರಂಗರಾಜು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.. ಆದರೆ ಧೃವ ಸರ್ಜಾ ಮಾತ್ರ ಮಾಡಿರುವ ಕೆಲಸವೇ ಬೇರೆ..

ಹೌದು ನಿನ್ನೆಯಷ್ಟೇ ಸ್ಯಾಂಡಲ್ವುಡ್ ನ ಸ್ಟಾರ್ ಕಲಾವಿದರಾದ ಸುದೀಪ್ ಅವರು ಗಣೇಶ್ ಅವರು ಪುನೀತ್ ರಾಜ್ ಕುಮಾರ್ ಅವರು ಯಶ್ ಅವರು ಸೇರಿದಂತೆ ಎಲ್ಲರೂ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ವಿಜಯ್ ರಂಗರಾಜು ಕ್ಷಮೆ ಕೇಳಬೇಕೆಂದರು.. ಅತ್ತ ಪುನೀತ್ ರಾಜ್ ಕುಮಾರ್ ಅವರು ಯಾವುದೇ ಭಾಷೆಯ ನಟರಾದರು ಎಲ್ಲದಕ್ಕಿಂತ ಹೆಚ್ಚಾದದ್ದು ಮೊದಲು ಗೌರವ.. ನಮ್ಮ ನಾಡಿನ ಮೇರು ನಟರಾದ ವಿಷ್ಣು ಸರ್ ಬಗ್ಗೆ ಅವಹೇಳನವಾಗಿ ಮಾತನಾಡಿರುವ ಆ ಕಲಾವಿದ ಕ್ಷಮೆ ಕೇಳಲೇಬೇಕು.. ತನ್ನ ಮಾತನ್ನು ಹಿಂಪಡೆಯಬೇಕು.. ಮೊದಲು ಮಾನವನಾಗು.. ಎಂದಿದ್ದರೆ..

ಇತ್ತ ಸುದೀಪ್ ಅವರು ಗಂಡಸಾದವನು‌ ಇಂತಹ ಕೆಲಸ ಮಾಡೋದಿಲ್ಲ.. ವ್ಯಕ್ತಿ ಇಲ್ಲದಿರುವಾಗ ಈ ರೀತಿ‌‌ ಮಾತನಾಡೋದು ಗಂಡಸ್ಥನವಲ್ಲ.. ಅವರಿಲ್ಲದೇ ಇರಬಹುದು.. ಆದರೆ ಕೋಟಿ ಕೋಟಿ ಜನರನ್ನು ಬಿಟ್ಟು ಹೋಗಿದ್ದಾರೆ.. ನಾವೆಲ್ಲಾ ಇನ್ನೂ ಇದ್ದೀವಿ.. ಈ ಕೂಡಲೇ ಆ ವ್ಯಕ್ತಿ ಕ್ಷಮೆ ಕೇಳಬೇಕು ಎಂದಿದ್ದರು.. ಇನ್ನು ಯಶ್ ಅವರೂ ಸಹ ಈ ಬಗ್ಗೆ ಮಾತನಾಡಿ ಆ ವ್ಯಕ್ತಿ ಕ್ಷಮೆ ಕೇಳಿ ತಮ್ಮ ಅಸಮಂಜಸ ಮಾತುಗಳನ್ನು ಹಿಂಪಡೆಯಬೇಕು ಎಂದಿದ್ದರು.. ಗಣೇಶ್ ಅವರು ಜಗ್ಗೇಶ್ ಅವರು ಎಲ್ಲರೂ ಸಹ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದರು..

ಆದರೆ ಧೃವ ಸರ್ಜಾ ಅವರು ಮಾತ್ರ ನಿನ್ನೆ ಮಾಡಿದ ಕೆಲಸವೇ ಬೇರೆ.. ಹೌದು ನಿನ್ನೆ ರಾತ್ರಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಧೃವ ಸರ್ಜಾ ಅವರು ಒಂದಕ್ಷರವೂ ಮಾತನಾಡದೇ ಸೀದಾ ವಿಜಯ್ ರಂಗರಾಜು ಅವರಿಗೆ ಚಪ್ಪಲಿ ಹಾರ ಹಾಕಿರುವ ಫೋಟೋ ಜೊತೆಗೆ ಶ್ರದ್ಧಾಂಜಲಿ ಯನ್ನೇ ಅರ್ಪಿಸಿದ್ದಾರೆ.. ಹೌದು ಇವನನ್ನೇನು ಕ್ಷಮೆ ಕೇಳಿ ಅಂತ ಬೇಡೋದು.. ಇವನು ಬದುಕೇ ಇಲ್ಲ ಎಂಬಂತೆ ಸೀದಾ ಚಪ್ಪಲಿ ಹಾರ ಹಾಕಿ ಫೋಟೋ ಹಂಚಿಕೊಂಡಿದ್ದು ಆಕ್ರೋಶ ವ್ಯಕ್ತ ಪಡಿಸಿದ್

ಎಲ್ಲರೂ ಕೊಂಚ ವಿನಯವಾಗಿ ಮಾತನಾಡಿದರೆ ಧೃವ ಸರ್ಜಾ ಮಾತ್ರ ಎಂದಿನಂತೆ ತಮ್ಮ ಶೈಲಿಯಲ್ಲಿಯೇ ಅಸಮಾಧಾನ ವ್ಯಕ್ತ ಪಡಿಸಿ ವಿಜಯ್ ರಂಗರಾಜು ಇನ್ನಿಲ್ಲವೆಂಬಂತೆ ಫೋಟೋ ಹಂಚಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ಇನ್ನು ಅದಾಗಲೇ ಈ ಬಗ್ಗೆ ಅಸಮಾಧಾನ ಹೆಚ್ಚಾಗುತ್ತಿದ್ದು ಆ ವ್ಯಕ್ತಿ ಏನು ಪ್ರತಿಕ್ರಿಯೆ ನೀಡುವನೋ ಕಾದು ನೋಡಬೇಕಿದೆ.. ಕ್ಷಮೆ ಕೇಳುವನೋ ಅಥವಾ ಉದ್ಧಟತನದ ವರ್ತನೆ ತೋರುವನೋ.. ಅಲ್ಲಿನ ಚಲನಚಿತ್ರ ವಾಣಿಜ್ಯ ಮಂಡಳಿ ಆತನ ವಿರುದ್ಧ ಕ್ರಮ ಕೈಗೊಳ್ಳುವುದೋ ಕಾದು ನೋಡಬೇಕಿದೆ..