ನಟ ದಿಗಂತ್ ಸ್ಥಿತಿ ಚಿಂತಾಜನಕ..‌ ಗೋವಾದಿಂದ ಬೆಂಗಳೂರಿಗೆ ಏರ್ ಲಿಫ್ಟ್.. ನಿಜಕ್ಕೂ ನಡೆದದ್ದೇನು ಗೊತ್ತಾ..

0 views

ಕನ್ನಡದ ಖ್ಯಾತ ನಟ ದಿಗಂತ್ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು ಗೋವಾದಿಂದ ಬೆಂಗಳೂರಿಗೆ ದಿಗಂತ್ ರನ್ನು ಏರ್ ಲಿಫ್ಟ್ ಮಾಡಲಾಗುತ್ತಿದೆ‌.. ಹೌದು ಅದ್ಯಾಕೋ ಕಳೆದ ಎರಡು ವರ್ಷಗಳಿಂದ ಕಲಾವಿದರ ವಿಚಾರಗಳಲ್ಲಿ ಬರೀ ಕೆಟ್ಟ ಸುದ್ದಿಗಳನ್ನೇ ಕೇಳುತ್ತಿರುವ ನಮಗೆ ದಿಗಂತ್ ಮೊದಲಿನಂತೆ ಆಗಿಬಿಡಲಿ ಎನ್ನುವ ಪ್ರಾರ್ಥನೆ ಮಾಡುವುದು ಮಾತ್ರವೇ ಉಳಿದಂತೆ ಕಾಣುತ್ತಿದೆ.. ಅಷ್ಟಕ್ಕೂ ನಡೆದದ್ದಾದರೂ ಏನು.. ಅಷ್ಟು ಫಿಟ್ ಆಗಿದ್ದ ನಟನಿಗೆ ಏನಾಯಿತು.. ನಿಜಕ್ಕೂ ಮನಕಲಕುವಂತಿದೆ..

ಹೌದು ಸ್ಯಾಂಡಲ್ವುಡ್ ನಲ್ಲಿ ದೂದ್ ಪೇಡ ಎಂದೇ ಖ್ಯಾತರಾಗಿದ್ದ ದಿಗಂತ್ ತೆರೆ ಮೇಲೆ ಮಾತ್ರವಲ್ಲ ನಿಜ ಜೀವನದಲ್ಲಿಯೂ ಜೀವನವನ್ನು ಬಹಳ ಎಂಜಾಯ್ ಮಾಡುತ್ತಿದ್ದ ಗುಣವುಳ್ಳ ವ್ಯಕ್ತಿ.. ಟ್ರೆಕಿಂಗ್ ಪ್ರವಾಸ ಹೀಗೆ ಸಾಕಷ್ಟು ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ನಟ ದಿಗಂತ್ ಅವರು ಸ್ನೇಹಿತರ ಜೊತೆ ಗೋವಾ ಪ್ರವಾಸ ಕೈಗೊಂಡಿದ್ದರು‌.. ಆ ಸಮಯದಲ್ಲಿ ದಿಗಂತ್ ಅವರು ಸಾಹಸ ಕ್ರೀಡೆ ಆಡುವ ಸಮಯದಲ್ಲಿ ಇಂತಹ ಘಟನೆ ನಡೆದಿದ್ದು ಕುತ್ತಿಗೆಯ ಮೂಳೆ ಮುರಿದಿದ್ದು ಸ್ಥಿತಿ ಚಿಂತಾಜನಕ ಎಂದು ಹೇಳಲಾಗಿದೆ..

ಹೌದು ದಿಗಂತ್ ಆಗಾಗ ಪ್ರವಾಸಗಳನ್ನು ಮಾಡೋದು ಅಲ್ಲಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳೋದು ಎಲ್ಲವೂ ಸಾಮಾನ್ಯವಾಗಿತ್ತು.. ಆದರೆ ಈ ಬಾರಿಯ ಪ್ರವಾಸ ಸಾಮಾನ್ಯವಾಗಿರಲಿಲ್ಲ.. ಹೌದು ಗೋವಾಗೆ ತಮ್ಮ ಆಪ್ತರು ಹಾಗೂ ಸ್ನೇಹಿತರೊಟ್ಟಿಗೆ ದಿಗಂತ್ ತೆರಳಿದ್ದರು.. ಅಲ್ಲಿ ಸಾಹಸ ಕ್ರೀಡೆಗಳಲ್ಲಿ ತೊಡಗಿದ್ದ ಸಮಯದಲ್ಲಿ ಕಾಲು ಜಾರಿ ಈ ಘಟನೆ ನಡೆದಿದ್ದು ಆ ಸಮಯದಲ್ಲಿ ದಿಗಂತ್ ಅವರ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ..

ತಕ್ಷಣ ಅವರನ್ನು ಗೋವಾದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದ್ದರೂ ಸಹ ಅವರ ಆರೋಗ್ಯದ ಸ್ಥಿತಿಯ ಬಗ್ಗೆ ಏನೂ ಹೇಳುವ ರೀತಿ ಸಂದರ್ಭವಿಲ್ಲ ಎಂದಿದ್ದಾರೆ ವೈದ್ಯರು.. ಇದೀಗ ದಿಗಂತ್ ಅವರನ್ನು ಗೋವಾದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲಾಗುತ್ತಿದ್ದು ಚಿಕಿತ್ಸೆ ಮುಂದುವರೆಯಲಿದೆ ಎನ್ನಲಾಗಿದೆ.. ಗೋವಾದ ಬೀಚ್ ನಲ್ಲಿ ಬ್ಯಾಕ್ ಫ್ಲಿಪ್ ಮಾಡಲು ಹೋದ ಸಮಯದಲ್ಲಿ ಕಾಲು ಜಾರಿ ಸರಿಯದಾ ಗ್ರಿಪ್ ಸಿಗದೇ ಕುತ್ತಿಗೆ ಭಾಗಕ್ಕೆ ಪೆಟ್ಟು ಬಿದ್ದಿದೆ ಎಂದು ತಿಳಿದು ಬಂದಿದೆ..

ಈಗಾಗಲೇ ಸಾಕಷ್ಟು ನೋವಿನ ಸುದ್ದಿಗಳನ್ನು ಕೇಳಿರುವ ನಮಗೆ ಮತ್ತೊಂದು ಕಹಿ ಸುದ್ದಿ ಎದುರಾಗದಿರಲಿ.. ದಿಗಂತ್ ಸಂಪೂರ್ಣವಾಗಿ ಗುಣಮುಖರಾಗಿ ಮತ್ತೆ ಮೊದಲಿನಂತಾಗಿಬಿಡಲಿ.. ದಿಗಂತ್ ಅವರ ಈ ವಿಚಾರ ತಿಳಿಯುತ್ತಿದ್ದಂತೆ ಸ್ಯಾಂಡಲ್ವುಡ್ ಕಲಾವಿದರು ಹಾಗೂ ಸ್ನೇಹಿತರು ಶಾಕ್ ಗೆ ಒಳಗಾಗಿದ್ದು ದಿಗಂತ್ ಮರಳಿ ಮೊದಲಿನಂತಾಗಿಬಿಡಲಿ ಎಂದಿದ್ದಾರೆ.. ಹೌದು ದಿಗಂತ್ ನಟನಾಗಿಯಲ್ಲದಿದ್ದರೂ ಮರಳಿ ಆ ಕುಟುಂಬಕ್ಕೆ ಒಬ್ಬ ಸದಸ್ಯನಾಗಿ ಹಿಂತಿರುಗಿ ಬಿಡಲಿ.. ಮತ್ತೊಂದು ನೋವು ಮರುಕಳಿಸದಿರಲಿ.. ಇದೇ ಭಗವಂತನಲ್ಲಿ ಕೋಟ್ಯಾಂತರ ಕನ್ನಡಿಗರ ಪ್ರಾರ್ಥನೆ.. ದಿಗಂತ್ ಆದಷ್ಟು ಬೇಗ ಚೇತರಿಸಿಕೊಂಡು ಬಿಡಿ..