ಮುರಿದುಬಿತ್ತು ಅರವಿಂದ್ ದಿವ್ಯಾ ಲವ್..‌ ಬಹಿರಂಗವಾಗಿ ಪ್ರೀತಿ ಎಂದಿದ್ದಕ್ಕೆ ದಿವ್ಯಾಗೆ ಖಾರವಾಗಿಯೇ ಪ್ರತಿಕ್ರಿಯೆ ಕೊಟ್ಟ ಅರವಿಂದ್‌.. ಇಷ್ಟೇ ಕಣಮ್ಮಾ ಜೀವನ.. ಉಂಗುರ ಬೇರೆ ಕೊಟ್ಟಿದ್ಳು..

0 views

ಬಿಗ್ ಬಾಸ್ ಸೀಸನ್ ಎಂಟರಲ್ಲಿ ಕ್ಯೂಟ್ ಜೋಡಿ ಎಂದೇ ಖ್ಯಾತರಾಗಿರುವ ಅರವಿಂದ್ ದಿವ್ಯಾ ಜೋಡಿ ಇದೀಗ ಬ್ರೇಕ್ ಅಪ್ ಮಾಡಿಕೊಳ್ಳುವ ಹಂತಕ್ಕೆ ಬಂದಿ ನಿಂತಿದ್ದಾರೆ.. ಹೌದು ಅವರ ಲವ್ ವಿಚಾರ ಮನೆಯಲ್ಲಿ ದೊಡ್ಡ ಸದ್ದು ಮಾಡಿದ್ದು ಅರವಿಂದ್ ನೇರವಾಗಿಯೇ ದಿವ್ಯಾಗೆ ಶಾಕ್ ನೀಡಿದ್ದು ದಿವ್ಯಾ ಉರುಡುಗ ಬಾತ್ ರೂಮಿಗೆ ಹೋಗಿ ಕಣ್ಣೀರಿದುವಂತಾಗಿದೆ ಪರಿಸ್ಥಿತಿ.. ಹೌದು ಬಿಗ್ ಬಾಸಿನ ಪ್ರತಿ ಸೀಸನ್ ನಲ್ಲಿಯೂ ಒಂದೊಂದು ಜೋಡಿ ಇರಲೇ ಬೇಕು ಎಂದು ಬಹುಶಃ ನಿಯಮವೇನಾದರು ಇರಬಹುದು.. ಅದೇ ಕಾರಣಕ್ಕೆ ಒಬ್ಬರನ್ನೊಬ್ಬರು ಪರಿಚಯವೇ ಇಲ್ಲದೇ ಬಿಗ್ ಬಾಸ್ ಮನೆಗೆ ಬರ್ತಾರೆ.. ಇಲ್ಲೇ ಪರಿಚಯ ಇಲ್ಲೇ ಲವ್ವು.. ಕೊನೆಗೆ ಬಿಗ್ ಬಾಸ್ ನಿಂದ ಹೊರ ಹೋದ ಬಳಿಕ ನಾನ್ಯಾರೋ ನೀನ್ಯಾರೋ ಎನ್ನುವಂತಿರುತ್ತಾರೆ..

ಆದರೆ ಈ ಸೀಸನ್ ನಲ್ಲಿ ಪ್ರೇಕ್ಷಕರಿಗ್ರ್ ಕೊಂಚ ವಿಶೇಷ ಎನಿಸಿತ್ತು.. ಇದಕ್ಕೆ ಕಾರಣ ದಿವ್ಯಾ ಉರುಡುಗ ಹಾಗೂ ಅರವಿಂದ್ ಜೋಡಿ.. ಇಬ್ಬರೂ ಸಹ ನಿಜವಾಗಿಯೂ ಪ್ರೀತಿ ಮಾಡುತ್ತಿದ್ದಾರಾ ಎನ್ನುವಂತೆ ಅವರಿಬ್ಬರ ನಡವಳಿಕೆ ತೋರಿತ್ತು.. ಅದರಲ್ಲಿಯೂ ದಿವ್ಯಾಗಾಗಿ ದಿವ್ಯಾ ಬಗ್ಗೆ ಮಾತನಾಡುವಾಗ ಅರವಿಂದ್ ಕಣ್ಣೀರಿಟ್ಟಿದ್ದು.. ಇತ್ತ ದಿವ್ಯಾ ಉರುಡುಗ ಸಹ ತನ್ನ ಅಪ್ಪ ಕೊಟ್ಟಿದ್ದ ಚಿನ್ನದ ಉಂಗುರವನ್ನು ಅರವಿಂದ್ ಗಾಗಿ ಕೊಟ್ಟಿದ್ದು ಇಬ್ಬರೂ ಸೀರಿಯಸ್ ಆಗಿ ಲವ್ವಲ್ಲಿ ಬಿದ್ದಿದ್ದಾರೆ ಎಂದೆನಿಸುತಿತ್ತು.. ಇನ್ನು ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿಯ ಸಾಕಷ್ಟು ಪೇಜ್ ಗಳು ಸಹ ಓಪನ್ ಆಗಿದ್ದು ಬಿಟ್ಟರೆ ಬಿಗ್ ಬಾಸ್ ಮನೆಯಲ್ಲಿಯೇ ಮದುವೆ ಮಾಡಿಸುವಂತೆ ಕಾಣುತಿತ್ತು.. ಆದರೆ ಈ ಜೋಡಿ ಮೇಲೆ ಅದ್ಯಾರ ಕಣ್ಣು ಬಿತ್ತೋ ಇಬ್ಬರು ಅಂತರ ಕಾಯ್ದುಕೊಳ್ಳುವ ರೀತಿ ಕಾಣುತ್ತಿದೆ..

ಹೌದು ಗಾರ್ಡನ್ ಏರಿಯಾ ಆಗಲಿ.. ಲಿವಿಂಗ್ ಏರಿಯಾ ಆಗಲಿ ಕಿಚನ್ ಏರಿಯಾ ಅಗಲಿ ಬೆಡ್ ರೂಮ್ ಏರಿಯಾ ಆಗಲಿ ಎಲ್ಲಿ ಹೋದರು ಅರವಿಂದ್ ದಿವ್ಯಾ ಒಂದೇ ಕಡೆ ಕಾಣಿಸಿಕೊಳ್ಳುತ್ತಿದ್ದರು.. ಕೂತುಕೊಳ್ಳುತ್ತಿದ್ದರು.. ಮನೆಯಲ್ಲಿರುವ ಮಿಕ್ಕ ಸದಸ್ಯರ ಬಗ್ಗೆ ಗಮನವೂ ಕೊಡದೆ ತಮ್ಮ ಪಾಡಿಗೆ ತಾವು ಒಟ್ಟಿಗೆ ಕೂತು ಸುಮ್ಮನೆ ಮಾತನಾಡುತ್ತಿದ್ದರು.. ಇನ್ನು ಈ ಇಬ್ಬರ ನಡುವೆ ಏನೋ ಇದೆ.. ಲವ್ ಇದೆ ಎಂದು ಪ್ರೇಕ್ಷಕರಷ್ಟೇ ಅಲ್ಲದೇ ಬಿಗ್ ಬಾಸ್ ಮನೆಯ ಇತರ ಸದಸ್ಯರು ಸಹ ಮಾತನಾಡಿಕೊಳ್ಳುತ್ತಿದ್ದರು.. ಕಿಚ್ಚ ಸುದೀಪ್ ಅವರೂ ಸಹ ರೇಗಿಸುತ್ತಿದ್ದರು.. ಆದರೆ ಇಂದು ಬಿಗ್ ಬಾಸ್ ಮನೆಯಲ್ಲಿ ನಡೆದದ್ದೇ ಬೇರೆ.. ಹೌದು ಇಂದು ರಘು ಅವರು ನೇರವಾಗಿ ದಿವ್ಯಾ ಅವರನ್ನು ನಿಮ್ಮ ಅರವಿಂದ್ ನಡುವೆ ಲವ್ ಇಲ್ವಾ ಎಂದು ಕೇಳಿದ್ದಾರೆ..

ಇದಕ್ಕೆ ನಾಚಿ ನೀರಾದ ದಿವ್ಯಾ ಉರುಡುಗ “ನನಗೆ ಅರವಿಂದ್ ಅಂದ್ರೆ ಇಷ್ಟ.. ಮುಂದೆ ಏನಾಗುತ್ತೆ ಅಂತ ಗೊತ್ತಿಲ್ಲ ಎಂದರು.. ಜೊತೆಗೆ ಇದೇ ಪ್ರಶ್ನೆಯನ್ನು ಅರವಿಂದ್ ಅವರ ಬಳಿಯೂ ಕೇಳಿ ಪ್ಲೀಸ್ ಎಂದು ದಿವ್ಯಾ ಉರುಡುಗ ರಘು ಅವರನ್ನು ಮನವಿ ಮಾಡಿದರು.. ಅವರ ಮಾತಿಗೆ ಒಪ್ಪಿ ರಘು ಅರವಿಂದ್ ಬಳಿ ” ಅರವಿಂದ್, ದಿವ್ಯಾ ಅವರನ್ನ ಎಷ್ಟು ಇಷ್ಟ ಪಡ್ತೀರಾ ಎಂದು ಕೇಳಿದ್ದಾರೆ.. ಇದಕ್ಕೆ ನೇರವಾಗಿ ಪಟ್ ಅಂತ ಉತ್ತರ ನೀಡಿದ ಅರವಿಂದ್ ಯಾರ್ ಇಷ್ಟ ಪಡ್ತೀದಿನಿ ಅಂದಿದ್ದು.. ಎಂದರು.. ಅದಕ್ಕೆ ಉತರ ನೀಡಿದ ರಘು ಹಾಗಾದರೆ ದಿವ್ಯಾ ಕಂಡರೆ ಇಷ್ಟನೇ ಇಲ್ವಾ ಎಂದಿದ್ದಾರೆ.. ಇದಕ್ಕೆ ಮರು ಉತ್ತರ ನೀಡಿದ ಅರವಿಂದ್‌ ಇಷ್ಟನೇ.. ಆದರೆ ಪ್ರೀತಿ ಪ್ರೇಮ ಎಲ್ಲಾ ಏನು ಇಲ್ಲ ಎಂದು ನೇರವಾಗಿಯೇ ದಿವ್ಯಾ ಎದುರಲ್ಲಿಯೇ ಹೇಳಿದ್ದಾರೆ..

ಅರವಿಂದ್ ನ ಈ ಮಾತುಗಳನ್ನು ಕೇಳಿ ಅಲ್ಲಿಯೇ ನಿಂತಿದ್ದ ದಿವ್ಯಾ ಮನಸ್ಸಿಗೆ ನೋವಾಗಿರುವುದಂತೂ ಸತ್ಯ.. ಅದಕ್ಕೆ ಹೇಳೋದು ಎರಡು ಮೂರು ದಿನದ ಸ್ನೇಹವನ್ನು.. ಆಕರ್ಷಣೆಯನ್ನು ಪ್ರೀತಿ ಎಂದು ತಿಳಿದು ಭಾವನೆಗಳನ್ನು ಹರಿಬಿಟ್ಟು ಇಂತಹ ನೋವು ಅನುಭವಿಸುವುದು ಯಾಕೆ ಬೇಕಿತ್ತು.. ಅದರಲ್ಲೂ ಅಪ್ಪ ಕೊಟ್ಟ ಉಂಗುರ ಕೊಡುವ ಅಗತ್ಯವಾದರೂ ಏನಿತ್ತು ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರೇಕ್ಷಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.‌. ಬಿಗ್‌ ಬಾಸ್‌ ಮನೆಯಲ್ಲಿ ಹೆಚ್ಚು ದಿನ ಉಳಿದುಕೊಲ್ಳಲು ಲವ್‌ ಎಂಬ ಒಂದು ಹಣೆಪಟ್ಟಿ ಬೇಕಷ್ಟೇ ಎನ್ನುವಂತಾಗಿದೆ.. ಒಟ್ಟಿನಲ್ಲಿ ಬಿಗ್ ಬಾಸ್ ನಲ್ಲಿ ಶುರುವಾದ ಲವ್ ಗಳೆಲ್ಲಾ ಬ್ರೇಕ್ ಅಪ್ ಆಗಲೇ ಬೇಕು.. ಇದೇ ನಿಯಮ.. ಆದರೆ ಬಿಗ್ ಬಾಸ್ ಮನೆಯಲ್ಲಿ ತಂಗಿ ಎಂದು ಹೊರಗೆ ಬಂದು ಲವ್ ಮಾಡಿ ಆದ ನಮ್ ಚಂದು ನಿವಿ ಮದುವೆಯೊಂದೆ ಕೊನೆಗೆ ಶಾಶ್ವತ..