ಬಿಗ್ ಬಾಸ್ ಸೀಸನ್ ಎಂಟರಲ್ಲಿ ಮಹಿಳೆಯರ ಪೈಕಿ ಮೊದಲ ಸ್ಥಾನ ಪಡೆದು ಈ ಸೀಸನ್ ನ ಎರಡನೇ ರನ್ನರ್ ಆಪ್ ಆಗಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ದಿವ್ಯಾ ಉರುಡುಗ ಇದೀಗ ಮಾದ್ಯಮಗಳ ಸಾಲು ಸಾಲು ಸಂದರ್ಶನಗಳಲ್ಲಿ ಬ್ಯುಸಿ ಆಗಿ ಹೋಗಿದ್ದಾರೆ.. ಬಿಗ್ ಬಾಸ್ ಮನೆಯ ಅನುಭವಗಳನ್ನು ಹಂಚಿಕೊಂಡಿರುವ ದಿವ್ಯಾ ಉರುಡುಗ ಇದೀಗ ತನ್ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಗಿದ್ದ ಟ್ರೋಲ್ ಬಗ್ಗೆಯೂ ಮಾತನಾಡಿದ್ದಾರೆ.. ಹೌದು ಬಿಗ್ ಬಾಸ್ ಸೀಸನ್ ಎಂಟರಲ್ಲಿ ಪ್ರಬಲ ಸ್ಪರ್ಧಿಗಳಲ್ಲಿ ಅದರಲ್ಲೂ ಹೆಣ್ಣು ಮಕ್ಕಳ ಪೈಕಿ ದಿವ್ಯಾ ಉರುಡುಗ ಒಬ್ಬ ಪ್ರಬಲ ಸ್ಪರ್ಧಿಯಾಗಿ ಶುರುವಿನಲ್ಲಿ ಗುರುತಿಸಿಕೊಂಡಿದ್ದರು.. ಆದರೆ ಬರುಬರುತ್ತಾ ವ್ಯಯಕ್ತಿಕವಾಗಿ ದಿವ್ಯಾ ಉರುಡುಗ ಕಾಣಿಸಿಕೊಂಡದ್ದಕ್ಕಿಂತ ಹೆಚ್ಚಾಗಿ ಅರವಿಂದ್ ಜೊತೆಗೆ ಹೆಚ್ಚು ಕಾಣಿಸಿಕೊಂಡರು.. ಇಬ್ಬರ ನಡುವಿನ ಆತ್ಮೀಯತೆ ಪ್ರೀತಿಯ ವಿಚಾರವೇ ಹೆಚ್ಚು ಸದ್ದು ಹಾಗೂ ಸುದ್ದಿ ಮಾಡಿತ್ತು..

ಇತ್ತ ಹೊರಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ಕಡೆ ಅರವಿಂದ್ ಹಾಗೂ ದಿವ್ಯಾ ಜೋಡಿಯನ್ನು ಆರ್ವಿಯಾ ಜೋಡಿ ಎಂದೇ ಕರೆಯಲಾಗುತಿತ್ತು.. ಆ ಜೋಡಿಯ ಅಭಿಮಾನಿ ಬಳಗಗಳು ಸಹ ಹುಟ್ಟಿಕೊಂಡಿದ್ದು ನಿಜಕ್ಕೂ ನಂಬಲೇ ಬೇಕಾದ ಸತ್ಯವೇ ಸರಿ.. ಇನ್ನು ಅರವಿಂದ್ ಹಾಗೂ ದಿವ್ಯಾ ನಡುವೆ ಪ್ರೀತಿ ಇರುವುದು ಸ್ಪಷ್ಟವಾಗಿ ಜನರಿಗೆ ಕಾಣುತ್ತಿದ್ದು ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಇಬ್ಬರು ಮದುವೆಯಾಗ್ತಾರೆ ಎನ್ನುವ ಸುದ್ದಿ ಇತ್ತು.. ಆದರೆ ಇದುವರೆಗೂ ದಿವ್ಯಾ ಆಗಲಿ ಅರವಿಂದ್ ಆಗಲಿ ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.. ಆದರೆ ಬಿಗ್ ಬಾಸ್ ಮನೆಯಲ್ಲಿ ನಾನು ಗೆಲ್ಲದೇ ಹೋದರು ಅರವಿಂದ್ ಗೆದ್ದೇ ಗೆಲ್ತಾರೆ ಎಂದು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ದಿವ್ಯಾ ಉರುಡುಗ ಅವರು ಇದೀಗ ಅದೇ ವಿಚಾರವಾಗಿ ಬಹಳಷ್ಟು ಬೇಸರವನ್ನು ಹೊರ ಹಾಕಿದ್ದಾರೆ..

ಬಹಳಷ್ಟು ಸಂದರ್ಶನಗಳಲ್ಲಿ ಅರವಿಂದ್ ಗೆಲ್ಲಬೇಕಿತ್ತು ಎಂಬ ಮಾತುಗಳನ್ನು ಆಡಿದ್ದಾರೆ.. ಇದರ ಜೊತೆಗೆ ತಮ್ಮ ಬಿಗ್ ಬಾಸ್ ಮನೆಯ ಅನುಭವಗಳನ್ನು ಹಂಚಿಕೊಂಡಿದ್ದಾರೆ.. ಇನ್ನು ದಿವ್ಯಾ ಉರುಡುಗ ಬಿಗ್ ಬಾಸ್ ಮನೆಯಲ್ಲಿದ್ದಾಗ ಸಾಮಾಜಿಕ ಜಾಲತಾಣದಲ್ಲಿ ದಿವ್ಯಾ ಉರುಡುಗ ಕುರಿತ ಕೆಲವೊಂದು ವಿಚಾರ ಟ್ರೋಲ್ ಆಗಿತ್ತು.. ದಿವ್ಯಾ ಉರುಡುಗ ಅವರ ಹಳೆಯ ಫೋಟೋವೊಂದು ಬಿಡುಗಡೆಯಾಗಿ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು.. ಆ ಫೋಟೋಗಳಿಗೆ ಕೆಲ ಹಾಡುಗಳನ್ನು ಹಾಕಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಸಹ ಆಯಿತು.. ಕೊನೆಗೆ ದಿವ್ಯಾ ಉರುಡುಗ ಅವರ ಮನೆಯವರು ಕೋರ್ಟ್ ಮೆಟ್ಟಿಲೇರಿ ಆ ಕುರಿತು ಫೋಟೋ ಸುದ್ದಿ ಪ್ರಸಾರ ಮಾಡದಂತೆ ಸ್ಟೇ ನೀಡಿ ಎಂದು ಕೋರ್ಟ್ ಗೆ ಮನವಿ ಸಲ್ಲಿಸಿದ್ದರು..

ಆ ಬಳಿಕ ದಿವ್ಯಾ ಉರುಡುಗ ಅವರ ಫೋಟೋ ವೈರಲ್ ಆಗಲು ಪ್ರಶಾಂತ್ ಸಂಬರ್ಗಿ ಅವರೇ ಕಾರಣ ಎಂದು ಚಕ್ರವರ್ತಿ ಚಂದ್ರಚೂಡ ಅವರು ಹೊಸ ವಿಚಾರವನ್ನು ತಿಳಿಸಿದ್ದರು.. ಈಗ ಪ್ರಶಾಂತ್ ಸಂಬರ್ಗಿ ಬಿಗ್ ಬಾಸ್ ಮನೆಯಿಂದ ಹೊರ ಬಂದು ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದಾಯ್ತು.. ಅತ್ತ ಫೊಟೋ ವೈರಲ್ ಮಾಡಿದಾತ ಅದಾಗಲೇ ದಿವ್ಯಾ ಉರುಡುಗ ಅವರ ತಾಯಿಯ ಬಳಿ ಹೋಗಿ ಕ್ಷಮೆ ಕೇಳಿದ್ದಾನೆ ಎಂದೂ ಸಹ ಖುದ್ದು ಪ್ರಶಾಂತ್ ಸಂಬರ್ಗಿ ಅವರೇ ವಿಚಾರ ತಿಳಿಸಿದ್ದೂ ಆಯ್ತು.. ಆದರೆ ಪ್ರಶಾಂತ್ ಸಂಬರ್ಗಿ ಹಾಗೂ ಚಕ್ರವರ್ತಿ ಚಂದ್ರಚೂಡ ಅವರ ನಡುವೆ ವಾಗ್ವಾದಗಳು ಮಾತ್ರ ಮುಂದುವರೆಯುತ್ತಲೇ ಇದೆ..

ಈ ನಡುವೆಯೇ ಮಾಧ್ಯಮವೊಂದರ ಸಂದರ್ಶನದಲ್ಲಿ ದಿವ್ಯಾ ಉರುಡುಗ ತಮ್ಮ ಬಗ್ಗೆ ಆದ ಟ್ರೋಲ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.. ಹೌದು ಜನರು ನನ್ನ ಬಗ್ಗೆ ಸಾಕಷ್ಟು ಮಾತನಾಡುತ್ತಾರೆ ಅದಕ್ಕೆಲ್ಲಾ ನಾನು ತಲೆ ಕೆಡಿಸಿಕೊಳ್ಳೋದಿಲ್ಲ.. ಒಂದು ವಿಚಾರ ಅಲ್ಲ ಸಾವಿರ ಮಾತನಾಡ್ತಾರೆ ಅದಕ್ಕೆಲ್ಲಾ ಚಿಂತೆ ಮಾಡ್ತಾ ಕೂರೋಕೆ ಆಗಲ್ಲ.. ನಮ್ಮ ಕೆಲಸದಲ್ಲಿ ನಾವು ಸುಮ್ಮನೆ ಮುಣ್ದೆ ಸಾಗುತ್ತಿರಬೇಕಷ್ಟೇ ಎಂದು ಟ್ರೋಲ್ ಗಳಿಗೆ ನಾನು ಯಾವುದೇ ಪ್ರಾಮುಖ್ಯತೆಯಾಗಲಿ ಪ್ರಾತಿನಿಧ್ಯವಾಗಲಿ ಕೊಡೋದಿಲ್ಲ ಎಂದು ತಿರುಗೇಟು ನೀಡಿದ್ದಾರೆ..