ಮದುವೆಗೆ ಗ್ರೀನ್‌ ಸಿಗ್ನಲ್.. ವಿಚಾರ ಖಚಿತ ಪಡಿಸಿ ಸಿಹಿಸುದ್ದಿ ಕೊಟ್ಟ ಅರವಿಂದ್..

0 views

ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಬೈಕರ್ ಅರವಿಂದ್ ಸಧ್ಯ ಅಭಿಮಾನಿಗಳು ಹಾಗೂ ಪ್ರೇಕ್ಷಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ..‌ ಹೌದು ತಮ್ಮ ಮದುವೆಯ ವಿಚಾರವನ್ನು‌ ಖಚಿತ ಪಡಿಸಿದ್ದು ಸಧ್ಯದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡುವುದು ಪಕ್ಕಾ ಆಗಿದೆ.. ಬಿಗ್ ಬಾಸ್ ನ ಕ್ಯೂಟ್ ಜೋಡಿಯಾಗಿದ್ದ ಅರವಿಂದ್ ಹಾಗೂ ದಿವ್ಯಾ ಉರುಡುಗ ನಿಜ ಜೀವನದಲ್ಲಿಯೂ ಜೊತೆಯಾಗುವುದು ಬಹುತೇಕ ಖಚಿತವಾಗಿದೆ..

ಹೌದು ಬಿಗ್ ಬಾಸ್ ಸೀಸನ್ ಎಂಟು ರದ್ದಾದ ನಂತರ ಬಿಗ್ ಬಾಸ್ ಮನೆಯಲ್ಲಿ‌ ಉಳಿದಿದ್ದ ಉಳಿದ ಹನ್ನೊಂದು ಸ್ಪರ್ಧಿಗಳು ಬಿಗ್ ಬಾಸ್ ನಿಂದ ಹೊರ ಬಂದರು.. ಸಧ್ಯ ಸಾಮಾಜಿಕ ಜಾಲತಾಣದ ತುಂಬೆಲ್ಲಾ ಸ್ಪರ್ಧಿಗಳ ಸಂದರ್ಶನದ ವೀಡಿಯೋಗಳೇ ಹರಿದಾಡುತ್ತಿವೆ‌.. ಅದೇ ರೀತಿ ಮಾದ್ಯಮದ ಸಂದರ್ಶನವೊಂದರಲ್ಲಿ ಅರವಿಂದ್ ತಮ್ಮ ಮದುವೆ ವಿಚಾರವನ್ನು ಖಚಿತ ಪಡಿಸಿದ್ದಾರೆ.. ಹೌದು ಬಿಗ್ ಬಾಸ್ ಮನೆಯಲ್ಲಿ‌ ಕೆಲ ವಾರಗಳ ಹಿಂದೆ ನಡೆದ ಜೋಡಿ ಟಾಸ್ಕ್ ನಲ್ಲಿ ದಿವ್ಯಾ ಉರುಡುಗ ಬೇರೆ ಯಾರನ್ನೂ ಸಹ ಒಪ್ಪಿಕೊಳ್ಳದೇ ಅರವಿಂದ್ ರನ್ನೇ ಆಯ್ಕೆ ಮಾಡಿಕೊಂಡರು.. ನಂತರ ಹಿಂತಿರುಗಿ ನೋಡಿದ ಮಾತೇ ಇಲ್ಲ ಬಿಡಿ‌.. ಹೌದು ಜೋಡಿ ಟಾಸ್ಕ್ ನಲ್ಲಿ ಮಾತ್ರವಲ್ಲ ಸಂಪೂರ್ಣ ಬಿಗ್ ಬಾಸ್ ಮನೆಯಲ್ಲಿ ಈ ಜೋಡಿ ಹಿಟ್ ಆಯಿತು.. ಇಬ್ಬರೂ ಬಹಳ ಆತ್ಮೀಯರಾದರು.. ಅತ್ತ ಇಬ್ಬರೂ ಲವ್ ಮಾಡ್ತಾ ಇದ್ದಾರೆ ಎಂದು ಸಂಪೂರ್ಣ ಮನೆ ಮಾತನಾಡಿಕೊಳ್ಳುತ್ತಿದ್ದರು..

ದಿವ್ಯಾ ಕೂಡ ಬಹಳ ಸೀರಿಯಸ್ ಆಗಿ ಅರವಿಂದ್ ರನ್ನು ಪ್ರೀತಿಸುತ್ತಿದ್ದ ವಿಚಾರ ಸ್ಪಷ್ಟವಾಗಿ ಪ್ರೇಕ್ಷಕರಿಗೆ ಕಾಣುತಿತ್ತು.. ಅತ್ತ ಅರವಿಂದ್ ಮಾತ್ರ ಹೊರಗೆ ತೋರಿಸಿಕೊಳ್ಳದಿದ್ದರೂ ಸಹ ಮನಸ್ಸಿನಲ್ಲಿಯೇ ದಿವ್ಯಾರನ್ನು ಇಷ್ಟ ಪಡುತ್ತಿದ್ದಂತೆ ಕಾಣುತಿತ್ತು.. ಆದರೆ ಬಿಗ್ ಬಾಸ್ ಮನೆಯಿಂದ ದಿವ್ಯಾ ಅನಾರೋಗ್ಯದ ಕಾರಣ ಹೊರ ಬಂದ ದಿನ ಅರವಿಂದ್ ನಿಜಕ್ಕೂ ದಿವ್ಯಾರನ್ನು ಎಷ್ಟು ಮಿಸ್ ಮಾಡಿಕೊಳ್ತಾ ಇದ್ದೆನೆಂದು ಖಚಿತ ಪಡಿಸಿಕೊಂಡರು.. ಇನ್ನು ಆ ದಿನ ಎಲ್ಲಾ ಮುಗೀತು ಎಂದು ಕಣ್ಣೀರನ್ನು ಸಹ ಇಟ್ಟರು.. ಅತ್ತ ನಿಧಿ ಸುಬ್ಬಯ್ಯ ಹತ್ತಿರಕ್ಕೆ ಬಂದು ಸಂತೈಸಿದ್ದರು..

ಇನ್ನು ಇದೀಗ ಮಾಧ್ಯಮದ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಅರವಿಂದ್ ದಿವ್ಯಾ ಉರುಡುಗ ಕೊಟ್ಟ ಉಂಗುರದಿಂದ ನನ್ನ ಜೀವನ ಬದಲಾಗುತ್ತದೆ ಎಂಬ ನಂಬಿಕೆ ಇದೆ.. ಎಲ್ಲವೂ ಒಳ್ಳೆಯದಾಗಲಿದೆ ಎಂದುಕೊಂಡಿದ್ದೇನೆ ಎಂದಿದ್ದಾರೆ.. ಇನ್ನು‌ಮದುವೆಯ ವಿಚಾರ ತೆಗೆಯುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಅರವಿಂದ್ ಅವರು.. ಮನೆಯಲ್ಲು ಎಲ್ಲರೂ ಒಪ್ಪಿದ್ದಾರೆ.. ನಾನಷ್ಟೇ ಗ್ರೀನ್ ಸಿಗ್ನಲ್ ಕೊಡಬೇಕು… ಅಮ್ಮ ಅಪ್ಪ ಎಲ್ಲರೂ ಒಪ್ಪಿಕೊಂಡಿದ್ದಾರೆ‌.. ನನ್ನ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ ಎಂದರು.. ಅಷ್ಟೇ ಅಲ್ಲದೇ ಇನ್ನು ಸ್ವಲ್ಪ ದಿನದಲ್ಲಿ ಈ ವಿಚಾರ ತಿಳಿಸುವುದಾಗಿ ಹೇಳಿದರು..

ಒಟ್ಟಿನಲ್ಲಿ ಅತ್ತ ಅರವಿಂದ್ ಮನಸ್ಸಿನಲ್ಲಿಯೂ ದಿವ್ಯಾಗೆ ಜಾಗ ಕೊಟ್ಟಿದ್ದು ಇದೀಗ ನಿಜ ಜೀವನದಲ್ಲಿಯೂ ಈ ಜೋಡಿ ಒಂದಾಗಲಿದ್ದಾರೆನ್ನಬಹುದು.. ಈ ಮೂಲಕ ಬಿಗ್ ಬಾಸ್ ಮನೆಯಿಂದ ಹೊರ ಬಂದು ಮದುವೆಯಾಗುತ್ತಿರುವ ಎರಡನೇ ಜೋಡಿ ಇದಾಗಿದ್ದು ಚಂದನ್ ನಿವೇದಿತಾ ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದನ್ನು ನಾವಿಲ್ಲಿ ನೆನೆಯಬಹುದು…. ಒಟ್ಟಿನಲ್ಲಿ ಇಬ್ಬರೂ ಸಂತೋಷವಾಗಿರಲಿ ಅಷ್ಟೇ..