ಬಿಗ್ ಬಾಸ್ ನಿಂದ ದಿವ್ಯಾ ಹೊರಬರಲು ನಿಜವಾದ ಕಾರಣವೇ ಬೇರೆ.. ಸತ್ಯ ಬಿಚ್ಚಿಟ್ಟ ದಿವ್ಯಾ ಉರುಡುಗ ಅಣ್ಣ..

0 views

ಬಿಗ್ ಬಾಸ್ ಸೀಸನ್ ಎಂಟರಲ್ಲಿ ಬಹುಶಃ ಹಿಂದೆ ಯಾವ ಸೀಸನ್ ನಲ್ಲಿಯೂ ನಡೆಯದ ಘಟನೆ ನಡೆದಿದೆ.. ಈ ಹಿಂದೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಆರೋಗ್ಯ ಕೆಟ್ಟರೆ ಅಲ್ಲಿಯೇ ವೈದ್ಯರು ಚಿಕಿತ್ಸೆ ನೀಡಿ ಅಲ್ಲಿಯೇ ಗುಣಮುಖರಾಗಿ ಮರಳುತ್ತಿದ್ದರು.. ಇನ್ನು ಕಳೆದ ಸೀಸನ್ ನಲ್ಲೊ ರವಿ ಬೆಳೆಗೆರೆ ಅವರಿಗೆ ವಯಸ್ಸಾಗಿದ್ದ ಕಾರಣ ಅವರ ಆರೋಗ್ಯ ಅಷ್ಟು ಚೆನ್ನಾಗಿಲ್ಲದ ಕಾರಣ ಅವರನ್ನು ಒಂದೇ ವಾರಕ್ಕೆ ಮನೆಯಿಂದ ಕಳುಹಿಸಲಾಗಿತ್ತು.. ನಂತರ ಕಿಶನ್ ಸಹ ಆರೋಗ್ಯ ಕೆಟ್ಟು ಎರಡು ದಿನಗಳು ಚಿಕಿತ್ಸೆ ಪಡೆದು ಮತ್ತೆ ಬಿಗ್ ಬಾಸ್ ಮನೆಗೆ ಮರಳಿದ್ದರು.. ಆದರೆ ಈ ಸೀಸನ್ ನಲ್ಲಿ ನಡೆದದ್ದೇ ಬೇರೆಯಾಗಿದೆ..

ಹೌದು ಈ ಸೀಸನ್ ನಲ್ಲಿ ಅದರಲ್ಲಿಯೂ ಮಹಿಳಾ ಸ್ಪರ್ಧಿಗಳಲ್ಲಿ ಬಹಳಷ್ಟು ಪ್ರಬಲ ಸ್ಪರ್ಧಿ ಎನಿಸಿಕೊಂಡಿದ್ದ ದಿವ್ಯಾ ಉರುಡುಗ ಸದ್ಯ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ವಿಚಾರ ಅದಾಗಲೇ ಎಲ್ಲೆಡೆ ಸುದ್ದಿಯಾಗಿದೆ.. ಆದರೆ ನಿಜಕ್ಕೂ ದಿವ್ಯಾಗೆ ಆಗಿರೋದೇನು.. ಅವರು ಮನೆಯಿಂದ ಹೊರ ಬರಲು ನಿಜವಾದ ಕಾರಣವೇನು.. ಈ ಎಲ್ಲದರ ಬಗ್ಗೆ ಇದೀಗ ದಿವ್ಯಾ ಉರುಡುಗ ಅವರ ಅಣ್ಣ ಸತ್ಯ ಬಿಚ್ಚಿಟ್ಟಿದ್ದಾರೆ.. ಹೌದು ಕಿರುತೆರೆ ಹಿನ್ನೆಲೆಯಿಂದ ಬಿಗ್‌ ಬಾಸ್‌ ಮನೆಗೆ ಕಾಲಿಟ್ಟ ದಿವ್ಯಾ ಉರುಡುಗ ಬಿಗ್‌ ಬಾಸ್‌ ಸೇಸನ್‌ ಎಂಟರ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದು ಫಿನಾಲೆಯ ಟಾಪ್‌ ಐದು ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು ಆಶ್ಚರ್ಯ ಪಡಬೇಕಿರಲಿಲ್ಲ.. ಆದರೆ ಇದೀಗ ಹತ್ತನೇ ವಾರದ ಮಧ್ಯದಲ್ಲಿಯೇ ಮನೆಯಿಂದ ಹೊರ ನಡೆದಿದ್ದಾರೆ..

ಹೌದು ದಿವ್ಯಾ ಉರುಡುಗ ಅವರನ್ನು ರಾತ್ರೋ ರಾತ್ರಿ ಆರೋಗ್ಯ ತಪಾಸಣೆಗೆಂದು ಮನೆಯಿಂದ ಹೊರಗೆ ಕರೆತರಲಾಗಿತ್ತು.. ಎಲ್ಲಾ ಸ್ಪರ್ಧಿಗಳು ಚಿಕಿತ್ಸೆ ಪಡೆದು ದಿವ್ಯಾ ಮರಳಿ ಮನೆಗೆ ಬರುತ್ತಾಳೆ ಎಂದುಕೊಂಡಿದ್ದರು.. ಆದರೆ ದಿವ್ಯಾ ಉರುಡುಗ ಮರಳಿ ಮನೆಗೆ ಬರುವಳು ಎಂದುಕೊಂಡಿದ್ದ ಸ್ಪರ್ಧಿಗಳಿಗೆ ಶಾಕ್ ಕಾದಿತ್ತು.. ಹೌದು ಇದ್ದಕಿದ್ದ ಹಾಗೆ ದಿವ್ಯಾ ಉರುಡುಗರ ಎಲ್ಲಾ ಬಟ್ಟೆ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಪ್ಯಾಕ್ ಮಾಡಿ ಸ್ಟೋರ್ ರೂಮಿನಲ್ಲಿಡಿ ಎಂದು ಆದೇಶ ನೀಡಲಾಯಿತು.. ದಿವ್ಯಾರ ಎಲ್ಲಾ ವಸ್ತುಗಳನ್ನು ಪ್ಯಾಕ್ ಮಾಡಿ ಎನ್ನುತ್ತಲೇ ಮನೆಯ ಸದಸ್ಯರಿಗೆ ದಿವ್ಯಾ ಮತ್ತೆ ವಾಪಸ್ ಬರುವುದಿಲ್ಲ ಎಂಬುದು ಖಚಿತವಾಯಿತು.. ಎಲ್ಲರೂ ಕಣ್ಣೀರಿಟ್ಟರು..

ಅದರಲ್ಲಿಯೂ ದಿವ್ಯಾ ಜೊತೆ ಬಹಳಷ್ಟು ಆತ್ಮೀಯವಾಗಿದ್ದ ಅರವಿಂದ್ ತಮ್ಮ ನೋವನ್ನು ಹೊರ ಹಾಕಿದ ರೀತಿ ನಿಜಕ್ಕೂ ಬೇಸರ ತರಿಸಿತ್ತು.. ಕಣ್ಣೀರಿಟ್ಟು ಅವಳಿಲ್ಲದೇ ಹೇಗೆ ಈ ಮನೆಯಲ್ಲಿ.. ಬಹಳ ಕಾಡ್ತಾಳೆ.. ನೆನ್ನೆಯೇ ನಾನು ಡೌನ್ ಆಗೋದೆ.. ಎಂದು ಬೇಸರ ವ್ಯಕ್ತ ಪಡಿಸಿದ್ದರು.. ಆದರೀಗ ದಿವ್ಯಾ ಬಗ್ಗೆ ಅವರ ಅಣ್ಣ ಮಾಹಿತಿ ನೀಡಿದ್ದಾರೆ.. ಹೌದು ದಿವ್ಯಾ ಉರುಡುಗ ಅವರನ್ನು ಬಿಗ್ ಬಾಸ್ ನಿಂದ ಕರೆತಂದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.. ಹೌದು ದಿವ್ಯಾ ಅವರಿಗೆ ಯೂರಿನತಿ ಟ್ರ್ಯಾಕ್ ಇನ್ಫೆಕ್ಷನ್ ಆಗಿದೆ ಎಂದು ತಿಳಿದು ಬಂದಿದೆ.. ದಿವ್ಯಾ ಅವರಿಗೆ ಈ ಸಮಸ್ಯೆ ಬಹಳ ದಿನಗಳಿಂದ ಕಾಡುತ್ತಿದ್ದು ಈ ಮೊದಲಿನಿಂದಲೂ ಸಹ ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು.. ಬಿಗ್‌ ಬಾಸ್‌ ಮನೆಯಲ್ಲಿಯೂ ದಿವ್ಯಾಗೆ ಬೇಕಾದ ಔಷಧಿ ಹಾಗೂ ವೈದ್ಯರ ಸಮಾಲೋಚನೆಯನ್ನು ಆಗಾಗ ನೀಡಾಗುತಿತ್ತು.. ಅಷ್ಟೇ ಅಲ್ಲದೇ

ಕೆಲವೇ ದಿನಗಳ ಹಿಂದೆ ಕಿಚ್ಚ ಸುದೀಪ್ ಅವರು ಮನೆಯ ಸದಸ್ಯರಿಗೆ ತಮ್ಮ ಧ್ವನಿಯ ಮೂಲಕ ಸಂದೇಶ ನೀಡಿದಾಗಲೂ ದಿವ್ಯಾ ಉರುಡುಗ ಅವರಿಗೆ ಸರಿಯಾದ ಸಮಯಕ್ಕೆ ಔಷಧಿ ತೆಗೆದುಕೊಳ್ಳಿ ಮಾತ್ರೆ ಸೇವಿಸಿ.. ಆರೋಗ್ಯ ಕಾಪಾಡಿಕೊಳ್ಳಿ ಎಂದೇ ತಿಳಿಸಿದ್ದರು.. ಇನ್ನೂ ಸದ್ಯ ದಿವ್ಯಾ ಇದೀಗ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾಳೆ.. ಇನ್ನೇನು ಸಮಸ್ಯೆ ಇಲ್ಲ.. ಆರೋಗ್ಯವಾಗಿದ್ದಾಳೆ ಎಂದು ಆಕೆಯ ಅಣ್ಣ ಆಸ್ಪತ್ರೆಯಿಂದಲೇ ಮಾಹಿತಿ ನೀಡಿದ್ದಾರೆ. ಆದರೆ ದಿವ್ಯಾ ಮತ್ತೆ ಬಿಗ್ ನಾಸ್ ಮನೆಗೆ ಹೋಗುವುದು ಬಹಳಷ್ಟು ಸಂದೇಹವಿದೆ.. ಆದರೂ ಸಹ ದಿವ್ಯಾ ಮಾನಸಿಕವಾಗಿ ಬಹಳಷ್ಟು ಸ್ಟ್ರಾಂಗ್ ಇರುವ ಹೆಣ್ಣು ಮಗಳಾಗಿದ್ದು ಮತ್ತೆ ಬಿಗ್ ಬಾಸ್ ಗೆ ಕಂಬ್ಯಾಕ್ ಮಾಡುವರಾ ಕಾದು ನೋಡಬೇಕಿದೆ..