ಕೊರೊನಾದಿಂದ ಜೀವ ಕಳೆದುಕೊಂಡ ಕಿರುತೆರೆಯ ಖ್ಯಾತ ನಟಿ..

0 views

ಕೊರೊನಾ ಸೋಂಕು ಭಾರತಕ್ಕೆ ಕಾಲಿಟ್ಟ ಕೆಲವೇ ತಿಂಗಳಲ್ಲಿ ಮಧ್ಯಮ ಹಾಗೂ ಬಡ ವರ್ಗದ ಜನರ ಜೀವನ ತಲ್ಲಣವಾಗಿ ಹೋಯ್ತು.. ಇನ್ನೂ ಸಹ ಜೀವನ ಮೊದಲಿನಂತಾಗಲೂ ಅದೆಷ್ಟು ತಿಂಗಳು ಬೇಕೋ ಎಂದು ಯೋಚಿಸುವಂತಾಗಿದೆ.. ಅದೆಷ್ಟೋ ಸಾವಿರ ಮಂದಿ ಕೆಲಸ ಕಳೆದುಕೊಂಡು ಪೇಟೆಯಿಂದ ಹುಟ್ಟಿದ ಊರಿನ ದಾರಿ ಹಿಡಿದರು.. ಅದೆಷ್ಟೋ ಶಿಕ್ಷಕರು ಬೀದಿಬದಿಯಲ್ಲಿ ತರಕಾರಿ ಹಾಗೂ ಹಣ್ಣಿನ ವ್ಯಾಪಾರ ಮಾಡಲು ಮುಂದಾದರು.. ಇನ್ನೂ ಅನೇಕರು ಬೀದಿಗೆ ಬಿದ್ದರು.. ಇವರಲ್ಲಿ ಕಲಾವಿದರು ಹೊರತಾಗಿಲ್ಲ.. ಹೌದು ಅದೆಷ್ಟೋ ಧಾರಾವಾಹಿಗಳು ತನ್ನ ಪ್ರಸಾರ ನಿಲ್ಲಿಸಿದವು.. ಚೆನ್ನಾಗಿ ಓಡುತ್ತಿದ್ದ ಧಾರಾವಾಹಿಗಳು ಸಹ ಆರ್ಥಿಕ ಕಷ್ಟದಿಂದ ತನ್ನ ಪ್ರಸಾರ ನಿಲ್ಲಿಸಿದವು..

ಕನ್ನಡ ಸೇರಿದಂತೆ ಇತರ ಭಾಷೆಯ ಕೆಲ ಕಲಾವಿದರು ಆರ್ಥಿಕ ಸಂಕಷ್ಟದಿಂದ ಜೀವವನ್ನೂ ಸಹ ಕಳೆದುಕೊಂಡದ್ದು ನಿಜಕ್ಕೂ ಮನಕಲಕುವ ವಿಚಾರವಾಗಿತ್ತು.. ಇನ್ನು ಇದೆಲ್ಲವನ್ನು ಹೊರತು ಪಡಿಸಿದರೆ ಈಗಲೂ ಸಹ ದಿನಂಪ್ರತಿ ಸಾವಿರಾರು ಸಂಖ್ಯೆಯಲ್ಲಿ ಸೋಂಕಿಗೀಡಾಗುತ್ತಿರುವುದು ನೋವಿನ ವಿಚಾರ.. ಚಿತ್ರೀಕರಣದಲ್ಲಿ‌ ಪಾಲ್ಗೊಳ್ಳುತ್ತಿರುವ ಕಲಾವಿದರು ಬೇರೆ ದಾರಿಯೇ ಇಲ್ಲದೇ ಜೀವನ ಸಾಗಿಸಲು ಬಣ್ಣ ಹಚ್ಚಲೇ ಬೇಕಾದ ಕಾರಣಕ್ಕೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದು ಬಹಳಷ್ಟು ಮಂದಿಗೆ ಇದೀಗ ಸೋಂಕು ಪತ್ತೆಯಾಗುತ್ತಿದೆ..

ಹೌದು ಇದೀಗ ಕೊರೊನಾ ಸೋಂಕಿಗೆ ಗುರಿಯಾದ ಕಿರುತೆರೆಯ ಖ್ಯಾತ ಕಲಾವಿದೆ ಜೀವ ಕಳೆದುಕೊಂಡಿದ್ದಾರೆ.. 34 ವರ್ಷದ ಕಿರುತೆರೆ ನಟಿ ದಿವ್ಯಾ ಭಟ್ನಾಗರ್ ಇಂದು ಬೆಳಿಗ್ಗೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.. ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ವೆಂಟಿಲೇಟರ್​ನಲ್ಲಿ ಚಿಕಿತ್ಸೆ ನೀಡಲಾಗುತಿತ್ತು.. ಅವರ ಆರೋಗ್ಯ ತೀರಾ ಹದಗೆಟ್ಟಿತು ಎಂಬ ವಿಚಾರ ತಿಳಿಯುತ್ತಿದ್ದಂತೆ ದಿವ್ಯಾ ಅವರ ಸಹೋದರ ಹಾಗೂ ತಾಯಿ ದೆಹಲಿಯಿಂದ ಮುಂಬೈಗೆ ಆಗಮಿಸಿದ್ದರು… ಈ ವೇಳೆ ಆಕೆಯ ಸ್ಥಿತಿ ಗಂಭೀರವಾಗಿದ್ದು.. ವೆಂಟಿಲೇಟರ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಅವರ ತಾಯಿ ತಿಳಿಸಿದ್ದಾರೆ..

ಅದರಲ್ಲೂ ದಿವ್ಯಾ ಶೋ ನಡೆಸುತ್ತಿರುವಾಗಲೇ ಅಸ್ವಸ್ಥರಾಗಿ ಆಸ್ಪತ್ರೆಗೆ ದಖಲಿಸಲಾಗಿದ್ದು ಇನ್ನು ಅದೆಷ್ಟು ಜನರಿಗೆ ಸೋಂಕು ಕಾಣಿಸಿಕೊಂಡಿದೆಯೋ ತಿಳಿದುಬಂದಿಲ್ಲ.. ಹೌದು ದಿವ್ಯಾ ಭಟ್ನಾಗರ್ ಅವರು ತೇರಾ ಯಾರ್ ಹೂ ಹೂನ್ ಎಂಬ ಕಾಮಿಡಿ ಶೋ ಚಿತ್ರೀಕರಣದಲ್ಲಿರುವಾಗಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.. ಅವರು ಯೆ ರಿಶ್ತಾ ಕ್ಯಾ ಕೆಹ್ಲತಾ ಹೈ, ಸಂಸ್ಕಾರ್, ಉದಾನ್, ಜೀತ್ ಗಾಯಿ ತೋಹ್ ಪಿಯಾ ಮೊರೆ, ವಿಶ್ ಮತ್ತು ಸ್ಯಾನ್ವೇರ್ ಸಬ್ಕೊ ಪ್ರೀಟೊ ಮುಂತಾದ ಧಾರವಾಹಿಗಳಲ್ಲಿಯೂ ಸಹ ನಟಿಸಿದ್ದರು. ಆದರೆ ಇದೀಗ ಮುಖಕ್ಕೆ ಬಣ್ಣ ಹಚ್ಚಿ‌ ಮನರಂಜಿಸುತ್ತಿದ್ದ ತಾರೆಯೊಂದು ಕಾಣದ ಖಾಯಿಲೆಹ್ರ್ ಮರೆಯಾಗಿ ಹೋಯ್ತು..