ಬಿಗ್ ಬಾಸ್ ನಲ್ಲಿರುವ ದಿವ್ಯಾ ಸುರೇಶ್ ನಿಜಕ್ಕೂ ಯಾರು.. ಸತ್ಯ ಬಿಚ್ಚಿಟ್ಟ ನಟ ರಾಕೇಶ್ ಅಡಿಗ..

0 views

ಬಿಗ್ ಬಾಸ್ ಸೀಸನ್ ಎಂಟರ ಸ್ಪರ್ಧಿಗಳ ಆಯ್ಕೆ ಈ ಬಾರಿ ಕೊಂಚ ವಿಭಿನ್ನವಾಗಿದ್ದು ಪರಿಚಯವಿಲ್ಲದ ಅನೇಕರು ಈ ಸೀಸನ್ ನಲ್ಲಿ ಎಂಟ್ರಿ ನೀಡಿದ್ದು ಸ್ಪರ್ಧಿಗಳ ಅಯ್ಕೆಯ ಬಗ್ಗೆ ಶುರುವಿನಲ್ಲಿ ಸಾಕಷ್ಟು ಮೆಚ್ವುಗೆಯೂ ಸಹ ವ್ಯಕ್ತವಾಗಿತ್ತು.. ಆದರೆ ಬರುಬರುತ್ತಾ ಈ ಸೀಸನ್ ನ ಸ್ಪರ್ಧಿಗಳು ಸಹ ಮಾಮೂಲಿಯಂತೆ ಮನರಂಜನೆಗಿಂತ ಹೆಚ್ಚಾಗಿ ಜಗಳಗಳು ಕಿರಿಕ್ ಗಳಲ್ಲಿಯೇ ಭಾಗಿಯಾಗಿದ್ದು ಕೊಂಚ ಕಿರಿಕಿರಿಯೂ ಉಂಟಾಗಿತ್ತು. ಇನ್ನು ಈ ಬಾರಿ ಬಿಗ್ ಬಾಸ್ ನಲ್ಲಿ ಆಗಮಿಸಿದ ಕೆಲವೊಬ್ಬ ಸ್ಪರ್ಧಿಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು.. ಅದರಲ್ಲಿ‌ ಪ್ರಮುಖವಾಗಿ ಪ್ರಶಾಂತ್ ಸಂಬರ್ಗಿ ತಮ್ಮ ನೇರ ನುಡಿಗಳಿಗೆ ಸುದ್ದಿಯಾದರೆ ಇತ್ತ ಅರವಿಂದ್ ಹಾಗೂ ದಿವ್ಯಾ ಉರುಡುಗ ತಮ್ಮ ಲವ್ ಕಹಾನಿಗೆ ಸುದ್ದಿಯಾದರು.. ಈಗಲೂ ಆಗುತ್ತಲೇ ಇದ್ದಾರೆ. ಇವರೆಲ್ಲರ ಜೊತೆಗೆ ಶುಭಾ ಪೂಂಜಾ ಅವರು ತಮ್ಮ ನಡವಳಿಕೆಯಿಂದ ಅವರ ಮೇಲಿನ ಅಭಿಪ್ರಾಯವೇ ಬದಲಾಗುವಂತೆ ಮಾಡಿ ಅಭಿಮಾನ ಮೂಡುವಂತೆ ಮಾಡಿದರು.. ಇನ್ನು ಇವರೆಲ್ಲರನ್ನು ಹೊರತು ಪಡಿಸಿ ದಿವ್ಯಾ ಸುರೇಶ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಸುದ್ದಿ ಎರಡೂ ಮಾಡಿದ್ದರು.

ಹೌದು ದಿವ್ಯಾ ಸುರೇಶ್ ಅವರು ತೆಲುಗಿನ ಸಿನಿಮಾವೊಂದರಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಅಭಿನಯಿಸಿದ್ದು ಆ ಸಿನಿಮಾದ ಕೆಲ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.. ಇನ್ನು ದಿವ್ಯಾ ಸುರೇಶ್ ಅಭಿನಯದ ಆ ಸಿನಿಮಾದ ಕುರಿತು ಚಕ್ರವರ್ತಿ ಚಂದ್ರಚೂಡ ಹಾಗೂ ಪ್ರಶಾಂತ್ ಸಂಬರ್ಗಿ ಅವರು ಸಾಕಷ್ಟು ಚರ್ಚೆ ನಡೆಸಿದ್ದು ದಿವ್ಯಾ ಸುರೇಶ್ ಬಗ್ಗೆ ಬೇರೆಯದ್ದೇ ರೀತಿಯಲ್ಲಿ ಮಾತನಾಡಿದ್ದರು. ಈ ಬಗ್ಗೆ ಸುದೀಪ್ ಅವರು ವಾರಾಂತ್ಯದಲ್ಲಿ ಮಾತನಾಡಿ ನಿಮ್ಮ ಸಿನಿಮಾದ ಬಗ್ಗೆ ನಿಮಗೆ ಹೆಮ್ಮೆ ಇರಲಿ ಎಂದು ದಿವ್ಯಾ ಸುರೇಶ್ ರನ್ನು ಪ್ರೋತ್ಸಾಹಿಸಿದ್ದರು..

ಇನ್ನು ಇದೆಲ್ಲವನ್ನು ಹೊರತುಪಡಿಸಿ ದಿವ್ಯಾ ಸುರೇಶ್ ಅವರ ಕೆಲವೊಂದು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಹೌದು ಜೋಶ್ ಸಿನಿಮಾದ ನಟ ರಾಕೇಶ್ ಅಡಿಗ ಜೊತೆ ದಿವ್ಯಾ ಸುರೇಶ್ ಬಹಳ ಆತ್ಮೀಯವಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದವು.. ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂಬೆಲ್ಲಾ ಸುದ್ದಿಗಳು ಹಬ್ಬಿದ್ದವು. ಆದರೆ ಇದೀಗ ಈ ಬಗ್ಗೆ ಖುದ್ದು ನಟ ರಾಕೇಶ್ ಅಡಿಗ ಅವರೇ ಮಾತನಾಡಿದ್ದಾರೆ.

ಹೌದು ಮಾದ್ಯಮವೊಂದರ ಸಂದರ್ಶನದಲ್ಲಿ ದಿವ್ಯಾ ಸುರೇಶ್ ಬಗ್ಗೆ ಮಾತನಾಡಿರುವ ರಾಕೇಶ್ ಅಡಿಗ ನನ್ನ ಈಗಿನ ಜೀವನದಲ್ಲಿ ದಿವ್ಯಾ ಸುರೇಶ್ ಬಗ್ಗೆ ಮಾತನಾಡುವುದಿಲ್ಲ.. ಹೌದು ನಿಜ ನಾನು ದಿವ್ಯಾ ಸುರೇಶ್ ಮೂರ್ನಾಲು ವರ್ಷ ಜೊತೆಗಿದ್ದೆವು. ಆದರೆ ಈಗ ಅವಳಿಗೆ ಒಂದು ದೊಡ್ಡ ವೇದಿಕೆ ಸಿಕ್ಕಿದೆ ಅವಳು ಅವಳದ್ದೇ ದಾರಿಯಲ್ಲಿ ಸಾಧನೆ ಮಾಡ್ತಾ ಇದ್ದಾಳೆ. ಅವಳ ನನ್ನ ಫೋಟೋ ವೈರಲ್ ಆಗಿದ್ದಕ್ಕೆ ನನಗೆ ಬೇಸರ ಇಲ್ಲ ಆದರೆ ಅವಳ ಡಿಗ್ರಿ ಕಾಲೇಜ್ ಸಿನಿಮಾದ ಕೆಲವೊಂದು ಬೋಲ್ಡ್ ದೃಶ್ಯಗಳ ಬಗ್ಗೆ ಕೆಲವರು ಮಾತನಾಡಿದ್ದು ಬೇಸರವಾಯಿತು. ಅವಳ ಆ ಸಿನಿಮಾವನ್ನು ನಾನು ನೋಡಿದ್ದೇನೆ ಅವಳು ಅಭಿನಯಿಸುವ ಆ ಎಲ್ಲಾ ದೃಶ್ಯಗಳು ಆ ಸಿನಿಮಾಗೆ ಅವಶ್ಯಕತೆ ಇತ್ತು ಅದಕ್ಕೆ ಮಾಡಿದ್ದಾಳೆ. ಅದೊಂದು ಒಳ್ಳೆ ಮೆಸೆಜ್ ಇರುವ ಸಿನಿಮಾವಾಗಿತ್ತು.‌ ಅದರ ಬಗ್ಗೆ ಜನರು ಮಾತನಾಡಿದ್ದು ಬೇಸರವಾಯ್ತು ಎಂದಿದ್ದಾರೆ. ಅವಳು ಜೀವನದಲ್ಲಿ ಇನ್ನಷ್ಟು ಸಾಧನೆ ಮಾಡ್ಲಿ ಎಂದು ಹಾರೈಸಿದ್ದಾರೆ.

ಒಟ್ಟಿನಲ್ಲಿ‌ ಕೆಲವೊಂದು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ದಿವ್ಯಾ ಸುರೇಶ್ ಹಾಗೂ ರಾಕೇಶ್ ಅಡಿಗ ಜೊತೆಯಲ್ಲಿನ ಫೋಟೋಗೆ ಖುದ್ದು ರಾಕೇಶ್ ಅಡಿಗಾರೆ ಸ್ಪಷ್ಟನೆ ನೀಡಿದ್ದು ನಾನು ದಿವ್ಯಾ ಸುರೇಶ್ ಮೂರ್ನಾಲ್ಕು ವರ್ಷಗಳಿಂದ ಜೊತೆಯಲ್ಲಿದ್ದೆವು. ನೈಟ್ ಔಟ್ ಸಿನಿಮಾದ ಆಡಿಷನ್ ಸಮಯದಲ್ಲಿ ಅವಳು ಪರಿಚಯವಾಗಿದ್ದು ಆಗಿನಿಂದ ನಮ್ಮಿಬ್ಬರ ನಡುವೆ ಆತ್ಮೀಯತೆ ಹೆಚ್ಚಾಯಿತು. ನನ್ನ ಎಲ್ಲಾ ಕಷ್ಟಗಳಿಗೆ ಅವಳು ಆಗಿದ್ದಾಳೆ. ಅವಳ ಕ್ಟಗಳಿಗೆ ನಾನು ಆಗಿದ್ದೇನೆ. ಆದರೆ ಈಗ ಅವಳಿಗೆ ದೊಡ್ಡ ವೇದಿಕೆ ಸಿಕ್ಕು ಅವಳು ಬೇರೆ ಸಾಧನೆ ಮಾಡುತ್ತಿದ್ದಾಳೆ ಈಗ ನನ್ನ ಅವಳ ಸಂಬಂಧದ ಬಗ್ಗೆ ಮಾತನಾಡುವುದು ಬೇಡ. ಅವಳಿಗೆ ಅವಳ ಕೆರಿಯರ್‌ ಗೆ ತೊಂದರೆಯಾಗುವಂತಹ ಹೇಳಿಕೆಗಳನ್ನು ನೀಡೋದು ಬೇಡ ಎಂದು ತಿಳಿಸಿದ್ದಾರೆ.