ಬಿಗ್‌ ಬಾಸ್‌ ನಿಂದ ಹೊರ ಬರುತ್ತಿದ್ದಂತೆ ಹೊಸ ಅವತಾರದಲ್ಲಿ ಕಾಣಿಸಿಕೊಂಡ ಬಿಗ್ ಬಾಸ್ ಮಹಿಳಾ ಸದಸ್ಯೆ..

0 views

ಬಿಗ್ ಬಾಸ್ ಅನ್ನೋದು ಕಲಾವಿದರಿಗೆ ಒಂದು ವೇದಿಕೆ.. ತಮ್ಮಲ್ಲಿರುವ ಪ್ರತಿಭೆಯನ್ನು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ತೋರಿಸಿ.. ನಂತರ ಹೊರ ಬಂದ ಬಳಿಕ ಬಿಗ್ ಬಾಸ್ ನಿಂದ ಪಡೆದ ಖ್ಯಾತಿಯನ್ನು ಬಳಸಿಕೊಂಡು ಸಿನಿಮಾ ಕಿತುತೆರೆ ಅಥವಾ ಇನ್ನಿತರ ರಂಗದಲ್ಲಿ ಅವಕಾಶ ಪಡೆಯುವುದು ಸಾಮಾನ್ಯ.. ಕೆಲವರು ಅದಾಗಲೇ ಸ್ಟಾರ್ ಗಳಾಗಿ‌ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವವರೂ ಸಹ ಬಿಗ್ ಬಾಸ್ ನಲ್ಲಿದ್ದರೆ.. ಮತ್ತೆ ಕೆಲವರು ಸಿನಿಮಾದ ಕನಸು ಕಾಣುತ್ತಿರುವವರು ಸಹ ಬಿಗ್ ಬಾಸ್ ಮನೆಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ಬಂದಿರುತ್ತಾರೆ..

ಅದೇ ರೀತಿ ಬಿಗ್ ಬಾಸ್ ನಲ್ಲಿ ಭಾಗವಹಿಸಿದ ಎಲ್ಲರಿಗೂ ಸಹ ಒಂದು ಮಟ್ಟದಲ್ಲಿ ಹೆಸರು ಇರುತ್ತದೆ.. ಹೊರ ಬಂದ ತಕ್ಷಣ ಅದನ್ನು ಸರಿಯಾಗಿ ಬಳಸಿಕೊಂಡು ಅವಕಾಶಗಳನ್ನು ಗಿಟ್ಟಿಸಿಕೊಳ್ಳಬೇಕಷ್ಟೇ..‌ ಸರಿಯಾಗಿ ಬಳಸಿಕೊಳ್ಳದಿದ್ದರೆ ಈಗಾಗಲೇ ಮರೆತೇ ಹೋಗಿರುವ ಅದೆಷ್ಟೋ ಬಿಗ್ ಬಾಸ್ ಸೀಸನ್ ಗಳ ಸ್ಪರ್ಧಿಗಳ ಹೆಸರಿನ ಪಟ್ಟಿಗೆ ಇವರೂ ಸೇರ್ಪಡೆಯಾಗುತ್ತಾರಷ್ಟೇ.. ಇನ್ನು ಇತ್ತೀಚಿಗೆ ತಾನೆ ಮುಕ್ತಾಯಗೊಂಡ ಬಿಗ್ ಬಾಸ್ ಸೀಸನ್ ಎಂಟರಲ್ಲಿಯೂ ಸಹ ಅನೇಕರು ಸಿನಿಮಾ ಕನಸು ಹೊತ್ತು ಬಂದಿದ್ದವರೇ.. ಮಂಜು ಪಾವಗಡ.. ದಿವ್ಯಾ ಸುರೇಶ್.. ದಿವ್ಯಾ ಉರುಡುಗ.. ವೈಷ್ಣವಿ.. ನಿಧಿ ಸುಬ್ಬಯ್ಯ.. ಶುಭಾ ಪೂಂಜಾ.. ಹೀಗೆ ಕೆಲವರು ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರೆ ಕೆಲವರು ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿದ್ದರೂ ಸಹ ದೊಡ್ಡ ಅವಕಾಶಗಳಿಗಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದರು..

ಆದರೆ ಎಪ್ಪತ್ತೊಂದು ದಿನಗಳ ಜರ್ನಿಯ ನಂತರ ಬಿಗ್ ಬಾಸ್ ಮುಕ್ತಾಯಗೊಂಡಿದ್ದು.. ಹೊರ ಬಂದ ಸ್ಪರ್ಧಿಗಳು ಕೆಲವರು ತಮ್ಮ ತಮ್ಮ ಕುಟುಂಬದ ಜೊತೆ ಸಮಯ ಕಳೆಯುತ್ತದ್ದರೆ.. ಶುಭಾ ಪೂಂಜಾ ಸೇರಿದಂತೆ ಇನ್ನೂ ಕೆಲವರು ಕೊರೊನಾ ಸಮಯದಲ್ಲಿ ಬಡ ಜನರಿಗೆ ನೆರವಾಗುತ್ತಿದ್ದಾರೆ.. ಇನ್ನೂ ಇದೆಲ್ಲದನ್ನು ಹೊರತು ಪಡಿಸಿದರೆ ಸಧ್ಯ ಇದೀಗ ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಮಹಿಳಾ ಸ್ಪರ್ಧಿಯೊಬ್ಬರು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.. ಹೌದು ಲಿಪ್ ಲಾಕ್ ಮೂಲಕ ಸದ್ದು ಮಾಡುತ್ತಿರುವ ಮಹಿಳಾ ಸ್ಪರ್ಧಿ ಮತ್ಯಾರೂ ಅಲ್ಲ ದಿವ್ಯಾ ಸುರೇಶ್.. ಹೌದು ಈ ಹಿಂದೆ ಬಿಗ್ ಬಾಸ್ ವೇದಿಕೆಗೆ ಬಂದ ಸಮಯದಲ್ಲಿ ನಾನು ಮಾಡುವ ಸೀರಿಯಲ್ ಆಗಲಿ ಸಿನಿಮಾ ಆಗಲಿ ಅರ್ಧಕ್ಕೆ ನಿಂತು ಹೋಗುತ್ತದೆ.. ನನ್ನ ಲಕ್ ಚೆನ್ನಾಗಿಲ್ಲ ಎಂದಿದ್ದರು..

ಆದರೆ ಅದೇನು ಕಾಕತಾಳಿಯವೋ ಹಿಂದೆಂದೂ ನಿಲ್ಲದ ಬಿಗ್ ಬಾಸ್ ಕೂಡ ಅರ್ಧಕ್ಕೆ ನಿಂತು ಹೋಯಿತು.. ಇದೇ ವಿಚಾರವಾಗಿ ದಿವ್ಯಾ ಸುರೇಶ್ ಅವರ ಹಳೆಯ ವೀಡಿಯೋ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದೂ ಉಂಟು.. ಆದರೆ ಇದೀಗ ಹೊರ ಬಂದ ಬಳಿಕ ಮಾದಕ ಲುಕ್ ನಲ್ಲಿ ಲಿಪ್ ಲಾಕ್ ಮೂಲಕ ದಿವ್ಯಾ ಸುರೇಶ್ ಹೊಸ ಅವತಾರದಲ್ಲಿ ಸದ್ದು ಮಾಡುತ್ತಿದ್ದಾರೆ.. ಹೌದು ದಿವ್ಯಾ ಸುರೇಶ್ ಬಿಗ್ ಬಾಸ್ ಮನೆಗೆ ಹೋಗುವ ಮುನ್ನವೇ ಕೆಲ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದರು.. ತೆಲುಗಿನಲ್ಲಿಯೂ ಸಿನಿಮಾವೊಂದರಲ್ಲಿ ಅಭಿನಯಿಸಿದ್ದು ಅದರಲ್ಲಿಯೂ ಮಾದಕವಾಗಿ ಕಾಣಿಸಿಕೊಂಡು ಪಡ್ಡೆ ಹುಡುಗರಿಗೆ ಹುಚ್ಚೆಬ್ಬಿಸಿದ್ದರು.. ಆದರೀಗ ಕನ್ನಡದ ಸಿನಿಮಾದಲ್ಲಿಯೇ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು ಅದೇ ಸಿನಿಮಾದ ಹಾಡೊಂದು ಬಿಡುಗಡೆಯಾಗಿದೆ..

ಹೌದು ಬಿಗ್ ಬಾಸ್ ಮನೆಗೆ ಬರುವ ಮುನ್ನವೇ ಸಿನಿಮಾದ ಸಂಪೂರ್ಣ ಚಿತ್ರೀಕರಣ ಮುಕ್ತಾಯಗೊಂಡಿದ್ದು ಸಿನಿಮಾದ ಹೆಸರು ರೌಡಿ ಬೇಬಿ.. ಸಧ್ಯ ದಿವ್ಯಾ ಸುರೇಶ್ ಜೊತೆ ಎಸ್ ಎಸ್ ರವಿ ಗೌಡ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.. ಸಿನಿಮಾದ ನೀ ನಾನಾದರೆ ಹಾಡು ಬಿಡುಗಡೆಯಾಗಿದ್ದು ನಾಯಕನೊಟ್ಟಿಗೆ ಮಾದಕ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಲಿಪ್ ಲಾಕ್ ಮೂಲಕ ಬಹಳ ಬೋಲ್ಡ್ ನಟಿ ಎನಿಸಿಕೊಂಡಿದ್ದಾರೆ.. ಬಹಳಷ್ಟು ಜನ ಹಾಡಿಗೆ ಮೆಚ್ಚುಗೆ ವ್ಯಕ್ತ ಪಡಿಸಿ ದಿವ್ಯಾ ಅವರಿಗೆ ಅಭಿನಂದನೆ ಸಲ್ಲಿಸಿದ್ದರೆ ಮತ್ತೆ ಕೆಲವರು ಮಂಜನ ಕತೆ ಏಮಾಯ್ತು ಎಂದು ಕಿಚ್ಚಾಯಿಸಿದ್ದೂ ಉಂಟು.. ಒಟ್ಟಿನಲ್ಲಿ ಸಿನಿಮಾದ ಕನಸು ಕಂಡಿದ್ದ ದಿವ್ಯಾ ಸುರೇಶ್ ಅದಾಗಲೇ ಕೆಲ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದು ಬಿಗ್ ಬಾಸ್ ಆಕೆಗೆ ಒಂದಿಷ್ಟು ಹೆಸರು ತಂದುಕೊಟ್ಟಿದ್ದು ತನ್ನನ್ನು ತಾನು ಗುರುತಿಸಿಕೊಳ್ಳಲು ಸಹಾಯವಾಯಿತೆನ್ನಬಹುದು..