ನಡುರಸ್ತೆಯಲ್ಲಿ ಕುಡಿದು ಬಿಗ್ ಬಾಸ್ ದಿವ್ಯಾ ಸುರೇಶ್ ಕಿರಿಕ್ ಪ್ರಕರಣಕ್ಕೆ ತಿರುವು.. ನಿಜಕ್ಕೂ ಅಲ್ಲಿ ನಡೆದಿರೋದೇ ಬೇರೆ..

0 views

ದಿವ್ಯಾ ಸುರೇಶ್.. ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡದ ಸೀಸನ್ ಎಂಟರಲ್ಲಿ ಕಾಣಿಸಿಕೊಂಡಿದ್ದ ದಿವ್ಯಾ ಸುರೇಶ್ ಸೀಸನ್ ನಡೆಯುತ್ತಿದ್ದ ಅಷ್ಟೂ ದಿನವೂ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತುದ್ದರು.. ಆದರೆ ಹೊರ ಬಂದ ನಂತರ ಮಂಜಣ್ಣನ ಜೊತೆಗೆ ಆಗಾಗ ಕಾಣಿಸಿಕೊಂಡು ಸುದ್ದಿಯಾಗಿದ್ದ ದಿವ್ಯಾ ಸುರೇಶ್ ಸಧ್ಯ ಇದೀಗ ನಡುರಸ್ತೆಯಲ್ಲಿಯೇ ಗಂಟಲು ಪೂರ್ತಿ ಮಾಡಿಕೊಂಡಿದ್ದ ಸಮಯದಲ್ಲಿ ಕಿರಿಕ್ ಮಾಡಿಕೊಂಡಿದ್ದಾರೆ.. ಹೌದು ದಿವ್ಯಾ ಸುರೇಶ್ ಬ್ರಿಗೇಡ್ ರಸ್ತೆಯಲ್ಲಿ ದಿವ್ಯಾ ಸುರೇಶ್ ನಿನ್ನೆ ರಾತ್ರಿ ಕಿರಿಕ್ ಮಾಡಿಕೊಂಡಿದ್ದು ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ಆದರೆ ಅಲ್ಲಿ ನಿನಕ್ಕೂ ನಡೆದಿರೋದೆ ಬೇರೆ.. ಹೌದು ಬಿಗ್ ಬಾಸ್ ಸೀಸನ್ ಎಂಟರಲ್ಲಿ ಭಾಗವಹಿಸಿದ್ದ ದಿವ್ಯಾ ಸುರೇಶ್ ಮೊದಮೊದಲು ಪ್ರಬಲ ಸ್ಪರ್ಧಿತಂತೆ ಕಂಡು ಬಂದರೂ ಸಹ ನಂತರದ ದಿನಗಳಲ್ಲಿ ಮಂಜಣ್ಣನ ಸಂಗ ಬಿಡದ ದಿವ್ಯಾ ಸುರೇಡ್ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದೂ ಉಂಟು.

ಅದಾಗಲೇ ಮಜಾ ಭಾರತ ಶೋ ಮೂಲಕ ಖ್ಯಾತಿ ಗಳಿಸಿದ್ದ ಮಂಜಣ್ಣನ ಹಿಂದಿಂದೆಯೇ ಸುತ್ತುತ್ತಿದ್ದ ದಿವ್ಯಾ ಸುರೇಶ್ ಮನೆಯಲ್ಲಿ ಹೆಚ್ಚು ದಿನ ಉಳಿಯಲು ನಾನಾ ಪ್ರಯತ್ನ ಮಾಡಿದ್ದು ಸ್ಪಷ್ಟವಾಗಿ ಪ್ರೇಕ್ಷಕರಿಗೆ ಕಂಡುಬಂದಿತ್ತು.. ಇನ್ನು ಇತ್ತ ಮಂಜಣ್ಣನೂ ಮೊದಲ‌ ಇನ್ನಿಂಗ್ಸ್ ನಲ್ಲಿ ದಿವ್ಯಾ ಸುರೇಶ್ ಬಾಲವನ್ನೇ ಹಿಡಿದು ಓಡಾಡುತ್ತಿದ್ದ ಕಾರಣ ಅವರ ಬಗ್ಗೆಯೂ ಕಿರಿಕಿರಿ ಉಂಟಾಗಿದ್ದು ಸುಳ್ಳಲ್ಲ.. ಆದರೆ ಕೊರೊನಾ ಕಾರಣದಿಂದ ಮೊದಲ ಇನ್ನಿಂಗ್ಸ್ ನಿಂದ ಹೊರ ಬಂದ ಬಳಿಕ ಎಲ್ಲಾ ವಿಚಾರವನ್ನು ಸರಿಯಾಗಿ ಅರ್ಥ ಮಾಡಿಕೊಂಡ ಮಂಜಣ್ಣ ಎರಡನೇ ಇನ್ನಿಂಗ್ಸ್ ನಲ್ಲಿ ಎಚ್ಚೆತ್ತುಕೊಂಡು ದಿವ್ಯಾ ಸುರೇಶ್ ರಿಂದ ಅಂತರ ಕಾಯ್ದುಕೊಂಡು ಇತ್ತ ವೈಷ್ಣವಿ ಶುಭಾ ಪೂಂಜಾ ಅವರ ಜೊತೆ ಒಡನಾಟ ಬೆಳೆಸಿ ಬುದ್ದಿವಂತಿಕೆಯಿಂದ ಆಟವಾಡಿ ಬಿಗ್ ಬಾಸ್ ಸೀಸನ್ ಎಂಟರ ವಿನ್ನರ್ ಸಹ ಆದರು.. ಆತ ದಿವ್ಯಾ ಸುರೇಶ್ ಮಾತ್ರ ಯಥಾ ಪ್ರಕಾರ ಮಂಜಣ್ಣನ ಹಿಂದೆಯೇ ಸುತ್ತುತ್ತಾ ಕೊನೆಗೆ ಸೀಸನ್ ನ ಆರನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯಿಂದ ಹೊರ ನಡೆದರು..

ಇನ್ನು ಬಿಗ್ ಬಾಸ್ ನಿಂದ ಹೊರ ಬರುವ ಸಮಯದಲ್ಲಿ ಫಿನಾಲೆಯ ಎರಡು ದಿನಗಳು ಮಂಜಣ್ಣನ ತಂದೆತಾಯಿಯ ಜೊತೆ ಬಹಳ ಆತ್ಮೀಯವಾಗಿ ಕಾಣಿಸಿಕೊಂಡ ದಿವ್ಯಾ ಸುರೇಶ್ ಮಂಜಣ್ಣನ ಜೊತೆಯೇ ಮದುವೆಯಾಗ್ತಾರೆ ಎಂದೂ ಸಹ ಸುದ್ದಿ ಹಬ್ಬಿತ್ತು.. ಬಿಗ್ ಬಾಸ್ ನಿಂದ ಹೊರ ಬಂದ ಬಳಿಕವೂ ಕೆಲ ದಿನಗಳ ಕಾಲ ಮಂಜಣ್ಣಮ ಜೊತೆ ರೀಲ್ಸು ಅದು ಇದು ಅಂತ ಓಡಾಡಿದ್ದೂ ಉಂಟು.. ಇದೆಲ್ಲಾ ಬಿಗ್ ಬಾಸ್ ನಿಂದ ಬಂದ ಹಣದ ಮಹಿಮೆ ಎಂದು ನೆಟ್ಟಿಗರು ಮಾತನಾಡಿದ್ದೂ ಉಂಟು.. ಆದರೆ ಎಲ್ಲಿಯ ಮಂಜಣ್ಣ ಎಲ್ಲಿಯ ದಿವ್ಯಾ ಸುರೇಶ್ ಎನ್ನುವಂತಾಗಿತ್ತು. ಹೌದು ಹಳ್ಳಿಯಿಂದ ಬಂದು ಬದುಕು ಕಟ್ಟಿಕೊಳ್ಳಲು ಸಿಕ್ಕ ಸಿಕ್ಕ‌ ಕೆಲಸ ಮಾಡಿ ಸಧ್ಯ ಸ್ಯಾಂಡಲ್ವುಡ್ ನಲ್ಲಿ ಸಿನಿಮಾಗಳಲ್ಲಿ ತಾವೇ ಫೋನ್ ಮಾಡಿ ಅವಕಾಶಗಳನ್ನು ಕೇಳಿ ಪಡೆದು ಸಿನಿಮಾ ಇಂಡಸ್ಟ್ರಿಯಲ್ಲಿ ನೆಲೆಯೂರಲು ಪ್ರಯತ್ನ ಪಡುತ್ತಿರುವ ಶ್ರಮಜೀವಿ ಮಂಜಣ್ಣನ ಜೀವನ ಶೈಲಿಯೇ ಬೇರೆ.. ಅತ್ತ ಎಂ ಜಿ ರೋಡು ಬ್ರಿಗೆಡ್ ರೋಡು ಅಂತ ದೊಡ್ಡ ದೊಡ್ಡವರ ಸ್ನೇಹವಿರುವ ದಿವ್ಯಾ ಸುರೇಶ್ ಅವರ ಜೀವನ ಶೈಲಿಯೇ ಬೇರೆ.. ಇನ್ನು ಇವರಿಬ್ಬರ ಮದುವೆಯ ಮಾತು ಕೇವಲ ಗಾಳಿ ಮಾತಷ್ಟೇ ಅನ್ನೋದು ಎಲ್ಲರಿಗೂ ಸ್ಪಷ್ಟವಾಗಿ ತಿಳಿದಿತ್ತು‌‌‌‌..

ಇನ್ನು ಇತ್ತೀಚೆಗೆ ಕೆಲ ದಿನಗಳಿಂದ ದಿವ್ಯಾ ಸುರೇಶ್ ಕೂಡ ಮಂಜಣ್ಣನ ಜೊತೆ ಕಾಣಿಸಿಕೊಳ್ಳುತ್ತಿರಲಿಲ್ಲ.. ಅತ್ತ ಮಂಜಣ್ಣ ಸಿನಿಮಾ.. ಶೋ.. ಕಾರ್ಯಕ್ರಮಗಳು ಅಂತ ಒಂದರ ಹಿಂದೆ ಒಂದು ಕಾರ್ಯಕ್ರಮದಲ್ಲಿ ಬ್ಯುಸಿ ಆಗಿದ್ದರೆ.. ಇತ್ತ ದಿವ್ಯಾ ಸುರೇಶ್ ಕೂಡ ತಮ್ಮದೇ ಆದ ಕೆಲ ಕಾರ್ಯಗಳಲ್ಲಿ ತಮ್ಮ ಸ್ನೇಹಿತರ ಜೊತೆ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದರು‌.. ಇನ್ನು ಇದೀಗ ನಿನ್ನೆ ರಾತ್ರಿ ದಿವ್ಯಾ ಸುರೇಶ್ ದೊಡ್ಡದೊಂದು ರಂಪಾಟವನ್ನೇ ಮಾಡಿಕೊಂಡಿದ್ದು ರಾತ್ರೋ ರಾತ್ರಿ ಸುದ್ದಿಯಾಗಿತ್ತು.. ಆದರೆ ಅಲ್ಲಿ ನಿಜಕ್ಕೂ ನಡೆದದ್ದೇ ಬೇರೆಯಾಗಿದೆ.. ಹೌದು ದಿವ್ಯಾ ಸುರೇಶ್ ಅವರು ಸ್ನೇಹಿತರ ಜೊತೆ ಇಂತಹ ರೋಡ್ ಗಳಿಗೆ ಬರುವುದಾಗಲಿ ಪಬ್ ಗಳಿಗೆ ಹೋಗೋದಾಗಲಿ ಹೊಸ ವಿಚಾರವೇನೂ ಅಲ್ಲ.. ಅವರಿಗೆ ಇದು ಸಾಮಾನ್ಯ ಸಂಗತಿ.. ಆದರೆ ಬಹುಶಃ ನಿನ್ನೆ ಅವರ ಗ್ರಹಚಾರ ಸರಿ ಇರಲಿಲ್ಲವೇನೋ ಅಷ್ಟೇ.. ನಿನ್ನೆ ರಾತ್ರಿ ಬ್ರಿಗೇಡ್ ರೋಡ್ ನ ಪಬ್ ಒಂದರಲ್ಲಿ ರಾತ್ರಿ ಸ್ನೇಹಿತರ ಜೊತೆ ಗಂಟಲು ಪೂರ್ತಿ ಮಾಡಿಕೊಂಡು ಅದೇ ಗುಂಗಿನಲ್ಲಿದ್ದರು ದಿವ್ಯಾ ಸುರೇಶ್..

ಇನ್ನು ನಿನ್ನೆಯಿಂದ ನೈಟ್ ಕರ್ಫ್ಯೂ ಜಾರಿಯಲ್ಲಿರುವ ಕಾರಣ ಅದೇ ರಸ್ತೆಯಲ್ಲಿ‌ ಪೊಲೀಸರು ಒಂದು ಕಡೆಯಿಂದ ಪಬ್ ಗಳನ್ನು ಮುಚ್ಚಿಸುತ್ತಾ ಬರುತ್ತಿದ್ದರು.. ಇತ್ತ ಪೊಲೀಸರು ಬರುತ್ತಿರುವ ವಿಚಾರ ತಿಳಿದು ಪಬ್ ನಿಂದ ದಿವ್ಯಾ ಸುರೇಶ್ ತಮ್ಮ ಸ್ನೇಹಿತರ ಜೊತೆ ಕೆಳಗಿಳಿದು ಬಂದರು.. ಅದಾಗಲೇ ತಡರಾತ್ರಿಯಾಗಿದ್ದು ದಿವ್ಯಾ ಸುರೇಶ್ ಪಬ್ ನಿಂದ ಹೊರ ಬರುತ್ತಿದ್ದ ದೃಶ್ಯವನ್ನು ನೋಡಿದ ವ್ಯಕ್ತಿಯೊಬ್ಬ ದಿವ್ಯಾ ಸುರೇಶ್ ರನ್ನು ಗುರುತಿಸಿ ವೀಡಿಯೋ ಮಾಡಲು ಶುರು ಮಾಡಿದ.. ಏನ್ ಮೇಡಂ ನೈಟ್ ಕರ್ಫ್ಯೂ ಆದರೂ‌ ಇನ್ನೂ ಇಲ್ಲೇ ಇದ್ದೀರಾ ಎಂದು ವೀಡಿಯೋ ಮಾಡುತ್ತಲೇ ಇದ್ದ.. ಇದರಿಂದ ಕೋಪಗೊಂಡ ದಿವ್ಯಾ ಸುರೇಶ್ ಆತನ ಮೇಲೆ ಕೂಗಾಡಿದ್ದಾರೆ.. ಅಷ್ಟೇ ಅಲ್ಲದೇ ದಿವ್ಯಾ ಸುರೇಶ್ ಗುಂಗಿನಲ್ಲಿದ್ದ ಕಾರಣ ಬಾಯಿಂದ ಒಳ್ಳೊಳ್ಳೆ ಪದಗಳು ಸಹ ಆಚೆ ಬಂದಿದೆ..

ಇನ್ನು ಆಕೆಯ ಸ್ನೇಹಿತರು ಸಹ ವೀಡಿಯೋ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತ ಪಡಿಸಿ ಮುಂದೆ ಬಂದಿದ್ದಾರೆ.. ಆ ತಕ್ಷಣ ಅಲ್ಲಿಯೇ ಇದ್ದ ಪೊಲೀಸರು ಗಲಾಟೆಯ ಶಬ್ದ ಕೇಳಿ ಹತ್ತಿರಕ್ಕೆ ಬಂದಿದ್ದಾರೆ.. ಇತ್ತ ಪೊಲೀಸರ ಜೊತೆ ಮಾದ್ಯಮದವರು ಸಹ ಆಗಮಿಸಿ ದಿವ್ಯ ಸುರೇಶ್ ಅವರ ಗಲಾಟೆಯನ್ನು ವರದಿ ಮಾಡಿದ್ದಾರೆ.. ಪೊಲೀಸರು ಅತ್ತ ನಿಮ್ಮ ಕ್ಯಾಬ್ ಬಂದಿದೆ ಇಲ್ಲಿಂದ ಹೋಗಿ ಎಂದು ಹೇಳಿ ದಿವ್ಯಾ ಸುರೇಶ್ ಹಾಗೂ ಸ್ನೇಹಿತರನ್ನು ಮನವೊಲಿಸಿ ಕಳುಹಿಸಲು ಮುಂದಾದರು.. ಆದರೆ ಗುಂಗಿನಲ್ಲಿದ್ದ ದಿವ್ಯಾ ಸುರೇಶ್ ಪೊಲೀಸರ ಜೊತೆಯೂ ಕಿರಿಕ್ ಮಾಡಿಕೊಂಡು ಕೊನೆಗೆ ಕ್ಯಾಬ್ ಹತ್ತಿ ಮನೆ ಕಡೆಗೆ ತೆರಳಿದ್ದಾರೆ.. ಒಟ್ಟಿನಲ್ಲಿ ಒಂದು ಕಡೆ ನೈಟ್ ಕರ್ಫ್ಯೂ ಇಂದ ಜನರು ಪರದಾಡುವಂತಾಗಿದ್ದರೆ.. ಇಂತವರಿಗೆ ಪಬ್ ಗಳಲ್ಲಿ ಪಾರ್ಟಿ ಮಾಡಲು ಸಮಯ ಸಾಲದಾಗಿದೆ.. ಇಷ್ಟೇ ಜೀವನ..