ಅರವಿಂದ್ ಸೋಲಲು ನಾನೇ ಕಾರಣ ಎಂದು ದಿವ್ಯಾ ಉರುಡುಗ ಮಾಡಿರುವ ಕೆಲಸ ನೋಡಿ‌..

0 views

ಬಿಗ್ ಬಾಸ್ ಸೀಸನ್ ಎಂಟರ ಶೋ ಮುಗಿದಿದೆ.. ಇತ್ತ ಬಿಗ್ ಬಾಸ್ ಮನೆಯೊಳಗೆ ಮತ್ತೆ ಕಿರುತೆರೆ ಕಲಾವಿದರು ಕಾಲಿಟ್ಟಿದ್ದು ಆರು ದಿನಗಳ ಮಿನಿ ಸೀಸನ್ ಸಹ ಶುರುವಾಗುತ್ತಿದೆ.. ಆದರೆ ಸೀಸನ್ ಎಂಟರ ವಿಚಾರಗಳು ಮಾತ್ರ ದಿನದಿಂದ ದಿನಕ್ಕೆ ಸುದ್ದಿಯಾಗುತ್ತಲೇ ಇವೆ.. ಹೌದು ಬಿಗ್ ಬಾಸ್ ಸೀಸನ್ ಎಂಟನ್ನು ಗೆದ್ದ ಮಂಜು ಪಾವಗಡ ಸಿಕ್ಕಾಪಟ್ಟೆ ಸಂತೋಷವಾಗಿದ್ದು ಮಾದ್ಯಮಗಳ ಸಂದರ್ಶನಗಳಲ್ಲಿ ಬ್ಯುಸಿ ಆಗಿದ್ದಾರೆ.. ಇತ್ತ ಪ್ರಶಾಂತ್ ಸಂಬರ್ಗಿ ಹಾಗೂ ಚಕ್ರವರ್ತಿ ಚಂದ್ರಚೂಡರ ನಡುವೆ ವಾಗ್ವಾದಗಳು ನಡೆಯುತ್ತಲೇ ಇದ್ದು ಸುದೀಪ್ ಅವರು ಅನುಮತಿ ಕೊಟ್ಟರೆ ನಾನು ಪೊಲೀಸರಿಗೆ ದೂರು ನೀಡಲು ಸಹ ಸಿದ್ಧ.. ನನ್ನ ಹಾಗೂ ಅರವಿಂದ್ ಕೆಪಿ ಅವರ ವೀಡಿಯೋಗಳು ಪ್ರಶಾಂತ್ ಅವರ ಫೋನ್ ನಲ್ಲಿದೆ ಎಂದು ಚಕ್ರವರ್ತಿ ಚಂದ್ರಚೂಡ ಅವರು ಮಾತನಾಡಿ ಪ್ರಶಾಂತ್ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದು ಸಧ್ಯ ವಿಚಾರ ತಣ್ಣಗಾದಂತೆ ಕಾಣುತ್ತಿದೆ..

ಇನ್ನೂ ಬಿಗ್ ಬಾಸ್ ನ ರನ್ನರ್ ಅಪ್ ಆದ ಅರವಿಂದ್ ಕೆ ಪಿ ಅವರು ಮಾತ್ರ ಬಿಗ್ ಬಾಸ್ ಫಿನಾಲೆ ಮುಗಿದ ಬಳಿಕ ಎಲ್ಲಿಯೂ ಕಾಣಿಸಿಕೊಳ್ಳದೇ ವಾರದ ಬಳಿಕ ನಿನ್ನೆ ರಾತ್ರಿ ವೀಡಿಯೋ ಮೂಲಕ ಅಭಿಮಾನಿಗಳೊಟ್ಟಿಗೆ ಮಾತನಾಡಿದ್ದಾರೆ.. ನಾನು ಇಷ್ಟು ದೂರ ಬರಲು ನೀವುಗಳೇ ಕಾರಣ ನಿಮ್ಮ ಪ್ರೀತಿ ಅಭಿಮಾನ ಹೀಗೆ ಇರಲಿ ನಿಮಗೆಲ್ಲಾ ಕೋಟಿ ಧನ್ಯವಾದಗಳು ಎಂದು ತಿಳಿಸಿದ್ದರು.. ಇನ್ನು ಬಿಗ್ ಬಾಸ್ ಮನೆಯೊಳಗೆ ಆರ್ವಿಯಾ ಜೋಡಿಗೆ ಸಿಕ್ಕಾಪಟ್ಟೆ ಅಭಿಮಾನಿಗಳು ಇದ್ದದ್ದೂ ಸತ್ಯ.. ಅರವಿಂದ್ ಹಾಗೂ ದಿವ್ಯಾ ಉರುಡುಗ ಜೋಡಿಯನ್ನು ಮೆಚ್ಚಿಕೊಂಡು ಅನೇಕ ಅಭಿಮಾನಿ ಪೇಜ್ ಗಳು ಸಹ ತೆರೆದಿದ್ದರು.. ಇನ್ನು ಬಿಗ್ ಬಾಸ್ ಮನೆಯಲ್ಲಿ ಅರವಿಂದ್ ಹಾಗೂ ದಿವ್ಯಾ ಉರುಡುಗ ಇದ್ದ ರೀತಿ ಆತ್ಮೀಯತೆ ನೋಡಿದರೆ ಅವರಿಬ್ಬರ ನಡುವಿನ ಪ್ರೀತಿ ಪ್ರೇಕ್ಷಕರಿಗೆ ಸ್ಪಷ್ಟವಾಗಿ ಕಾಣುತಿತ್ತು..

ಆದರೆ ಹೊರ ಬಂದ ನಂತರ ಈ ಜೋಡಿಯ ಮದುವೆಯ ಸುದ್ದಿ ಕೇಳಲಿದೆ ಎಂದುಕೊಂಡಿದ್ದ ಅಭಿಮಾನಿಗಳಿಗೆ ಇನ್ನೂ ಸಹ ಸಿಹಿ ಸುದ್ದಿ ಹೊರಬಂದಿಲ್ಲ.. ಆದರೆ ಈ ನಡುವೆ ದಿವ್ಯಾ ಉರುಡುಗ ಅವರು ಸಂದರ್ಶನಗಳಲ್ಲಿ ಆಡಿರುವ ಮಾತು ಆಶ್ಚರ್ಯವನ್ನುಂಟು ಮಾಡಿದೆ.. ಹೌದು ಫಿನಾಲೆ ವಾರದಲ್ಲಿ ನಾನು ಇದ್ದದ್ದಕ್ಕೆ ಅರವಿಂದ್ ಗೆಲ್ಲಲು ಸಾಧ್ಯವಾಗಿಲ್ಲ.. ಅವರೇ ಗೆಲ್ಲಬೇಕಿತ್ತು.. ನನಗೆ ಆ ಬಗ್ಗೆ ತುಂಬಾ ಬೇಜಾರಾಗಿದೆ. ಅರವಿಂದ್ ಗೂ ಹಾಗೂ ಮಂಜುಗು ವೋಟ್ ಅಂತರ ಬಹಳ ಕಡಿಮೆ ಇತ್ತು.. ನಾನು ಬಿಗ್ ಬಾಸ್ ನಿಂದ ಮೊದಲೇ ಎಲಿಮಿನೇಟ್ ಆಗಿದ್ದರೆ ನನ್ನ ವೋಟ್ ಗಳು ಸಹ ಅರವಿಂದ್ ಅವರಿಗೆ ಸಿಗುತಿತ್ತು.. ಆಗ ಸುಲಭವಾಗಿ ಅರವಿಂದ್ ಬಿಗ್ ಬಾಸ್ ವಿನ್ನರ್ ಆಗುತ್ತಿದ್ದರು..

ಅದಕ್ಕೂ ಮೀರಿ ನಾನು ಮೊದಲೇ ಎಲಿಮಿನೇಟ್ ಆಗಬೇಕಿತ್ತು.. ಆಗ ನಾನು ಖಂಡಿತ ಅರವಿಂದ್ ಅವರು ಗೆಲ್ಲುವಂತೆ ಮಾಡುತ್ತಿದ್ದೆ.. ನಾನು ಹೆಚ್ಚು ವೋಟ್ ಗಳನ್ನು ಮಾಡಿಸಿ ಅರವಿಂದ್ ಅವರನ್ನು ಖಂಡಿತ ಗೆಲ್ಲಿಸುತ್ತಿದ್ದೆ.. ಆ ಬೇಸರ ನನಗೆ ಈಗಲೂ ಇದೆ ಎಂದು ತಮ್ಮ ಬೇಸರ ಹೊರ ಹಾಕಿದರು.. ಅರವಿಂದ್ ಸೋಲಿಗೆ ನಾನೇ ಕಾರಣವಾಗಿಬಿಟ್ಟೆ ಎನ್ನುವ ಮಾತುಗಳನ್ನಾಡಿದ್ದು ನಾನು ಹೊರ ಬರಬೇಕಿತ್ತು ಎಂದು ತಾವು ಮೂರನೇ ಸ್ಥಾನ ಬಂದರೂ ತಾವು ಗೆಲ್ಲಬೇಕಿತ್ತು ಎಂದು ತಮ್ಮ ಬಗ್ಗೆಯೇ ಆಲೋಚಿಸದೇ ಅರವಿಂದ್ ಗೆಲ್ಲಲಿಲ್ಲವೆಂದು ಕಣ್ಣಲ್ಲಿ ನೀರು ತುಂಬಿಕೊಂಡರು..

ಅವರ ಫೀಲ್ಡ್ ಬೇರೆ ನಮ್ಮೆಲ್ಲರ ಫೀಲ್ಡ್ ಬೇರೆ.. ಆದರೆ ಇದೆಲ್ಲದರ ಬಗ್ಗೆ ಏನೂ ಸಹ ತಿಳಿಯದ ಅರವಿಂದ್ ಅವರು ಬಿಗ್ ಬಾಸ್ ಗೆ ಬಂದು ಇಷ್ಟು ಜನರ ಪ್ರೀತಿ ಗಳಿಸಿದ್ದು ನಿಜಕ್ಕೂ ಅವರ ಬಗ್ಗೆ ಇನ್ನೂ ಗೌರವ ಹೆಚ್ಚಾಯಿತು ಎಂದು ಈಗಲೂ ಸಹ ಪ್ರತಿ ಮಾತಿನಲ್ಲೂ ಅರವಿಂದ್ ಅವರ ಮೇಲಿನ ಪ್ರೀತಿಯನ್ನು ಹಿರ ಹಾಕಿದರು.. ಸಧ್ಯ ಬಿಗ್ ಬಾಸ್ ಅಂತೂ ಮುಗಿದು ಹೋಗಿದೆ.. ಮಂಜಣ್ಣ ಗೆದ್ದಾಗಿದೆ.. ಅದನ್ನಂತೂ ಬದಲಿಸಲು ಸಾಧ್ಯವಿಲ್ಲ.. ಆದರೆ ಬಿಗ್ ಬಾಸ್ ನ ಈ ಜೋಡಿ ಹಕ್ಕಿಗಳು ನಿಜ ಜೀವನದಲ್ಲಿ ಒಂದಾಗಿ ಸಂತೀಷವಾಗಿರಲಿ ಎಂದು ಅಭಿಮಾನಿಗಳು ಶುಭ ಹಾರೈಸಿದ್ದಾರೆ..