ಇದ್ದಕ್ಕಿದ್ದ ಹಾಗೆ ಬಿಗ್ ಬಾಸ್ ಮನೆಯಿಂದ ಹೊರ ನಡೆದ ದಿವ್ಯಾ ಉರುಡುಗ.. ಕಣ್ಣೀರಿಟ್ಟು ಎಲ್ಲಾ ಮುಗೀತು ಎಂದ ಅರವಿಂದ್.. ನಿಜವಾದ ಕಾರಣವೇನು ಗೊತ್ತಾ?

0 views

ಬಿಗ್ ಬಾಸ್ ಸೀಸನ್ ಎಂಟರ ಸ್ಪರ್ಧಿ ದಿವ್ಯಾ ಉರುಡುಗ ಇದ್ದಕ್ಕಿದ್ದ ಹಾಗೆ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ.. ಹೌದು ಅತ್ತ ಮನೆಯ ಸ್ಪರ್ಧಿಗಳೆಲ್ಲಾ ಕಣ್ಣೀರಿಟ್ಟಿದ್ದು ಅದರಲ್ಲೂ ಅರವಿಂದ್ ಅವರ ಸ್ಥಿತಿ ನಿಜಕ್ಕೂ ನೋಡಲಾಗುತ್ತಿಲ್ಲ.. ಹೌದು ಬಿಗ್ ಬಾಸ್ ಈ ಸೀಸನ್ ಬಹಳಷ್ಟು ವಿಶೇಷತೆಗಳಿಂದ ಕೂಡಿತ್ತು.. ಆದರೆ ಕೊರೊನಾ ಕಾರಣದಿಂದಾಗಿ ಅಷ್ಟಾಗಿ ಸ್ಪರ್ಧಿಗಳ ಸದುಪಯೋಗವಾಗಲಿಲ್ಲವೆಂಬುದು ಪ್ರೇಕ್ಷಕರ ಅಭಿಪ್ರಾಯವಾಗಿತ್ತು.. ಒಂದು ಕಡೆ ಸುದೀಪ್ ಅವರ ಅನುಪಸ್ಥಿತಿ.. ಮತ್ತೊಂದು ಕಡೆ ಕಾರ್ಯಕ್ರಮಗಳನ್ನು ಆಯೋಜಿಸಲು ಕೊರೊನಾ ತೊಂದರೆ.. ಮತ್ತೊಂದು ಕಡೆ ಲಾಕ್ ಡೌನ್.. ಹೀಗೆ ಸಾಕಷ್ಟು ಅಡೆತಡೆಗಳ ನಡುವೆಯೂ ತಕ್ಕಮಟ್ಟಿಗೆ ಶೋ ಯಶಸ್ವಿಯಾಗಿಯೇ ಸಾಗಿತ್ತು.. ಒಂಭತ್ತು ವಾರಗಳನ್ನು ಪೂರೈಸಿ ಮುನ್ನಡೆಯುತಿತ್ತು.. ಆದರೆ ಇದೀಗ ಬಿಗ್ ಬಾಸ್ ನ ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರಾದ ದಿವ್ಯಾ ಉರುಡುಗ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ..

ಹೌದು ಕಳೆದ ಎಂಟನೇ ವಾರದಲ್ಲಿ ರಾಜೀವ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಹೋಗಿದ್ದರು.. ಇದು ಸ್ಪರ್ಧಿಗಳಿಗೆ ಬಹಳಷ್ಟು ಶಾಕ್ ಕೂಡ ಆಗಿತ್ತು.. ಫಿನಾಲೆಯ ಐದು ಸ್ಪರ್ಧಿಗಳಲ್ಲಿ ರಾಜೀವ್ ಕೂಡ ಒಬ್ಬರು ಎನ್ನಲಾಗುತಿತ್ತು.. ಆದರೆ ಅರ್ಧದಲ್ಲಿಯೇ ರಾಜೀವ್ ಎಲಿಮಿನೇಟ್ ಆಗಿ ಹೋಗಿದ್ದು ಪ್ರೇಕ್ಷಕರಿಗೂ ಸಹ ಆಶ್ಚರ್ಯವನ್ನುಂಟು ಮಾಡಿತ್ತು.. ಆದರೀಗ ಮನೆಯ ಮತ್ತೊಬ್ಬ ಪ್ರಬಲ ಸ್ಪರ್ಧಿ ದಿವ್ಯಾ ಉರುಡುಗ ಸಹ ಮನೆಯಿಂದ ಹೊರ ನಡೆದಿದ್ದಾರೆ..

ಹೌದು ನಿನ್ನೆ ರಾತ್ರಿ ದಿವ್ಯಾ ಉರುಡುಗ ಅವರ ಆರೋಗ್ಯದಲ್ಲಿ ಏರು ಪೇರಾಗಿದ್ದು ತಕ್ಷಣ ಅವರನ್ನು ಪ್ರಥಮ ಚಿಕಿತ್ಸೆಗಾಗಿ ಹೊರ ಕರೆಸಿ ಬಿಗ್ ಬಾಸ್ ಮನೆಯಲ್ಲಿನ ವೈದ್ಯರು ಪರೀಕ್ಷೆ ನಡೆಸಿದ್ದಾರೆ.. ಆದರೆ ರಾತ್ರಿ ಪೂರ ಕಳೆದರು ದಿವ್ಯಾ ಉರುಡುಗ ಬಿಗ್ ಬಾಸ್ ಮನೆಗೆ ಮರಳಲಿಲ್ಲ.. ಇತ್ತ ಅದಾಗಲೇ ಮನೆಯ ಇತರ ಸದಸ್ಯರು ಮಂಕಾಗಿ ಹೋದರು.. ಅದರಲ್ಲಿಯೂ ಅರವಿಂದ್ ಸದಾ ಜೊತೆಗೇ ಇರುತ್ತಿದ್ದ ದಿವ್ಯಾ ಇಲ್ಲದಕ್ಕೆ ಕುಗ್ಗಿಯೇ ಹೋದಂತೆ ಕಾಣುತ್ತಿದ್ದರು.. ಇನ್ನೂ ಬೆಳ್ಳಂಬೆಳಿಗ್ಗೆ ದಿವ್ಯಾ ಉರುಡುಗ ಅವರ ಎಲ್ಲಾ ಬಟ್ಟೆ ಹಾಗೂ ವಸ್ತುಗಳನ್ನು ಸ್ಟೋರ್ ರೂಮಿಗೆ ತಂದು ಇರಿರಿ ಎಂದು ಮನೆಯ ಇತರ ಸದಸ್ಯರಿಗೆ ಆದೇಶ ನೀಡಲಾಯಿತು..

ಇನ್ನು‌ ದಿವ್ಯಾ ಉರುಡುಗ ಬರುವುದಿಲ್ಲ ಎಂದು ಖಚಿತವಾದ ಬಳಿಕ ಮನೆಯ ಸದಸ್ಯರು ಕಣ್ಣೀರಿಟ್ಟಿದ್ದಾರೆ.. ಅರವಿಂದ್ ಅಂತೂ ಸಣ್ಣ ಮಗುವಿನಂತೆ ಕಣ್ಣೀರಿಟ್ಟಿದ್ದು ನನಗೆ ರಾತ್ರಿಯೇ ಬಹಳ ಅಪ್ಸೆಟ್ ಆಗಿ ಹೋಯ್ತು.. ಸದಾ ಜೊತೆಯೇ ಇರುತ್ತಿದ್ದಳು.. ಅವಳಿಲ್ಲದೇ ಇಲ್ಲಿ ಇರೋದಕ್ಕೆ ಆಗ್ತಿಲ್ಲ.. ಎಲ್ಲವೂ ಮುಗಿತು.. ಎಂದು ಕಣ್ಣೀರಿಡುತ್ತಲೇ ದಿವ್ಯಾ ಅವರ ಬ್ಯಾಗ್ ಅನ್ನು ಖುದ್ದು ಅರವಿಂದ್ ಅವರೇ ಪ್ಯಾಕ್ ಮಾಡಿ ಕಳುಹಿಸಿಕೊಡುತ್ತಿದ್ದಾರೆ..

ಅತ್ತ ಹೆಚ್ಚಿನ ಚಿಕಿತ್ಸೆಗಾಗಿ ದಿವ್ಯಾ ಉರುಡುಗ ಅವರನ್ನು ಹೊರಗೆ ಕಳುಹಿಸಿರಬಹುದು ಎನ್ನಲಾಗುತ್ತಿದೆ.. ಒಟ್ಟಿನಲ್ಲಿ ಪ್ರೇಕ್ಷಕರ ಎಲ್ಲಾ ಅನುಮಾನಗಳಿಗೆ ಹಾಗೂ ಬಿಗ್ ಬಾಸ್ ಸ್ಪರ್ಧಿಗಳ ಎಲ್ಲಾ ಪ್ರಶ್ನೆಗಳಿಗೆ ಇಂದಿನ ಸಂಚಿಕೆಯಲ್ಲಿ ಉತ್ತರ ದೊರೆಯಲಿದೆ.. ಆದರೆ ಏನಾದರು ಆಗಲಿ ದಿವ್ಯಾ ಉರುಡುಗ ಆರೋಗ್ಯವಾಗಿ ಮನೆಗೆ ಮರಳುವಂತಾಗಲಿ.. ಇನ್ನು ಮನೆಯಲ್ಲಿ ನಿಜಕ್ಕೂ ಮನಸ್ಪೂರ್ತಿಯಾಗಿ ದಿವ್ಯಾ ಉರುಡುಗ ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವ ಅರವಿಂದ್ ರನ್ನು ಇತರ ಸ್ಪರ್ಧಿಗಳು ಸಮಾಧಾನ ಪಡಿಸಿದ್ದು ನಿಜಕ್ಕೂ ಎಲ್ಲರೂ ಅಂದುಕೊಂಡಂತೆ ಇವರಿಬ್ಬರ ನಡುವೆ ನಿಜವಾದ ಪ್ರೀತಿ ಮೂಡಿದ್ದರೆ ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಈ ಜೋಡಿ ಒಂದಾಗಲಿ..