ಮುರಿದುಬಿತ್ತು ಸ್ನೇಹ.. ಜುಟ್ಟು ಹಿಡಿದು ಒಬ್ಬರ ಮೇಲೊಬ್ಬರು ಬಿದ್ದು ಜಗಳವಾಡಿಕೊಳ್ಳು ಹಂತಕ್ಕೆ ಬಂದು ನಿಂತರು ದಿವ್ಯಾ ಸುರೇಶ್ ಹಾಗೂ ದಿವ್ಯಾ ಉರುಡುಗ‌‌.. ಅಸಲಿ ಕಾರಣವೇನು ಗೊತ್ತಾ..

0 views

ಬಿಗ್ ಬಾಸ್ ಸೀಸನ್ ಎಂಟರ ಎರಡನೇ ಇನ್ನಿಂಗ್ಸ್ ಶುರುವಾಗಿದೆ.. ಅರ್ಧಕ್ಕೆ ನಿಂತ ಬಿಗ್ ಬಾಸ್ ನಿಂದ ಹೊರ ಹೋಗಿದ್ದ ಹನ್ನೊಂದು ಮಂದಿ ಹಾಗೂ ಆರೋಗ್ಯ ಸರಿಯಿಲ್ಲದ ಕಾರಣ ಮನೆಯಿಂದ ಹೊರ ಹೋಗಿದ್ದ ದಿವ್ಯಾ ಉರುಡುಗ ಸೇರಿದಂತೆ ಒಟ್ಟು ಹನ್ನೆರೆಡು ಮಂದಿ ಬಿಗ್ ಬಾಸ್ ಮನೆಗೆ ಎರಡನೇ ಬಾರಿ ಪ್ರವೇಶ ಮಾಡಿದ್ದಾರೆ.. ಆದರೆ ನಲವತ್ತೈದು ದಿನಗಳ ಕಾಲ ಬಿಗ್ ಬಾಸ್ ನ ಎಲ್ಲಾ ಸಂಚಿಕೆಗಳನ್ನು ನೋಡಿಕೊಂಡು.. ಹಾಗೂ ಸ್ಪರ್ಧಿಗಳ ಸಂದರ್ಶನಗಳನ್ನು ನೋಡಿಕೊಂಡು ಬಂದಿರುವ ಎಲ್ಲಾ ಸ್ಪರ್ಧಿಗಳೂ ಸಹ ಯಾರ್ಯಾರು ಏನೇನು ತಮ್ಮ ಬಗ್ಗೆ ಮಾತನಾಡಿದ್ದಾರೆ ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಂಡು ಇದೀಗ ಪ್ರತಿಯೊಬ್ಬರೂ ಟಕ್ಕರ್ ಕೊಡಲು ಸಿದ್ಧವಾಗಿಯೇ ಬಂದಂತೆ ಕಾಣುತ್ತಿದೆ..

ಅದರಲ್ಲಿಯೂ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಮಾತನಾಡಿದಷ್ಟು ಹೆಚ್ಚು ದಿನ ಉಳಿಯಬಲ್ಲೆವು ಎಂಬುದನ್ನು ಚೆನ್ನಾಗಿ ಅರಿತಿರುವ ಎಲ್ಲರೂ ಬಹಳಷ್ಟು ಓಪನ್ ಅಪ್ ಆಗಿದ್ದಾರೆನ್ನಬಹುದು.. ಆದರೆ ಇದೆಲ್ಲದಕ್ಕೂ ಮೀರಿ ಕಳೆದ ಇನ್ನಿಂಗ್ಸ್ ನಲ್ಲಿ ಆತ್ಮೀಯ ಸ್ನೇಹಿತರಾಗಿದ್ದ ಇಬ್ಬರು ಮಹಿಳಾ ಸ್ಪರ್ಧಿಗಳು ಇದೀಗ ತೀವ್ರ ವಿರೋಧಿಗಳಾಗಿದ್ದು ಪೈಪೋಟಿಗೆ ಬಿದ್ದಿದ್ದಷ್ಟೇ ಅಲ್ಲದೇ ಜುಟ್ಟು ಹಿಡಿದು ಜಗಳವಾಡುವ ಮಟ್ಟಕ್ಕೆ ಬಂದು ನಿಂತಿದ್ದಾರೆ.. ಹೌದು ಬಿಗ್ ಬಾಸ್ ಸೀಸನ್ ಎಂಟು ಶುರುವಾದಾಗ ಬಿಗ್ ಬಾಸ್ ಮನೆಯೊಳಗೆ ದಿವ್ಯಾ ಸುರೇಶ್ ಹಾಗೂ ದಿವ್ಯಾ ಉರುಡುಗ ಬಹಳ ಆತ್ಮೀಯ ಸ್ನೇಹಿತರಾಗಿದ್ದರು..ಟಾಸ್ಕ್ ವಿಚಾರದಲ್ಲಿಯೂ ಇಬ್ಬರೂ ಸಹ ಬಹಳ ಪ್ರಬಲ ಸ್ಪರ್ಧಿಗಳೇ ಆಗಿದ್ದರು..

ಇಬ್ಬರ ನಡುವೆ ಟಾಸ್ಕ್ ಗಳಲ್ಲಿ ಮಾತ್ರ ಇದ್ದ ಪೈಪೋಟಿ ಬರುಬರುತ್ತಾ ಮನೆಯಲ್ಲಿ ಸಾಮಾನ್ಯವಾಗಿ ಇದ್ದ ಸಮಯದಲ್ಲಿಯೂ ಪ್ರೇಕ್ಷಕರಿಗೆ ಸ್ಪಷ್ಟವಾಗಿ ಕಾಣಿಸುತಿತ್ತು.. ದಿವ್ಯಾ ಉರುಡುಗ ಹೆಚ್ಚು ಶೈನ್ ಆದ ಸಮಯದಲ್ಲೆಲ್ಲಾ ದಿವ್ಯಾ ಸುರೇಶ್ ತಾನು ಮುನ್ನೆಲೆಗೆ ಬರುವ ಸಲುವಾಗಿ ಒಂದಿಲ್ಲೊಂದು ಪ್ರಯತ್ನ ಮಾಡುತ್ತಿದ್ದದ್ದೂ ಸಹ ಸ್ಪಷ್ಟವಾಗಿ ಕಾಣುತಿತ್ತು.. ಆದರೆ ಇದೀಗ ಮತ್ತೆ ಬಿಗ್ ಬಾಸ್ ಮನೆಗೆ ಬಂದ ನಂತರ ಇಬ್ಬರ ನಡುವಿನ ಮನಸ್ತಾಪ ಹೆಚ್ಚಾಗಿ ಇಬ್ಬರ ನಡುವಿನ ಸ್ನೇಹ ಮುರಿದುಬಿದ್ದಿದೆ.. ಅದರಲ್ಲಿಯೂ ಇಬ್ಬರೂ ಮನೆಯ ತುಂಬ ಜುಟ್ಟು ಹಿಡಿದು ಒಬ್ಬರ ಮೇಲೊಬ್ಬರು ಬಿದ್ದು ಜಗಳವಾಡುವ ಹಂತಕ್ಕೆ ಬಂದು ನಿಂತಿದ್ದಾರೆ..

ಹೌದು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡುತ್ತಿದ್ದಂತೆ ಬಿಗ್ ಬಾಸ್ ಎಲ್ಲರಿಗೂ ಟಾಸ್ಕ್ ಗಳನ್ನು ನೀಡುತ್ತಿದ್ದಾರೆ.. ಅದೇ ರೀತಿ ದಿವ್ಯಾ ಉರುಡುಗ ಹಾಗೂ ದಿವ್ಯಾ ಸುರೇಶ್ ಅವರಿಗೆ ಟಾಸ್ಕ್ ನೀಡಿದ್ದಾರೆ.. ಆ ಟಾಸ್ಕ್ ಸಂಬಂಧ ಪಟ್ಟಂತೆಯೇ ಇವ್ಬರ್ಜ್ ಕಿತ್ತಾಡಿಕೊಂಡರೂ ಸಹ ಆ ಟಾಸ್ಕ್ ನಡುವೆಯೇ ಇಬ್ಬರ ನಡುವಿನ ಮನಸ್ತಾಪ ಹೊರ ಬಿದ್ದಿದೆ.. ಜಿದ್ದಿಗೆ ಬಿದ್ದವರಂತೆ ಮನೆಯಲ್ಲೆಲ್ಲಾ ಹೊರಳಾಡಿ ಗೆಲ್ಲಲು ನಾ ಮುಂದು ತಾ ಮುಂದು ಎಂದಿದ್ದಾರೆ.. ಅವರಿಗೆ ಸ್ವ ಪ್ರತಿಷ್ಠೆ ಯ ಕಣವಾದರೆ.. ಇತ್ತ ಪ್ರೇಕ್ಷಕರಿಗೆ ಮನರಂಜನೆ ಮಾತ್ರವಷ್ಟೇ.. ಆದರೆ ಇದೆಲ್ಲದರ ನಡುವೆ ತಮ್ಮ ತಮ್ಮ ವ್ಯಕ್ತಿತ್ವಗಳನ್ನೇ ಇಂತಹ ಕೆಲಸಗಳಿಂದ ಕಳೆದುಕೊಳ್ಳುತ್ತಿರುವುದು ಅವರ ಅರಿವಿಗೆ ಬಾರದಿರುವುದು ದುರ್ಧೈವವೇ ಸರಿ..

ಇನ್ನು ಎಲಿಮಿನೇಷನ್ನಿಗೆ ನಾಮಿನೇಷನ್ ಪ್ರಕ್ರಿಯೆ ಸಹ ನಡೆದಿದ್ದು ದಿವ್ಯಾ ಉರುಡುಗ ನೇರವಾಗಿ ಎಲ್ಲರ ಮುಂದೆಯೇ ದಿವ್ಯಾ ಸುರೇಶ್ ಫೋಟೋವನ್ನುಬೆಂ ಕಿಗೆಹಾಕಿ ಈಕೆ ನನ್ಮ ನಗುವನ್ನೇ ಫೇಕ್ ಎನ್ನುತ್ತಾಳೆ.. ಇವರು ಸಂಪೂರ್ಣವಾಗಿ ಫೇಕ್ ಎಂದು ಮನೆಯಲ್ಲಿ ಇರಲು ದಿವ್ಯಾ ಸುರೇಶ್ ಗೆ ಅರ್ಹತೆ ಇಲ್ಲ ಎಂದಿದ್ದಾರೆ.. ಇತ್ತ ದಿವ್ಯಾ ಸುರೇಶ್‌ ಸಹ ದಿವ್ಯಾ ಉರುಡುಗ ಬಗ್ಗೆ ಮಾತನಾಡಿ ಒಳಗೊಂದು ಹೊರಗೊಂದು ಮಾತಾಡ್ತಾಳೆ ಎಂದು ಬಿಗ್‌ ಬಾಸ್‌ ನ ಇತರ ಸ್ಪರ್ಧಿಗಳ ಗ್ಗೆ ಚರ್ಚೆ ಆರಂಬ ಮಾಡಿದ್ದಾರೆ.. ಒಟ್ಟಿನಲ್ಲಿ ಮೊದಲ ದಿನವೇ ಜಡೆ ಜಗಳ‌ ಪ್ರಾರಂಭವಾಗಿದ್ದು ಯಾವ ಮಟ್ಟಕ್ಕೆ ಹೋಗಿ ನಿಲ್ಲುವುದೋ ಕಾದು ನೋಡಬೇಕಿದೆ..