ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿರುವ ದಿವ್ಯಾ ವಸಂತಾಗೆ ಬಿಟಿವಿ ಕೊಡ್ತಾ ಇರೋ ದುಬಾರಿ ಸಂಬಳ ಎಷ್ಟು ಗೊತ್ತಾ.. ನಿಜಕ್ಕೂ ಶಾಕಿಂಗ್..

0 views

ದಿವ್ಯಾ ವಸಂತ.. ಸಧ್ಯ ಸಾಮಾಜಿಕ ಜಾಲತಾಣದ ಟ್ರೋಲರ್ಸ್ ಗಳಿಂದಾಗಿ ಫೇಮಸ್ ಆಗಿರುವ ದಿವ್ಯಾ ವಸಂತಾಗೆ ಬಿಟಿವಿ ವಾಹಿನಿ ಕೊಡ್ತಾ ಇರೋ ಸಂಬಳ ನೋಡಿದ್ರೆ ನಿಜಕ್ಕೂ ಆಶ್ಚರ್ಯವಾಗುತ್ತೆ.. ಹೌದು ಕಳೆದ ಕೆಲ ದಿನಗಳ ಹಿಂದೆ ಸ್ಯಾಂಡಲ್ವುಡ್ ನಟಿ ಅಮೂಲ್ಯ ಅವರು ತಾಯಿಯಾಗುತ್ತಿರುವ ವಿಚಾರವನ್ನು ರಾಜ್ಯವೇ ಖುಷಿ ಪಡೋ ವಿಚಾರವೆಂದು ಸುದ್ದಿ ಮಾಡಿ ಸಾಕಷ್ಟು ಟೀಕೆಗೆ ಒಳಪಟ್ಟಿತ್ತು.‌ ಟ್ರೋಲ್ ಪೇಜ್ ಗಳಲ್ಲಿ ಸಾಮಾನ್ಯ ಜನರು ಇತ್ತ ಪತ್ರಿಕೆಯೊಂದರ ಸಂಪಾದಕರು ಎಲ್ಲರೂ ಸಹ ಬಿಟಿವಿ ಯನ್ನು ಟ್ರೋಲ್ ಮಾಡಲಾಗಿತ್ತು.. ಇಷ್ಟಕ್ಕೆ ಸುಮ್ಮನಾಗಿದ್ದರೆ ಪರವಾಗಿಲ್ಲ.. ಕತೆ ಅಲ್ಲಿಗೆ ಮುಗಿಯುತಿತ್ತು..

ಆದರೆ ಬಿಟಿವಿ ಇದೇ ವಿಚಾರಕ್ಕೆ ಮತ್ತಷ್ಟು ಫೇಮಸ್ ಆಗುವ ಸಲುವಾಗಿ ಟ್ರೋಲ್ ತಲೆಹರಟೆ ಎಂಬ ಕಾರ್ಯಕ್ರಮ ಮಾಡಿ ಈ ಕಾರ್ಯಕ್ರಮವನ್ನು ನಿರೂಪಕಿ ದಿವ್ಯಾ ವಸಂತ ಅವರೇ ನಡೆಸಿಕೊಟ್ಟು ಟ್ರೋಲರ್ಸ್ ಗಳ ಬಗ್ಗೆ ಅವರಿಗೆ ಮಾಡೋಕೆ ಕೆಲಸ ಇಲ್ವಾ ಬಿಟ್ಟಿ ನೆಟ್ಟಲ್ಲಿ ಕಮೆಂಟ್ ಮಾಡ್ತಾರೆ.. ಟ್ರೋಲರ್ ಗಳಿಂದ ಏನೂ ಉಪಯೋಗವಿಲ್ಲ.. ಹೀಗೆ ಸಾಕಷ್ಟು ಮಾತನಾಡಿ ನಾಲಿಗೆ ಹರಿಬಿಟ್ಟಿದ್ದರು.. ಇದನ್ನು ನೋಡಿದ ಟ್ರೋಲರ್ಸ್ ಗಳು ದಿವ್ಯಾ ವಸಂತಾರನ್ನು ಮತ್ತಷ್ಟು ಟ್ರೋಲ್ ಮಾಡಿದರು.. ಬಿಟ್ಟಿ ನೆಟ್ಟನ್ನು ನಿಮ್ಮಪ್ಪ ಕೊಡ್ತಾನಾ ಎನ್ನುವ ಮಾತುಗಳು ಬಂತು.. ರಾತ್ರೋ ರಾತ್ರಿ ದಿವ್ಯಾ ವಸಂತ ಸಾಮಾಜಿಕ ಜಾಲತಾಣದಲ್ಲಿ ಬೇರೆ ರೀತಿಯಲ್ಲಿಯೇ ಫೇಮಸ್ ಆಗಿ ಹೋದರು.. ಯಾವ ರೀತಿಯಾದರೇನು ನಮಗೆ ಫೇಮಸ್ ಆಗಬೇಕು ಅಷ್ಟೇ ಎನ್ನುವ ಮನಸ್ಥಿತಿ ಇರುವ ದಿವ್ಯಾ ವಸಂತ ಮತ್ತೆ ನಿನ್ನೆ ಟ್ರೋಲರ್ಸ್ ಗಳಿಗಾಗಿ ಫೇಸ್‌ಬುಕ್‌ ಲೈವ್ ಕಾರ್ಯಕ್ರಮವೊಂದನ್ನು ಮಾಡಿದರು..

ಮಾಡಿ ಟ್ರೋಲರ್ಸ್ ಗಳ ಪ್ರಶ್ನೆಗಳಿಗೆ ಅರ್ಥವಿಲ್ಲದ ಉತ್ತರ ಕೊಟ್ಟು ತಮ್ಮ ಮಾತೇ ಸರಿ ಎನ್ನುವಂತೆ ಸಮರ್ಥನೆ ಮಾಡಿಕೊಂಡು ಮತ್ತಷ್ಟು ಟ್ರೋಲ್ ಆದರು.. ವಿಶೇಷ ಎಂದರೆ ಅವರದ್ದೇ ವಾಹಿನಿಯ ಅವರದ್ದೇ ಲೈವ್ ಕಾರ್ಯಕ್ರಮದಲ್ಲಿ ಹುಡುಕಿದರೂ ಸಹ ಬಿಟಿವಿಯ ಬಗ್ಗೆ ಒಂದು ಒಳ್ಳೆಯ ಕಮೆಂಟ್ ಸಹ ಕಾಣಲಿಲ್ಲ.. ಇನ್ನು ಇಷ್ಟೆಲ್ಲಾ ಮಾತನಾಡುತ್ತಿರುವ ಈ ದಿವ್ಯಾ ವಸಂತಾಗೆ ಬಿಟಿವಿ ವಾಹಿನಿ ಕೊಡ್ತಾ ಇರೋ ಸಂಬಳವಾದರು ಎಷ್ಟು ಎನ್ನಿವ ಕುತೂಹಲ ಮೂಡಬಹುದು.. ಹೌದು ದಿವ್ಯಾ ವಸಂತಾಗೆ ಅದ್ಯಾವ ಕಾರಣಕ್ಕೆ ಇಷ್ಟೊಂದು ಸಂಬಳ ಕೊಡ್ತಿದ್ದಾರೋ ಗೊತ್ತಿಲ್ಲ ಆದರೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ಸಂಬಳವನ್ನು ದಿವ್ಯಾ ವಸಂತ ತಾವು ಅಮೋಘ ಅದ್ಭುತವಾಗಿ ಅತ್ಯುನ್ನತವಾಗಿ ನಡೆಸಿಕೊಡುವ ಕಾರ್ಯಕ್ರಮಗಳಿಗಾಗಿ ಪಡೆಯುತ್ತಿದ್ದಾರೆ..

ಹೌದು ವರ್ಷಗಳ ಹಿಂದೆ ಪಬ್ಲಿಕ್ ಟಿವಿಯಲ್ಲಿ ಕೆಲಸ ಮಾಡುತ್ತಿದ್ದ ರಾಧಕ್ಕ ಅವರಿಗೆ ಪಬ್ಲಿಕ್ ಟಿವಿಯಲ್ಲಿ ಎಂಭತ್ತು ಸಾವಿರ ರೂಪಾಯಿ ಸಂಬಳ ಕೊಡಲಾಗುತಿತ್ತು.. ಅಲ್ಲಿ ಆಗಾಗ ಟ್ರೋಲ್ ಆದರೂ ಸಹ ತಕ್ಕಮಟ್ಟಗಿನ ಗೌರವವೂ ಇತ್ತು.. ಆದರೆ ಬಿಟಿವಿಯಲ್ಲಿ ಒಂದೂವರೆ ಲಕ್ಷ ರೂಪಾಯಿ ಸಂಬಳ ಕೊಡುತ್ತಾರೆ ಎಂದು ವಾಹಿನಿ ಬದಲಿಸಿದರು.. ಬಿಟಿವಿಯಲ್ಲಿ ಬಂದ ನಂತರ ಮತ್ತಷ್ಟು ಟ್ರೋಲ್ ಆಗುತ್ತಲೇ ಇದ್ದರು. ಇನ್ನು ದಿವ್ಯಾ ವಸಂತ ಬಗ್ಗೆ ಬಿಟಿವಿ ಅವರೇ ಇಂದು ಲೇಖನವೊಂದನ್ನು ಹಂಚಿಕೊಂಡಿದ್ದು ಎಲ್ಲಾ ನಿರೂಪಕರನ್ನು ಹಿಂದಿಕ್ಕಿ ಮುನ್ನುಗ್ಗುತ್ತಿರುವ ದಿವ್ಯಾವಸಂತ ಬಗ್ಗೆ ತಿಳಿದರೆ ಬೆಚ್ಚಿ ಬೀಳ್ತೀರಾ ಎಂದು ಶೇರ್ ಮಾಡಿಕೊಂಡಿದ್ದಾರೆ.. ಆ ಲೇಖನದಲ್ಲಿ ತಿಳಿಸಿರುವ ಹಾಗೆ ದಿವ್ಯಾ ವಸಂತ ಸಿನಿಮಾ ವರದಿಗಾರರಾಗಿ ಕೆಲಸಕ್ಕೆ ಸೇರಿಕೊಂಡು ಇದೀಗ ಬಿಟಿವಿಯ ಡಿಜಿಟಲ್ ಪ್ಲಾಟ್ಫಾರ್ಮ್ ನ ಚೀಫ್ ಆಗಿದ್ದಾರಂತೆ..

ಅಷ್ಟೇ ಅಲ್ಲದೇ ಆಕೆಗೆ ಲಕ್ಷ ಸಂಬಳದ ಜೊತೆಗೆ ಇನ್ಸ್ಟಾಗ್ರಾಂ ರೀಲ್ಸ್ ಹಾಗೂ ಇನ್ನಿತರ ಕೆಲಸಗಳಿಂದ ಒಟ್ಟು ಎಲ್ಲಾ ಸೇರಿ ಎರಡು ಲಕ್ಷ ಹಣ ಸಂಪಾದನೆ ಮಾಡುತ್ತಿದ್ದಾರಂತೆ.. ಇನ್ನು ಈಕೆ ಪಬ್ಲಿಕ್ ಟಿವಿ ರಂಗಣ್ಣ ಹಾಗೂ ಟಿವಿ 9 ರ ರಂಗನಾಥ್ ಅವರನ್ನೂ ಸಹ ನಿರೂಪಣೆಯಲ್ಲಿ ಹಿಂದಿಕ್ಕಿ ಮುಂದೆ ಸಾಗುತ್ತಿದ್ದಾರಂತೆ.. ಅಷ್ಟೇ ಅಲ್ಲದೇ ಯಾವುದೋ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದು ಸೌಂದರ್ಯ ರಾಣಿಯೂ ಆಗಿದ್ದಾರಂತೆ.. ಇವೆಲ್ಲಾ ಅವರೇ ಕೊಟ್ಟಿರುವ ಬಿಲ್ಡಪ್ ಗಳು.. ಒಟ್ಟಿನಲ್ಲಿ ಈ ವಿಚಾರಕ್ಕೆ ನಮ್ಮ ದಿವ್ಯವಾದ ವಸಂತ ಮತ್ತಷ್ಟು ಟ್ರೋಲ್ ಆಗೋದಂತೂ ಖಚಿತ..