ಮಾದ್ಯಮದ ಮುಂದೆ ಸತ್ಯ ಒಪ್ಪಿಕೊಂಡ ಡಿ ಕೆ ಶಿವಕುಮಾರ್.. ಹೇಳಿದ ಮಾತು ನೋಡಿ..

0 views

ಸದ್ಯ ರಾಜ್ಯದಲ್ಲಿ ಲಕ್ಷಾಂತರ ಜನರು ಕೊರೊನಾ ಕಾರಣದಿಂದಾಗಿ ಉದ್ಯೋಗ ಕಳೆದುಕೊಂಡು.. ಆರ್ಥಿಕವಾಗಿ ಕಷ್ಟದಲ್ಲಿದ್ದಾರೆ.. ಆದರೆ ರಾಜ್ಯ ರಾಜಕಾರಣದಲ್ಲಿ ಮಾತ್ರ ಸದ್ಯ ಸಿಡಿ ವಿಚಾರ ಬಿಟ್ಟು ಬೇರೇನೂ ಸಹ ಕಣ್ಣಿಗೆ ಕಾಣುತ್ತಿಲ್ಲ.. ಎತ್ತ ನೋಡಿದರೂ ಆ ಜನನಾಯಕ.. ಈ ಜನನಾಯಕನ ಸಿಡಿ ಎಂಬುದೇ ಮಾತುಗಳು.. ಇನ್ನು ಸದ್ಯ ರಾಜ್ಯದಲ್ಲಿ ಹಾಗೂ ರಾಜಕಾರಣಿಗಳಲ್ಲಿ ಸಂಚಲನ ಮೂಡಿಸಿರುವ ರಮೇಶ್ ಜಾರಕಿಹೋಳಿ ಅವರ ಸಿಡಿ ವಿಚಾರದಲ್ಲಿ ಡಿ ಕೆ ಶಿವಕುಮಾರ್ ಅವರ ಹೆಸರು ಆಗಾಗ ಕೇಳಿ ಬರುತ್ತಲೇ ಇದೆ..

ಇದೀಗ ಖುದ್ದು ಡಿಕೆಶಿವಕುಮಾರ್ ಅವರೇ ಮಾದ್ಯಮದ ಮುಂದೆ ಸತ್ಯ ಒಪ್ಪಿಕೊಂಡಿದ್ದಾರೆ.. ಹೌದು ರಮೇಶ್ ಜಾರಕಿಹೋಳಿ ಅವರ ಸಿಡಿ ವಿಚಾರಕ್ಕೆ ಸಂಬಂಧಪಟ್ಟಂತೆ ಆ ಯುವತಿಯೂ ಸಹ ಇಂದು ತನ್ನ ಲಾಯರ್ ಮೂಲಕ ರಮೇಶ್ ಜಾರಕಿಹೋಳಿ ವಿರುದ್ಧ್ ದೂರು ಕೊಡಿಸಿದ್ದಾಳೆ.. ಇತ್ತ ರಮೇಶ್ ಜಾರಕಿಹೋಳಿ ಕೂಡ ಯುವತಿಯ ವಿರುದ್ಧ ದೂರು ದಾಖಲಿಸಿದ್ದು ಸದ್ಯ ಎಸ್ ಐ ಟಿ ಪ್ರಕರಣದ ತನಿಖೆ ನಡೆಸುತ್ತಿದೆ.. ಆದರೆ ಆ ಯುವತಿ ಮಾತ್ರ ಎಲ್ಲಿಯೂ ಕಾಣಸಿಗದೆ ವೀಡಿಯೋ ಮೇಲೆ ವೀಡಿಯೋವನ್ನು ಬಿಡುಗಡೆ ಮಾಡುತ್ತಲೇ ಇದ್ದಾಳೆ..

ಹೌದು ಮೊನ್ನೆಯಷ್ಟೇ ಒಂದು ವೀಡಿಯೋ ಬಿಡುಗಡೆ ಮಾಡಿರುವ ಯುವತಿ.. ನನಗೆ ನ್ಯಾಯ ಸಿಗುವ ಭರವಸೆ ಇದೆ.. ಕರ್ನಾಟಕದ ಜನರು ನನ್ನ ಪರ ಇದ್ದಾರೆ ಎಂಬ ಭರವಸೆ ಇದೆ.. ನನಗೆ ಎರಡು ದಿನದಿಂದ ನಂಬಿಕೆ ಬಂದಿದೆ.. ನನಗೆ ನ್ಯಾಯ ಸಿಗಲಿದೆ.. ಡಿ ಕೆ ಶಿವಕುಮಾರ್ ಸರ್ ಸಿದ್ದರಾಮಯ್ಯ ಸರ್ ಹೆಚ್ ಡಿ ಕುಮಾರಸ್ವಾಮಿ ಸರ್ ರಮೇಶ್ ಕುಮಾರ್ ಸರ್ ಹಾಗೂ ಮಹಿಳಾ ಸಂಘಟನೆಗಳು ನಮ್ಮ ಅಪ್ಪ ಅಮ್ಮನಿಗೆ ರಕ್ಷಣೆ ನೀಡಿ.. ಎಂದು ಮನವಿ ಮಾಡಿದ್ದಳು..

ಇನ್ನು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಯುವತಿ ಅದಾಗಲೇ ಡಿಕೆ ಶಿವಕುಮಾರ್ ಅವರನ್ನು ಭೇಟಿ‌ ಮಾಡಿದ್ದಳು ಎಂಬ ವಿಚಾರ ಸಹ ಕೇಳಿ ಬರುತಿತ್ತು.. ಆದರೆ ಇತ್ತ ರಮೇಶ್ ಜಾರಕಿಹೋಳಿ ಅವರ ಬೆಂಬಲಿಗರು ಮಾತ್ರ ಇದರ ಹಿಂದೆ ಡಿ ಕೆ ಶಿವಕುಮಾರ್ ಅವರ ಕೈವಾಡ ಇದೆ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದರು.. ಇತ್ತ ಯುವತಿ ಕೂಡ ತನ್ನ ಸಹಾಯಕ್ಕಾಗಿ ಶಿವಕುಮಾರ್ ಅವರ ಮೊರೆ ಹೋಗಿದ್ದು ರಮೇಶ್ ಜಾರಕಿಹೋಳಿ ಅವರ ಕೆಂಗಣ್ಣಿಗೆ ಗುರಿಯಾಗಿತ್ತು..

ಆದರೆ ಇದೀಗ ಇಂದು ಮಾದ್ಯಮದ ಜೊತೆ ಮಾತನಾಡಿರುವ ಶಿವಕುಮಾರ್ ಅವರು ಸತ್ಯ ಒಪ್ಪಿಕೊಂಡಿದ್ದಾರೆ.. ಹೌದು ನಾವು ಶಾಸಕರನ್ನು ಟ್ರ್ಯಾಕ್‌ ಮಾಡಿಸಿದ್ದು ನಿಜ ಎಂದಿದ್ದಾರೆ.. ಹೌದು ಬಿಜೆಪಿಗೆ ಶಾಸಕರು ಸೇರ್ಪಡೆಯಾದ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಡಿಕೆ ಶಿವಕುಮಾರ್ ಅವರು ನಾವು ರಾಜಕಾರಣಿಗಳು.. ರಾಜಕೀಯದಲ್ಲಿ ಇರೋರು.. ಅವರು ನಮ್ಮ ಪಕ್ಷದ ಶಾಸಕರನ್ನು ರಾತ್ರೋ ರಾತ್ರಿ ಐದು ಜನರನ್ನು ಕರೆದುಕೊಳ್ಳುತ್ತಿದ್ದೇವೆ ಎಂದು ಹೇಳಿಕೆ ಕೊಟ್ಟಾಗ ನಾವು ನಮ್ಮ ಕೆಲಸ ಮಾಡಲೇಬೇಕಾಗುತ್ತದೆ.. ನಾವು ಅವರುಗಳ ಮೇಲೆ ಟ್ರ್ಯಾಕ್ ಹಾಕಿದ್ದು ನಿಜ.. ಯಾರನ್ನು ಕರೆದುಕೊಳ್ಳುತ್ತಿದ್ದಾರೆ.. ಯಾವ ಮೂವ್ ಮೆಂಟ್ ನಲ್ಲಿದೆ.. ಯಾವ ಯಾವ ಶಾಸಕರನ್ನು ಮಾತನಾಡಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಟ್ರ್ಯಾಕ್ ಹಾಕಿದ್ದೆವು.. ಆದರೆ ಇದೆಲ್ಲಾ ಅವರ ಪರ್ಸನಲ್ ಮ್ಯಾಟರ್.. ಎಂದು ಈ ಸಿಡಿ ವಿಚಾರಕ್ಕೂ ತಮಗೂ ಸಂಬಂಧವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ..