ನಾಪತ್ತೆಯಾಗಿರುವ ಡಾ.ಬ್ರೋ ನಿಜಕ್ಕೂ ಎಲ್ಲಿದ್ದಾರೆ ಗೊತ್ತಾ?

0 views

ಡಾ. ಬ್ರೋ ಅಲಿಯಾಸ್‌ ಗಗನ್‌ ಶ್ರೀನಿವಾಸ್‌ ಕನ್ನಡದ ಸ್ಟಾರ್‌ ಯೂಟ್ಯೂಬರ್‌ ಗಳಲ್ಲಿ ಒಬ್ಬರಾಗಿರುವ ಡಾ ಬ್ರೋ ಕಳೆದ ಒಂದು ತಿಂಗಳಿನಿಂದ ಯಾವುದೇ ವೀಡಿಯೋ ಹಾಕದೇ ಇರುವ ಕಾರನ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಅಪ್ಡೇಟ್‌ ಮಾಡದ ಕಾರಣ ಡಾ ಬ್ರೋ ನಾಪತ್ತೆಯಾಗಿದ್ದಾರೆ ಎನ್ನುವ ಸುದ್ದಿ ಹಬ್ಬಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.. ಅಷ್ಟಕ್ಕೂ ಡಾ ಬ್ರೋ ಎಲ್ಲಿದ್ದಾರೆ.. ನಾಪತ್ತೆಯಾಗಿದ್ದಾರಾ? ಅಥವಾ ಬೇರೆ ಯಾವುದಾದರೂ ದೇಶಕ್ಕೆ ಹೋಗಿದ್ದಾರಾ.. ಅಸಲಿ ಕತೆ ಬೇರೆಯೇ ಇದೆ..

ಹೌದು ಡಾ ಬರೋ ಗಗನ್‌ ಶ್ರೀನಿವಾಸ್‌ ಅವರು ನಾಪತ್ತೆಯಾಗಿದ್ದಾರೆ ಎಂದು ಸುದ್ದಿ ಹಬ್ಬಲು ಬೇರೆ ಕಾರಣವೂ ಇದೆ.. ಇದಕ್ಕೆ ಕಾರಣ ಈ ಹಿಂದೆ ಚೀನಾ ದೇಶದ ಬಗ್ಗೆ ವೀಡಿಯೋ ಮಾಡಿದ್ದರು.. ಚೀನಾ ದೇಶದಲ್ಲಿನ ಶ್ರೀಮಂತಿಕೆ ಬಗ್ಗೆ ಮೊದಲು ವೀಡಿಯೋ ಮಾಡಿದ್ದ ಡಾ.ಬ್ರೋ ಚೀನಾ ದೇಶ ಸಾಕಷ್ಟು ಮುಂದುವರೆದಿದೆ.. ನಾವು ಜಾತಿ ಧರ್ಮ ಅಂತ ಹೋಗ್ತಾ ಇದ್ದೀವಿ.. ಆದರೆ ಚೀನಾ ಸಾಕಷ್ಟು ಮುಂದುವರೆದಿದೆ ಎಂದು ವೀಡಿಯೋ ಮಾಡಿದ್ದು ಆ ವೀಡಿಯೋ ಸಾಕಷ್ಟು ವೈರಲ್‌ ಆಗಿತ್ತು.. ಈ ವಿಚಾರವಾಗಿ ಗಗನ್‌ ಅವರ ವಿಚಾರದಲ್ಲಿ ಒಂದಷ್ಟು ಪರ ವಿರೋಧದ ಚರ್ಚೆಯೂ ಆಗಿತ್ತು.. ಚೀನಾ ದೇಶವನ್ನು ಹೊಗಳಿ ನಮ್ಮ ದೇಶವನ್ನು ತೆಗಳಿದ್ದಾನೆಂದು ಡಾ ಬ್ರೋ ಬಗ್ಗೆ ನೆಗಟಿವ್‌ ಆಗಿ ಒಂದಷ್ಟು ಜನ ಮಾತನಾಡಿದ್ದೂ ಉಂಟು.. ನಂತರದಲ್ಲಿ ಚೀನಾ ದೇಶದ ಅಸಲಿ ಮುಖವನ್ನೂ ಸಹ ಗಗನ್‌ ಬಿಚ್ಚಿಟ್ಟಿದ್ದರು.. ಅಲ್ಲಿಯೂ ಸಹ ಎಲ್ಲಾ ದೇಶಗಳಂತೆ ಸಾಕಷ್ಟು ಬಡತನ ತಾಂಡವವಾಡುತಿತ್ತು.. ಅಲ್ಲಿನ ಸದ್ಲಂ ಗಳ ಪರಿಚಯವನ್ನೂ ಸಹ ಗಗನ್‌ ಮಾಡಿದ್ದರು. ಅಲ್ಲಿನ ಬಡತನದ ಬಗ್ಗೆಯೂ ಸಾಕಷ್ಟು ವೀಡಿಯೋ ಮಾಡಿ.. ನಾವು ನೋಡಿರುವ ಚೀನಾ ನಿಜವಾದ ಚೀನವಲ್ಲ ಇದು ನಿಜವಾದ ಚೀನಾ ಎಂದು ಅಲ್ಲಿನ ಬಡ ಜನರನ್ನೂ ಸಹ ತೋರಿದ್ದರು.. ಮುರುಕಲು ಮನೆಗಳಲ್ಲಿ ವಾಸ ಮಾಡುವ ಕಷ್ಟ ಪಡುವ ಜನರನ್ನೂ ಸಹ ತೋರಿದ್ದರು.. ಇದಾದ ನಂತರ ಡಾ ಬ್ರೋ ಬೇರೆ ಯಾವ ದೇಶದ ವೀಡಿಯೋಗಳನ್ನು ಹಾಕದ ಕಾರಣ ಗಗನ್‌ ನಾಪತ್ತೆಯಾಗಿದ್ದಾರೆ ಎಂದು ಸುದ್ದಿ ಹಬ್ಬಿತ್ತು..

ಇತ್ತ ಚೀನಾ ಬಗ್ಗೆ ವೀಡಿಯೋ ಮಾಡಿರುವುದಕ್ಕೆ ಚೀನಾ ದೇಶದಲ್ಲಿ ಅವರನ್ನು ಬಂಧಿಸಲಾಗಿದೆ ಎಂದೂ ಸಹ ಸುದ್ದಿ ಹಬ್ಬಿತ್ತು.. ಆದರೆ ಅಸಲಿ ಕತೆ ಬೇರೆಯೇ ಇದೆ.. ಹೌದು ಗಗನ್‌ ಎಲ್ಲಿಯೂ ಹೋಗಿಲ್ಲ ಬದಲಿಗೆ ಬೆಂಗಲೂರಿನಲ್ಲಿಯೇ ಇದ್ದಾರೆ.. ಹೌದು ಗಗನ್‌ ಶ್ರೀನಿವಾಸ್‌ ಮೊದಲಿನಿಂದಲೂ ಯಾವುದಾದರು ದೇಶಕ್ಕೆ ಪ್ರವಾಸ ಹೋಗಿ ಬಂದರೆ ಒಂದು ತಿಂಗಳು ಬೆಂಗLೂರಿನಲ್ಲಿಯೇ ಉಳಿದು ಮುಂದಿನ ದೇಶದ ಟ್ರಿಪ್‌ ಬಗ್ಗೆ ತಯಾರಿ ಮಾಡುವುದುಂಟು.. ಇನ್ನು ಚೀನಾ ದೇಶದಿಂದ ಬಂದ ನಂತರ ಇಲ್ಲಿಯೂ ಸ್ಟಾರ್‌ ಸ್ಪೋರ್ಟ್ಸ್‌ ಸಹಭಾಗಿತ್ವದಲ್ಲಿ ಕೆಲಸ ಮಾಡಿದ ಗಗನ್‌ ವಿಶ್ವ ಕಪ್‌ ಸರಣಿಯ ಸಾಲು ಸಾಲು ವೀಡಿಯೋಗಳನ್ನು ಚಿತ್ರೀಕರಣ ಮಾಡಿ ಅಪ್ಲೋಡ್‌ ಮಾಡಿದ್ದರು.. ಸತತ ಒMದು ತಿಂಗಳ ಕಾಲ ಕ್ರಿಕೆಟ್‌ ಗೆ ಸಂಬಂಧಪಟ್ಟ ವೀಡಿಯೋ ಗಳನ್ನು ಮಾಡಿದ್ದ ಡಾ.ಬ್ರೋ  ನಂತರದಲ್ಲಿ ಕೊಂಚ ಬ್ರೇಕ್‌ ಪಡೆದುಕೊಂಡಿದ್ದಾರಷ್ಟೇ.. ಈ ಹಿಂದೆಯೂ ಸಾಕಷ್ಟು ಬಾರಿ ಒಂದು ದೇಶದಿಂದ ಮತ್ತೊಂದು ದೇಶದ ಟ್ರಿಪ್‌ ಗೆ ಒಂದು ತಿಂಗಳ ಬ್ರೇಕ್‌ ನ ನಂತರ ವೀಡಿಯೋ ಮಾಡಿದ್ದುಂಟು.. ಆದರೆ ಆಗ ಈ ರೀತಿ ಸುದ್ದಿಯಾಗಿರಲಿಲ್ಲ.. ಈಗ ಚೀನಾ ದೇಶದ ಬಗ್ಗೆ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಒಂದಷ್ಟು ಚರ್ಚೆ ಆದ ಕಾರಣ ಈ ಗ ಡಾ.ಬ್ರೋ ನಾಪತ್ತೆಯಾಗಿದ್ದಾರೆ ಎಂದು ಸುದ್ದಿ ಹಬ್ಬಿದ್ದು ಇದು ಸತ್ಯಕ್ಕೆ ಸಂಪೂರ್ಣವಾಗಿ ದೂರವಾದ ಮಾತಾಗಿದೆ..

ಡಾ.ಬ್ರೋ ಬೆಂಗಳೂರಿನಲ್ಲೆಯೇ ಸುರಕ್ಷಿತವಾಗಿದ್ದು ಜನವರಿ ಬಳಿಕ ತಮ್ಮ ಮುಂದಿನ ದೇಶದ ಟ್ರಿಪ್‌ ಪ್ಲಾನ್‌ ಮಾಡುವುದಾಗಿ ತಿಳಿದು ಬಂದಿದೆ.. ಈ ನಡುವೆಯೇ ಬಿಗ್‌ ಬಾಸ್‌ ಖ್ಯಾತಿಯ ಶೈನ್‌ ಶೆಟ್ಟಿ ಅವರ ಸಿನಿಮಾ ಒಂದರಲ್ಲಿಯೂ ಡಾ.ಬ್ರೋ ಕಾಣಿಸಿಕೊಳ್ಳುತ್ತಿದ್ದು ಆ ಸಿನಿಮಾದ ಚಿತ್ರೀಕರಣದಲ್ಲಿಯೂ ಪಾಲ್ಗೊಂಡಿದ್ದಾರೆ.. ಆದರೆ ಡಾ.ಬ್ರೋ ಅವರ ಬಗ್ಗೆ ಇಷ್ಟೆಲ್ಲಾ ಸುದ್ದಿ ಹಬ್ಬಿದ್ದರೂ ಸಹ ತಮ್ಮ ಇನ್ಸ್ಟಗ್ರಾಂ ಆಗಲಿ ಅಥವಾ ಬೇರೆ ಯಾವುದೇ ಸಾಮಾಜಿಕ ಜಾಲತಾಣದ ಖಾತೆಗಳಲ್ಲಾಗಲಿ ತಮ್ಮ ಬಗ್ಗೆ ತಾವು ಬೆಂಗಳೂರಿನಲ್ಲಿ ಇರುವ ಬಗ್ಗೆ ಒಂದು ಅಪ್ಡೇಟ್‌ ನೀಡಬಹುದಾಗಿತ್ತು ಎಂದು ನೆಟ್ಟಿಗೃು ಅಭಿಪ್ರಾಯ ಪಟ್ಟಿದ್ದಾರೆ.. ಒಟ್ಟಿನಲ್ಲಿ ದೇಶ ವಿದೇಶ ಸುತ್ತಿ ಕನ್ನಡಿಗರಿಗೆ ಕನ್ನಡದಲ್ಲಿಯೇ ಆ ದೇಶಗಳನ್ನು ತೋರುವ ಡಾ.ಬ್ರೋ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು ಯಾರೂ ಸಹ ಯಾವುದೇ ರೀತಿಯ ಆತಂಕ ಪಡಬೇಕಿಲ್ಲ ಎಂಬುದು ಸಂತೋಷದ ವಿಚಾರವೆನ್ನಬಹುದು..

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಪ್ರಧಾನ ತಾಂತ್ರಿಕರು ಮಹೇಶ್ ಭಟ್.. 30 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9686999517. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9686999517