ಸಿಕ್ಕಿ ಬಿದ್ದರಾ ಪ್ರತಾಪ್..‌ ಬಿಗ್‌ ಬಾಸ್‌ ನಲ್ಲಿ ಪ್ರತಾಪ್‌ ನ ನಿಜ ಮುಖ ಹೊರಕ್ಕೆ?

0 views

ಬಿಗ್‌ ಬಾಸ್‌ ಕನ್ನಡ ಸೀಸನ್‌ ಹತ್ತಕ್ಕೆ ಕಾಲಿಟ್ಟಿದ್ದ ಪ್ರತಾಪ್‌ ಅವರನ್ನು ಸಾಕಷ್ಟು ಮಂದಿ ಇಷ್ಟ ಪಡುತ್ತಿದ್ದ ವಿಚಾರ ಎಲ್ಲರಿಗೂ ತಿಳಿದೇ ಇದೆ.. ಈ ಹಿಂದೆ ಬಿಗ್‌ ಬಾಸ್‌ ಮನೆ ಇಂದ ಆಚೆ ಕೆಲ ವರ್ಷಗಳ ಹಿಂದೆ ಡ್ರೋನ್‌ ಸಂಶೋಧನೆ ಬಗ್ಗೆ ಹಾಗೂ ವಿದೇಶದಲ್ಲಿ ಪೌರತ್ವ ಕೊಟ್ಟರು ಎನ್ನುವ ವಿಚಾರ ಹೀಗೆ ಮತ್ತಷ್ಟು ವಿಚಾರಗಳಿಗೆ ಟೀಕೆಗೆ ಒಳಗಾಗಿದ್ದ ಪ್ರತಾಪ್‌ ಬಿಗ್‌ ಬಾಸ್‌ ಮನೆಯೊಳಗೆ ಬಂದಾಗ ಆತನಿಗೂ ಒಂದು ಅವಕಾಶ ನೀಡಬೇಕು ಎಂದು ಜನರು ಉಳಿದ ಸ್ಪರ್ಧಿಗಳಿಗಿಂತ ಹೆಚ್ಚಾಗಿಯೇ ಆತನಿಗೆ ಪ್ರೀತಿ ಹಾಗೂ ಬೆಂಬಲ ನೀಡಿದ್ದರು ಎನ್ನಬಹುದು.. ಬಿಗ್‌ ಬಾಸ್‌ ಮನೆಗೆ ಬಂದ ದಿನದಿಂದಲೂ ಕೂಡ ಜನರು ಆತನ ಪರವಾಗಿ ನಿಂತಿದ್ದರು.. ಬಿಗ್‌ ಬಾಸ್‌ ಮನೆಯಲ್ಲಿ ವಿನಯ್‌ ತುಕಾಲಿ ಹಾಗೂ ಮತ್ತಷ್ಟು ಮಂದಿ ಪ್ರತಾಪ್‌ ನ ವಿಚಾರದಲ್ಲಿ ಹೀಯಾಳಿಸಿದ್ದನ್ನು ಹೊರಗೆ ತೀವ್ರವಾಗಿಯೇ ಖಂಡಿಸಿದ್ದರು.. ಇನ್ನೂ ಹೇಳಬೇಕೆಂದರೆ ಪ್ರತಾಪ್‌ ಬಿಗ್‌ ಬಾಸ್‌ ಮನೆಯಲ್ಲಿ ನಾಂಇನೇಟ್‌ ಆದ ವಾರವೆಲ್ಲವೂ ಅತಿ ಹೆಚ್ಚು ವೋಟ್‌ ಗಳನ್ನು ಪಡೆಯುವ ಮೂಲಕ ಮೊದಲೇ ಸೇಫ ಆಗುತ್ತಿದ್ದರು.. ಬಿಗ್‌ ಬಾಸ್‌ ಹಾಗೂ ಸುದೀಪ್‌ ಅವರೂ ಕೂಡ ಸಾಕಷ್ಟು ವಿಚಾರಗಳಲ್ಲಿ ಪ್ರತಾಪ್‌ ನ ಪರವಾಗಿ ಸಾಕಷ್ಟು ಸಂದರ್ಭಗಳಲ್ಲಿ ನಿಂತಿದ್ದೂ ಇದೆ.. ಆದರೆ ಈಗ ಬಿಗ್‌ ಬಾಸ್‌ ಹಾಗೂ ಸುದೀಪ್‌ ಅವರನ್ನೇ ಪ್ರತಾಪ್‌ ಬಕರಾ ಮಾಡುತ್ತಿದ್ದಾರಾ ಎನ್ನುವ ಮಾತುಗಳು ಕೇಳಿ ಬರುತ್ತಿದೆ.. ಹೌದು ಬಿಗ್‌ ಬಾಸ್‌ ಮನೆಯಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು.. ಜನರು ಕೂಡ ಪ್ರತಾಪ್‌ ನ ಪರವಾಘಿಯೇ ನಿಂತಿದ್ದರು..

ಆದರೆ ಪ್ರತಾಪ್‌ ಆಡಿದ ಕೆಲವೊಂದು ಮಾತುಗಳು ಇದೀಗ ಆತ ಇಷ್ಟು ದಿನ ನಾಟಕ ಮಾಡಿ ಮತ್ತೆ ಕರ್ನಾಟಕದ ಜನರನ್ನು ಮೂರ್ಖರನ್ನಾಗಿ ಮಾಡಿದನಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿಯೂ ಸಾಖಷ್ಟು ಚರ್ಚೆಯಾಗುತ್ತಿದೆ.. ಹೌದು ಪ್ರತಾಪ್‌ ಮೊದಲಿಗೆ ದೇಶ ವಿದೇಶಗಳಲ್ಲಿ ಸಾಧನೆ ಮಾಡಿ ಬಂದ ಹಳ್ಳಿ ಹುಡುಗ.. ಅಮ್ಮನ ತಾಳಿ ಮಾರಿ ನಾನು ಜಪಾನ್‌ ಗೆ ಹೋಗಿದ್ದೆ.. ಅಲ್ಲಿ ಸಾಕಷ್ಟು ಕಷ್ಟ ಪಟ್ಟು ಮೆಡಲ್‌ ಗಳನ್ನು ಪಡೆದುಕೊಂಡೆ ಹಾಗೂ ಅಲ್ಲಿ ನನ್ನ ಪರ್ಸ್ ಕಳೆದುಕೊಂಡೆ ಎಪ್ಪತ್ತು ಕೆಜಿ ಲಗೇಜ್‌ ಅನ್ನು ನಾನು ಮೂರ್ನಾಲ್ಕು ಕಿಲೋಮೀಟರ್‌ ಹೊತ್ತುಕೊಂಡು ಹೋದೆ.. ಅಲ್ಲಿ ನನಗೆ ಪೌರತ್ವ ಕೊಡುತ್ತೇವೆ ಎಂದು ಗೋಗರೆಯುತ್ತಿದ್ದಾರೆ.. ಆದರೆ ನಾನು ಬೇಡ ಎಂದು ಹೇಳಿ ಭಾರತಕ್ಕೆ ಬಂದೆ.. ಹೀಗೆ ಸಾಕಷ್ಟು ವಿಚಾರಗಳನ್ನು ಮಾದ್ಯಮಗಳಲ್ಲಿ ಹೇಳಿಕೊಂಡಾಗ ಜನರು ನಿಜಕ್ಕೂ ಪ್ರತಾಪ್‌ ನನ್ನು ಬೆಂಬಲಿಸಿ ಅವನ ಪ್ರತಿಭೆಗೆ ಪ್ರೋತ್ಸಾಹ ನೀಡಿದ್ದರು.. ಆದರೆ ಯಾರೇ ಆಗಲಿ ಬಹಳಷ್ಟು ದಿನ ಸುಳ್ಳು ಹೇಳಿಕೊಂಡು ಮುಂದುವರೆಯಲು ಸಾಧ್ಯವಿಲ್ಲ.. ಅದೇ ರೀತಿ ಪ್ರತಾಪ್‌ ಜೀವನದಲ್ಲಿಯೂ ಆಯಿತು.. ಹಿಂದಿ ಮೂಲದ ಸುದ್ದಿ ಮಾಧ್ಯಮವೊಂದು ಪ್ರತಾಪ್‌ ಹೇಳಿದ ವಿಚಾರಗಳನ್ನು ಫ್ಯಾಕ್ಟ್‌ ಚೆಕ್‌ ಮಾಡಿದಾಗ ಆತ ಹೇಳಿದ್ದು ಎಲ್ಲವೂ ಸುಳ್ಳು ಎಂಬ ವಿಚಾರ ತಿಳಿಯಿತು.. ಕೆಳಗಿನ ವೀಡಿಯೋ ನೋಡಿ..

ಜಪಾನ್‌ ನಲ್ಲಿ ಈತ ಯಾವ ಸ್ಪರ್ಧೆಯಲ್ಲಿಯೂ ಭಾಗವಹಿಸೇ ಇಲ್ಲ ಈತನಿಗೆ ಯಾವುದೇ ಅಂತರಾಷ್ಟ್ರೀಯ ಮೆಡಲ್‌ ಕೂಡ ಬಂದೇ ಇಲ್ಲ ಯಾರೂ ಸಹ ಪೌರತ್ವ ಕೊಡುತ್ತೇವೆ ಇಲ್ಲೇ ಇದ್ದುಬಿಡಿ ಎಂದು ಹೇಳಿಲ್ಲ ಎಂಬ ವಿಚಾರ ಬಯಲಾಯಿತು.. ಅಷ್ಟೂ ದಿನ ಜನರು ಹಳ್ಳಿ ಹುಡುಗ ಆತ ಬೆಳೆಯಲಿ ಎಂದು ಬೆಂಬಲಿಸಿದ್ದರು.. ಆದರೆ ಜನರ ನಂಬಿಕೆಗೆ ಮೋಸ ಮಾಡಿದ ಎಂಬ ಕಾರಣಕ್ಕೆ ಆತನಿಗೆ ಜನರು ಬೈದಿದ್ದು ಉಂಟು.. ಇದು ಸಾಮಾಜಿಕ ಜಾಲತಾಣ ಹಾಗೂ ಸುದ್ದಿ ಮಾದ್ಯಮಗಳ್ಲಲಿ ದೊಡ್ಡ ಸುದ್ದಿಯಾಯಿತು.. ಜನರ ಬಳಿ ಹಣ ಪಡೆದು ಮೋಸ ಮಾಡಿದರೂ ಕೂಡ ಒಂದು ಪಕ್ಷ ಕ್ಷಮಿಸಿಯಾರು.. ಆದರೆ ನಂಬಿಸಿ ಮೋಸ ಮಾಡಿದ್ದನ್ನು ಕ್ಷಮಿಸೋದು ತುಸು ಕಷ್ಟವೇ ಎನ್ನುವಂತೆ ಪ್ರತಾಪ್‌ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು.. ಇನ್ನು ದಿನಗಳ ಕಳೆದವು. ವರ್ಷಗಳು ಕಳೆಯಿತು.. ಆತ ಕೂಡ ಇದೆಲ್ಲದರಿಂದ ಹೊರ ಬಂದು ಹೊಸ ಕಂಪನಿಯೊಂದನ್ನು ಶುರು ಮಾಡಿ ರೈತರಿಗೆ ಅನುಕೂಲವಾಗುವಂತಹ ಡ್ರೋನ್‌ ಗಳ ಮಾರಾಟ ಹಾಗೂ ಔಷಧಿ ಸಿಂಪಡಿಸುವ ಕೆಲಸವನ್ನು ಶುರು ಮಾಡಿದ್ದನು.. ಆಗಲೂ ಸಹ ಈ ಡ್ರೋನ್‌ ಅನ್ನು ನಾನೇ ಕಂಡುಹಿಡಿದೆ ಎಂದ ಮಾತಿಗೆ ಡ್ರೋನ್‌ ಬಗ್ಗೆ ತಿಳಿದಿದ್ದ ಟೆಕ್ಕಿಗಳು ಈ ಬಗ್ಗೆ ಮಾತನಾಡಿ ಇದು ಈತ ಕಂಡುಹಿಡಿದ ಡ್ರೋನ್‌ ಅಲ್ಲ ಇದು ವಿದೇಶಿ ಕಂಪನಿಯ ಡ್ರೋನ್..‌ ಇದನ್ನು ವಿವಿಧ ಭಾಗಗಳಾಗಿ ತರಿಸಿಕೊಂಡು ಮನೆಯಲ್ಲೇ ಅಸೆಂಬಲ್‌ ಕೂಡ ಮಾಡಿಕೊಳ್ಳಬಹುದು ಎಂದು ಪುರಾವೆ ಸಮೇತ ತಿಳಿಸಿದ್ದರು.. ಆಗ ಮತ್ತೆ ಪ್ರತಾಪ್‌ ಮೇಲೆ ಒಂದಿಷು ಅಸಮಾಧಾನ ಉಂಟಾಗಿತ್ತು.. ಇದೇ ಸಮಯದಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ ಹತ್ತರ ಅವಕಾಶ ಪ್ರತಾಪ್‌ ಗೆ ಸಿಕ್ಕಿದ್ದು ಬಿಗ್‌ ಬಾಸ್‌ ಮನೆಗೆ ಕಾಲಿಟ್ಟರು.. ಶುರುವಿನಲ್ಲಿಯೇ ,ನೆಯ ಸ್ಪರ್ಧಿಗಳು ಪ್ರತಾಪ್‌ ನನ್ನು ಹೀಯಾಳಿದ್ದ ಕಂಡ ಜನರು ಪ್ರತಾಪ್‌ ನ ಬೆಂಬಲಕ್ಕೆ ನಿಂತರು.. ಸುದೀಪ್‌ ಅವರೂ ಸಹ ಪ್ರತಾಪ್‌ ನ ಸಾಕಷ್ಟು ಸಮಯದಲ್ಲಿ ಸಪೋರ್ಟ್‌ ಮಾಡಿ.. ತಪ್ಪು ಮಾಡಿದ್ರೆ ಅದನ್ನು ಒಪ್ಪಿಕೊಂಡು ಮುಂದೆ ಸಾಗೋದ್ರಲ್ಲಿ ತಪ್ಪಿಲ್ಲ ಎಂದು ಸಲಹೆ ನೀಡಿದ್ದರು..

ಅತ್ತ ತಾರಾ ಅವರು ಸಹ ಬಿಗ ಬಾಸ್‌ ಮನೆಗೆ ಹೋದಾಗ ಪ್ರತಾಪ್‌ ನನ್ನು ಸಂತೈಸಿ ಬಂದಿದ್ದರು.. ಮೂರು ವರ್ಷ ಅಪ್ಪ ಅಮ್ಮನ ಜೊತೆ ಮಾತನಾಡ್‌ ಪ್ರತಾಪ್‌ ಗೆ ಬಿಗ್‌ ಬಾಸ್‌ ಮನೆಯಲ್ಲಿ ತನ್ನ ತಂದೆಯ ಜೊತೆ ಮಾತನಾಡುವ ಅವಕಾಶವೂ ದೊರೆಯಿತು.. ದಿನ ಕಳೆದಂತೆ ಪ್ರತಾಪ್‌ ಗೆ ಬೆಂಬಲಿಗರ ಸಂಖ್ಯೆಯು ಹೆಚ್ಚಾಗಿತ್ತು.. ಆದರೆ ಬಿಗ್‌ ಬಾಸ್‌ ಮನೆಯಲ್ಲಿ ಮಾಡಿದ ಆ ಒಂದು ಯಡವಟ್ಟಿನಿಂದ ಮತ್ತೆ ಪ್ರತಾಪ್‌ ಬಿಗ್‌ ಬಾಸ್‌ ಮನೆಯಲ್ಲಿ ನಾಟಕ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.. ಹೌದು ನಿನ್ನೆ ಬಿಗ್‌ ಬಾಸ್‌ ಮನೆಯಲ್ಲಿ ಮನೆಯ ಸದಸ್ಯರಿಗೆ ಚಟುವಟಿಕೆಯೊಂದನ್ನು ನೀಡಲಾಗಿತ್ತು. ಆ ಚಟುವಟಿಕೆಯನುಸಾರ ಮನೆಯ ಸದಸ್ಯರು ತಮ್ಮ ಜೀವನದಲ್ಲಿ ನಡೆದ ತಮ್ಮ ಬದುಕಿಗೆ ತಿರುವು ಕೊಟ್ಟ ಘಟನೆಗಳನ್ನು ಹಂಚಿಕೊಳ್ಳಬೇಕಿತ್ತು.. ಆ ಸಮಯದಲ್ಲಿ ಎಲ್ಲಾ ಸದಸ್ಯರು ಕೂಡ ತಮ್ಮ ತಮ್ಮ ಜೀವನದ ನೋವಿನ ಘಟನೆಗಳನ್ನು ಹಂಚಿಕೊಂಡರು.. ವಿನಯ್‌ ತನ್ನ ತಂದೆ ತಾಯಿ ಡಿವೋರ್ಸ್‌ ಪಡೆದು ಹೋದಾಗ ತಾನಿ ಬಾಂಬೆ ಗೆ ಹೋಗಿ ಕಷ್ಟ ಪಟ್ಟ ವಿಚಾರವನ್ನು ಹಂಚಿಕೊಂಡರು.. ಇತ್ತ ಕಾರ್ತಿಕ್‌ ಕೋವಿಡ್‌ ಸಮಯದಲ್ಲಿ ತನ್ನ ತಂದೆ ತೀರಿಕೊಂಡ ವಿಚಾರವನ್ನು ಹಂಚಿಕೊಂಡು ಕಣ್ಣೀರಿಟ್ಟರು.. ಸಂಗೀತಾ ಕೂಡ ತಮ್ಮ ವೃತ್ತಿ ಬದುಕಿನ ಶುರುವಿನಲ್ಲಿ ಪಟ್ಟ ಕಷ್ಟಗಳನ್ನು ಹಂಚಿಕೊಂಡರು.. ಅತ್ತ ವರ್ತೂರ್‌ ಸಂತೋಷ್‌ ಅವರು ತಮ್ಮ ಮದುವೆಯ ವಿಚಾರವನ್ನು ಜನರ ಮುಂದೆ ತಿಳಿಸಿದ್ದು ಹೆಣ್ಣಿನ ಮನೆಯವರು ಮೋಸ ಮಾಡಿದರೆಂದು ತಿಳಿಸಿದರು.. ಇನ್ನು ಪ್ರತಾಪ್‌ ಅವರು ಮಾತನಾಡಲು ಬಂದಾಗ ಅವರಿಗೆ ಇದೊಂದು ಒಳ್ಳೆಯ ಸಮಯ ತಾವು ಮಾಡಿದ ತಪ್ಪುಗಳನ್ನು ಒಪ್ಪಿಕೊಂಡು ಈ ಹಿಂದೆ ಸುಳ್ಳು ಹೇಳಿ ನಂಬಿಕೆಗೆ ಮೋಸ ಮಾಡಿದಕ್ಕೆ ಒಂದು ಕ್ಷಮೆ ಕೇಳಿ ಮತ್ತೆ ಹೊಸ ಬದುಕು ಆರಂಭ ಮಾಡುತ್ತಾರೆ ಅವರ ಮೇಲಿನ ಪ್ರೀತಿ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಜನರು ನಿರೀಕ್ಷೆ ಇಟ್ಟುಕೊಂಡಿದ್ದರು.. ಆದರೆ ಅಲ್ಲಿ ನಡೆದ್ದದ್ದೇ ಬೇರೆ.. ಹೌದು ಪ್ರತಾಪ್‌ ಮತ್ತೆ ತಮ್ಮ ತಪ್ಪುಗಳನ್ನು ಸಮರ್ಥನೆ ಮಾಡಿಕೊಳ್ಳುವಂತೆ ಮಾತನಾಡಿದ್ದು ಕೆಲವರಿಗೆ ಬೇಸರ ತರಿಸಿದ್ದು ಉಂಟು.. ಪ್ರತಾಪ್‌ ಅವರು ಮಾತು ಶುರು ಮಾಡಿ “ನನ್ನ ಜೀವನದ ಒಂದು ಭಾಗದ ಕತೆ ಎಲ್ಲರಿಗೂ ಗೊತ್ತೇ ಇದೆ ಏನಾಯಿತು ನನ್ನ ಜೀವನದಲ್ಲಿ ಅಂತ.. ಕೆಳಗಿನ ವೀಡಿಯೋ ನೋಡಿ..

ನಾನು ಈ ದೇಶ ಬಿಟ್ಟು ಹೊರಗಡೆ ಹೋಗಿದ್ದೆ.. ಅಂತಹ ಸಮಯದಲ್ಲಿ ಒಂದಷ್ಟು ಬ್ಲಾಗರ್ಸ್‌ ಗಳು ಹಾಗೂ ನನ್ನ ಜೊತೆ ಕೆಲಸ ಮಾಡಿದಂತಹ ಒಂದಷ್ಟು ಜನ.. ನನ್ನ ಬಗ್ಗೆ ಒಂದಷ್ಟು ಸ್ಟೋರೀಸ್‌ ಗಳನ್ನು ಕ್ರಿಯೇಟ್‌ ಮಾಡಿಕೊಂಡು ಅದರಲ್ಲಿ ಮುಖ್ಯವಾಗಿ ಅವರು ಹೇಳುತ್ತಿದ್ದದ್ದು ಡ್ರೋನ್‌ ಪ್ರತಾಪ್‌ ದುಡ್ಡು ತೆಗೆದುಕೊಂಡಿದ್ದಾನೆ.. ದುಡ್ಡು ತೆಗೆದುಕೊಂಡಿದ್ದಾನೆ ಅಂತ.. ಕತೆಗೆ ರೆಕ್ಕೆ ಪುಕ್ಕ ಸಿಕ್ಕಿದ್ದು ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿ ಒಟ್ಟು ಮೂರು ಜನ ವ್ಯಕ್ತಿಗಳು ಸೇರಿಕೊಂಡು ಆ ಕತೆಗೆ ರೆಕ್ಕೆ ಪುಕ್ಕ ಕೊಟ್ಟರು.. ಜೀವನದಲ್ಲಿ ಮಾತನಾಡುವ ಬರದಲ್ಲಿ ಒಂದೆರೆಡು ಮಾತುಗಳನ್ನು ಬಾಯಿ ತಪ್ಪಿ ಹೇಳಿದ್ದೇನೆ ಹೌದು ನಾನು ಬಾಐಇ ತಪ್ಪಿ ಹೇಳಿದ್ದೀನಿ.. ಆ ವಿಚಾರಗಳಿಂದ ನಾಣು ಸಾಕಷ್ಟು ಅನುಭವಿಸಿದ್ದೀನಿ.. ಆ ಸಮಯದಲ್ಲಿ ನಾನು ಪ್ಯಾನಿಕ್‌ ಆಗೋಕೆ ಶುರು ಆಯ್ತು.. ನಾಣು ಸರಿ ಇದ್ದರೂ ನಾನು ಆ ಸಮಯದಲ್ಲಿ ಮಾತನಾಡೋಕೆ ಆಗಲ್ಲ.. ಫೈನಲ್ ಆಗಿ ಯಾಕೆ ಹೆದರುಕೊಂಡು ಕೂತ್ರಿ ಅಂತ ಬಂತು.. ನನ್ನ ಕೈಗೆ ಕ್ವಾರಂಟೈನ್‌ ಸಿಂಬಲ್‌ ಹಾಕಿದ್ರು.. ಆಗ ನಾನು ಎತ್ತಿ ತೋರಿಸ್ದೆ.. ನಾನು ಯಾರಿಗೂ ಹೆದರಿಕೊಂಡು ಕೂತಿಲ್ಲ ನನ್ನ ಕೈಗೆ ಕ್ವಾರಂಟೈನ್‌ ಸಿಂಬಲ್‌ ಹಾಕಿದ್ದಾರೆ.. ನನಗೆ ಏನೂ ಇದು ಮಾಡಕ್‌ ಆಗ್ತಿಲ್ಲ ಅದಕ್ಕೆ ನಾನು ಇಷ್ಟು ದಿನ ಬಂದಿರಲಿಲ್ಲ.. ಅಷ್ಟರಲ್ಲಿ ಆಗಲೇ ಇಂಟರವ್ಯೂವ್‌ ಮುಗಿತು.. ಅದನ್ನ ಮುಗಿಸಿಕೊಂಡು ಬಂದಮೇಲೆ ನಾಣು ನಮ್ಮ ಸ್ನೇಹಿತರ ಮನೆಯಲ್ಲೇ ಉಳಿದಿದ್ದೆ.. ನಂತರ ನಾನು ಬೆಂಗಳೂರು ಬಿಡೋದನ್ನೆ ಕಾಯುತ್ತಿದ್ರು.. ನಾನು ಬೆಂಗಳೂರು ಬಿಟ್ಟು ನಮ್ಮ ಸ್ನೇಹಿತರ ಮನೆಗೆ ಚಿಕ್ಕಮಗಳೂರಿಗೆ ಹೊರಟೆ.. ಏನೂ ಇರಲಿಲ್ಲ.. ಹಬ್ಬಿಸಿದ್ರು ಕತೆನಾ.. ಬೆಂಗLೂರು ಕ್ವಾರಂಟೈನ್‌ ಆಗಬೇಕಾಗಿತ್ತು.. ನನ್ನ ಅಪಾರ್ಟ್ಮೆಂಟ್‌ ದು ಬೀಗ ಹೊಡೆದು ಓಪನ್‌ ಮಾಡಿದ್ರು.. ಒಳಗಡೆ ಎಲ್ಲಾ ವೀಡಿಯೋ ಮಾಡಿಕೊಂಡರು.. ಅವನಿಲ್ಲ ಕ್ವಾರಂಟೈನ್‌ ನಲ್ಲಿ ಅಂತ.. ಜೊತೆಗೆ ಮಾದ್ಯಮಗಳಲ್ಲಿ ಬಂದಿದ್ದು ಪ್ರತಾಪ್‌ ಮೇಲೆ ಕೇಸ್..‌ ನನಗೆ ಯಾವ ವ್ಯಕ್ತಿ ಹೀಗ್‌ ಮಾಡಿದಾನೆ.. ಆವ್ಯಕ್ತಿಗೆ ಅಲ್ಲಿ ನಮ್‌ ಅಜ್ಜಿ ತಾತ ಒಂದು ತಿಂಗಳು ಮಾಡಿ ಹಾಕಿದಾರೆ..

ಅವರ ಬಟ್ಟೆ ಒಗೆದಿದ್ದಾರೆ.. ಅವನಿಗೆ ಏನೇನು ಬೇಕು ಅದನ್ನೆಲ್ಲಾ ಕೊಡಿಸಿದ್ದಾರೆ.. ಅಲ್ಲಿ ಆ ವ್ಯಕ್ತಿಗೆ ನಾನ್‌ ಯಾರು ಅಂತ ಗೊತ್ತಾಗಿರೋದು.. ಅದನ್ನೆಲ್ಲಾ ಮನಸಲ್ಲಿ ಇಟ್ಟುಕೊಂಡು ಇಲ್ಲಿಗೆ ಬಂದಮೇಲೆ.. ನನ್ನ ಮಾತನಾಡಿಸಿದ್ರು ಹೇಗೋ ಪರಿಚಯ ಆಯ್ತು.. ಅಲ್ಲಿಂದ ಕರ್ಕೊಂಡ್‌ ಹೋಗಿ ಯಾರನ್ನೋ ಪರಿಚಯ ಮಾಡಿಸಿದ್ರು.. ಅಲ್ಲಿಂದ ನಾನು ಮೈಸೂರಿಗೆ ಹೊರಟೆ.. ಬರಬೇಕಾದರೆ ನನಗೆ ಎರಡು ಸಾಔಇರ ರೂಪಾಯಿ ನೋಟ್‌ ಕೊಟ್ರು.. ಅದನ್ನ ಬಿಟ್ರೆ ನಾನು ಒಂದು ರೂಪಾಯಿ ಹಣವನ್ನು ಸಹ ನಾನು ಯಾರಿಂದನೂ ತೆಗೆದುಕೊಂಡಿಲ್ಲ.. ಚಿಕ್ಕಮಗಳೂರಲ್ಲೇ ಇದ್ದೆ.. ಆಗ ನನ್ನ ತಂದೆ ಯನ್ನ ತೆಗೆದುಕೊಂಡು ಹೋಗಿ ಪೋಲೀಸ್‌ ಸ್ಟೇಷನ್‌ ನಲ್ಲಿ ಇಟ್ಟುಕೊಂಡರು.. ಕ್ವಾರಂಟೈನ್‌ ಕೇಸ್‌ ನಲ್ಲಿ ನಿಮ್ಮ ಮಗ ಕ್ವಾರಂಟೈನ್‌ ಆಗಿಲ್ಲ ಅಂತ.. ಒಂದು ದಿನ ಕಳಿತು.. ಪೋನ್‌ ಮಾಡುದ್ರು ಊರೆಲ್ಲಾ ಪುಕಾರು.. ಆರ್ಡರ್‌ ಕೊಟ್ಟು ಬಿಟ್ಟಿದ್ದಾರೆ ಇವರ ಮಗನಿಗೆ.. ಕಂಡಲ್ಲೇ ಇಲ್ಲವಾಗಿಸ್ತಾರೆ ಅಂತ ಆರ್ಡರ್‌ ಕೊಟ್ಟು ಬಿಟ್ಟಿದ್ದಾರೆ ಅಂತ.. ನಮ್‌ ಅಪ್ಪ ಅಮ್ಮ ಹೊರಗಡೆ ಬಂದಿಲ್ಲ.. ಯಾರು ಹೊರಗಡೆ ಬಂದಿಲ್ಲ.. ನಮ್‌ ಅಮ್ಮ ಬಾಘಿಲು ಹಾಕಿಕೊಂಡು ತೋಟದ ಕಡೆಗೆ ಓಡಿ ಹೋಗಿದ್ದಾರೆ.. ನಮ್‌ ಅಪ್ಪ ಎಲ್ಲೂ ಇಲ್ಲ ಅಲ್ಲಿ.. ಒಬ್ರೂ ಇಲ್ಲ ಅಲ್ಲಿ.. ಕತೆ ಹಬ್ಬುಸ್ತಾ ಇದ್ದಾರೆ ನನ್‌ ಮೇಲೆ ಅಲ್ಲಿ.. ಇವನು ಸುಳ್ಳ ಕಳ್ಳ.. ನಮ್‌ ನೆಂಟರು ಊಟದಲ್ಲಿ ವಿಷ ಹಾಕಿ ಇಲ್ಲವಾಗಿಸಬೇಕಿತ್ತು.. ಯಾಕ್‌ ಬಿಟ್ಟಿದ್ದಾರೆ ಇವನನ್ನ.. ನಮ್‌ ಅಮ್ಮ ಬಂದ್‌ ಹೇಳ್ತಾ ಇದಾರೆ ಅದನ್ನ.. ಬಾಯಿಗ್‌ ಬಂದಂಗ್‌ ಮಾತಾಡ್ತಾ ಇದಾರೆ ಹೇಳಿದ ಎರಡು ಮಾತಿಗೆ.. ಆಮೇಲೆ ಚಿಕ್ಕಮಗಳೂರಿನಿಂದ ನನ್ನ ಬೆಂಗಳೂರಿನ ಹೊಟೆಲ್‌ ನಲ್ಲಿ ಇಟ್ಟರು.. ಹೊಟೆಲ್‌ ಸ್ಕ್ರೀನ್‌ ಓಪನ್‌ ಮಾಡ್ತಾರೆ.. ಸುತ್ತಾ ಕ್ಯಾಮರಾಗಳು.. ಫೋಟೋ.. ಯಾವ ಪ್ರತಾಪ್‌ ನ ಮೆರೆಸಿದ್ದರೋ.. ಹೊಟೆಲ್‌ ಸುತ್ತಾ ಪೋಲೀಸ್..‌ ನನಗೆ ಬಹಳ ಹಿಂಸೆ ಕೊಟ್ಟರು.. ಆ ನ್ಯೂಸ್‌ ಜೊತೆ ಮಾತಾಡು.. ಈ ನ್ಯೂಸ್‌ ಜೊತೆ ಮಾತನಾಡು.. ಎಲ್ಲವನ್ನು ಒಪ್ಕೋ.. ನಿನ್ನ ತಂಗಿನ ಯಾರ್‌ ಮದುವೆಯಾಗ್ತಾರೆ.. ನಿನ ತಂಗಿಗೆ ಮದುವೆಯಾಗದೆ ಇರೋ ತರ ಮಾಡ್ತೀವಿ.. ನಿಮ ಅಮ್ಮ ಹುಚ್ಚಿ ತರ ಅಲಿಬೇಕು.. ನಿಮ್‌ ಅಪ್ಪನಿಗೆ ಯಾರೂ ಇರಬಾರದು.. ಹಾಗ್‌ ಮಾಡ್ತೀವಿ.. ಮೆಂಟಲ್‌ ಆಸ್ತ್ರೆ ಇಂದ ಡಾಕ್ಟರ್‌ ನ ಕರ್ಕೋಂಡ್‌ ಬಂದು ಮೆಂಟಲಿ ಅನ್‌ ಸ್ಟೇಬಲ್‌ ಅಂತ ಬರ್ಕೊಡು.. ನನ್‌ ಪಾಸ್‌ ಪೋರ್ಟ್‌ ಕೊತ್ತುಕೊಂಡರು.. ನನ್ನ ಐ ಪಾಡ್‌ ಕಿತ್ತುಕೊಂಡರು..

ಎಲ್ಲವನ್ನು ಕಿತ್ತುಕ್ಕೊಂಡು ಮೆಂಟಲಿ ಅನ್‌ ಸ್ಟೇಬಲ್‌ ಅಂತ ಬರೆದು ಸೈನ್‌ ಹಾಕು ಅಂದರು.. ನಾನು ಸೈನ್‌ ಹಾಕಲ್ಲಿಲ್ಲ.. ಆಗ ನಮ್‌ ಅಪ್ಪ ಅಮ್ಮನ ಜೊತೆ ಮಾತನಾಡಿದ್ರು.. ಇದೊಂದಕ್ಕೆ ಸೈನ್‌ ಹಾಕಿ ಅಂತ ಹೇಳಿ ನಿಮ್ಮ ಮಗನ್ನ ಉಳಿಸಿ ಕಳುಹಿಸ್ತೇವೆ ಅಂತ.. ತಲೆ ತೆಲೆ ಮೇಲೆ ಹೊಡಿತಿದ್ರು ನನಗೆ.. ನಾನ್‌ ಹೊಟೆಲ್‌ ಇಂದ ಕೆಳಗೆ ಬಂದೆ.. ನನಗೆ ಏನೇನ್‌ ಮಾಡಿದ್ರು ಅಂತ ಸ್ವಲ್ಪ ಹೇಳಿದೆ.. ಆದರೆ ಇವನು ಹೇಳೋದೇ ಸುಳ್ಳು.. ಹೇಳೋದೆಲ್ಲಾ ಸುಳ್ಳು ಇವನ ಮಾತನ್ನ ನಂಬಬೇಡಿ.. ಅಂದಬಿಟ್ಟು ಹೇಳಿ ಕಳುಹಿಸಿದ್ರು ಮೀಡಿಯಾಗಳಿಗೆ.. ಅದನ್ನ ಮುಗಿಸಿಕೊಂಡು ನಾನು ಊರಿಗೆ ಬಂದೆ.. ಆರು ತಿಂಗಳು ಮನೆಯನ್ನ ಬಿಟ್ಟು ಎಲ್ಲೂ ಹೋಗೇ ಇಲ್ಲ.. ಸಣ್ಣದಾಗಿ ನಾನೇನೋ ರಿಸರ್ಚ್‌ ಮಾಡಿದ್ರೆ ಅದನ್ನ ಮಾಡೋಕೆ ಬಿಡಿ.. ನನಗೆ ಯಾರ ಸಪೋರ್ಟ್‌ ಕೂಡ ಬೇಕಾಗಿಲ್ಲ.. ನನ್ನ ಪ್ರೀತಿ ಮಾಡೋ ಜನ ಇದಾರೆ.. ಆ ಪ್ರೀತಿ ಮಾಡೋ ಜನ ಸಾಕು ನನಗೆ.. ನನ್‌ ಕೆಲಸ ಮಾಡೋಕ್‌ ಬಿಡಿ.. ಈ ವೇದಿಕೆಗೆ ಬರಬಾರದು ಅಂತ ನಾಲ್ಕೈದು ವರ್ಷ ಅಂದುಕೊಂಡೆ.. ಆದರೆ ಈಗ ಈ ವೇದಿಕೆ ನನಗೊಂದು ಬೂಸ್ಟ್‌ ಕೊಟ್ಟಿದೆ.. ನಾನು ಯಾರಿಗೂ ಹೆದರಿಕೊಳ್ಳೋನ್‌ ಅಲ್ಲ ಅದನ್ನ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಲ್ಲಾ.. ಬಾಯಿಗ್‌ ಬಂದಾಗ್‌ ಮಾತನಾಡದ್‌ ಆಗ್ಲಿ ನನ್‌ ಬಗ್ಗೆ.. ನಾನ್‌ ಯಾರ ವಿಷಯಕ್ಕೂ ಹೋಗಲ್ಲಾ.. ನನ್‌ ತಂಟೆಗ್‌ ಬರಬೇಡಿ.. ನನ್‌ ಬಗ್ಗೆ ಬಾಯಿಗ್‌ ಬಂದಾಗ್‌ ಮಾತನಾಡೋದು.. ಬಾಯಿಗ ಬಂದಾಗ್‌ ಇಲ್ದೇ ಇರೋ ಕತೆಯನ್ನ ಹಬ್ಬಿಸೋದು.. ಮಾಡದಿದ್ರೆ ನಿಮ್‌ ಮಕ್ಳಿಗೆ ಮಾಡಿ.. ಕಂಡೋರ ಮಕ್ಳಿಗೆ ಬಾವಿಗ್‌ ತಳ್ಬಿಟ್‌ ಆಟ ನೋಡ್ಬೇಡಿ.. ನಮಿಗ್‌ ಗೊತ್ತು ನಾವೇನ್‌ ಮಾಡಿ ಬಂದಿದ್ದೀವಿ ಇಲ್ಲಿಗೆ ಅಂತ” ಎಂದು ಕೊಂಚ ಕೋಪದಿಂದಲೇ ಹೇಳಿ ಅಲ್ಲಿಂದ ಹೊರಟರು.. ಇವಿಷ್ಟು ಪ್ರತಾಪ್‌ ನ ಮಾತುಗಳು.. ಆದರೆ ಈ ಮಾತುಗಳನ್ನು ಆಡಿದ ನಂತರವೇ ಪ್ರತಾಪ್‌ ನಮೇಲಿದ್ದ ಅಭಿಪ್ರಾಯ ಸಾಕಷ್ಟು ಜನರಿಗೆ ಬದಲಾಗಿದೆ.. ಕೆಳಗಿನ ವೀಡಿಯೋ ನೋಡಿ..

ಹೌದು ಒಂದಷ್ಟು ಜನರು ಪ್ರತಾಪ್‌ ನ ಬೆಂಬಲಿಸಿಯೇ ಮಾತನಾಡಿದ್ದು ಅವನಿಗೆ ಸಪೋರ್ಟ್‌ ಮಾಡಿದ್ದಾರೆ,.. ಆದರೆ ಮತ್ತೆ ಕೆಲವರು ಪ್ರತಾಪ್‌ ಆಡುತ್ತಿರೋದು ಮತ್ತೆ ನಾಟಕ.. ಇಷ್ಟು ದಿನ ಬಿಗ್‌ ಬಾಸ್‌ ಮನೆಯಲ್ಲಿ ಹಾಕಿಕೊಂಡಿದ್ದ ಮುಖವಾಡ ಈಗ ಕಳಚಿದೆ ಎನ್ನುವ ಮಾತುಗಳನ್ನು ಆಡುತ್ತಿದ್ದಾರೆ.. ಅದರಲ್ಲೂ ಪ್ರತಾಪ್‌ ಹೇಳಿದ ಸ್ಟೋರಿಯಲ್ಲಿ ಆ ಮೂರು ಜನ ಯಾರು.. ತಪ್ಪು ಮಾಡಿಲ್ಲ ಎಂದಮೇಲೆ ಅವರ ಹೆಸರು ಹೇಳೋದಕ್ಕೆ ಏನು ಭಯ.. ನಾನು ಆಡಿದ್ದು ಎರಡೇ ತಪ್ಪು ಮಾತು.. ಬಾಯಿ ತಪ್ಪಿ ಆಡಿದ್ದು ಎಂದ ಪ್ರತಾಪ್‌ ಗೆ ನೆಟ್ಟಿಗರು ಸಾಲು ಸಾಲು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.. ಆ ಸಮಯದಲ್ಲಿ ಆಡಿದ ನೂರು ಮಾತಲ್ಲಿ ತೊಂಭತ್ತೆಂಟು ಮಾತುಗಳು ತಪ್ಪೇ ಇದ್ದವು ಸುಳ್ಳೇ ಇದ್ದವು.. ನಿಮ್ಮ ಎರಡೇ ಮಾತು ತಪ್ಪಾದರೆ.. ಜಪಾನ್‌ ನಲ್ಲಿ ಆಪಲ್‌ ಫೋನ್‌ ಕೊಟ್ರು ಆಪಲ್‌ ಲ್ಯಾಪ್‌ ಟಾಪ್‌ ಕೊಟ್ಟರು ಎಂದ ಮಾತು ನಿಜವಾ.. ನನ್ನ ಐಶಾರಾಮಿ ಹೊಟೆಲ್‌ ನಲ್ಲಿ ಇಟ್ಟರು ಎಂದ ಮಾತು ನಿಜವಾ.. ನನ್ನ ಎಲ್ಲಾ ಕೆಲಸ ಮಾಡಲು ಆಳುಗಳನ್ನು ಇಟ್ಟರು ಎಂದ ಮಾತು ನಿಜವಾ.. ಜಪಾನ್‌ ನ ರೈಲ್ವೇ ಸ್ಟೇಷನ್‌ ನಲ್ಲಿ ನಿಮ್ಮ ಪರ್ಸ್‌ ಕಳೆದುಹೋದದ್ದು ನಿಜವಾ.. ಆಗ ನಿಮ್ಮ ಪೋಟೋ ಟಿವಿಗಳಲ್ಲಿ ಬರುತ್ತಿದ್ದದ್ದು ನಿಜವಾ.. ಆಗ ಅಲ್ಲಿನ ಮುಖ್ಯಾಧಿಕಾರಿ ಬಂದು ನಿಮಗೆ ಐಶಾರಾಮಿ ಕ್ಲಾಸ್‌ ಟಿಕೆಟ್‌ ಕೊಟ್ಟದ್ದು ನಿಜವಾ.. ಹಾಗೆಯೇ ನಿಮಗೆ ಪೌರತ್ವ ಕೊಡುತ್ತೇವೆ ಇಲ್ಲೇ ಇದ್ದು ಬಿಡಿ ಎಂದು ಗೋಗರೆದ್ದು  ನಿಜವಾ?

ಹಾಗೆಯೇ ಅಲ್ಲಿ ಮೆಡಲ್‌ ಪಡೆದದ್ದು ನಿಜವಾ.. ಅಷ್ಟೇ ಅಲ್ಲದೇ ಇಲ್ಲಿನ ವಾಹಿನಿಗಳ ಮುಂದೆ ಕೂತು ಜನರ ಭಾವನೆಗಳಿಗೆ ಮೋಸ ಮಾಡಿದ್ದು ಕೇವಲ ಎರಡು ಮಾತು ಮಾತ್ರವಾ? ಅರವತ್ತು ಅಡಿ ಹಾರಿತು ಎಪ್ಪತ್ತು ಅಡಿ ಹಾರಿತು ಎಂದದ್ದು ನಿಜವಾ.. ಯಾವುದೋ ಕಾಡಲ್ಲಿ ಬುಡಕಟ್ಟು ಜನರಿಗೆ ಹಾವು ಕಚ್ಚಿದಾಗ ನಾನು ಡ್ರೋನ್‌ ಮೂಲಕ ಔಷಧಿ ಕಳುಹಿಸಿದೆ ಎಂದ ಮಾತು ನಿಜವಾ? ಜೀ ಕನ್ನಡ ವಾಹಿನಿಯಲ್ಲಿ ಕೂತು ಮಾತನಾಡಿದ್ದು ನಿಜವಾ.. ಆಗೆಲ್ಲಾ ನಿಮ್ಮ ಮನಸಾಕ್ಷಿ ಚುಚ್ಚಲಿಲ್ಲವಾ.. ಜನರ ಭಾವನೆಗಳಿಗೆ ನಾನು ಮೋಸ ಮಾಡುತ್ತಿದ್ದೇನೆ ಎಂದು ಅನಿಸಲೇ ಇಲ್ಲವಾ.. ಅಮೇರಿಕಾದ ನಟ ಜಾನಿ ಡೆಪ್‌ ನನ್ನು ಭೇಟಿ ಮಾಡಿದ್ದೇನೆ ಎಂದ ಮಾತು ನಿಜವಾ? ಹೀಗೆ ಹೇಳುತ್ತಾ ಹೋದರೆ ನೂರಾರು ಸಿಗುತ್ತವೆ.. ಆದರೆ ನೀವು ಬಿಗ್‌ ಬಾಸ್‌ ಗೆ ಬಂದ ಮೇಲೆ ಜನರು ನಿಮಗೆ ಒಂದು ಅವಕಾಶ ಕೊಟ್ಟು ಆತನ ಮನುಷ್ಯನೇ ಹೊಸ ಜೀವನ ಆರಂಭಿಸಲಿ.. ಅವನ ಜೀವನವನ್ನು ಕಸಿದುಕೊಳ್ಳಲು ಯಾರಿಗೂ ಹಕ್ಕಿಲ್ಲ ಎಂದಿದ್ದರು.. ಅಷ್ಟೇ ಪ್ರೀತಿ ಕೊಟ್ಟು ವೋಟ್‌ ಕೂಡ ಹಾಕಿದರು.. ಆದರೆ ನಿನ್ನೆ ನಿಮಗೆ ಒಳ್ಳೆ ಅವಕಾಶ ಸಿಕ್ಕಾಗ ಮಾತ್ರ ಮತ್ತೆ ನಿಮ್ಮ ಮಾತುಗಳನ್ನು ಸಮರ್ಥಿಸಿಕೊಂಡು ಹೇಳಿದ್ದು ಬರಿ ಎರಡೇ ಮಾತು ಅದೂ ಸಹ ಬಾಯಿ ತಪ್ಪಿ ಆಡಿದ್ದು.. ಎಂದು ಮತ್ತಷ್ಟು ಕತೆಗಳನ್ನು ಹೇಳಿದ್ದು ಮತ್ತೆ ಮೂರ್ಖರನ್ನಾಗಿ ಮಾಡುವ ಕೆಲಸ ಎಂದು ಪ್ರತಾಪ್‌ ನ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.. ಒಟ್ಟಿನಲ್ಲಿ ಕಳೆದ ವಾರ ಅತಿ ಹೆಚ್ಚು ವೋಟ್‌ ಹಾಕಿ ಪ್ರತಾಪ್‌ ನನ್ನು ಸೇವ್‌ ಮಾಡಿದ್ದ ಜನರಲ್ಲಿ ಒಂದಷ್ಟು ಜನ ಆತನದ್ದು ನಾಟಕ ಎಂದಿದ್ದಾರೆ.. ಸಮಯ ಯಾವಾಗ ಯಾವ ರೀತಿ ಯಾರ ಪರವಾಗಿ ನಿಲ್ಲುವುದೋ.. ಯಾರ ನಾಟಕ ಬಯಲು ಮಾಡುವುದೋ ತಿಳಿಯದು.. ಆದರೆ ಈಗಲೂ ಸಹ ಬಹುತೇಕರು ಪ್ರತಾಪ್‌ ನ ಪರವಾಗಿ ನಿಂತಿದ್ದು ಆತ ಹೇಳಿದ್ದು ನಿಜ ಎಂದಿದ್ದಾರೆ.. ಇನ್ನು ಐವತ್ತು ದಿನಗಳ ಆಟದಲ್ಲಿ ಪ್ರತಾಪ್‌ ಇದೇ ಬೆಂಬಲದೊಂದಿಗೆ ಗೆದ್ದು ಬರುವರಾ ಅಥವಾ ಪ್ರೇಕ್ಷಕರ ಲೆಕ್ಕಾಚಾರ ತಲೆಕೆಳಗಾಗುವುದಾ ಕಾದು ನೋಡಬೇಕಿದೆ..