ಬಿಗ್‌ ಬಾಸ್‌ ಮನೆಯಲ್ಲಿ ಜೀವ ಕಳೆದುಕೊಳ್ಳಲು ಮುಂದಾಗಿದ್ದ ವಿಚಾರ.. ಖುದ್ದು ಸತ್ಯ ತಿಳಿಸಿದ ಪ್ರತಾಪ್..‌ 

0 views

ಬಿಗ್‌ ಬಾಸ್‌ ಸೀಸನ್‌ ಹತ್ತು ಹಿಂದೆಂದಿಗಿಂತಲೂ ಹೆಚ್ಚು ಸುದ್ದಿಯಾದ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ ಸೀಸನ್‌ ಎಂದರೆ ತಪ್ಪಾಗಲಾರದು.. ಇನ್ನು ಈ ಸೀಸನ್‌ ನಲ್ಲಿ ಬಂದಂತಹ ಸ್ಪರ್ಧಿಗಳ ಬಗ್ಗೆ ಪರ ವಿರೋಧದ ಚರ್ಚೆಯೋ ಹೆಚ್ಚಾಗಿದೆ.. ಇನ್ನು ಈ ಸೀಸನ್‌ ನಲ್ಲಿ ಅತಿ ಹೆಚ್ಚು ಗಮನ ಸೆಳೆದ ಸ್ಪರ್ಧಿಗಳ ಪೈಕಿ ಡ್ರೋನ್‌ ಪ್ರತಾಪ್‌ ಕೂಡ ಒಬ್ಬರು.. ಈ ಹಿಂದೆ ಕೆಲವೊಂದಿಷ್ಟು ಸುಳ್ಳು ಸಾಧನೆಗಳ ಬಗ್ಗೆ ಸುದ್ದಿಯಾಗಿ ನಂತರ ಒಂದಷ್ಟು ಟೀಕೆಗೆ ಗುರಿಯಾಗಿದ್ದ ಡ್ರೋನ್‌ ಪ್ರತಾಪ್‌ ಅವರು ಬಿಗ್‌ ಬಾಸ್‌ ಮನೆಗೆ ಬಂದ ನಂತರ ಆತ ಕೂಡ ಒಂದು ಹೊಸ ಜೀವನ ಆರಂಭಿಸಲಿ ಎಂದು ಜನರು ಮತ್ತೊಂದು ಅವಕಾಶ ಕೊಟ್ಟು ಊಹಿಸಲಾಗದಷ್ಟು ಬೆಂಬಲ ನೀಡಿದರು.. ಬಹಳಷ್ಟು ಜನರು ಡ್ರೋನ್‌ ಪ್ರತಾಪ್‌ ನ ಪರವಾಗಿ ನಿಂತು ಆತನೇ ಈ ಸೇಸನ್‌ ನ ವಿನ್ನರ್‌ ಆಗಬೇಕು ಎಂದು ಸಹ ಹೇಳುತ್ತಿದ್ದಾರೆ.. ಮತ್ತೆ ಕೆಲವರು ಡ್ರೋನ್‌ ಪ್ರತಾಪ್‌ ಮತ್ತೊಮ್ಮೆ ಜನರನ್ನು ಮಗ ಮಾಡುತ್ತಿದ್ದಾನೆ ಅವನು ಈಗಲು ಸಹ ನಾಟಕ ಮಾಡಿ ಸಿಂಪತಿ ಗಿಟ್ಟಿಸುತ್ತಿದ್ದಾನೆ ಎಂದೂ ಸಹ ಅಭಿಪ್ರಾಯ ವ್ಯಕ್ತ ಪಡಿಸುತ್ತಿರೋದು ಉಂಟು..

ಇನ್ನು ಕಳೆದ ಮೂರು ವರ್ಷಗಳಿಂದ ತಂದೆ ತಾಯಿಯ ಜೊತೆ ಮಾತನಾಡದ ಡ್ರೋನ್‌ ಪ್ರತಾಪ್‌ ಇದೀಗ ಬಿಗ್‌ ಬಾಸ್‌ ಮೂಲಕ ಅಪ್ಪ ಅಮ್ಮನ ಜೊತೆ ಮಾತನಾಡಿದ್ದು ಸಂತೋಷದ ವಿಚಾರ ಎನ್ನಬಹುದು.. ಇನ್ನು ಬಿಗ್‌ ಬಾಸ್‌ ಮನೆಯಲ್ಲಿ ಒಂದಿಲ್ಲೊಂದು ವಿಚಾರಗಳಿಗೆ ಸುದ್ದಿಯಾಗುವ ಡ್ರೋನ್‌ ಪ್ರತಾಪ್‌ ಕಳೆದ ಎರೆಡು ದಿನಗಳ ಹಿಂದೆ ಬಿಗ್‌ ಬಾಸ್‌ ಮನೆಯಲ್ಲಿ ಜೀವ ಕಳೆದುಕೊಳ್ಳಲು ಮುಂದಾಗಿದ್ದರು ಎಂಬ ವಿಚಾರಕ್ಕೆ ದೊಡ್ಡ ಸುದ್ದಿಯಾದರು.. ಇದಕ್ಕೆ ಪೂರಕವೆಂಬಂತೆ ಬಿಗ್‌ ಬಾಸ್‌ ನ ಸಂಚಿಕೆಗಳಲ್ಲಿ ಡ್ರೋನ್‌ ಪ್ರತಾಪ್‌ ಕಾಣಿಸಿಕೊಳ್ಳಲಿಲ್ಲ.. ಇತ್ತ ಡ್ರೋನ್‌ ಪ್ರತಾಪ್‌ ನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.. ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದೂ ಸಹ ಸುದ್ದಿ ಹಬ್ಬಿತು.. ಇದಕ್ಕೂ ಮೀರಿ ಬಿಗ್‌ ಬಾಸ್‌ ಮನೆಯ ಸಿಬ್ಬಂಧಿಗಳ ಸಮಯ ಪ್ರಜ್ಙೆಯಿಂದ ಡ್ರೋನ್‌ ಪ್ರತಾಪ್‌ ನಜೀವ ಉಳಿಯಿತು ಎಂದೂ ಸಹ ಹೇಳಲಾಗುತಿತ್ತು.. ಆದರೆ ಅಷ್ಟಕ್ಕೂ ಅಸಲಿ ಕತೆ ಏನು ಎಂದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿದ್ದಂತೂ ಸತ್ಯ..

ಇನ್ನು ನಿನ್ನೆ ಬಿಗ್‌ ಬಾಸ್‌ ಮನೆಗೆ ಮರಳಿ ಬಂದ ಡ್ರೋನ್‌ ಪ್ರತಾಪ್‌ ಈ ವಿಚಾರವಾಗಿ ಖುದ್ದು ತಾನೇ ಪ್ರತಿಕ್ರಿಯಿಸಿ ಸ್ಪಷ್ಟನೆಯನ್ನೂ ಸಹ ನೀಡಿದ್ದಾನೆ.. ಹೌದು ಕಳೆದ ನಾಲ್ಕು ದಿನಗಳ ಹಿಂದೆ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದ ಸ್ವಾಮಿಜಿ ಬಿಗ್‌ ಬಾಸ್‌ ಮನೆಯೆ ಸದಸ್ಯರ ಭವಿಷ್ಯವನ್ನು ತಿಳಿಸಿದ್ದರು..  ಅದರಂತೆ ಡ್ರೋನ್‌ ಪ್ರತಾಪ್‌ ಗೂ ಕೂಡ ನೀನು ಕುಟುಂಬದಿಂದ ದೂರ ಇದ್ದರೇ ನಿನಗೆ ಒಳ್ಳೆಯದು.. ಹತ್ತಿರ ಹೋಗಿ ಹೇಸಿಗೆಯಾಗ್ತೀಯೋ ದೂರವಿದ್ದು ಧೂಪವಾಗ್ತೀಯೋ ನೀನೆ ಆಲೋಚಿಸು ಎಂದಿದ್ದರು.. ಇದರಿಂದ ಡ್ರೋನ್‌ ಪ್ರತಾಪ್‌ ಸಾಕಷ್ಟು ಮನನೊಂದಿದ್ದರು.. ಇನ್ನು ಇತ್ತ ಬಿಗ್‌ ಬಾಸ್‌ ಮನೆಯಲ್ಲಿಯೂ ಸಹ ಪ್ರತಾಪ್‌ ನನ್ನು ಟಾಸ್ಕ್‌ ಗಳಲ್ಲಿ ಕಡೆಗಣನೆ ಮಾಡುತ್ತಿದ್ದಾರೆ ಎನ್ನುವಂತೆ ಕಾಣುತಿತ್ತು.. ಇದರಿಂದ ಪ್ರತಾಪ್‌ ಸಾಕಷ್ಟು ಕುಗ್ಗಿದ್ದಂತೂ ಸತ್ಯ.. ಇದೇ ಬೇಜಾರಿಗೆ ಪ್ರತಾಪ್‌ ಎರಡು ದಿನಗಳ ಕಾಲ ಮನೆಯಲ್ಿ ಏನನ್ನೂ ಊಟ ಮಾಡಿರಲಿಲ್ಲ.. ಕೊಟ್ಟ ಊಟವನ್ನೆಲ್ಲಾ ಕುಕ್ಕರ್‌ ನಲ್ಲಿ ಮುಚ್ಚಿ ಬಿಸಾಡಿದ್ದರು.. ಈ ಕಾರಣಕ್ಕೆ ಪ್ರತಾಪ್‌ ಬಹಳ ಅಸ್ವಸ್ಥರಾಗಿದ್ದು ಬಿಗ್‌ ಬಾಸ್‌ ಸಿಬ್ಬಂಧಿ ಸರಿಯಾದ ಸಮಯದಲ್ಲಿ ನೋಡಿಕೊಂಡು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು.. ಇನ್ನು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಪೋಲೀಸರು ಕೂಡ ಬಿಗ್‌ ಬಾಸ್‌ ಮನೆಗೆ ತೆರಳಿ ಪ್ರತಾಪ್‌ ಅವರ ಹೇಳಿಕೆಯನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ..

ಇನ್ನು ಈ ವಿಚಾರ ಹೊರಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ಕಾರಣ ನಿನ್ನೆ ಬಿಗ್‌ ಬಾಸ್‌ ಮನೆಗೆ ಬಂದ ಪ್ರತಾಪ್‌ ಈ ಬಗ್ಗೆ ಮಾತನಾಡಿದ್ದಾರೆ.. ನಾನು ಎರಡು ದಿನ ಊಟ ಮಾಡದ ಕಾರಣ ನನ್ನ ಹೊಟ್ಟೆಯಲ್ಲಿ ಕೆಮಿಕಲ್‌ ಫಾರ್ಮೇಷನ್‌ ಆಗಿ ಹುಷಾರು ತಪ್ಪಿತ್ತು.. ಈಗ ಚಿಕಿತ್ಸೆ ಪಡೆದ ನಂತರ ಆರೋಗ್ಯವಾಗಿದ್ದೇನೆ.. ಇದನ್ನು ಬಿಟ್ಟು ಬೇರೆ ಯಾವುದೇ ರೀತಿ ನೀವೆಲ್ಲಾ ತಿಳಿದುಕೊಳ್ಳುವುದು ಬೇಡ.. ಕೊಟ್ಟ ಊಟವನ್ನೆಲ್ಲಾ ಮರೆಮಾಚಿ ಬಿಸಾಡಿದ್ದೆ.. ಊಟ ಮಾಡದಕ್ಕೆ ಈ ರೀತಿ ಆಯಿತು ಅಷ್ಟೇ ಎಂದಿದ್ದಾರೆ..