ಹಿಟ್ಲರ್‌ ಕಲ್ಯಾಣ ಧಾರಾವಾಹಿಯಿಂದ ಹೊರ ನಡೆದ ದುರ್ಗಾ.. ನಿಜವಾದ ಕಾರಣವೇನು ಗೊತ್ತಾ?

0 views

ಕಿರುತೆರೆ ಅನ್ನೋದು ಪ್ರೇಕ್ಷಕರಿಗೆ ಮನರಂಜನೆಯಾದರೆ ಅತ್ತ ಕಲಾವಿದರಿಗೆ ಅದುವೇ ಜೀವನ.. ಕಿರುತೆರೆಯಿಂದ ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿದ್ದು ಸಾಕಷ್ಟು ಕಲಾವಿದರ ಐಶಾರಾಮಿ ಬದುಕಿಗೂ ಕಿರುತೆರೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು.. ಇನ್ನು ಧಾರಾವಾಹಿಗಳು ಮನರಂಜನೆಗೆ ಮಾತ್ರವಲ್ಲ ಸಾಕಷ್ಟು ಮಹಿಳೆಯರಿಗೆ ತಮ್ಮ ಜೀವನದ ಭಾಗವೇ ಆಗಿ ಹೋಗಿರುತ್ತದೆ ಎಂಬುದು ಸಹ ಅಷ್ಟೇ ಸತ್ಯ.. ಧಾರಾವಾಹಿಯ ಕಲಾವಿದರುಗಳನ್ನು ತಮ್ಮ ಮನೆಯವರಂತೋ ಅಥವಾ ತಮ್ಮ ಅಕ್ಕ ಪಕ್ಕದ ಮನೆಯವರಂತೆಯೋ ನೋಡೋದು ಸಹ ಉಂಟು.. ಇನ್ನು ಧಾರಾವಾಹಿಯಲ್ಲಿ ಕಲಾವಿದರಿಗೆ ಏನಾದರೂ ಆದರೂ ಸಹ ನಿಜವಾಗಿಯೂ ಅವರಿಗೆ ನೋವಾದಂತೆ ಪ್ರೇಕ್ಷಕರು ದುಃಖಿಸುವುದ ಕಂಡರೆ ಧಾರಾವಾಹಿಗಳು ಎಷ್ಟರ ಮಟ್ಟಕ್ಕೆ ಜನರ ಮನಸ್ಸಿಗೆ ಹತ್ತಿರವಾಗಿರುತ್ತದೆ ಎಂಬುದನ್ನು ಊಹಿಸಬಹುದಾಗಿದೆ.. ಇನ್ನು ಧಾರಾವಾಹಿಗಳ ಕಲಾವಿದರು ಧಾರಾವಾಹಿಯಿಂದ ಹೊರ ನಡೆದಾಗ ಸಾಕಷ್ಟು ಧಾರಾವಾಹಿಗಳ ರೇಟಿಂಗ್‌ ಕಟಿಮೆಯಾಗಿ ಧಾರಾವಾಹಿಯನ್ನೇ ಮುಕ್ತಾಯಗೊಳಿಸುವ ಹಂತಕ್ಕೆ ಬಂದಿರುವ ಉದಾಹರಣೆಯನ್ನೂ ನಾವು ಕಂಡಿದ್ದೇವೆ.. ಇದೀಗ ಅದೇ ರೀತಿ ಕನ್ನಡದ ಖ್ಯಾತ ಧಾರಾವಾಹಿಯಿಂದ ಮುಖ್ಯ ಪಾತ್ರಧಾರಿ ಹೊರನಡೆದಿದ್ದು ಜನರು ಒಂದು ಕಡೆ ಬೇಸತರ ವ್ಯಕ್ತ ಪಡಿಸಿದರೆ ಮತ್ತೊಂದು ಕಡೆ ಸಂತೋಷವನ್ನೂ ಸಹ ವ್ಯಕ್ತ ಪಡಿಸಿದ್ದಾರೆ..

ಹೌದು ಹಿಟ್ಲರ್‌ ಕಲ್ಯಾಣ ಜೀ ಕನ್ನಡ ವಾಹಿನಿಯ ಪ್ರಖ್ಯಾತ ಧಾರಾವಾಹಿಗಳ ಪೈಕಿ ಇದು ಕೂಡ ಒಂದು.. ಕೆಲ ವರ್ಷಗಳ ಹಿಂದೆ ಶುರುವಾದ ಧಾರಾವಾಹಿ ಸಾಕಷ್ಟು ವಿಚಾರಗಳಿಗೆ ಜನರಿಗೆ ಇಷ್ಟವಾಗಿತ್ತು.. ಒಂದಷ್ಟು ತಿಂಗಳುಗಳ ಕಾಲ ಕನ್ನಡ ಕಿರುತೆರೆಯ ನಂಬರ್‌ ಒನ್‌ ಧಾರಾವಾಹಿಯಾಗಿಯೂ ಸ್ಥಾನ ಪಡೆದುಕೊಂಡಿತ್ತು.. ಮಾವನಿಗೆ ಅತ್ತೆಯನ್ನು ಹುಡುಕುವ ಮೂರು ಸೊಸೆಯಂದಿರ ಕತೆಯೇ ಈ ಹಿಟ್ಲರ್‌ ಕಲ್ಯಾಣ ಎಂದು ಶುರುವಾದ ಧಾರಾವಾಹಿ ಟಾಪ್ವ ಧಾರಾವಾಹಿಗಳಲ್ಲಿ ಒಂದಾಯಿತು.. ಕೆಲ ದಿನಗಳು ತನ್ನ ಲಯ ಕಳೆದುಕೊಂಡು ಹLೀ ತಪ್ಪಿದ್ದೂ ಉಂಟು.. ಮತ್ತೆ ಜನರ ಮನಸನ್ನು ಅರಿತು ಕತೆಯಲ್ಲಿ ಬದಲಾವಣೆ ತಂದುಕೊಂಡು ಮತ್ತೆ ಟಾಪ್‌ ಐದು ಧಾರಾವಾಹಿಗಳಲ್ಲಿ ಒಂದಾಯಿತು.. ಧಾರಾವಾಹಿಯಲ್ಲಿ ಏಜೆ ಹಾಗೂ ಲೀಲಾ ಪಾತ್ರವು ಎಷ್ಟು ಮುಖ್ಯವೋ ಅಷ್ಟೇ ಪ್ರಾಮುಖ್ಯತೆಯನ್ನು ಎಜೆ ಯ ಮೊದಲ ಸೊಸೆ ದುರ್ಗಾ ಪಾತ್ರಕ್ಕೆ ನೀಡಲಾಗಿತ್ತು.. ಶುರುವಿನಲ್ಲಿ ಕೊಂಚ ನೆಗಟಿವ್‌ ಆಗಿ ತೋರಿದರೂ ಕೂಡ ಬರುಬರುತ್ತಾ ಒಳ್ಳೆಯ ಸೊಸೆಯಾಗಿ ತೋರಿದರು..

ಆದರೆ ಕಳೆದ ಕೆಲ ತಿಂಗಳುಗಳಿಂದ ದುರ್ಗಾ ಪಾತ್ರವನ್ನು ಧಾರಾವಾಹಿಯಿಂದ ತೆಗೆದಿದ್ದು.. ದುರ್ಗಾ ಕೆಲಸದ ಮೇಲೆ ಹೊರ ಹೋಗಿದ್ದಾಳೆಂದು ತೋರಿ ಕತೆಯನ್ನು ಮುಂದುವರೆಸಲಾಗುತಿತ್ತು.. ಆದರೆ ಅಸಲಿ ವಿಚಾರ ಬೇರೆಯೇ ಇದ್ದು ದುರ್ಗಾ ಪಾತ್ರದಲ್ಲಿ ಅಭಿನಯಿಸಿದ್ದ ನಟಿ ನಂದಿನಿ ಮೂರ್ತಿ ಧಾರಾವಾಹಿಯಿಂದ ಹೊರ ನಡೆದಿದ್ದಾರೆ.. ಹೌದು ನಂದಿನಿ ಮೂರ್ತಿ ಅವರು ಕಳೆದ ಹಲವಾರು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಂಡು ಹೆಸರು ಮಾಡಿದ್ದವರು.. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ದೇವಿ ಧಾರಾವಾಹಿಯಲ್ಲಿ ಅಭಿನಯಿಸಿದ್ದ ನಂದಿನಿ ಮೂರ್ತಿ ಅವರು ನಂತರ ಚಿ ಸೌ ಸಾವಿತ್ರಿ ಧಾರಾವಾಹಿ ನಂತರದಲ್ಲಿ ಮಿಲನ ಧಾರಾವಾಹಿಯಲ್ಲಿ ಅಭಿನಯಿಸಿ ಹೆಸರು ಮಾಡಿದರು.. ನಂತರದಲ್ಲಿ ಒಂದಷ್ಟು ವರ್ಷ ಬ್ರೇಕ್‌ ಪಡೆದ ನಂದಿನಿ ಮೂರ್ತಿ ಅವರು ಮತ್ತೆ ಜೀ ಕನ್ನಡ ವಾಹಿನಿಯಲ್ಲಿಯ ಹಿಟ್ಲರ್‌ ಕಲ್ಯಾಣ ಧಾರಾವಾಹಿಯ ಮೂಲಕ ಕಂಬ್ಯಾಕ್‌ ಮಾಡಿದ್ದು ದುರ್ಗಾ ಎಂದೇ ಹೆಸರುವಾಸಿಯಾದರು.. ನಾಯಕ ನಾಯಕಿಯ ಪಾತ್ರದಷ್ಟೇ ದುರ್ಗಾ ಪಾತ್ರವೂ ಕೂಡ ಮನೆಮಾತಾಯಿತು..

ಆದರೆ ಈಗ ಎಲ್ಲವೂ ಚೆನ್ನಾಗಿ ಹೋಗುವ ಸಮಯದಲ್ಲಿ ನಂದಿನಿ ಮೂರ್ತಿ ಅವರು ಧಾರಾವಾಹಿಯಿಂದ ಹೊರ ನಡೆದಿದ್ದಾರೆ.. ಹೌದು ಕಳೆದ ಕೆಲ ತಿಂಗಳುಗಳಿಂದ ದುರ್ಗಾಳನ್ನು ಕಾಣಿಸದೇ ಧಾರಾವಾಹಿಯನ್ನು ಮುಂದುವರೆಸುತ್ತಿದ್ದದ್ದಕ್ಕೆ ಬೇಸರ ವ್ಯಕ್ತ ಪಡಿಸಿ ಪ್ರಶ್ನಿಸಿದ್ದ ಪ್ರೇಕ್ಷಕರಿಗೆ ಇದೀಗ ಉತ್ತರ ದೊರೆತಿದೆ.. ಹೌದು ನಂದಿನಿ ಮೂರ್ತಿ ಅವರು ಗರ್ಭಿಣಿ ಆಗಿರುವ ಕಾರಣ ಹಿಟ್ಲರ್‌ ಕಲ್ಯಾಣ ಧಾರಾವಾಹಿಯಿಂದ ಹೊರ ಹೋಗಿದ್ದಾರೆ.. ಇತ್ತ ನಂದಿನಿ ಮೂರ್ತಿ ಅವರ ಜಾಗಕ್ಕೆ ಬೇರೆ ಕಲಾವಿದೆಯನ್ನು ಸಹ ಕರೆತಂದಿದ್ದು ಅಧಿಕೃತವಾಗಿ ನಂದಿನಿ ಅವರು ಧಾರಾವಾಹಿ ಬಿಟ್ಟ ವಿಚಾರವನ್ನು ತಿಳಿಸಿದ್ದಾರೆ.. ನಂದಿನಿ ಅವರ ಪತಿ ಕಾರ್ತಿಕ್‌ ಅವರೂ ಕೂಡ ಕಿರುತೆರೆ ನಿರ್ಮಾಪಕರಾಗಿದ್ದು ಕಲರ್ಸ್‌ ಕನ್ನಡ ವಾಹಿನಿಯ ದಾಸ ಪುರಂದರ ಧಾರಾವಾಹಿಯನ್ನು ನಿರ್ಮಾಣ ಮಾಡಿದ್ದರು..

ಇನ್ನು ಇದೀಗ ಎರಡನೇ ಮಗುವಿನ ಆಗಮನದ ಸಂತೋಷದಲ್ಲಿರುವ ನಂದಿನಿ ಮೂರ್ತಿ ಅವರಿಗೆ ಜೀ ಕನ್ನಡ ವಾಹಿನಿ ಜೀ ಕುಟುಂಬ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಸೀಮಂತ ಶಾಸ್ತರವನ್ನು ಸಹ ನೆರವೇರಿಸಿದ್ದು ಜೀವನದಲ್ಲಿ ಹೆಣ್ಣಾಗಿ ಇದಕ್ಕಿಂತ ಮತ್ತೊಂದು ಸಂತೋಷ ಇನ್ನೇನಿದೆ ಎಂದು ನಂದಿನಿ ಅವರು ಭಾವುಕರಾದರು.. ಇತ್ತ ಧಾರಾವಾಹಿ ಬಿಟ್ಟರೂ ಪರವಾಗಿಲ್ಲ ತಾಯಿಯಾಗುತ್ತಿರುವ ನಂದಿನಿ ಮೂರ್ತಿ ಅವರಿಗೆ ಪ್ರೇಕ್ಷಕರು ಸಂತೋಷ ವ್ಯಕ್ತ ಪಡಿಸಿ ತಾಯಿ ಮಗುವಿನ ಆರೋಗ್ಯ ಚೆನ್ನಾಗಿರಲೆಂದು ಹಾರೈಸಿದ್ದಾರೆ..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.