ಸಾಲ ತೀರಿಸಲು ರಿಷಭ್ ಶೆಟ್ಟಿಗೆ ಮನೆ ಮಾರಿದ ದ್ವಾರಕೀಶ್.. ದ್ವಾರಕೀಶ್ ಮನೆಗಾಗಿ ರಿಷಭ್ ಶೆಟ್ಟಿ ಕೊಟ್ಟ ಹಣವೆಷ್ಟು ಗೊತ್ತಾ?

0 views

ದ್ವಾರಕೀಶ್ ಎಂಬ ಹೆಸರಿಗೆ ಸ್ಯಾಂಡಲ್ವುಡ್ ನಲ್ಲಿ ಒಂದು ಹೆಸರು ಗೌರವ ಇದ್ದೇ ಇದೆ.. ಒಂದು ಕಾಲದಲ್ಲಿ ಅದೆಷ್ಟೋ ಕಲಾವಿದರಿಗೆ ಅನ್ನ ನೀಡಿದ ಸಂಸ್ಥೆ ದ್ವಾರಕೀಶ್ ಸಂಸ್ಥೆ.. ಆದರೆ ಇಂದು ಸಾಲದ ಸುಳಿಯಿಂದ ಹೊರ ಬರಲಾಗದೆ ತಾವು ಕಟ್ಟಿಸಿದ ಬಂಗಲೆಯನ್ನೇ ಮಾರುವ ಪರಿಸ್ಥಿತಿ ಎದುರಾಗಿದ್ದು ಅದರಲ್ಲೂ ಸ್ಯಾಂಡಲ್ವುಡ್ ನ ಯುವ ನಿರ್ದೇಶಕ ರಿಷಭ್ ಶೆಟ್ಟಿ ಅವರಿಗೆ ಮನೆಯನ್ನು ಮಾರಿದ್ದಾರೆ..

ಹೌದು ದ್ವಾರಕೀಶ್ ಅವರು ಈ ರೀತಿ ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವುದು ಇದೇ ಮೊದಲೇನಲ್ಲ.. ಮುಂಚೆಯೂ ಸಾಕಷ್ಟು ಬಾರಿ ಆರ್ಥಿಕವಾಗಿ ಕುಗ್ಗಿಹೋಗಿದ್ದ ಸಮಯದಲ್ಲಿ ಆಪ್ತಮಿತ್ರ ವಿಷ್ಣುವರ್ಧನ್ ಅವರು ದ್ವಾರಕೀಶ್ ಅವರ ಸಹಾಯಕ್ಕೆ ನಿಂತಿದ್ದರು.. ವಿಷ್ಣುವರ್ಧನ್ ಅವರ ಬಗ್ಗೆ ದ್ವಾರಕೀಶ್ ಅವರು ಏನೇನೋ ಮಾತನಾಡಿದ್ದ ಸಮಯದಲ್ಲಿಯೂ ಸಹ ವಿಷ್ಣುವರ್ಧನ್ ಅವರು ಯಾವುದನ್ನು ಮನಸ್ಸಿಗೆ ಹಾಕಿಕೊಳ್ಳದೆ ಆಪ್ತಮಿತ್ರ ಸಿನಿಮಾವನ್ನು ಯಾವುದೇ ಸಂಭಾವನೆ ಪಡೆಯದೆ ಮಾಡಿಕೊಡುವ ಮೂಲಕ ದ್ವಾರಕೀಶ್ ಅವರ ಆರ್ಥಿಕ ಸಂಕಷ್ಟ ವನ್ನು ದೂರ ಮಾಡಿದ್ದರು ಎಂಬ ಮಾತು ಈಗಲೂ ಗಾಂಧಿನಗರದಲ್ಲಿ ಕೇಳಿ ಬರುತ್ತದೆ.. ಇನ್ನು ಇದೀಗ ಮತ್ತೆ ದ್ವಾರಕೀಶ್ ಅವರು ಹಣಕಾಸಿನ ವಿಚಾರದಲ್ಲಿ ಕಷ್ಟಗಳನ್ನು ಎದುರಿಸುತ್ತಿದ್ದು.. ಆದರೆ ಈಗ ಸಹಾಯ ಮಾಡಲು ಆ ದೊಡ್ಡಗುಣದ ಒಡೆಯ ವಿಷ್ಣುವರ್ಧನ್ ಅವರಿಲ್ಲ..

ಇನ್ನು ಈ ಎಲ್ಲಾ ಕಷ್ಟದಿಂದ ಹೊರ ಬರಲು ಬೇರೆ ದಾರಿ‌ ಇಲ್ಲದ ಕಾರಣ ತಮ್ಮ ಪ್ರೀತಿಯ ಬಂಗಲೆಯನ್ನು ಮಾರಿದ್ದಾರೆ.. ಹೌದು ಐವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದ ದ್ವಾರಕೀಶ್ ಅವರು ಕಟ್ಟಿ ಬೆಳೆಸಿದ ಸಂಸ್ಥೆ ದ್ವಾರಕೀಶ್ ಚಿತ್ರವನ್ನು ಮುಂದೆ ಅವರ ಮಕ್ಕಳು ಮುಂದುವರೆಸಿಕೊಂಡು ಹೋಗುವುದರಲ್ಲಿ ಎಡವಿದರೆನ್ನಬಹುದು..

ಸಿನಿಮಾ ವಿಚಾರದಲ್ಲಷ್ಟೇ ಅಲ್ಲದೇ ಸ್ಯಾಂಡಲ್ವುಡ್ ನ ಸಾಕಷ್ಟು ಜನರ ಜೊತೆ ಮನಸ್ತಾಪ ಮಾಡಿಕೊಂಡಿರುವ ದ್ವಾರಕೀಶ್ ಅವರ ಮಗ ಯೋಗಿ ಅವರು ವಿಷ್ಣುವರ್ಧನ ಸಿನಿಮಾ ಸಮಯದಲ್ಲಿ ಸುದೀಪ್ ಅವರ ಜೊತೆ ಆಪ್ತವಾಗಿ ಕಾಣಿಸಿಕೊಂಡರೂ ಸಹ ನಂತರ ಅಲ್ಲಿಂದಲೂ ಹೊರಬಂದರು.. ಆ ಬಳಿಕ ಶಿವರಾಜ್ ಕುಮಾರ್ ಅವರೊಟ್ಟಿಗೆ ಆಯುಷ್ಮಾನ್ ಭವ ಸಿನಿಮಾ ಮಾಡಿದರು.. ಆದರೆ ಹೇಳಿಕೊಳ್ಳುವಂತಹ ಗಳಿಕೆ ಕಾಣಲಿಲ್ಲ.. ಈ ಸಿನಿಮಾದಲ್ಲಿ ಶಿವಣ್ಣನಿಗೂ ಹಾಗೂ ರಚಿತಾ ರಾಮ್ ಅವರಿಗೂ ಸಹ ಸಂಪೂರ್ಣ ಸಂಭಾವನೆ ನೀಡಲಿಲ್ಲ ಎನ್ನುವ ಮಾತು ಗಾಂಧಿನಗರದಲ್ಲಿ ಕೇಳಿ ಬಂದಿತ್ತು.. ಆ ಸಿನಿಮಾಗಾಗಿ ನಿರ್ಮಾಪಕ ಜಯಣ್ಣ ಅವರ ಬಳಿ ಹಣ ಪಡೆದಿದ್ದು ಅವರಿಗೂ ಹಣ ಮರಳಿಸದ ಕಾರಣ ಅವರೊಂದಿಗೂ ದೊಡ್ಡ ಮಟ್ಟದಲ್ಲಿಯೇ ಕಿರಿಕ್ ಮಾಡಿಕೊಂಡಿದ್ದರು..

ಇದೀಗ ಈ ಎಲ್ಲಾ ಸಾಲಗಳನ್ನು ಮರಳಿಸುವ ನಿಟ್ಟಿನಲ್ಲಿ ಹೆಚ್ ಎಸ್ ಆರ್ ಲೇ ಔಟಿನ ಬಂಗಲೆಯನ್ನು ಮಾರಿದ್ದಾರೆ.. ಸ್ಯಾಂಡಲ್ವುಡ್ ನ ನಟ ನಿರ್ದೇಶಕ ರಿಷಭ್ ಶೆಟ್ಟಿ ಅವರು ದ್ವಾರಕೀಶ್ ಅವರ ಬಂಗಲೆಯನ್ನು ಕೊಂಡುಕೊಂಡಿದ್ದಾರೆ.. ಹೌದು ಬಹಳಷ್ಟು ತಿಂಗಳಿನಿಂದ ಮನೆ ಮಾರುವ ಪ್ರಯತ್ನದಲ್ಲಿದ್ದ ದ್ವಾರಕೀಶ್ ಅವರಿಗೆ ಅಂದುಕೊಂಡಷ್ಟು ಹಣಕ್ಕೆ ಯಾರು ಮನೆ ಕೊಂಡುಕೊಳ್ಳದ ಕಾರಣ ಮುಂದೂಡುತ್ತಾ ಬಂದಿದ್ದರು..

ಇದೀಗ ನಿರ್ದೇಶಕ ರಿಷಭ್ ಶೆಟ್ಟಿ ಅವರು ಹತ್ತೂವರೆ ಕೋಟಿ ರೂಪಾಯಿಗೆ ಮನೆ ಕೊಂಡುಕೊಂಡಿದ್ದಾರೆ.. ಇನ್ನೂ ಹೇಳಬೇಕೆಂದರೆ ದ್ವಾರಕೀಶ್ ಅವರದ್ದು ಇದು ಹದಿಮೂರನೆ ಮನೆ.. ತಾವು ಸಂಪಾದನೆ ಮಾಡಿ ಕಟ್ಟಿದ್ದ ಹದಿಮೂರನೇ ಮನೆಯನ್ನು ಮಾರಿ ಸಾಲದಿಂದ ಹೊರ ಬರುವಂತಾಗಿದೆ.. ಕಲಾವಿದರಾಗಲಿ ಅಥವಾ ಸಿನಿಮಾ ರಂಗದ ಯಾವುದೇ ವಿಭಾಗದವರಾಗಲಿ ಅವರುಗಳ ಜೀವನ ನಾವುಗಳು ಅಂದುಕೊಂಡಷ್ಟು ಸುಲಭವಲ್ಲ.. ಆಡಂಬರವೂ ಅಲ್ಲ.. ಎಲ್ಲಾ ಸರಿಯಿದ್ದರೆ ಮಾತ್ರ ಸರಿ.. ಇಲ್ಲ ಕೊಂಚ ಎಚ್ಚರ ತಪ್ಪಿ ನಡೆದರೂ ಯಾವ ರೀತಿ ಆಗಬಹುದೆಂಬುದಕ್ಕೆ ಹಿರಿಯ ನಟ ನಿರ್ಮಾಪಕ ದ್ವಾ ರಕೀಶ್ ಅವರೇ ನೈಜ್ಯ ಉದಾಹರಣೆ..